Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಕೃಷ್ಣ ಜನ್ಮಾಷ್ಟಮಿ: ಮಕ್ಕಳಿಗೆ ಈ 5 ಚಟುವಟಿಕೆ ಮಾಡಿದರೆ ಹಬ್ಬ ಮತ್ತಷ್ಟು ಸ್ಪೆಷಲ್ ಆಗಿರುತ್ತೆ
ಜನ್ಮಾಷ್ಮಮಿ ಅಂದರೆ ಕೃಷ್ಣ ಆರಾಧನೆ ಮಾತ್ರವಲ್ಲ ನಮ್ಮ ಮನೆಗಳಲ್ಲಿರುವ ಮುದ್ದು ಮಕ್ಕಳನ್ನು ಕೃಷ್ಣ-ರಾಧೆ ವೇಷದಲ್ಲಿ ಅಲಂಕರಿಸಿ ಸಂಭ್ರಮಿಸುವ ದಿನ. ಈ ದಿನ ವಿವಿಧ ಚಟುವಟಿಕೆಗಳನ್ನು ಮಾಡಲಾಗುವುದು. ಒಂದು ಸ್ವಲ್ಪ ಮಕ್ಕಳ ಗುಂಪು ಸೇರಿಸಿ ಕೆಲವೊಂದು ಚಟುವಟಿಕೆಗಳನ್ನು ಮಾಡಿ ಜನ್ಮಾಷ್ಟಮಿ ಆಚರಿಸಿದರೆ ಈ ಆಚರಣೆ ಮತ್ತಷ್ಟು ವಿಶೇಷ ಅನಿಸುವುದು.

ನೀವು ಕೃಷ್ಣ ಜನ್ಮಾಷ್ಟಮಿಯನ್ನುಮತ್ತಷ್ಟು ವಿಶೇಷವಾಗಿಸಲು ಮುದ್ದು ಮಕ್ಕಳಿಗೆ ಚಟುವಟಿಕೆ ಮಾಡಿ
* ಕೃಷ್ಣ-ರಾಧೆಯ ವೇಷ
ಕೃಷ್ಣ ಜನ್ಮಾಷ್ಟಮಿಯ ದಿನದಂದು ಕೃಷ್ಣ ರಾಧೆಯ ವೇಷವನ್ನು ಹಾಕಿಸಿ.
ವೇಷವನ್ನು ಹಾಕಿಸುವಾಗ ತುಂಬಾ ಭಾರವಾದ ಆಭರಣ ಹಾಕಬೇಡಿ, ಮಕ್ಕಳಿಗೆ ಕಿರಿಕಿರಿಯಾಗುವುದು. ಮಕ್ಕಳಿಗೆ ಕಂಫರ್ಟ್ ಆಗುವಂತೆ ಡ್ರೆಸ್ಸಿಂಗ್ ಮಾಡಿ
* ಮೊಸರು ಕುಡಿಕೆ
ನಿಮ್ಮ ಮನೆಯ ಅಕ್ಕ-ಪಕ್ಕದ ಮಕ್ಕಳನ್ನು ಈ ಆಟದಲ್ಲಿ ಸೇರಿಸಿಕೊಳ್ಳಿ, ಮೊಸರು ಕುಡಿಕೆ ಮಾಡಿ ಅದನ್ನು ಒಡೆಯುವ ಆಟವನ್ನು ಆಡಿಸಿ. ಮಕ್ಕಳನ್ನು ತುಂಬಾನೇ ಖುಷಿ ಪಡುತ್ತಾರೆ.
* ಕೃಷ್ಣನ ಹೆಜ್ಜೆ
ಈ ದಿನ ಮನೆಯ ರಂಗೋಲಿ ಕೃಷ್ಣನ ಹೆಜ್ಜೆಯ ಮೂಲಕ ಮತ್ತಷ್ಟು ಸ್ಪೆಷಲ್ ಆಗಿಸಿ. ಮಕ್ಕಳ ಪಾದದ ಗುರುತು ಮನೆಯೊಳಗಡೆ ಬರುವಂತೆ ಗುರುತು ಮೂಡಿಸಿ, ಮಕ್ಕಳ ಬಳಿ ಪಾದವನ್ನು ರಂಗೋಲಿ ಅಥವಾ ಕುಂಕುಮ ಕಲಿಸಿದ ತಟ್ಟೆಗೆ ಇಟ್ಟು ನಂತರ ಅವರ ಹೆಜ್ಜೆಯ ಗುರುತು ಮೂಡಿಸಿ.
* ಕೃಷ್ಣನ ಕೊಳಲು ಅಲಂಕರಿಸುವ ಸ್ಪರ್ಧೆ
ಮಕ್ಕಳ ಬಳಿ ಕೊಳಲನ್ನು ಅಲಂಕರಿಸುಂತೆ ಹೇಳಿ, ಇದನ್ನು ಸ್ಪರ್ಧೆ ರೀತಿಯಲ್ಲಿ ಆಯೋಜಿಸಿ. ಇದರ ಜೊತೆಗೆ ನೀವು ಸ್ವಲ್ಪ ಸಹಾಯ ಮಾಡಿದರೆ ಕಿರೀಟವನ್ನು ಅಲಂಕರಿಸುವ ಸ್ಪರ್ಧೆಯನ್ನು ಕೂಡ ನೀಡಬಹುದು.
ಕೃಷ್ಣನ ಗ್ರಾಮವನ್ನು ಮಾಡಿ
ಪುಟ್ಟದಾಗಿ ಕೃಷ್ಣನ ಗ್ರಾಮ ಮಾಡಿ, ಅಲ್ಲಿ ಕರುಗಳು, ಗೋಪಿಕೆಯರು, ಕೃಷ್ಣನ ಸ್ನೇಹಿತರ ಮೂರ್ತಿಗಳನ್ನು ಇಟ್ಟು ಅಲಂಕರಿಸಿ, ನಂತರ ಶ್ರೀಕೃಷ್ಣನ ಕತೆಯನ್ನು ಹೇಳಿ. ಈ ರೀತಿಯೆಲ್ಲಾ ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಆಚರಿಸಿದರೆ ಮಕ್ಕಳಿಗೆ ಈ ದಿನ ಒಂದು ಹಬ್ಬದಂತೆ ಅಲ್ಲದೆ ತುಂಬಾನೇ ವಿಶೇಷವಾಗಿರಲಿದೆ.
ಜನ್ಮಾಷ್ಟಮಿ ಟ್ರೆಷರ್ ಹಂಟ್ ಗೇಮ್ ಆಡಿಸಿ
ಇದು ಕೂಡ ಮಕ್ಕಳಿಗೆ ತುಂಬಾನೇ ಖುಷಿಯಾಗುವುದು, ಕೃಷ್ಣನಿಗೆ ಸಂಬಂಧಿಸಿದ ಕೊಳಲು, ನವಿಲುಗಿರಿ, ಕಿರೀಟ ಈ ವಸ್ತುಗಳನ್ನು ಬಚ್ಚಿಟ್ಟು ಅವರಿಗೆ ಚಿಕ್ಕ ಕ್ಲೂ ನೀಡಿ ಹುಡುಕಲು ಹೇಳಿ. ಈ ಚಟುವಟಿಕೆಯಲ್ಲೂ ದೊಡ್ಡವರೂ ಭಾಗವಹಿಸಬಹುದು.
ಜನ್ಮಾಷ್ಟಮಿ ಪ್ರಾರ್ಥನೆ ಮಾಡಿಸಿ
ಮಕ್ಕಳಿಗೆ ನಮ್ಮ ಸಂಸ್ಕೃತಿ, ನಮ್ಮ ಆಚರಣೆ ಕುರಿತು ಅರಿವು ಮೂಡಿಸುವ ಪ್ರಯತ್ನವನ್ನು ಪೋಷಕರು ಮಾಡಿಸಬೇಕು. ಮಕ್ಕಳಿಗೆ ಪ್ರಾರ್ಥನೆ ಹೇಳಿಕೊಟ್ಟು ಪ್ರಾರ್ಥನೆ ಮಾಡಿಸಿ.
ಜನ್ಮಾಷ್ಟಮಿ ಆಚರಣೆಯ ಒಳಾರ್ಥವೇನು?
ಕೃಷ್ಣನ ತಾಯಿ ದೇವಕ್ಕಿ ದೇಹದ ಪ್ರತೀಕ, ತಂದೆ ಪ್ರಾಣದ ಸಂಕೇತ, ಶ್ರೀ ಕೃಷ್ಣ ಪ್ರೀತಿಯ ಸಂಕೇತ. ಕೃಷ್ಣನ ಮಾವ ನಮ್ಮಲ್ಲಿರುವ ಅಹಂನ ಸಂಕೇತ, ಯಾವಾಗ ಅಹಂ ಹೆಚ್ಚಾಗುವುದೋ ಆವಾಗ ಬದುಕು ಅರ್ಥವನ್ನು ಕಳೆದುಕೊಳ್ಳುತ್ತದೆ. ಆದರೆ ಅಹಂ ಮಣಿಸುವ ಶಕ್ತಿ ಪ್ರೀತಿಗಿದೆ. ಅಹಂ ಬದುಕು ನಾಶ ಮಾಡಿದರೆ ಪ್ರೀತಿ ಎಲ್ಲವನ್ನೂ ಗೆಲ್ಲಿಸುತ್ತದೆ. ಶ್ರೀಕೃಷ್ಣ ಪರಮಾತ್ಮ ನಮ್ಮಲ್ಲಿರುವ ಪ್ರೀತಿ, ಕೃಷ್ಣನಲ್ಲಿನ ಭಕ್ತಿಯೆಂದರೆ ಈ ಪ್ರೀತಿಯ ಗುಣ ಹೆಚ್ಚಾಗಬೇಕು.
ಈ ವರ್ಷ ಕೃಷ್ಣ ಜನ್ಮಾಷ್ಟಮಿಯನ್ನು ಯಾವಾಗ ಆಚರಿಸಲಾಗುವುದು?
ಈ ವರ್ಷ ಕೃಷ್ಣ ಜನ್ಮಾಷ್ಟಮಿಯನ್ನು ಸೆಪ್ಟೆಂಬರ್ 6ರಂದು ಆಚರಿಸಲಾಗುವುದು.



Click it and Unblock the Notifications
