Latest Updates
-
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ!
ಪುರ್ನಜನ್ಮವೆಂಬುದು ಇದೆಯೇ? ಧರ್ಮಗ್ರಂಥಗಳು ಹೇಳುವುದೇನು?
ಮನುಷ್ಯನಿಗೆ ಒಟ್ಟು ಏಳು ಜನ್ಮಗಳು ಇರುತ್ತಂತೆ ಹೀಗಂತ ನಮ್ಮ ಧರ್ಮಗ್ರಂಥಗಳಲ್ಲಿ ಉಲ್ಲೇಖವಾಗಿದೆ. ಈ ಏಳು ಜನ್ಮದಲ್ಲೂ ನಾವು ಮನುಷ್ಯರಾಗಿಯೇ ಹುಟ್ಟಬೇಕೆಂದೇನಿಲ್ಲ ಮನುಷ್ಯ, ಪ್ರಾಣಿ, ಕೀಟ ಹೀಗೆ ಯಾವ ರೂಪದಲ್ಲಾದರೂ ಮರು ಜನ್ಮ ಪಡೆಯಬಹುದು.
ಅನೇಕ ಜನ ಈ ಬಗ್ಗೆ ಗಾಢವಾದ ನಂಬಿಕೆಯನ್ನು ಇಟ್ಟುಕೊಂಡಿದ್ದಾರೆ. ಆದರೆ ಇನ್ನೂ ಕೆಲವರು ಇದು ಸತ್ಯಕ್ಕೆ ದೂರವಾದ ವಿಚಾರ ಎಂದು ಇದನ್ನು ತಳ್ಳಿ ಹಾಕಿದ್ದಾರೆ. ಹಾಗಾದರೆ ಪುನರ್ಜನ್ಮ ಎಂದರೇನು? ಪುನರ್ಜನ್ಮದ ಬಗ್ಗೆ ನಮ್ಮ ಧರ್ಮ ಗ್ರಂಥಗಳು ಹೇಳೋದೇನು ಅನ್ನೋದನ್ನ ತಿಳಿಯೋಣ.

ಪುನರ್ಜನ್ಮ ಎಂದರೇನು?
ಪುನರ್ಜನ್ಮದ ಕಲ್ಪನೆಯು ಒಂದೊಂದು ಧರ್ಮದಲ್ಲಿ ಒಂದೊಂದು ರೀತಿಯಲ್ಲಿ ಇದೆ. ಹಿಂದೂ ಧರ್ಮದ ಪ್ರಕಾರ ದೇಹಕ್ಕೆ ಸಾವಿದೆ ಆದರೆ ಆತ್ಮಕ್ಕೆ ಎಂದಿಗೂ ಸಾವಿಲ್ಲ. ಒರ್ವ ವ್ಯಕ್ತಿಯ ದೇಹವನ್ನು ಬಿಟ್ಟುಹೋದ ಆತ್ಮ ಮತ್ತೊಂದು ದೇಹವನ್ನು ಸೇರಿ ಮರುಹುಟ್ಟು ಪಡೆಯುವುದೇ ಪುನರ್ಜನ್ಮ.
ಸತ್ತ ವ್ಯಕ್ತಿಯ ದೇಹದಿಂದ ಆತ್ಮ ಹೊರ ಬರೋದು ಹೇಗೆ?
ನಂಬಿಕೆಗಳ ಪ್ರಕಾರ ಒಬ್ಬ ಸತ್ತ ವ್ಯಕ್ತಿಯ ದೇಹದಿಂದ ಆತ್ಮವು ಹೊರ ಬರುತ್ತದೆ. ಈ ಆತ್ಮ ಆತನ ಬಾಯಿ ಅಥವಾ ಮೂಗಿನ ಮೂಲಕ ಹೊರ ಬರುತ್ತಂತೆ. ಹೀಗೆ ಹೊರ ಬದ ಆತ್ಮ ಮನುಷ್ಯ, ಪ್ರಾಣಿ, ಕೀಟದ ರೂಪದಲ್ಲಿ ಮರುಹುಟ್ಟು ಪಡೆದುಕೊಳ್ಳುತ್ತದೆ.
ಆಫ್ರಿಕಾದ ಜನರ ನಂಬಿಕೆಯ ಪ್ರಕಾರ ಸತ್ತ ಮನುಷ್ಯನ ದೇಹದಿಂದ ಹೊರ ಬಂದ ಆತ್ಮವು ದೇಹದ ಹತ್ತಿರವೇ ಸುಳಿದಾಡುತ್ತಿರುತ್ತಂತೆ. ಆತ ಸತ್ತು ಆತನ ಕಾರ್ಯಗಳನ್ನು ಮಾಡಿದ ನಂತರವು ಆತನ ಸಮಾಧಿಯ ಪಕ್ಕದಲ್ಲೇ ಕೆಲ ಕಾಲಗಳವರೆಗೂ ಇರುತ್ತೆ ಎಂಬ ನಂಬಿಕೆಯಿದೆ.
ಇನ್ನೂ ಗ್ರೀಕ್ ಜನರ ನಂಬಿಕೆಯ ಪ್ರಕಾರ ಸತ್ತ ವ್ಯಕ್ತಿಯ ಆತ್ಮವು ಪುನರ್ಜನ್ಮ ಪಡೆಯುವುದು ಕೇವಲ ಮನುಷ್ಯ, ಪ್ರಾಣಿ ಹಾಗೂ ಸಸ್ತನಿಗಳ ದೇಹದಲ್ಲಿ ಮಾತ್ರವಂತೆ.
ಪುನರ್ಜನ್ಮಗಳ ಬಗ್ಗೆ ಧರ್ಮಗಳಲ್ಲಿರುವ ನಂಬಿಕೆ ಏನು ಹೇಳುತ್ತೆ?
ಹಿಂದೂ, ಜೈನ, ಬೌದ್ಧ, ಸಿಖ್ಖ್ ಹೀಗೆ ಯಾವುದೇ ಧರ್ಮವಿರಲಿ ಪ್ರತಿಯೊಂದು ಧರ್ಮವು ಕರ್ಮದ ಬಗ್ಗೆ ನಂಬಿಕೆಯನ್ನು ಇಟ್ಟುಕೊಂಡಿದೆ. ಈ ಜನ್ಮದಲ್ಲಿ ಮಾಡಿದ ಪಾಪ-ಕರ್ಮಗಳಲ್ಲಿ ಮುಂದಿನ ಜನ್ಮದಲ್ಲಿ ತಕ್ಕ ಶಾಸ್ತಿ ಆಗುತ್ತೆ ಎಂಬ ನಂಬಿಕೆ ಗಾಢವಾಗಿದೆ.
ಹಿಂದೂ ಧರ್ಮದ ಪ್ರಕಾರ ಮೋಕ್ಷ ಸಿಗುವರೆಗೂ ಮನುಷ್ಯ ಪುನರ್ಜನ್ಮವನ್ನು ಪಡೆಯುತ್ತಲೇ ಇರುತ್ತಾನೆ ಎಂಬ ನಂಬಿಕೆಯಿದೆ. ಸಿಖ್ಖ್ ಧರ್ಮದವರು ಕೂಡ ಇದೇ ನಂಬಿಕೆಯನ್ನು ಹೊಂದಿದ್ದಾರೆ.
ಪುನರ್ಜನ್ಮದ ಪ್ರಕ್ರಿಯೆ ನಿಂತು ಹೋಗುವುದು ಯಾವಾಗ ಅಂದರೆ ಆತ್ಮವು ಧರ್ಮಗಳ ಶಿಸ್ತಿನಿಂದ ಬಿಡುಗಡೆ ಹೊಂದಿ ಬ್ರಹ್ಮಾಂಡದ ತುತ್ತ ತುದಿಯನ್ನು ಏರಿದಾಗ ಮಾತ್ರ.
ಬೌದ್ಧ ಧರ್ಮವು ಆತ್ಮವು ಬೇರೆ ದೇಹಕ್ಕೆ ಸೇರೋದ್ರ ಬಗ್ಗೆ ನಂಬಿಕೆಯನ್ನು ಇಟ್ಟಿಲ್ಲ. ಆದರೆ ಹುಟ್ಟಿದ ಪ್ರತಿಯೊಬ್ಬ ವ್ಯಕ್ತಿಯು ಕರ್ಮ ಅನುಭವಿಸಲೇಬೇಕು ಎಂಬುವುದರ ಬಗ್ಗೆ ಬೌದ್ಧ ಧರ್ಮದಲ್ಲೂ ಉಲ್ಲೇಖವಾಗಿದೆ.
ಹೀಗೆ ಪುನರ್ಜನ್ಮದ ಬಗ್ಗೆ ಒಬ್ಬರದ್ದು ಒಂದೊಂದು ನಂಬಿಕೆ. ಹುಟ್ಟು-ಸಾವು ಸಹಜ. ಆದರೆ ಮನುಷ್ಯ ಪರಿಪೂರ್ಣ ಅನ್ನಿಸಿಕೊಳ್ಳುವುದು ಆತ ಹೃದಯವಂತಿಕೆ ತೋರಿದಾಗ ಮಾತ್ರ.



Click it and Unblock the Notifications



