Latest Updates
-
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್! -
ನವರಾತ್ರಿ ಸಂಭ್ರಮ: ಅತ್ತೆ-ಮಾವಂದಿರ ಮನೆಗೆ ಹೋಗುವಾಗ ನವದಂಪತಿಗಳು ಮರೆಯದೆ ಪಾಲಿಸಬೇಕಾದ ಶಿಷ್ಟಾಚಾರಗಳಿವು! -
ದೆಹಲಿ ಮಳೆ ಅಲರ್ಟ್: ಮನೆಯಲ್ಲಿ ನೀರು ಸೋರಿಕೆ ತಡೆಯಲು 20 ನಿಮಿಷದ ಈ ಕೆಲಸ ಮಾಡಿ!
ಹೋಮ-ಹವನ ಮಾಡುವಾಗ ಸ್ವಾಹಾ ಹೇಳೋದ್ಯಾಕೆ? ಇದರ ಹಿಂದಿನ ಸ್ವಾರಸ್ಯಕರ ಕಥೆಯೇನು?
ಹಿಂದೂ ಧರ್ಮದಲ್ಲಿ ಹೋಮ-ಹವನಗಳನ್ನು ಮಾಡುವ ಪದ್ಧತಿ ಸನಾತನ ಕಾಲದಿಂದಲೂ ಇದೆ. ಈಗಲೂ ಕೂಡ ಜನ ಇದನ್ನು ಪಾಲಿಸಿಕೊಂಡು ಬಂದಿದ್ದಾರೆ. ದೊಡ್ಡ-ದೊಡ್ಡ ಪೂಜೆಗಳನ್ನು ಮಾಡುವ ಸಂದರ್ಭದಲ್ಲಿ ಮಾತ್ರವಲ್ಲ, ಮನೆಯನ್ನು ಶುದ್ಧಗೊಳಿಸುವ ಸಂದರ್ಭದಲ್ಲೂ ಕೂಡ ಸಣ್ಣದಾಗಿ ಹೋಮ ಮಾಡುವ ಪದ್ಧತಿ ಹಿಂದೂ ಧರ್ಮದಲ್ಲಿದೆ. ಹೋಮ-ಹವನ ಮಾಡುವ ಸಂದರ್ಭದಲ್ಲಿ ನೀವು ಒಂದು ಅಂಶವನ್ನು ಗಮನಿಸಿರುತ್ತೀರಿ. ಅದೇನೆಂದರೆ ಸ್ವಾಹಾ ಎನ್ನುವ ಮಂತ್ರವನ್ನು ಆರ್ಚಕರು ಪಠಿಸೋದನ್ನು ಖಂಡಿತವಾಗಿ ನೀವು ಕೇಳಿಯೇ ಇರ್ತೀರಿ. ಅಷ್ಟಕ್ಕು ಹೋಮ-ಹವನ ಮಾಡುವ ಸಂದರ್ಭದಲ್ಲಿ ಸ್ವಾಹಾ ಎನ್ನುವ ಮಂತ್ರ ಹೇಳೋದ್ಯಾಕೆ ಅನ್ನೋದನ್ನ ತಿಳಿಯೋಣ.

ಸ್ವಾಹಾ ಎನ್ನುವ ಪದ ಇಷ್ಟೊಂದು ಮಹತ್ವ ಪಡೆಯಲು ಕಾರಣವೇನು?
ಹೋಮ-ಹವನ ಆಗುವ ಸಂದರ್ಭದಲ್ಲಿ ಅಗ್ನಿ ಕುಂಡಕ್ಕೆ ಅನೇಕ ಬಗೆಯ ವಸ್ತುಗಳನ್ನು ಅರ್ಪಿಸೋದನ್ನು ನಾವು ನೋಡಿರ್ತೀವಿ. ಪ್ರತಿಸಾರಿ ಅಗ್ನಿ ಕುಂಡಕ್ಕೆ ವಸ್ತುಗಳನ್ನು ಅರ್ಪಿಸುವಾಗ ಕೊನೆಯಲ್ಲಿ ಸ್ವಾಹಾ ಅನ್ನೋ ಮಂತ್ರವನ್ನು ಹೇಳಲೇಬೇಕು. ಇದರ ಹಿಂದೆ ಒಂದು ಕಾರಣವಿದೆ. ನಾವು ಮಾಡುವ ಯಜ್ಞ ಸಂಪೂರ್ಣ ಯಾವಾಗ ಆಗುತ್ತೆ ಎಂದರೆ ಅದನ್ನು ದೇವತೆಗಳು ಸ್ವೀಕರಿಸಿದ ನಂತರವಷ್ಟೇ ಸಂಪೂರ್ಣ ಆಯಿತು ಎಂದು ನಂಬಲಾಗುತ್ತದೆ. ದೇವತೆಗಳು ಇದನ್ನು ಸ್ವೀಕರಿಸಬೇಕಾದರೆ ಕೊನೆಯಲ್ಲಿ ಸ್ವಾಹಾ ಎನ್ನುವ ಮಂತ್ರವನ್ನು ಹೇಳಲೇಬೇಕು. ಇಲ್ಲವಾದರೆ ದೇವತೆಗಳು ಇದನ್ನು ಒಪ್ಪಿಕೊಳ್ಳೋದಿಲ್ಲ ಎಂದು ನಂಬಲಾಗಿದೆ.
ಅಗ್ನಿ ದೇವನ ಪತ್ನಿಯನ್ನು ನೆನೆಯೋದ್ಯಾಕೆ?
ಹೋಮ-ಹವನ ಮಾಡುವ ಸಂದರ್ಭದಲ್ಲಿ ಅಗ್ನಿ ಕುಂಡವನ್ನ ತಯಾರಿಸಿ ಎಲ್ಲಾ ವಸ್ತುಗಳನ್ನು ಅಗ್ನಿದೇವನಿಗೆ ಅರ್ಪಿಸುತ್ತೇವೆ. ನಿಮಗೊತ್ತಾ ಈ ವೇಳೆ ಸ್ವಾಹಾ ಎನ್ನುವ ಮಂತ್ರವನ್ನು ಪಠಣೆ ಮಾಡಲೇಬೇಕು. ಇಲ್ಲವಾದರೆ ಅಗ್ನಿದೇವನಿಗೆ ತೃಪ್ತಿಯಾಗೋದಿಲ್ವಂತೆ. ಸ್ವಾಹಾ ಎಂದರೆ ಅಗ್ನಿ ದೇವನ ಪತ್ನಿಯ ಹೆಸರು. ಹೀಗಾಗಿ ಹೋಮ-ಹವನಗಳನ್ನು ಕೈಗೊಂಡಾಗ ಸ್ವಾಹಾ ಹೇಳದಿದ್ದರೆ ಅಗ್ನಿದೇವನಿಗೆ ಅರ್ಪಿತವಾಗೋದಿಲ್ವಂತೆ. ಹೀಗಾಗಿ ಆತನ ಪತ್ನಿಯನ್ನು ಕೊನೆಯಲ್ಲಿ ನೆನೆಯಲೇಬೇಕು ಎಂಬ ನಂಬಿಕೆಯಿದೆ.
ಸ್ವಾಹಾ ಹುಟ್ಟಿಕೊಂಡ ಹಿಂದಿರುವ ಮತ್ತೊಂದು ಕಥೆಯೇನು?
ಒಂದು ಸಾರಿ ಮಹಾದೇವನು ದೇವತೆಗಳನ್ನು ಭೇಟಿಯಾಗೋದಕ್ಕೆ ಬರುತ್ತಾನೆ. ಈ ವೇಳೆ ಆಹಾರ ಹಾಗೂ ನೀರಿಗಾಗಿ ಆಹಾಕಾರ ಉಂಟಾಗುತ್ತದೆ. ಈ ಸಮಸ್ಯೆಗೆ ಪರಿಹಾರವನ್ನು ಕೈಗೊಳ್ಳಲು ಬ್ರಹ್ಮದೇವನು ಒಂದು ಪರಿಹಾರವನ್ನು ಸೂಚಿಸುತ್ತಾನೆ. ಅದೇನೆಂದರೆ ಭೂಮಿಯಲ್ಲಿರುವ ಬ್ರಾಹ್ಮಣರು ದೇವತೆಗಳಿಗಾಗಿ ಆಹಾರವನ್ನು ಸಮರ್ಪಣೆ ಮಾಡಬೇಕು ಎಂದು ಹೇಳುತ್ತಾರೆ. ಇದಕ್ಕಾಗಿ ಅಗ್ನಿದೇವನನ್ನು ಆಯ್ಕೆ ಮಾಡಲಾಗುತ್ತದೆ. ಆದರೆ ಈ ವೇಳೆ ಅಗ್ನಿದೇವನಿಗೆ ಬಸ್ಮವನ್ನು ಸೇವಿಸುವ ಶಕ್ತಿ ಇರಲಿಲ್ಲ.
ಈ ಕಾರಣಕ್ಕೆ ಸ್ವಾಹಾ ಹುಟ್ಟಿಕೊಳ್ಳುತ್ತದೆ. ಸ್ವಾಹಾಕ್ಕೆ ಅಗ್ನಿ ದೇವನ ಜೊತೆಗೆ ಇರುವಂತೆ ಆಜ್ಞೆ ಮಾಡಲಾಗುತ್ತದೆ. ಇದಾದ ಬಳಿಕ ಅಗ್ನಿದೇವನಿಗೆ ಏನನ್ನೇ ಅರ್ಪಿಸಿದರೂ ಅದನ್ನು ಸ್ವಾಹಾ ಸ್ವೀಕರಿಸುವ ಮೂಲಕ ದೇವತೆಗಳಿಗೆ ತಲುಪಿಸುತ್ತಾಳಂತೆ. ಆದ್ದರಿಂದ ಅಗ್ನಿದೇವ ಹಾಗೂ ಸ್ವಾಹಾ ಜೊತೆಯಲ್ಲೇ ಇರಬೇಕು. ಸ್ವಾಹಾದ ಹೊರತಾಗಿ ಯಾವುದೇ ಯಜ್ಞ-ಯಾಗಾದಿಗಳು ಪೂರ್ಣಗೊಳ್ಳೋದಿಲ್ಲ ಅಂತ ಹೇಳೋದು.
ಕೃಷ್ಣನಿಂದ ಹುಟ್ಟಿಕೊಂಡಿತಾ ಸ್ವಾಹಾ?
ಸ್ವಾಹಾದ ಕುರಿತಾದ ಮೂರನೇ ಕಥೆ ಏನು ಹೇಳುತ್ತೆ ಎಂದರೆ ಸ್ವಾಹಾವು ಈ ಪ್ರಕೃತಿಯಿಂದ ಹುಟ್ಟಿಕೊಂಡಿದ್ದು, ಶ್ರೀ ಕೃಷ್ಣನಿಂದ ವಿಶೇಷವಾಗಿ ಆಶೀರ್ವಾದವನ್ನು ಪಡೆದುಕೊಂಡಿದ್ಯಂತೆ. ಅದೇನೆಂದರೆ ಹೋಮ-ಹವನಗಳನ್ನು ಮಾಡುವಾಗ ಸ್ವಾಹಾ ಹೇಳದ ಹೊರತಾಗಿ ಅದು ದೇವತೆಗಳಿಗೆ ಸಮರ್ಪಿತವಾಗೋದಿಲ್ಲ ಎನ್ನಲಾಗಿದೆ. ಸ್ವಾಹಾ ಎಂಬ ಮಂತ್ರವನ್ನು ಹೇಳಿದ ನಂತರವಷ್ಟೇ ದೇವತೆಗಳು ಅದನ್ನು ಸ್ವೀಕರಿಸುತ್ತಾರಂತೆ.
ಇದುವೇ ಸ್ವಾಹಾದ ಕುರಿತಾದ ಕೆಲ ಸ್ವಾರಸ್ಯಕರ ಕಥೆಗಳು. ಸ್ವಾಹಾದ ಹೊರತಾಗಿ ಯಾವುದೇ ಯಜ್ಞ-ಯಾಗಾದಿಗಳು, ಹೋಮ-ಹವನಗಳು ಪೂರ್ಣಗೊಳ್ಳೋದಿಲ್ಲ ಅನ್ನೋ ವಿಚಾರ ತಿಳಿಯಿತಲ್ವಾ. ಹಿಂದಿನ ಕಾಲದಿಂದ ಆಚರಿಸಿಕೊಂಡು ಬಂದಿರೋ ಪ್ರತಿಯೊಂದು ಆಚರಣೆಗಳ ಹಿಂದೆ ಒಂದಲ್ಲ ಒಂದು ಕಾರಣ ಇದ್ದೇ ಇದೆ.



Click it and Unblock the Notifications


