Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಕೆಜಿಎಫ್ ಚಾಚಾ ಹರೀಶ್ ರಾಯ್ ಇನ್ನಿಲ್ಲ: ಅವರಿಗೆ ಕಾಡಿದ ಕ್ಯಾನ್ಸರ್ ಯಾವುದು ಗೊತ್ತಾ?
ಕೆಜಿಎಫ್ ಸೇರಿದಂತೆ ಕನ್ನಡದ ಹಲವು ಸಿನಿಮಾಗಳಲ್ಲಿ ಖಳನಾಯಕನಾಗಿ ನಟಿಸಿದ್ದ ಹರೀಶ್ ರಾಯ್ ಇಂದು ನಿಧನರಾಗಿದ್ದಾರೆ. ಹರೀಶ್ ರಾಯ್ ಕಳೆದ ಕೆಲ ವರ್ಷಗಳಿಂದ ಕ್ಯಾನ್ಸರ್ ನಿಂದ ಬಳಲುತ್ತಿದ್ದರು. ಹರೀಶ್ ರಾಯ್ ಚಿಕಿತ್ಸೆಗೆ ಕೆಜಿಎಫ್ ಸಿನಿಮಾ ಹೀರೋ ಯಶ್ ಸೇರಿದಂತೆ ಅನೇಕರು ಆರ್ಥಿಕ ಸಹಾಯ ಹಸ್ತ ಚಾಚಿದ್ದರು. ಆದ್ರೆ ಚಿಕಿತ್ಸೆ ಫಲಿಸದೆ ಅವರು ನಿಧನರಾಗಿದ್ದಾರೆ.
ಕ್ಯಾನ್ಸರ್ ಹಿನ್ನೆಲೆಯಲ್ಲಿ ಅವರು ಕೆಲ ದಿನಗಳ ಹಿಂದೆ ಬೆಂಗಳೂರಿನ ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆಗೆ ದಾಖಲಾಗಿದ್ದರು. ಆದ್ರೆ ಈಗ ಚಿಕಿತ್ಸೆ ಫಲಿಸದೆ ಅವರು ಮೃತಪಟ್ಟಿದ್ದಾರೆ. ಅವರು ಶಿವರಾಜ್‌ಕುಮಾರ್ ನಟನೆಯ ಓಂ, ನಲ್ಲ, ಹಲೋಯಮ, ಅಂಡರ್‌ವರ್ಡ್, ಉಪೇಂದ್ರ, ಖಡ್ಗ, ಮೆಜೆಸ್ಟಿಕ್, ದಂಡುಪಾಳ್ಯ, ಕೆಜಿಎಫ್ ಸೇರಿ ಹಲವು ಸಿನಿಮಾ ಗಳಲ್ಲಿ ಅವರು ನಟಿಸಿದ್ದರು.

ಹಲವು ತಿಂಗಳುಗಳಿಂದ ಅವರು ಹಾಸಿಗೆ ಹಿಡಿದಿದ್ದರು. ಆಗಾಗ ಆಸ್ಪತ್ರೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ನಟನ ಈ ಸ್ಥಿತಿ ಕಂಡು ಹಲವು ನಟರು, ನಿರ್ದೇಶಕರು ಸಹ ಅವರಿಗೆ ಆರ್ಥಿಕ ಸಹಾಯ ಮಾಡಿದ್ದರು. ಕೆಲವ ದಿನಗಳಿಂದ ಅವರ ಆರೋಗ್ಯದಲ್ಲಿ ಏರುಪೇರಾದ ಹಿನ್ನಲೆ ಆಸ್ಪತ್ರೆಗೆ ದಾಖಲಾಗಿದ್ದರು.
ಹರೀಶ್ ರಾಯ್‌ಗೆ ಇದ್ದ ಸಮಸ್ಯೆ ಏನು?
ನಟ ಹರೀಶ್ ರಾಯ್ ಅವರಿಗೆ ಕ್ಯಾನ್ಸರ್ ಕಾಣಿಸಿಕೊಂಡಿತ್ತು. ಅದ್ರಲ್ಲೂ ಭಾರತದಲ್ಲಿ ಸಮಾನ್ಯವಾಗಿ ಕಂಡುಬರುವ ಹಾಗೆ ಹೆಚ್ಚು ಸಾವಿಗೂ ಕಾರಣವಾಗುವ ಕ್ಯಾನ್ಸರ್‌ಗಳಲ್ಲಿ ಒಂದಾಗಿರುವ ಥೈರಾಯ್ಡ್ ಕ್ಯಾನ್ಸರ್‌ಗೆ ತುತ್ತಾಗಿದ್ದರು. ಅವರಿಗೆ 4ನೇ ಹಂತದ ಕ್ಯಾನ್ಸರ್ ಚಿಕಿತ್ಸೆ ಮುಂದುವರೆದಿತ್ತು. ಆದ್ರೆ ದೇಹದ ಹಲವು ಭಾಗದಲ್ಲಿ ನೀರು ತುಂಬಿಕೊಳ್ಳುವಷ್ಟು ವ್ಯಾಪಿಸಿದ್ದ ಪರಿಣಾಮವಾಗಿ ಅವರು ನಿಧನರಾಗಿದ್ದಾರೆ. ಅವರ ಚಿಕಿತ್ಸೆಗೆ ಈಗಾಗಲೇ ಲಕ್ಷ ಲಕ್ಷ ರೂಪಾಯಿ ಖರ್ಚಾಗಿತ್ತು. ಒಂದು ಲಸಿಕೆ ಸುಮಾರು 3 ಲಕ್ಷ ರೂಪಾಯಿಗೂ ಅಧಿಕ ಖರ್ಚಾಗುತ್ತಿತ್ತು ಎಂದು ವರದಿಯಾಗಿದೆ.
ಥೈರಾಯ್ಡ್ ಕ್ಯಾನ್ಸರ್ ಉಂಟಾಗೋದ್ಯಾಕೆ?
ಥೈರಾಯ್ಡ್ ನಮ್ಮ ದೇಹದ ಬಹುಮುಖ್ಯ ಅಂಗವಾಗಿದೆ. ದೇಹದಲ್ಲಿ ಚಯಪಚಯ ಕ್ರಿಯೆ ಸರಿಯಾಗಿ ನಡೆಯಲು ಥೈರಾಯ್ಡ್ ಹಾರ್ಮೋನ್‌ಗಳು ಅವಶ್ಯಕ. ಈ ಹಾರ್ಮೋನ್ ಬಿಡುಗಡೆಗೆ ಮುಖ್ಯ ಪಾತ್ರೆ ವಹಿಸುವುದೇ ಈ ಥೈರಾಯ್ಡ್ ಗ್ರಂಥಿಗಳು. ಥೈರಾಯ್ಡ್ ಸಣ್ಣದಾದ ಅಂಗ, ಇದರಲ್ಲಿ ಊತ ಉಂಟಾಗುವುದು ಕ್ಯಾನ್ಸರ್ ತಗುಲಿದ ಲಕ್ಷಣಗಳಲ್ಲಿ ಒಂದು. ಈ ಕ್ಯಾನ್ಸರ್ ಪುರುಷರಿಗಿಂತ ಹೆಚ್ಚಾಗಿ ಮಹಿಳೆಯಲ್ಲಿ ಕಂಡುಬರುತ್ತದೆ.
ಥೈರಾಯ್ಡ್ ಕ್ಯಾನ್ಸರ್‌ಗೆ ಪ್ರಮುಖ ಕಾರಣಗಳೇನು?
ಬಹುತೇಕ ಥೈರಾಯ್ಡ್ ಕ್ಯಾನ್ಸರ್‌ಗಳು ಇಂತಹದ್ದೇ ಕಾರಣದಿಂದ ಬರಲಿದೆ ಎಂಬುದನ್ನು ಹೇಳುವುದು ಕಷ್ಟ. ವಂಶವಾಹಿಯಿಂದ, ರೇಡಿಯೇಷನ್, ಅಯೋಡಿನ್ ಕೊರತೆ, ಪರಿಸರ, ದೇಹದಲ್ಲಿ ಉಂಟಾಗುವ ಕ್ಯಾನ್ಸರ್ ಕೋಶಗಳ ಬೆಳವಣಿಗೆ, ಬಾಹ್ಯ ಪರಿಸರ ಹೀಗೆ ಹತ್ತಾರು ಅಂಶಗಳು ಈ ಕ್ಯಾನ್ಸರ್ ಬರುವಿಕೆಗೆ ಕಾರಣ ಎನ್ನಲಾಗುತ್ತದೆ.
ಥೈರಾಯ್ಡ್ ಕ್ಯಾನ್ಸರ್‌ನ ಪ್ರಮುಖ ಲಕ್ಷಣಗಳೇನು?
- ಗಂಟಲಿನಲ್ಲಿ ಗಡ್ಡೆ ರೀತಿಯ ರಚನೆ ಉಂಟಾಗುವುದು
- ಗಂಟಲಿನಲ್ಲಿ ಊತ
- ಆಹಾರ ನುಂಗಲು ಕಷ್ಟವಾಗುವುದು
- ನಿರಂತರವಾಗಿ ಕುತ್ತಿಗೆ ನೋವು ಬರುವುದು
- ಉಸಿರಾಟದಲ್ಲಿ ತೊಂದರೆ
- ಇದ್ದಕ್ಕಿದ್ದಂತೆ ತೂಕ ಇಳಿಕೆ ಅಥವಾ ತೂಕ ಹೆಚ್ಚಾಗುವುದು
- ಸ್ವರದಲ್ಲಿ ಬದಲಾವಣೆ
- ಕುತ್ತಿಗೆ ಬಿಗಿಯಾದ ಅನುಭವ
ಥೈರಾಯ್ಡ್ ಗ್ರಂಥಿಯಲ್ಲಿ ಕಾಣಿಸಿಕೊಂಡ ಈ ಕ್ಯಾನ್ಸರ್ ಬಳಿಕ ದೇಹದ ಉಳಿದ ಭಾಗಗಳಿಗೂ ಹರಡುತ್ತದೆ. ಸೂಕ್ತ ಸಮಯದಲ್ಲಿ ಚಿಕಿತ್ಸೆ ಆರಂಭಿಸದಿದ್ದರೆ ಅನ್ನನಾಳ, ಶ್ವಾಸಕೋಶ, ಲಿವರ್, ಹೃದಯದ ಭಾಗಕ್ಕೂ ಇದು ಹರಡುತ್ತದೆ. ಈ ಕ್ಯಾನ್ಸರ್ ಆರಂಭಿಕ ಹಂತದಲ್ಲಿ ಗುಣಪಡಿಸಬಹುದು. ಅದಕ್ಕೆಂದು ಶಸ್ತ್ರಚಿಕಿತ್ಸೆ ಸಹ ನಡೆಸಲಾಗುತ್ತದೆ. ಕೆಲವೊಂದು ಸರ್ಜರಿಯಲ್ಲಿ lobectomy ಅಂದರೆ ಥೈರಾಯ್ಡ್ ಗ್ರಂಥಿಯ ಒಂದು ಭಾಗ ತೆಗೆಯಲಾಗುತ್ತದೆ. ಕೀಮೋಥೆರಪಿ ಸೇರಿದಂತೆ ಹಲವು ರೀತಿಯ ಚಿಕಿತ್ಸಾ ವಿಧಾನಗಳಿವೆ.



Click it and Unblock the Notifications










