Latest Updates
-
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI!
ಅಯೋಧ್ಯೆ ರಾಮಮಂದಿರದಲ್ಲಿ ಕೇಸರಿ ಧ್ವಜ ಹಾರಾಟ: ರಾಮನ ದರ್ಶನ ಪಡೆದ ಪ್ರಧಾನಿ ಮೋದಿ!
ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಅಯೋಧ್ಯೆಯ ರಾಮ ಮಂದಿರದ ಮೇಲೆ ಕೇಸರಿ ಧ್ವಜವನ್ನು ಉದ್ಘಾಟಿಸಿದ್ದಾರೆ. ಈ ಮೂಲಕ ದೇವಾಲಯ ನಿರ್ಮಾಣ ಕಾರ್ಯ ಮುಕ್ತಾಯಗೊಂಡಿದೆ ಎಂಬುದಾಗಿ ಅಧಿಕೃತವಾಗಿ ಘೋಷಿಸಿದ್ದಾರೆ. ಪ್ರಧಾನಿ ಮೋದಿ ಅವರಿಗೆ ಉತ್ತರ ಪ್ರದೇಶದ ರಾಜ್ಯಪಾಲೆ ಆನಂದಿಬೆನ್ ಪಟೇಲ್ ಮತ್ತು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಸಾಥ್ ನೀಡಿದ್ದಾರೆ. ಹಾಗೆ ಸಮಾರಂಭದಲ್ಲಿ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಸಹ ಭಾಗಿಯಾಗಿದ್ದರು.
ಅಯೋಧ್ಯೆ ರಾಮ ಮಂದಿರ ಈಗ ಪ್ರಮುಖ ಆಧ್ಯಾತ್ಮಿಕ ಕೇಂದ್ರವಾಗಿ ಬದಲಾಗಿದೆ. ಕಳೆದ ವರ್ಷ ಜನವರಿ 22ರಂದು ದೇವಾಲಯವನ್ನು ಉದ್ಘಾಟಿಸಲಾಗಿತ್ತು. ಇದಾದ ಬಳಿಕ ಲಕ್ಷಾಂತರ ಮಂದಿ ನಿತ್ಯವೂ ಶ್ರೀರಾಮನ ದರ್ಶನ ಪಡೆಯಲು ಅಯೋಧ್ಯೆಗೆ ಆಗಮಿಸುತ್ತಾರೆ. ಈ ದೀಪಾವಳಿಯ ಸಮಯದಲ್ಲಿ ರಾಮಮಂದಿರ ದೀಪಗಳಿಂದ ಅಲಂಕೃತಗೊಂಡಿತ್ತು. ಹಾಗೆ ರಾಮನಿಗೆ ಈವರೆಗೆ ಹಲವು ರೀತಿ ವಿಶೇಷ ಉಡುಗೊರೆಗಳು ಸಹ ಬಂದಿವೆ. ಆದ್ರೆ ಈಗ ಮುಖ್ಯ ದೇವಾಲಯ ಹಾಗೆ 7 ಇತರೆ ಗುಡಿಗಳ ಮೇಲೆ ಈ ಕೇಸರಿ ಧ್ವಜ ಹಾರಾಡಲಿದೆ.

ಈ ಕೇಸರಿ ಧ್ವಜದ ವಿಶೇಷತೆ ಏನು?
ಕೇಸರಿ ಧ್ವಜವು ಮಧ್ಯದಲ್ಲಿ ಓಂ ಎಂಬ ಬರಹವನ್ನು ಹೊಂದಿದೆ. ಇದು ತ್ರಿಕೋನ ಆಕಾರದಲ್ಲಿದೆ. ಸುಮಾರು 10 ಅಡಿ ಎತ್ತರ ಮತ್ತು 20 ಉದ್ದದ ಬಲಕೋನ ಧ್ವಜವಾಗಿದೆ. ಹಿಂದೂಗಳು ಶುಭವೆಂದು ಪರಿಗಣಿಸುವ ಗ್ರಹ ನಕ್ಷತ್ರ 'ಅಭಿಜಿತ್ ಮುಹೂರ್ತ'ದಂದು ಧ್ವಜಾರೋಹಣ ನೆರವೇರಿಸಲಾಗಿದೆ. ಧ್ವಜದ ಕೇಸರಿ ಬಣ್ಣವು ಬೆಂಕಿ ಮತ್ತು ಉದಯಿಸುವ ಸೂರ್ಯನನ್ನು ಸಂಕೇತಿಸುತ್ತದೆ - ತ್ಯಾಗ ಮತ್ತು ಸಮರ್ಪಣೆಯನ್ನು ಪ್ರತಿನಿಧಿಸುತ್ತದೆ. ಈ ಮಂದಿರ ಕೂಡ ಹಲವರ ತ್ಯಾಗದ ಪ್ರತಿಫಲ ಎಂದು ಬಿಂಬಿಸುತ್ತದೆ.
ರಾಮ ಮಂದಿರ ಸೇರಿ ಅಲ್ಲಿರುವ ಎಲ್ಲಾ 7 ದೇವಾಲಯದ ಮೇಲೆ ಹಾರಾಡುವ ಕೇಸರಿ ಧ್ವಜ ಶಾಶ್ವತವಾಗಿ ಇರಲಿದೆ. ಈ ಧ್ವಜ ನಿರ್ಮಾಣಕ್ಕೆ 25 ದಿನಗಳ ಕಾಲ ಸಮಯ ತೆಗೆದುಕೊಳ್ಳಲಾಗಿದೆ. ಹಾಗೆ ಮೂರು ಪದರದ ಬಟ್ಟೆಗಳ ಬಳಸಿ ಇದನ್ನು ಮಾಡಲಾಗಿದೆ. ಹಾಗೆ ಎಲ್ಲಾ ವಸ್ತುವನ್ನು ಸ್ಥಳೀಯರಿಂದಲೇ ಖರೀದಿಸಲಾಗಿದೆ. ರೇಷ್ಮೆ ಅಂಚುಗಳು, ಹಾಗೆ ಮಧ್ಯದಲ್ಲಿ ಓಂ ಅನ್ನು ಕೈಯಿಂದ ಬಿಡಿಸಲಾಗಿದೆ. ಈ ಓಂ ಅಕ್ಷರ ಬರೆಯಲು 7ರಿಂದ 8 ದಿನಗಳ ಸಮಯ ತೆಗೆದುಕೊಳ್ಳಲಾಗಿದೆ. ಅಲ್ಲಿನ ಸ್ಥಳೀಯ ಕಲಾವಿದರಾದ ಕಶ್ಯಪ್ ಮೇವಾಡ ಈ ಧ್ವಜವನ್ನು ನಿರ್ಮಿಸಿ ದೇವಾಲಯಕ್ಕೆ ನೀಡಿದ್ದಾರೆ.
ಇಂದು ಬೆಳಗ್ಗೆಯಿಂದಲೂ ದೇವಾಲಯಕ್ಕೆ ಸಾವಿರಾರು ಮಂದಿ ಭಕ್ತರು ಆಗಮಿಸಿದ್ದಾರೆ. ಹಾಗೆ ರಾಮನ ದರ್ಶನ ಸಮಯವನ್ನೂ ಹೆಚ್ಚಿಸಲಾಗಿದೆ. ಮಂದಿರದ ಸುತ್ತಲೂ ಇಂದು ಜೈ ಶ್ರೀರಾಮ್ ಘೋಷಣೆಗಳು ಮೊಳಗುತ್ತಿವೆ. ಧ್ವಜಾರೋಹಣ ಬಳಿಕ ದೇವಾಲಯದಲ್ಲಿ ಹಲವು ಕಾರ್ಯಕ್ರಮಗಳು ನಡೆಯುತ್ತಿವೆ. ಈ ವಿಶೇಷ ಸಂದರ್ಭದಲ್ಲಿ ಶ್ರೀರಾಮನಿಗೆ ಆರತಿ, ವಿಶೇಷ ಅಲಂಕಾರದೊಂದಿಗೆ ಪೂಜೆ ನೆರವೇರಲಿದೆ. ಶ್ರೀರಾಮ ಮತ್ತು ಸೀತೆಯ ವಿವಾಹ ಸಮಾರಂಭದ ವಾರ್ಷಿಕೋತ್ಸವವಾದ್ದರಿಂದ ಅಯೋಧ್ಯೆಗೆ ಅತ್ಯಂತ ಪವಿತ್ರ ದಿನ. ಅಯೋಧ್ಯೆಯಲ್ಲಿ ವಿವಾಹ ಪಂಚಮಿ ಎಂದು ಆಚರಿಸಲಾಗುತ್ತದೆ.
ರಾಮನ ಬಳಿಕ ಕೃಷ್ಣನ ದರ್ಶನ
ಅಯೋಧ್ಯೆಯ ಶ್ರೀರಾಮನ ದರ್ಶನ ಪಡೆದ ಪ್ರಧಾನಿ ನರೇಂದ್ರ ಮೋದಿ ಅವರು ಇದೇ ನವೆಂಬರ್ 28ರಂದು ಕೃಷ್ಣನ ದರ್ಶನ ಪಡೆಯಲಿದ್ದಾರೆ. ಉಡುಪಿಯ ಶ್ರೀಕೃಷ್ಣ ಮಠಕ್ಕೆ ಅವರು ಭೇಟಿ ನೀಡುತ್ತಿದ್ದಾರೆ. 3ನೇ ಬಾರಿಗೆ ಪ್ರಧಾನಿಯಾಗಿ ಆಯ್ಕೆಯಾದ ಬಳಿಕ ಮೋದಿ ಇದೇ ಮೊದಲ ಬಾರಿಗೆ ಉಡುಪಿ ಮಠಕ್ಕೆ ಭೇಟಿ ನೀಡುತ್ತಿದ್ದಾರೆ. ನವೆಂಬರ್ 28 ರಂದು ದೆಹಲಿಯಿಂದ ನೇರವಾಗಿ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪ್ರಧಾನಿ ಮೋದಿ ಬೆಳಗ್ಗೆ 11:05 ಕ್ಕೆ ಆಗಮಿಸಲಿದ್ದಾರೆ. ನಂತರ ಅಲ್ಲಿಂದ ಹಲಿಕಾಪ್ಟರ್ ಮೂಲಕ ಅವರು ಉಡುಪಿಗೆ ಆಗಮಿಸಲಿದ್ದಾರೆ. ಉಡುಪಿ ಕೃಷ್ಣನ ದರ್ಶನ ಪಡೆದು ಬಳಿಕ ಲಕ್ಷ ಕಂಠ ಗೀತ ಗಾಯನ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.



Click it and Unblock the Notifications
