Latest Updates
-
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು!
ಕಾರನ್ನು ಸ್ವಿಮ್ಮಿಂಗ್ ಪೂಲ್ ಮಾಡಿ ಯೂಟ್ಯೂಬರ್ ಹುಚ್ಚಾಟ: ಪೊಲೀಸರು ನೀಡಿದ ಶಿಕ್ಷೆ ಮಾತ್ರ ಸೂಪರ್
ಕೇರಳ ಯೂಟ್ಯೂಬರ್ ಸಂಜು ಟೆಕ್ಕಿ ಹುಚ್ಚಾಟಕ್ಕೆ ಪೊಲೀಸರು ಸರಿಯಾಗಿ ಪಾಠ ಕಲಿಸಿದ್ದಾರೆ. ನನ್ನ ಕಾರು ನನ್ನ ದುಡ್ಡು, ನನಗೆ ಇಷ್ಟ ಬಂದಂತೆ ಮಾಡುತ್ತೇನೆ ಎಂದು ಕಾರನ್ನು ಸ್ವಿಮ್ಮಿಂಗ್ ಪೂಲ್ ಮಾಡಿ 100 ದಿನ ಓಡಾಡುತ್ತೇನೆ ಎಂದವ 4ನೇ ದಿನಕ್ಕೆ ಪೊಲೀಸರ ಅತಿಥಿಯಾಗಿದ್ದಾನೆ.
ಇತ್ತೀಚೆಗೆ ಬಿಡುಗಡೆಯಾದ ಫಹಾದ್ ಫಾಸಿಲ್ ಸಿನಿಮಾ ಆವೇಶಂ ಸೀನ್ ಅನ್ನು ನಕಲಿ ಮಾಡಿ ತನ್ನ ಯೂಟ್ಯೂಬ್‌ನ ರೀಚ್ ಹೆಚ್ಚಿಸಲು ಮಾಡಲು ಪ್ರಯತ್ನ ಮಾಡಿ ಈಗ 'ಮಾಡಿದ್ದುಣ್ಣೋ ಮಾರಾಯ' ಎಂಬ ಗಾದೆಯಂತೆ ಸರಿಯಾದ ಶಿಕ್ಷೆಯನ್ನು ಅನುಭವಿಸುವಂತಾಗಿದೆ.

ದೊಡ್ಡ ಅಪಾಯನೇ ಉಂಟಾಗುತ್ತಿತ್ತು
ಇವರೇನೂ ನನ್ನ ಕಾರು, ಇದನ್ನು ಏನು ಬೇಕಾದರೂ ಮಾಡಬಹುದು ಎಂದು ಕಾರಿನ ಹಿಂಬದಿಯ ಸೀಟ್‌ಗಳನ್ನು ತೆಗೆದು ಪ್ಲಾಸ್ಟಿಕ್ ಹಾಕಿ ಸ್ವಿಮ್ಮಿಂಗ್ ಪೂಲ್ ಮಾಡಿದ್ದಾರೆ. ಕಾರು ಸ್ಟಾರ್ಟ್ ಮಾಡಿದಾಗ ಕಾರಿನ ಫ್ರೆಂಟ್ ಸೀಟ್‌ನಿಂದ ನೀರು ಬರಲಾರಂಭಿಸಿದೆ, ಅದಾದ ಕೆಲವೇ ನಿಮಿಷಗಳಲ್ಲಿ ಏರ್‌ಬ್ಯಾಗ್ ಓಪನ್ ಆಗಿದೆ, ನಂತರ ಕಾರಿನ ಒಳಗಡೆ ಇರುವ ವ್ಯಕ್ತಿ ಒಳಗಡೆಯ ಡೋರ್ ತೆಗೆಯಲು ಕಷ್ಟಪಡುತ್ತಿದ್ದ.
ಕಾರಿನೊಳಗಡೆಯ ನೀರನ್ನು ಹೊರಗಡೆ ಬಿಡಲು ಶ್ರಮ ಪಡುತ್ತಿದ್ದರು, ಅವರು ಕಾರಿನಿಂದ ನೀರು ಹೊರ ಹಾಕಲು ಪ್ರಯತ್ನಿಸುತ್ತಿದ್ದ ಸ್ಥಳದ ಬಳಿ ಸ್ಕೂಲ್ ಇತ್ತ, ಇವರು ನೀರನ್ನು ಈ ರೀತಿ ಏಕಾಏಕಿ ನಿರನ್ನು ಹೊರ ಚೆಲ್ಲಿದಾಗ ಆ ಆರಿ ಸ್ಕೂಟರ್ ಬಂದರೆ ಕಷ್ಟ, ಶಾಲಾ ಮಕ್ಕಳು ನಡೆದು ಬರವವರರೆಗೂ ಕಷ್ಟ, ಅಷ್ಟೇ ಅಲ್ಲ ಇವರ ಕಾರಿಗೆ ಬೆಂಕಿ ಹತ್ತಿಕೊಳ್ಳುವ ಅಪಾಯವಿತ್ತು.
ಇದೀಗ ಆ ಕಾರನ್ನು ಸೀಜ್ ಮಾಡಲಾಗಿದೆ, ಕಾರಿನ ಡ್ರೈವರ್ ಲೈಸನ್ಸ್ ರದ್ದು ಪಡಿಸಲಾಗಿದೆ, ಅಲ್ಲದೆ ಆ ಯೂಟ್ಯೂಬರ್‌ಗಳಿಗೆ ಕೇರಳದ ಆಲಪುಯ್ಞಾ ಮೆಡಿಕಲ್ ಕಾಲೇಜ್‌ನಲ್ಲಿ ಒಂದು ವಾರ ಸೇವೆ ಮಾಡುವ ಶಿಕ್ಷೆ ನೀಡಲಾಯ್ತು.
ನೀಡಿದ ಶಿಕ್ಷೆಯಿಂದ ಪಾಠ ಕಲಿತ ಯೂಟ್ಯೂಬರ್
ಈ ಶಿಕ್ಷೆಯನ್ನು ಅನುಭವಿಸಿದ ಯೂಟ್ಯೂಬರ್ ನಾವು ಮಾಡಿದ ತಪ್ಪು ಏನೆಂದು ಅರಿತುಕೊಂಡಿದ್ದೇವೆ ಎಂದು ಹೇಳಿದ್ದಾರೆ, ಆ ಮೆಡಿಕಲ್ ಕಾಲೇಜ್‌ನಲ್ಲಿ ದಿನವೂ ಹತ್ತಾರು ಆಕ್ಸಿಡೆಂಟ್ ಕೇಸ್ ಬರ್ತಾ ಇತ್ತು, ಅಲ್ಲಿರುವ ರೋಗಿಗಳು ಅಪಘಾತದಿಂದ ಕಾಲು-ಕೈ ಕಳೆದು ನರಳಾಡುತ್ತಿರುವವರನ್ನು ನೋಡಿದಾಗ ಅವರಿಗೆ ಪಶ್ಚಾತಾಪ ಉಂಟಾಗಿದೆ.
ಅವರೇ ಈಗ ಆ ಒಂದು ವಾರ ಪ್ರತಿದಿನ ನನ್ನ ಕೈಗಳಿಗೆ ಅಪಘಾತದಿಂದ ಗಾಯಗೊಂಡವರ ರಕ್ತ ತಗುಲಿದೆ, ಅವರನ್ನು ಆಸ್ಪತ್ರೆ ಆಂಬ್ಯೂಲೆನ್ಸ್‌ಗೆ ತಂದಾಗ ನಾವು ಅವರನ್ನು ಎತ್ತಿ ಸ್ಟ್ರೆಚ್ಚರ್‌ನಲ್ಲಿ ತರುತ್ತಿದ್ದೇವೆ, ಇಬ್ಬರು ಅಪಘಾತದಲ್ಲಿ ಸತ್ತವರನ್ನೂ ಎತ್ತಿದ್ದೇವೆ. ಇವುಗಳನ್ನೆಲ್ಲಾ ನೋಡಿದಾಗ ನಮಗೆ ಕೈ ಕಾಲುಗಳಿವೆ, ಅದನ್ನು ಕಳೆದುಕೊಂಡರೆ ಎಷ್ಟು ಕಷ್ಟ ಪಡಬೇಕಾಗುತ್ತದೆ ಎಂದು ನೋಡಿದ್ದೇವೆ, ಇನ್ನು ಇಂಥ ತಪ್ಪು ಮಾಡಿಲ್ಲ ಎಂದು ಹೇಳಿದ್ದಾರೆ.
ಪೊಲೀಸರು ಒಳ್ಳೆಯ ಶಿಕ್ಷೆಯನ್ನೇ ನೀಡಿದ್ದಾರೆ, ಫೈನ್ ಕಟ್ಟಿ ಅಂತ ಹೇಳಿದ್ದರೆ ಅವರಿಗೆ ಅವರ ತಪ್ಪಿನ ಅರಿವು ಆಗುತ್ತಿರಲಿಲ್ಲ, ಆದರೆ ಮೆಡಿಕಲ್ ಕಾಲೇಜಿನಲ್ಲಿ ಮಾಡಿದ ಸೇವೆ ಅವರಿಗೆ ಅವರ ತಪ್ಪು ಅರಿತುಕೊಳ್ಳಲು ಸಾಧ್ಯವಾಗಿದೆ.



Click it and Unblock the Notifications
