Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಕೇರಳ ಗುಡ್ಡ ಕುಸಿತ: ಸಂಕಷ್ಟದಲ್ಲಿ ನೆರವು ನೀಡುವುದು ಹೇಗೆ? ಇಲ್ಲಿದೆ ಮಾಹಿತಿ!
ಕೇರಳದ ವಯನಾಡು ಜಿಲ್ಲೆಯಲ್ಲಿ ಭಾರೀ ಗುಡ್ಡ ಕುಸಿತ ಉಂಟಾಗಿದ್ದು, 290 ಮಂದಿ ಮೃತಪಟ್ಟಿರುವುದು ಬಹುದೊಡ್ಡ ದುರಂತಕ್ಕೆ ಸಾಕ್ಷಿಯಾಗಿದೆ. ಈ ಸಾವಿನ ಸಂಖ್ಯೆ ಇನ್ನಷ್ಟು ಏರಿಕೆಯಾಗುವ ಸಂಭವವಿದೆ ಎಂದು ತಿಳಿದುಬಂದಿದೆ. ಸದ್ಯ ಶೋಧ ಕಾರ್ಯಚರಣೆಯ ಜೊತೆಗೆ ರಕ್ಷಣಾ ಕಾರ್ಯವೂ ನಡೆಯುತ್ತಿದೆ. ಅಲ್ಲಿಯೇ ಎನ್‌ಡಿಆರ್‌ಎಫ್ ತಂಡ ಸೇರಿದಂತೆ ಸೇನೆಯ ಸಿಬ್ಬಂದಿ ಬೀಡು ಬಿಟ್ಟಿದ್ದಾರೆ.
ವಯನಾಡ್ ಜಿಲ್ಲೆಯ ಮೆಪ್ಪಾಡಿ ಬಳಿಯ ಗುಡ್ಡಗಾಡು ಪ್ರದೇಶಗಳಲ್ಲಿ ಈ ಘಟನೆ ನಡೆದಿದ್ದು, ತಾತ್ಕಾಲಿಕ ಸೇತುವೆ ಸೇರಿದಂತೆ ತಾತ್ಕಾಲಿಕ ಆಶ್ರಯ ಕೇಂದ್ರಗಳನ್ನು ಸಹ ತೆರೆಯಲಾಗಿದೆ. ಸುಂದರ ಪ್ರವಾಸಿ ತಾಣವಾಗಿದ್ದ ಸ್ಥಳವೀಗ ಸ್ಮಶಾನವಾಗಿ ಮಾರ್ಪಟ್ಟಿದೆ. ಇಡೀ ನದಿಯ ಹರಿಯುವರಿಕೆಯಲ್ಲಿ ಎಲ್ಲಿ ನೋಡಿದರು ಅಲ್ಲಿ ಶವಗಳು ಸಿಗುತ್ತಿವೆ. ಇನ್ನೂ ನಾಪತ್ತೆಯಾದವರಿಗಾಗಿ ಶೋಧ ಮುಂದುವರೆದಿದೆ.

ಈಗ ಕೇರಳ ಸರ್ಕಾರ ಆಶ್ರಯ ತಾಣಗಳಲ್ಲಿರುವ ಜನರಿಗೆ ನೆರವು ನೀಡುವಂತೆ ಮನವಿ ಮಾಡಿದೆ. ಅಲ್ಲದೆ ಇದಕ್ಕೆ ಹಲವು ಸಂಘ ಸಂಸ್ಥೆಗಳು ಸೇರಿ ರಾಜ್ಯ ಸರ್ಕಾರವು ಕೈ ಜೋಡಿಸಿದೆ. ಕಾಳಜಿ ಕೇಂದ್ರಗಳಿಗೆ ಅಗತ್ಯ ನೆರವು ನೀಡುವಂತೆ ಮನವಿ ಮಾಡಲಾಗಿದ್ದು, ಈ ಕೇಂದ್ರಗಳಿಗೆ ಅಗತ್ಯವಾದ ನೆರವು ಹರಿದುಬರುತ್ತಿದೆ.
ಹಾಗಾದ್ರೆ ನಾವು ಸಹಾಯ ಮಾಡುವುದು ಹೇಗೆ?
ಹನಿ ಹನಿ ಕೂಡಿದರೆ ಹಳ್ಳ ಎಂಬ ಮಾತಿನಂತೆ ಪ್ರತಿಯೊಬ್ಬರು ಇದಕ್ಕೆ ಸಹಾಯ ಹಸ್ತ ಚಾಚಿದರೆ ಎಂತಹ ಸವಾಲು ಎದುರಾದರು ಅದನ್ನು ನಿವಾರಣೆ ಮಾಡಬಹುದು. ಇಲ್ಲಿಯೂ ಕೇರಳದ ಈ ಬಿಕ್ಕಟ್ಟಿನಲ್ಲಿ ಎಲ್ಲರು ನೆರವಾಗಬೇಕಾದ ಅನಿವಾರ್ಯತೆ ಇದೆ. ಹೀಗಾಗಿ ಕೇರಳ ಸರ್ಕಾರ ಸಹಾಯಕ್ಕೆ ಮನವಿ ಮಾಡಿದೆ.
ಇಡೀ ಜಿಲ್ಲೆಯಲ್ಲಿ 45 ಪರಿಹಾರ ಕೇಂದ್ರಗಳ ಸ್ಥಾಪಿಸಲಾಗಿದೆ, ಸರಿಸುಮಾರು 3,069 ಸ್ಥಳಾಂತರಗೊಂಡ ಜನರಿಗೆ ಉಳಿದುಕೊಳ್ಳುವ ವ್ಯವಸ್ಥೆ ಮಾಡಲಾಗಿದೆ. ಈ ಶಿಬಿರಗಳಲ್ಲಿ ಆಹಾರ, ನೀರು ಮತ್ತು ವೈದ್ಯಕೀಯ ನೆರವು ಸೇರಿದಂತೆ ಅಗತ್ಯ ಸಾಮಗ್ರಿಗಳನ್ನು ಸಾರ್ವಜನಿಕ ವಿತರಣಾ ಇಲಾಖೆಯಿಂದ ಸುಗಮಗೊಳಿಸಲಾಗಿದೆ ಎಂದು ತಿಳಿದುಬಂದಿದೆ.
ಹೀಗಾಗಿ ಈ ಕೇಂದ್ರಗಳಲ್ಲಿರುವವರಿಗೆ ಶಾಶ್ವತ ಪರಿಹಾರ ನೀಡುವ ಮುನ್ನ ಅಗತ್ಯ ವಸ್ತುಗಳ ರವಾನೆ ಮಾಡಬೇಕಾಗುತ್ತದೆ. ಹೀಗಾಗಿ ಜನರಿಗೆ ದಾನ ಮಾಡಲು ಮನವಿ ಮಾಡಲಾಗಿದೆ. ಕೇರಳ ಸಿಎಂ ಪರಿಹಾರ ನಿಧಿಗೆ ಪರಿಹಾರವಾಗಿ ಹಣ ಸಂದಾಯ ಮಾಡಬಹುದು. ಇದರ ಜೊತೆಗೆ ನೀವೇ ನೇರವಾಗಿ ಪರಿಹಾರ ವಸ್ತುಗಳನ್ನು ನೀಡಬಹುದು.
ಜಿಲ್ಲಾಧಿಕಾರಿಗಳ ಕಚೇರಿಗಳಿಗೆ ತಲುಪಿಸಬಹುದು. ನೀವು ಟೂತ್‌ಪೇಸ್ಟ್, ಬ್ರಷ್, ವಾಷಿಂಗ್ ಸೋಪ್, ಒಳಉಡುಪುಗಳು, ಬೆಡ್ ಶೀಟ್, ಮ್ಯಾಟ್ಸ್, ತಟ್ಟೆ, ಲೋಟ, ಸ್ಯಾನಿಟರಿ ಪ್ಯಾಡ್, ಬ್ಲಾಂಕೆಟ್, ದಿಂಬು, ಪಾತ್ರೆ, ಟಾರ್ಚ್, ಟವೆಲ್, ರೈನ್ ಕೋಟ್, ಸ್ವೆಟರ್, ಚಪ್ಪಲಿ, ನೀರು, ಹೊಸ ಬಟ್ಟೆ ಸೇರಿ ಇತರೆ ವಸ್ತುಗಳನ್ನು ನೀಡಬಹುದು. ಜೊತೆಗೆ ಈ ಲಿಂಕ್ ಬಳಸಿ ನೀವು ಸಹ ದೇಣಿಗೆ ನೀಡಬಹುದು. https://donation.cmdrf.kerala.gov.in/
ಸದ್ಯ ಈಗಾಗಲೇ ಸಾವಿರಾರು ಮಂದಿ ದೇಣಿಗೆ ನೀಡಿದ್ದು, ಈವರೆಗೆ 2 ಕೋಟಿ ರೂಪಾಯಿಗೂ ಹೆಚ್ಚು ದೇಣಿಗೆ ಹರಿದುಬಂದಿದೆ. ಇನ್ನು ಸಂಕಷ್ಟದಲ್ಲಿ ನೆರವು ನೀಡುವಂತೆ. ಮಲಯಾಳಂ ನಟ ನಟಿಯರು ಸಹ ಮನವಿ ಮಾಡಿದ್ದಾರೆ. ದುಲ್ಕರ್ ಸಲ್ಮಾನ್, ಪೃಥ್ವಿರಾಜ್ ಸೇರಿ ಬಹುತೇಕರು ಮನವಿ ಮಾಡಿಕೊಂಡಿದ್ದಾರೆ.
ಜೊತೆಗೆ ದೇಣಿಗೆ ನೀಡಲು ಕ್ಯೂಆರ್ ಕೋಡ್ ಸಹ ಹೊರತರಲಾಗಿದ್ದು, ನೀವು ನೇರವಾಗಿ ಈ ಕ್ಯೂ ಆರ್ ಕೋಡ್ ಅನ್ನು ಸ್ಕ್ಯಾನ್ ಮಾಡಿಯೂ ಸಹ ದೇಣಿಗೆ ನೀಡಬಹುದು. ಎಷ್ಟು ರೂಪಾಯಿ ಬೇಕಾದರು ದೇಣಿಗೆ ನೀಡಬಹುದು. ಈ ದೇಣಿಗೆ ನೇರವಾಗಿ ಈ ಸಂತ್ರಸ್ತರ ಸಹಾಯಕ್ಕೆ ಮಾತ್ರವೇ ಬಳಕೆಯಾಗುತ್ತದೆ.



Click it and Unblock the Notifications

