Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
'ಕೇರಳಂ' ಆಗಿ ಬದಲಾಗುತ್ತಿದೆ 'ಕೇರಳ': ಈ ಪದ ಹುಟ್ಟಿದ್ದು ಹೇಗೆ? 'ಚೇರಲಂ' ಕೇರಳ ಆಗಿದ್ದು ಹೇಗೆ?
ದೇವರ ನಾಡು ಎಂದು ಹೆಸರು ಪಡೆದ ಕೇರಳ ಭಾರತದ ಶ್ರೀಮಂತ ರಾಜ್ಯಗಳಲ್ಲಿ ಒಂದು. ಪ್ರಾಕೃತಿಕ ಸೌಂದರ್ಯಕ್ಕೆ ಹೆಸರಾಗಿರುವ ಕೇರಳವು ಈಗ ಕೇರಳಂ ಆಗಿ ತನ್ನ ಹಸರು ಬದಲಾಯಿಸಿಕೊಳ್ಳಲು ಮುಂದಾಗಿದೆ. ಕೇಂದ್ರ ಸಚಿವ ಸಂಪುಟವು ಕೇರಳದ ಹೆಸರನ್ನು ಕೇರಳಂ ಎಂದು ಬದಲಾಯಿಸಲು ಅನುಮೋದನೆ ನೀಡಿದೆ. ಹೀಗಾಗಿ ಇನ್ನು ಮುಂದೆ ಕೇರಳ ಅಧಿಕೃತವಾಗಿ ಕೇರಳಂ ಆಗಿ ಬದಲಾಗಲಿದೆ.
ಇತಿಹಾಸದಲ್ಲಿ ಕೇರಳ ಹೆಸರು ಬಂದಿರುವ ಕುರಿತಾಗಿ ಹಲವು ಕಥೆಗಳಿವೆ. ಹಾಗೆ ಕೇರಳಂ ಆಗಿ ಬದಲಾಯಿಸುತ್ತಿರುವುದಕ್ಕೂ ಕೂಡ ಹಲವು ರೀತಿಯ ಕಾರಣ ನೀಡಲಾಗುತ್ತಿದೆ. ಪ್ರಮುಖವಾಗಿ ಕೇರ ಎಂದರೆ ತೆಂಗಿನಕಾಯಿ ಹಾಗೆ ಇಳಂ ಎಂದರೆ ಭೂಮಿ ಒಟ್ಟಾರೆ ತೆಂಗು ಬೆಳಯುವ ಭೂಮಿ ಎಂಬುದನ್ನು ಕೇರಳ ಎಂದು ಕರೆಯಲಾಗಿದೆ.

ಈ ಹಿಂದೆ ಕೇರಳದ ಹೆಸರು ಕೇರಳಂ ಆಗಿತ್ತು ಎಂದು ಇತಿಹಾಸ ತಜ್ಞರು ಉಲ್ಲೇಖಿಸುತ್ತಾರೆ, ಆದ್ರೆ ಬ್ರಿಟೀಷರ ಆಳ್ವಿಕೆಯ ಸಮಯದಲ್ಲಿ ಅವರು ವ್ಯಂಜನ ಉಚ್ಛಾರಣೆ ಕಷ್ಟವಾಗುವ ಕಾರಣ ಹಲವು ಪ್ರದೇಶದ ಹೆಸರುಗಳನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಬದಲಾಯಿಸಿದರು. ಅದರಲ್ಲೀ ಈ ಕೇರಳ ಕೂಡ ಒಂದಾಗಿದೆ. ಕೇರಳಂ ಬದಲಿಗೆ ಅವರು ಕೇರಳ ಎಂಬುದಾಗಿ ಕರೆದರು ಎಂದು ಹೇಳಲಾಗಿದೆ.
ಐತಿಹಾಸಿಕವಾಗಿ ಅತ್ಯಂತ ವಿಶ್ವಾಸಾರ್ಹವೆಂದು ಪರಿಗಣಿಸಲಾದ ಚೇರ ರಾಜವಂಶದ ಪ್ರತೀಕವಾಗಿ ಈ ಪ್ರದೇಶವನ್ನು ಮೊದಲು ಚೇರಲಂ ಎಂದು ಕರೆಯಲಾಗಿತ್ತು. ಕಾಲ ಕ್ರಮೇಣ ಈ ರಾಜವಂಶದ ಹೆಸರಿನ ಪ್ರದೇಶ ಕೇರಳಂ ಆಗಿ ಪರಿವರ್ತನೆಗೊಂಡಿತು. ಚಕ್ರವರ್ತಿ ಅಶೋಕನ ಶಿಲಾ ಶಾಸನ II ದಕ್ಷಿಣದ ಆಡಳಿತಗಾರನನ್ನು "ಕೇರಳಪುತ್ರ" ಎಂದು ಉಲ್ಲೇಖಿಸಿರುವುದು ನೋಡಬಹುದು. ಇದು ಕ್ರಿ.ಪೂ 3ನೇ ಶತಮಾನದಲ್ಲಿನ ಪುರಾವೆಯಾಗಿದೆ.
ರಾಜ್ಯ ಮರುಸಂಘಟನಾ ಕಾಯ್ದೆಯಡಿ ನವೆಂಬರ್ 1, 1956 ರಂದು ರಾಜ್ಯವನ್ನು ಔಪಚಾರಿಕವಾಗಿ ರಚಿಸಿದಾಗ ಆಂಗ್ಲೀಕೃತ 'ಕೇರಳ'ವನ್ನು ಭಾರತೀಯ ಸಂವಿಧಾನದ ಮೊದಲ ವೇಳಾಪಟ್ಟಿಯಲ್ಲಿ ಹಾಗೆಯೇ ಉಳಿಸಿಕೊಳ್ಳಲಾಗಿತ್ತು. ಬಳಿಕ ಜನರು ಕೂಡ ಕೇರಳ ಎಂಬುದಾಗಿಯೇ ಕರೆಯುವುದು ಮುಂದುವರೆಸಿದರು.
ಕೇರಳ ಹೆಸರನ್ನು ಕೇರಳಂ ಎಂದು ಬದಲಾಯಿಸಲು ಹಲವು ವರ್ಷದಿಂದ ಬೇಡಿಕೆ ಇತ್ತು. 2023ರಲ್ಲಿ ಸರ್ವಾನುಮತದ ನಿರ್ಣಯವನ್ನು ಅಂಗೀಕರಿಸಿತು, ನಂತರ ಜೂನ್ 2024 ರಲ್ಲಿ ಎರಡನೇ ನಿರ್ಣಯವನ್ನು ಅಂಗೀಕರಿಸಿತು. ಇದನ್ನು ಸರ್ವಾನುಮತದಿಂದ ಬೆಂಬಲಿಸಲಾಗಿತ್ತು. ಸದ್ಯ ಈಗ ಈ ಕಾಲ ಕೂಡಿಬಂದಿದೆ.
ಯಾವೆಲ್ಲಾ ಊರಿನ ಹೆಸರು ಬದಲಾಗಿದೆ?
ಕೇರಳ ಮಾತ್ರವಲ್ಲ ದೇಶದ ಹಲವು ಭಾಗದ ಹೆಸರು ಬದಲಾಗಿರುವುದು ನೋಡಬಹುದು. ಇತಿಹಾಸ ಪುಟದಲ್ಲಿ ಹತ್ತು ಹಲವು ಪ್ರದೇಶದ ಹೆಸರುಗಳು ಬದಲಾಗಿವೆ. ಮೈಸೂರು ರಾಜ್ಯದ ಬದಲಾಗಿ ಕರ್ನಾಟಕ ಎಂದು ಮರುನಾಮಕರಣ ಮಾಡಿರುವುದು ಸೇರಿದಂತೆ ದೇಶದ ಹಲವು ರಾಜ್ಯದ ಹೆಸರು ಕೂಡ ಬದಲಾಗಿದೆ. 2007ರಲ್ಲಿ ಉತ್ತರಾಂಚಲದ ಹೆಸರನ್ನು ಉತ್ತರಾಖಂಡ್ ಎಂಬುದಾಗಿ ಬದಲಾಯಿಸಲಾಗಿತ್ತು. ಹಾಗೆ ಒರಿಸ್ಸಾವನ್ನು ಒಡಿಶಾ ಎಂಬುದಾಗಿ ಮರನಾಮಕರಣ ಮಾಡಿರುವುದು ನೋಡಿದ್ದೇವೆ.
ಇದಿಷ್ಟೇ ಅಲ್ಲ ಬ್ಯಾಂಗಳೂರ್ ಬೆಂಗಳೂರು ಆಯಿತು, ಮದ್ರಾಸ್ ಚೆನ್ನೈ ಆಯಿತು, ಮೈಸೂರ್ ಮೈಸೂರು ಆಯಿತು. ಬಿಜಾಪುರವನ್ನು ವಿಜಯಪುರ ಎಂಬುದಾಗಿ ಬದಲಾಯಿಸಲಾಯಿತು. ಹಾಗೆ ಉತ್ತರ ಪ್ರದೇಶದ ಹಲವು ಪ್ರದೇಶದ ಹೆಸರನ್ನು ಬದಲಾಯಿಸಲಾಗಿದೆ. ಅಲಹಾಬಾದ್ ಈಗ ಪ್ರಯಾಗ್‌ರಾಜ್ ಮತ್ತು ಔರಂಗಾಬಾದ್ ಛತ್ರಪತಿ ಸಂಭಾಜಿ ನಗರ. ರಾಷ್ಟ್ರಪತಿ ಭವನದ ಮೊಘಲ್ ಉದ್ಯಾನಗಳನ್ನು ಅಮೃತ್ ಉದ್ಯಾನ ಎಂದು ಮರುನಾಮಕರಣ ಮಾಡಲಾಗಿದೆ.
ಇದೆಲ್ಲದೆರ ಜೊತೆ ಹೈದಾರಾಬಾದ್ ಅನ್ನು ಭಾಗ್ಯನಗರ ಎಂದು ಬದಲಾಯಿಸುವ ಮಾತುಗಳು ಆಗಾಗ ಕೇಳಿ ಬರುತ್ತಲೇ ಇರುತ್ತದೆ. ಹಾಗೆ ಹಲವು ನಗರಗಳ ಪಟ್ಟಿ ಸಾಲಿನಲ್ಲಿವೆ.



Click it and Unblock the Notifications











