Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ದೀಪ ಹಚ್ಚುವಾಗ ಈ ತಪ್ಪುಗಳು ಆಗದಂತೆ ಮುನ್ನೆಚ್ಚರಿಕೆ ವಹಿಸಿ!
ಹಿಂದೂ ಸಂಪ್ರದಾಯದಲ್ಲಿ ನಾವು ಪ್ರತಿನಿತ್ಯ ದೇವರಿಗೆ ದೀಪಹಚ್ಚಿ ಕೈ ಮುಗಿಯುವ ಸಂಪ್ರದಾಯವಿದೆ. ಅನೇಕ ಜನರಿಗೆ ದೀಪ ಹಚ್ಚೋದ್ರ ಹಿಂದಿನ ಕಾರಣ ಏನು ಅನ್ನೋದು ಕೂಡ ಗೊತ್ತಿಲ್ಲ. ತಲಾತಲಾಂತರಗಳಿಂದ ನಡೆದುಕೊಂಡು ಬಂದ ಪದ್ಧತಿಯನ್ನು ಪಾಲಿಸಿಕೊಂಡು ಬರಲಾಗುತ್ತಿದೆ ಅಷ್ಟೇ. ಆದರೆ ನಿಮಗೊತ್ತಾ? ದೀಪವನ್ನು ಹಚ್ಚುವಾಗ ನಾವು ಕೆಲವೊಂದು ನಿಯಮಗಳನ್ನು ಪಾಲಿಸೋದು ತುಂಬಾನೇ ಮುಖ್ಯವಾಗುತ್ತದೆ. ಅಷ್ಟಕ್ಕು ದೀಪ ಹಚ್ಚುವಾಗ ನಾವು ಪಾಲಿಸಲೇಬೇಕಾದ ಮುಖ್ಯ ನಿಯಮಗಳು ಯಾವುದು ಅನ್ನೋದನ್ನು ತಿಳಿಯೋಣ.
ಸನಾತನ ಧರ್ಮದ ಪ್ರಕಾರ ಮನೆಯಲ್ಲಿ ದೀಪ ಹಚ್ಚುವುದರಿಂದ ಮನೆಯಲ್ಲಿ ಸಂತೋಷ, ಶಾಂತಿ ಹಾಗೂ ಸಮೃದ್ಧಿ ಹೆಚ್ಚಾಗುತ್ತಂತೆ. ಯಾವುದೇ ಪೂಜಾ ಕಾರ್ಯಕ್ರಮ ನಡೆಯ ಬೇಕಾದರೂ ಮೊದಲಿಗೆ ದೀಪ ಹಚ್ಚಿ ನಂತರ ದೇವರಲ್ಲಿ ಭಕ್ತಿಯಿಂದ ಬೇಡಿಕೊಳ್ಳಲಾಗುತ್ತದೆ. ದೀಪವನ್ನು ಹಚ್ಚುವುದರಿಂದ ಅಂಧಕಾರ ಕಳೆಯಲಿದೆ ಅನ್ನೋ ನಂಬಿಕೆಯಿದೆ. ಅದ್ರಲ್ಲೂ ಮುಖ್ಯವಾಗಿ ಬೆಳಗ್ಗೆ ಹಾಗೂ ಸಂಜೆಯ ಸಮಯದಲ್ಲಿ ಮನೆಯಲ್ಲಿ ದೀಪ ಬೆಳಗೋದ್ರಿಂದ ಆ ಮನೆಗೆ ತುಂಬಾನೇ ಒಳ್ಳೆಯದಾಗುತ್ತಂತೆ.

ದೀಪ ಹಚ್ಚುವಾಗ ಪಾಲಿಸಬೇಕಾದ ವಿಧಾನಗಳು :
1. ಮುರಿದ ದೀಪದ ಬಟ್ಟಲನ್ನು ಬಳಸಬಾರದು
ದೇವರಿಗೆ ಬಳಸುವ ದೀಪದ ಸಾಮಾಗ್ರಿಗಳು ಚಿನ್ನದಿಂದಲೋ ಅಥವಾ ಬೆಳ್ಳಿಯಿಂದಲೋ ಮಾಡಿರಬೇಕಾಗಿಲ್ಲ. ದೇವರು ಇದನ್ನೆಲ್ಲಾ ಖಂಡಿತ ಬಯಸೋದಿಲ್ಲ. ಆದರೆ ನಮ್ಮಲ್ಲಿ ಭಕ್ತಿ ಇರಬೇಕು ಅಷ್ಟೇ. ಆದರೆ ನಾವು ಬಳಸುವ ದೀಪದ ಬಟ್ಟಲ ಬಗ್ಗೆ ಜಾಗರೂಕತೆ ವಹಿಸೋದು ತುಂಬಾನೇ ಮುಖ್ಯವಾಗುತ್ತದೆ. ಅದ್ರಲ್ಲೂ ಮುರಿದು ಹೋದ, ಜಜ್ಜಿದ ದೀಪದ ಬಟ್ಟಲನ್ನು ಪೂಜೆಗೆ ಎಂದಿಗೂ ಬಳಸೋದಕ್ಕೆ ಹೋಗಬೇಡಿ.
2. ಎಣ್ಣೆ ಅಥವಾ ತುಪ್ಪದ ದೀಪ ಹಚ್ಚಿ ಈ ವಿಚಾರ ಗೊತ್ತಿರಲಿ
ದೇವರಿಗೆ ದೀಪ ಹಚ್ಚುವಾಗ ಎಣ್ಣೆ ಹಾಗೂ ತುಪ್ಪದ ದೀಪ ಹಚ್ಚಿರಿ. ಒಂದು ವೇಳೆ ತುಪ್ಪದ ದೀಪ ಹಚ್ಚುವುದಾದರೆ ದೀಪವನ್ನು ದೇವರ ಎಡ ಬದಿಯಲ್ಲಿ ಇಡಬೇಕು. ಒಂದು ವೇಳೆ ನೀವು ಎಣ್ಣೆಯನ್ನು ಬಳಸಿ ದೀಪವನ್ನು ಹಚ್ಚುವುದಾದರೆ ದೇವರ ಬಲ ತುದಿಯಲ್ಲಿ ಇಡಬೇಕು. ಈ ರೀತಿ ಮಾಡುವುದರಿಂದ ನಿಮ್ಮ ಮನೆಯ ಸಮೃದ್ಧಿ ಹೆಚ್ಚಾಗಲಿದೆಯಂತೆ.
3. ಶನಿ ದೇವನಿಗಾಗಿ ದೀಪ ಹಚ್ಚಿರಿ
ಶನಿ ದೇವನನ್ನು ನ್ಯಾಯದ ದೇವರು ಎಂದು ಕರೆಯುತ್ತಾರೆ. ಶನಿ ದೇವನಿಗೆ ದೀಪವನ್ನು ಹಚ್ಚೋದ್ರಿಂದ ಸಾಡೆ ಸಾತಿ ದೋಷ ಪರಿಹಾರವಾಗಲಿದ್ಯಂತೆ. ಅಷ್ಟೇ ಅಲ್ಲದೇ ಶನಿ ದೇವನು ನಮ್ಮೆಲ್ಲಾ ಸಂಕಷ್ಟಗಳನ್ನೆಲ್ಲಾ ಪರಿಹಾರ ಮಾಡಿ ಮನೆಯಲ್ಲಿ ಸುಖ, ಶಾಂತಿ, ಸಮೃದ್ಧಿ ನೆಲೆಸುವಂತೆ ಮಾಡಲಿದ್ದಾನೆ.
4. ದೀಪ ಹಚ್ಚುವ ಸಮಯ
ದೀಪ ಹಚ್ಚುವುದಕ್ಕೆ ಇಂತಹದ್ದೇ ಸಮಯ ಅಂತಿರುತ್ತದೆ. ನಮಗೆ ಇಷ್ಟ ಬಂದ ಸಮಯದಲ್ಲಿ ದೀಪ ಹಚ್ಚೋದಕ್ಕೆ ಸಾಧ್ಯವಾಗೋದಿಲ್ಲ. ಬೆಳಗ್ಗೆ 5 ರಿಂದ 10 ರವರೆಗೆ ಹಾಗೂ ಸಂಜೆ 5 ರಿಂದ 7ರವರೆಗೆ ದೀಪ ಹಚ್ಚುವುದಕ್ಕೆ ಪ್ರಾಶ್ತ್ಯವಾದ ಸಮಯ. ಮಧ್ಯಾಹ್ನದ ಸಮಯದಲ್ಲಿ ಮನೆಯಲ್ಲಿ ದೀಪ ಹಚ್ಚಿದರೆ ಒಳಿತಾಗೋದಿಲ್ಲ ಅನ್ನೋ ನಂಬಿಕೆಯಿದೆ. ಹೀಗಾಗಿ ದೀಪ ಹಚ್ಚುವುದು ಕೂಡ ಒಂದು ರೀತಿ ಸೂಕ್ಷ್ಮವಾದ ವಿಚಾರ.
ದೀಪ ಹಚ್ಚುವುದು ಸೂಕ್ಷ್ಮವಾದ ವಿಚಾರ ಆಗಿರೋದ್ರಿಂದ ಈ ಬಗ್ಗೆ ಮುಂಜಾಗರೂಕತೆ ವಹಿಸೋದು ತುಂಬಾನೇ ಮುಖ್ಯವಾಗುತ್ತದೆ. ಕಾಟಾಚಾರಕ್ಕೆ ಅಥವಾ ದೀಪ ಹಚ್ಚಬೇಕಲ್ಲ ಅನ್ನೋ ಕಾರಣಕ್ಕೆ ಹಚ್ಚಿದರೆ ಅದರ ಪ್ರತಿಫಲ ನಮಗೆ ಖಂಡಿತ ಸಿಗುವುದಿಲ್ಲ.



Click it and Unblock the Notifications

