Latest Updates
-
ಐಟಿಆರ್ ಸಲ್ಲಿಕೆ ಗಡುವು ಹತ್ತಿರ: ದಂಪತಿಗಳು ಒಟ್ಟಾಗಿ ಕುಳಿತು ಈ ಕೆಲಸ ಮಾಡಿದರೆ ಟೆನ್ಷನ್ ಫ್ರೀ! -
ಬೆಂಗಳೂರಿಗರೇ ಗಮನಿಸಿ: ಇಂದು 6 ಗಂಟೆ ಪವರ್ ಕಟ್, ಈ ಮುನ್ನೆಚ್ಚರಿಕೆ ಮರೆಯದಿರಿ! -
ಶ್ರಾವಣ ಉಪವಾಸದಲ್ಲಿ ದಿನವಿಡೀ ಎನರ್ಜಿಯಿಂದ ಇರಬೇಕೆ? ಈ ಹೈ-ಪ್ರೋಟೀನ್ ಸಾತ್ವಿಕ ಆಹಾರ ಪದ್ಧತಿ ಫಾಲೋ ಮಾಡಿ! -
ಗುರು ಪೂರ್ಣಿಮೆ 2026: ಸರಳ ಪೂಜಾ ವಿಧಿ ಮತ್ತು ಕಡಿಮೆ ಬಜೆಟ್ನಲ್ಲಿ ಗುರುಗಳಿಗೆ ನೀಡಬಹುದಾದ ಬೆಸ್ಟ್ ಗಿಫ್ಟ್ ಐಡಿಯಾಗಳು! -
10 ನಿಮಿಷದ 'ಟೈಗರ್ ಫ್ಲೋ': ಬೆನ್ನುನೋವಿಗೆ ಮುಕ್ತಿ ನೀಡುವ ಅದ್ಭುತ ವ್ಯಾಯಾಮ ಇಲ್ಲಿದೆ! -
ಪ್ರತಿಭಟನೆಯಲ್ಲಿ ಪ್ರೀತಿ: 'ಪ್ರೊಟೆಸ್ಟ್ ನೇ ಬನಾ ದಿ ಜೋಡಿ' ಟ್ರೆಂಡ್ ಹಿಂದೆ ಅಡಗಿದೆ ದೊಡ್ಡ ಅಪಾಯ! -
ಮಳೆಗಾಲದಲ್ಲಿ ಮನೆಯಲ್ಲಿ ಬೂಷ್ಟು ಹರಡುತ್ತಿದೆಯೇ? ಈ 20 ನಿಮಿಷದ ಟಿಪ್ಸ್ ಪಾಲಿಸಿ, ಮನೆ ಫ್ರೆಶ್ ಆಗಿಡಿ! -
ಕೇವಲ 200 ರೂಪಾಯಿಯಲ್ಲಿ ಪರಿಸರ ಸ್ನೇಹಿ ಊಟ: ವಿಶ್ವ ಪ್ರಕೃತಿ ಸಂರಕ್ಷಣಾ ದಿನಕ್ಕೆ ನಿಮ್ಮ ಅಡುಗೆಮನೆಯೇ ಮೊದಲ ಹೆಜ್ಜೆ! -
CWG 2026: 6ನೇ ದಿನ ಭಾರತದ ಪದಕದ ಬೇಟೆ; ಮನೆಯಲ್ಲೇ ಕಮ್ಮಿ ಬಜೆಟ್ನಲ್ಲಿ ಅದ್ಭುತ ವಾಚ್ ಪಾರ್ಟಿ ಪ್ಲಾನ್! -
ವಿಶ್ವ ಹೆಪಟೈಟಿಸ್ ದಿನ: ಲಿವರ್ ಆರೋಗ್ಯ ಹೆಚ್ಚಿಸಲು ಈ 10 ನಿಮಿಷದ ಬೆಳಗಿನ ದಿನಚರಿ ಪಾಲಿಸಿ!
ಬಚ್ಚನ್‌ಗೆ ಕಾಡಿದ್ದ ಓವರ್ ಕಾನ್ಫಿಡೆನ್ಸ್ ಬಾಲಕ: ಎಡಿಹೆಚ್‌ಡಿ ಇದ್ದರೆ ಹೀಗಾಗುತ್ತಾ?
ನೀವು ಹಿಂದಿಯಲ್ಲಿ ಪ್ರಸಾರವಾಗುವ ಕೌನ್ ಬನೇಗಾ ಕ್ರೋರ್‌ಪತಿ ನೋಡುವ ಅಭ್ಯಾಸ ಬೆಳೆಸಿಕೊಂಡಿರಬಹುದು. ಇತ್ತೀಚಿಗೆ ಕಾಂತಾರ ಸ್ಟಾರ್ ರಿಷಭ್ ಶೆಟ್ಟಿ ಕೂಡ ಈ ಕಾರ್ಯಕ್ರಮಕ್ಕೆ ಆಹ್ವಾನ ಪಡೆದಿದ್ದರು. ಕಳೆದ 25 ವರ್ಷಗಳಿಂದ ಯಶಸ್ವಿಯಾಗಿ ನಡೆದುಬಂದಿರುವ ಕಾರ್ಯಕ್ರಮ ಇದು. ಹಾಗೆ ನೂರಾರು ಮಂದಿ ಲಕ್ಷ ಲಕ್ಷ ಹಣ ಗೆದ್ದಿರುವ ವೇದಿಕೆ ಕೂಡ ಇದಾಗಿದೆ.
ಎಲ್ಲಾ ಸೀಸನ್ ಅಲ್ಲೂ ಅಮಿತಾಬ್ ಬಚ್ಚನ್ ಅವರ ನಿರೂಪಣ ಶೈಲಿ ಎಲ್ಲರಿಗೂ ಇಷ್ಟವಾಗುತ್ತೆ, ಅದರ ಖ್ಯಾತಿ ಕಂಡು ಕನ್ನಡದಲ್ಲು ಕೋಟ್ಯಧಿಪತಿ ಕಾರ್ಯಕ್ರಮ ಆರಂಭಗೊಂಡಿತ್ತು. ನಟ ಪುನೀತ್ ರಾಜ್‌ಕುಮಾರ್ ಕಾರ್ಯಕ್ರಮ ನಡೆಸಿಕೊಡುತ್ತಿದ್ದ ರೀತಿ ಎಲ್ಲರ ನೆನಪಿನಲ್ಲೂ ಹಾಗೆ ಉಳಿದಿದೆ. ಆದ್ರೆ ಈಗ ಹಿಂದಿಯ ಒಂದು ಎಪಿಸೋಡ್ ಚಿಕ್ಕ ಹುಡುಗನ ಕಾರಣಕ್ಕೆ ಸುದ್ದಿಯಾಗುತ್ತಿದೆ.

ಹೌದು ಕಳೆದ ಸಂಚಿಕೆಯಲ್ಲಿ ಹಾಟ್ ಸೀಟ್ ಮೇಲೆ ಇಶಿತ್ ಭಟ್ ಎಂಬ ಬಾಲಕ ಮಾತನಾಡಿದ್ದ ರೀತಿ ಹಾಗೆ ಉತ್ತರ ನೀಡಿದ್ದ ರೀತಿಯಿಂದ ಸುದ್ದಿಯಾಗಿದ್ದಾನೆ. ಗುಜರಾತ್‌ನ ಗಾಂಧಿನಗರದ ಐದನೇ ತರಗತಿ ವಿದ್ಯಾರ್ಥಿಯಾಗಿದ್ದಾನೆ. ಆತ ಒಂದೂ ರೂಪಾಯಿ ಗೆಲ್ಲದೇ ಇದ್ದರೂ ವಿಚಿತ್ರ ಕಾರಣಕ್ಕೆ ಸುದ್ದಿಯಾಗಿದ್ದಾನೆ.
ಆತ ಅಮಿತಾಬ್ ಬಜ್ಜನ್ ಆವರೊಂದಿಗೆ ಏಕವಚನದಲ್ಲಿ ಮಾತನಾಡಿದ್ದು, ಹಾಗೆ ಉತ್ತರಗಳಿಗೆ ಆಯ್ಕೆಗಳು ಬರುವ ಮುನ್ನವೇ ಉತ್ತರ ನೀಡುವ ಮೂಲಕ ಅಗೌರವ ತೋರಿದ್ದಾನೆ ಎಂದು ನೆಟ್ಟಿಗರು ಆರೋಪಿಸಿರುವುದು ನೋಡಬಹುದು. ಬಾಲಕನ ವರ್ತನೆಯ ಕುರಿತಾದ ದೊಡ್ಡ ಪ್ರಶ್ನೆಗಳು ಈಗ ಹರಿದಾಡುತ್ತಿವೆ.
ಆದ್ರೆ ಈ ವಿಡಿಯೋ ನೋಡಿದ ಹಲವರಿಗೆ ಇದೊಂದು ಎಡಿಹೆಚ್‌ಡಿ ಸಮಸ್ಯೆಗೆ ಒಳಗಾಗಿರುವ ಬಾಲಕ ಕಂಡಿದ್ದಾನೆ. ಹಾಗಾದ್ರೆ ಆ ಬಾಲಕ ಈ ರೀತಿ ವರ್ತಿಸಿದ್ದು ಏಕೆ? ಇಷ್ಟೊಂದು ಉತ್ಸಾಹ ತೋರುವುದು ಎಷ್ಟು ಒಳ್ಳೆಯದು, ಎಡಿಹೆಚ್‌ಡಿ ಅಂದರೆ ಏನು? ಆ ಬಾಲಕ ಅಮಿತ್ ಜೊತೆಗಿದ್ದಾಗ ಏನು ಮಾಡಿದ ಎಂಬುದನ್ನು ನೋಡಬೇಕಾದರೆ ಈ ಕೆಳಗಿನ ವಿಡಿಯೋ ಒಮ್ಮೆ ನೋಡಿ.
ಕೆಲವರು ಈ ವಿಡಿಯೋ ನೋಡಿ ಬಾಲಕ ಬಹಳ ಚುರುಕಾಗಿದ್ದಾನೆ ಆತನಿಗೆ ಸರಿಯಾದ ತರಬೇತಿ ನೀಡಿದ್ರೆ ಒಳ್ಳೆಯ ಸಂಪನ್ಮೂಲ ವ್ಯಕ್ತಿಯಾಗುತ್ತಾನೆ ಎಂದಿದ್ದಾರೆ. ಮತ್ತೆ ಕೆಲವರು ಆತನ ಕಂಡು ಎಡಿಹೆಚ್‌ಡಿ ಅಂತಹ ಸಮಸ್ಯೆಗಳನ್ನು ಆತ ಹೊಂದಿರಬಹುದು ಎಂದು ಶಂಕಿಸಿದ್ದಾರೆ. ಹಾಗೆ ಮಕ್ಕಳನ್ನು ಹೇಗೆ ಬೆಳೆಸಬೇಕು ಎಂಬ ಪಾಠ ಕೂಡ ಮಾಡಿದ್ದಾರೆ.
ಏನಿದು ಎಡಿಹೆಚ್‌ಡಿ?
ADHD (Attention Deficit Hyperactivity Disorder) ಹೆಸರು ಕೇಳಿದ್ರೆ ನೀವು ಇದೊಂದು ದೊಡ್ಡ ಮಾನಸಿಕ ಸಮಸ್ಯೆ ಎನಿಸಬಹುದು. ಆದ್ರೆ ಇದು ವರ್ತನೆಯಲ್ಲಿ ಸಮಸ್ಯೆ. ಹೈಪರ್ ಆಕ್ಟೀವ್ ಇಂದ ಹಿಡಿದು ಹಲವು ರೀತಿಯ ಒಡಿಡಿ ಹೊಂದಿರುವ ಸಮಸ್ಯೆ ಎನ್ನಬಹುದು. ಇದು ಮನೋರೋಗವಲ್ಲ. ಅದು ನಿರಂತರ ಅಜಾಗರೂಕತೆ, ಹೈಪರ್ಆಕ್ಟಿವಿಟಿ ಮತ್ತು ಹಠಾತ್ ಪ್ರವೃತ್ತಿಯನ್ನು ಉಂಟುಮಾಡಬಹುದು. ಸರಳವಾಗಿ ವಿವರಿಸುವುದಾರೆ ಯಾವ ವ್ಯಕ್ತಿ ಒಂದೇ ವಸ್ತು, ಒಂದೇ ಕೆಲಸದ ಮೇಲೆ ಹೆಚ್ಚು ಗಮನ ಕೊಡಲು ಆಗದೆ ಇರುವ ಪರಿಸ್ಥಿತಿ. ಗಮನದ ಕೊರತೆ, ಕುಳಿತಲ್ಲಿ ಕುಳಿತುಕೊಳ್ಳಲು ಆಗದೆ ಇರುವುದು ಇಂತಹ ಕೆಲವು ಲಕ್ಷಣಗಳಿವೆ. ಈ ಎಡಿಹೆಚ್‌ಡಿ ಎರಡು ರೀತಿ ಕಂಡುಬರುತ್ತದೆ. ಹೈಪರ್ ಆಕ್ಟಿವಿಟಿ ಇಂಪಲ್ಸ್‌ವಿಟಿ, ಇನ್ ಅಟೆಂನ್ಷನ್ ಎಂದು ಕರೆಯಲಾಗಿದೆ.
ಕೆಲವೊಮ್ಮೆ ತುಂಬಾ ಕಟ್ಟುನಿಟ್ಟಿನ ನಿಯಮ ಹೇರುವ ಪೋಷಕರ ಮಕ್ಕಳು ಅತೀ ಹೆಚ್ಚು ತಾಳ್ಮೆ ಹೊಂದಿದವರಂತೆಯೂ ಕಾಣಿಸಿಕೊಂಡರೆ ಅವರ ಒಳಗೆ ಮತ್ತೊಂದು ರೀತಿ ಗುಣಗಳು ಬೆಳೆಯಬಹುದು. ಹಾಗೆ ಬಹಳ ಸೌಮ್ಯ ಸ್ವಾಭಾವದ ಪೋಷಕರ ಮಕ್ಕಳಲ್ಲಿ ಹಠವಾದಿ ಮಕ್ಕಳ ನೋಡಬಹುದು. ಇದೆಲ್ಲವೂ ಮಕ್ಕಳ ಅರಿವಿಲ್ಲದೆ ನಡೆಯುವ ಕ್ರಿಯೆಗಳು. ಸಾಮಾನ್ಯವಾಗಿ ಕೆಟ್ಟ ನಡವಳಿಕೆ ಎಂದು ಗ್ರಹಿಸಲ್ಪಡುವುದು ಪದಗಳಲ್ಲಿ ವ್ಯಕ್ತಪಡಿಸಲು ಸಾಧ್ಯವಾಗದ ವಿಷಯವನ್ನು ತಿಳಿಸುವ ಒಂದು ಮಾರ್ಗವಾಗಿದೆ. ಮಕ್ಕಳ ಈ ವರ್ತನೆ ಕೆಲವೊಮ್ಮೆ ವಿಚಿತ್ರ ಎನಿಸಿದರು, ಅದರಿಂದ ದೊಡ್ಡ ಮಟ್ಟದ ಹಾನಿ ಇಲ್ಲ ಎಂದು ಭಾವಿಸುವುದು ತಪ್ಪಾಗುತ್ತದೆ.



Click it and Unblock the Notifications