Latest Updates
-
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ?
Katyayani Mantra In Kannada: ನವರಾತ್ರಿಯ 6ನೇ ದಿನ ಪೂಜೆಗೆ ಕಾತ್ಯಾಯನಿ ದೇವಿ ಮಂತ್ರ!
Katyayani Mantra In Kannada: ನಾಡಿನೆಲ್ಲೆಡೆ ದಸರಾ ಹಾಗೂ ನವರಾತ್ರಿ ಹಬ್ಬದ ರಂಗು ಹೆಚ್ಚಾಗುತ್ತಿದೆ. ಈ ನಡುವೆ ಶಕ್ತಿ ದೇವತೆಯ ಆರಾಧನೆಯ 6ನೇ ದಿನ ನಾವು ದುರ್ಗಾ ದೇವಿಯ ಮತ್ತೊಂದು ಅವತಾರವನ್ನು ಪೂಜಿಸುತ್ತೇವೆ. ಕಾತ್ಯಾಯಿನಿಯ ಸ್ವರೂಪವಾಗಿ ಇಂದು ಪೂಜಿಸಲಾಗುತ್ತದೆ. ಈ ಶನಿವಾರ ಶಕ್ತಿ ಸ್ವರೂಪಿಣಿಯಾದ ತಾಯಿ ಕಾತ್ಯಾಯಿನಿಯನ್ನು ಪೂಜಿಸುತ್ತಾರೆ.
ಕಾತ್ಯಾಯಿನಿಯು ಜ್ಞಾನ, ವಿವೇಕ, ಶಾಂತಿಯ ದೇವತೆ ಎಂದು ಸಂಕೇತಿಸಲಾಗಿದೆ. ಕಾತ್ಯಾಯನನ ಪುತ್ರಿಯಾಗಿರುವ ಕಾತ್ಯಾಯಿನಿಯ ರೂಪದಲ್ಲಿ ದುರ್ಗೆಯು ಧರೆಯಲ್ಲಿ ಪ್ರತ್ಯಕ್ಷಗೊಂಡು ಭಕ್ತರಿಗೆ ದರ್ಶನ ನೀಡುತ್ತಾಳೆ ಎಂಬ ನಂಬಿಕೆ ಇದೆ. ದೇವಿಯು ಎಡಗೈಯಲ್ಲಿ ತಾವರೆ ಮತ್ತು ಕೆಳಗಿನ ಎಡಗೈಯಲ್ಲಿ ಕತ್ತಿಯನ್ನು ಬಲಗೈಯಲ್ಲಿ ಅಭಯ ಮತ್ತು ವರದ ಮುದ್ರೆಯನ್ನು ಹಿಡಿದುಕೊಂಡಿದ್ದಾರೆ.

ಮನೆಯಲ್ಲಿ ಸುಖ, ಶಾಂತಿ ನೆಮ್ಮದಿ ಹಾಗೆ ಜ್ಞಾನ, ವಿವೇಕವನ್ನು ನೀಡುವಂತೆ ಆಕೆಯನ್ನು ಬೇಡಲಾಗುತ್ತದೆ. ಕಾತ್ಯಾಯಿನಿ ದೇವಿಯ ಆರಾಧನೆ ಮಾಡುವುದರಿಂದ ಭಕ್ತರು ಗುರು ಗ್ರಹದಿಂದ ಪಡೆಯಬಹುದಾದ ಎಲ್ಲಾ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು. ಹಾಗೆ ನಿಮ್ಮ ಜಾತಕದಲ್ಲಿನ ಗುರುವಿನ ದೋಷ ನಿವಾರಣೆಗೂ ಕೂಡ ಕಾತ್ಯಾಯಿನಿಯ ಪೂಜಿಸಬೇಕು ಎಂದು ಹೇಳಲಾಗಿದೆ.
ಕಾತ್ಯಾಯಿನಿ ದೇವಿಯ ಕಥೆ ಏನು ಗೊತ್ತಾ?
ಕಾತ್ಯಾಯಿನಿ ಎಂಬ ಹೆಸರು ಕಾತ್ಯಾಯನ ಎಂಬ ಪುರುಷ ನಾಮದಿಂದ ಬಂದಿದೆ. ಕಾತ್ಯಾಯನ ಎಂಬ ಋಷಿ ಒಮ್ಮೆ ಪಾರ್ವತಿ ದೇವಿಯಂತಹ ಮಗಳನ್ನು ಪಡೆಯಬೇಕು ಎಂದು ತಪಸ್ಸು ಮಾಡಿದ್ದನಂತೆ. ವರ್ಷಗಳ ಕಾಲ ಆತ ನಿರಂತರವಾಗಿ ತಪಸ್ಸು ಮಾಡಿದನಂತೆ. ಆತನ ತಪಸ್ಸು ಮೆಚ್ಚಿದ ಪಾರ್ವತಿ ಧರೆಗೆ ಇಳಿದಿದ್ದಳು. ಋಷಿಗೆ ತನ್ನಂತಹ ಮಗಳೇ ಜನಿಸಲಿ ಎಂದು ವರ ನೀಡಿದಳಂತೆ. ಹಾಗೆ ಕಾತ್ಯಾಯನನ ಪುತ್ರಿಗೆ ಆತ ಕಾತ್ಯಾಯಿನಿ ಎಂಬ ಹೆಸರು ಇಟ್ಟನಂತೆ. ಆಕೆಯ ಸಾಕ್ಷಾತ್ ದೇವಿಯಾದಳು. ದುಷ್ಟರ ಸಂಹಾರಕ್ಕಾಗಿ ಬಂದ ದುರ್ಗೆಯ ಅವತಾರ ಎಂಬುದು ತಿಳಿಯಿತು. ನಂತರ ಆಕೆಯಿಂದ ಧರ್ಮ ರಕ್ಷಣೆಯ ಕಾರ್ಯ ನಡೆದಿತ್ತು ಎಂದು ಹೇಳಲಾಗಿದೆ.
ಕಾತ್ಯಾಯಿನಿ ದೇವಿ ಮಂತ್ರ
ॐ ಕಾತ್ಯಾಯನಿ ಮಹಾಮಾಯೇ ಮಹಾಯೋಗಿನ್ಯಧೀಶ್ವರಿ ।
ನನ್ದಗೋಪಸುತಂ ದೇವಿ ಪತಿಂ ಮೇ ಕುರು ತೇ ॥
"ಓಂ ದೇವಿ ಕಾತ್ಯಾಯಿನಿ ನಮಃ
ಓಂ ದೇವಿ ಕಾತ್ಯಾಯಿನಿ ನಮಃ ಚಂದ್ರಹಾಸೋಜ್ವಲ ಕಾರಾ ಶಾರದುಲ್ವರ್ವವಾಹನ
ಕಾತ್ಯಾಯಿನಿ ಶುಭಂ ದದ್ಯಾದ ದೇವಿ ದಾನವಘಾತಿನಿ.
ಕಾತ್ಯಾಯಿನಿ ದೇವಿಯ ಸ್ತುತಿ
ಯಾ ದೇವಿ ಸರ್ವಭೂತೇಶು ಮಾ ಕಾತ್ಯಾಯನಿ ರೂಪೇನ ಸಂಸ್ಥಿತಾ
ಸಮಸ್ತಸ್ತೈ ಸಮಸ್ತಸ್ತೈ ಸಮಸ್ತಸ್ತೈ ನಮೋ ನಮಃ"
ಕಾತ್ಯಾಯಿನಿ ದೇವಿಯ ಧ್ಯಾನ ಮಂತ್ರ
ವಂದೇ ವಂಚಿತ ಮನೋರಥಾರ್ಥ ಚಂದ್ರಾದ್ರಕೃತಾಶೇಖರಂ
ಸಿಂಹರುದ್ಧ ಚತುರ್ಭುಜ ಕಾತ್ಯಾಯಿನಿ ಯಶಸ್ವಿನಿಮ್
ಸ್ವರ್ಣವರ್ಣ ಅಜ್ನಾಚಕ್ರ ಸ್ಥಿತಂ ಶಷ್ಟಮಾ ದುರ್ಗಾ ತ್ರಿನೇತ್ರಂ
ವರಭೀತ ಕರಮ್ ಶಂಗಪದಾಧಾರಂ ಕಾತ್ಯಾಯನಸುತಂ ಭಜಾಮಿ
ಪತಂಬರಾ ಪರಿಧನಂ ಸ್ಮೇರಮುಖಿ ನಾನಾಲಂಕಾರ ಭೂಷಿತಂ
ಮಾಜಿರ, ಹರಾ, ಕೇಯುರಾ, ಕಿನಿಕಿನಿ, ರತ್ನಕುಂಡಲ ಮಂಡಿತಂ
ಪ್ರಸನ್ನವದನಾ ಪಲ್ಲವಧಾರಂ ಕಾಂತ ಕಪೂಲಮ್ ತುಂಗಮ್ ಕುಂಚಮ್
ಕಾಮನಿಯಮ್ ಲಾವಣ್ಯಂ ತ್ರಿವಳಿ ವಿಭೂಷಿತ ನಿಮ್ನ ನಭೀಮ್
ಈ ಕತ್ಯಾಯಿನಿ ಮಂತ್ರವನ್ನು ಪಠಿಸುವುದರಿಂದ ಅಡೆತಡೆಗಳನ್ನು ನಿವಾರಿಸಲು, ಒಬ್ಬರ ಜೀವನದಲ್ಲಿ ಶಾಂತಿ ಮತ್ತು ಸಾಮರಸ್ಯವನ್ನು ತರಲು ಮತ್ತು ಸಕಾರಾತ್ಮಕ ಶಕ್ತಿಗಳನ್ನು ಆಕರ್ಷಿಸಲು ಸಹಾಯ ಮಾಡುತ್ತದೆ. ವೈವಾಹಿಕ ಸುಖವನ್ನು ಪಡೆಲಯಲು ಕೂಡ ದೇವಿಯ ಆರಾಧನೆ ಮಾಡಲಾಗುತ್ತದೆ. ವಿಶೇಷವಾಗಿ ವಿವಾಹ ಸಂಬಂಧವಾಗಿ ತೊಡಕುಗಳು, ಅಡ್ಡಿಗಳು ಇದ್ದಾಗ ಕಾತ್ಯಾಯಿನಿ ದೇವಿಯ ಪೂಜಿಸಬೇಕು ಎಂದು ಹೇಳಲಾಗಿದೆ. ವಿವಾಹ ಯೋಗಕ್ಕಾಗಿ 'ಓಂ ಹ್ರಿಂಗ್ ಕಾತ್ಯಾಯಿನಿಯೇ ಸ್ವಾಹಾ, ಹ್ರಿಂಗ್ ಶ್ರಿಂಗ್ ಕಾತ್ಯಾಯನಿಯೇ ಸ್ವಾಹಾ'



Click it and Unblock the Notifications
