Latest Updates
-
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ!
Karnataka Weather: ಮುಂದಿನ ಒಂದು ವಾರ ಬಿಸಿಲು ಏರಿಕೆ..! ದಿಢೀರ್ ತಾಪಮಾನ ಏರಿಕೆಗೆ ಕಾರಣವೇನು?
ರಾಜ್ಯದಲ್ಲಿ ಮತ್ತೆ ಹವಾಮಾನ ಬದಲಾವಣೆಯಾಗುತ್ತಿದೆ. ಕಳೆದೊಂದು ವಾರದ ಹಿಂದಿನಿಂದ ಅತೀ ಚಳಿಯಿಂದ ನಡುಗಿದ್ದ ರಾಜ್ಯ ಸದ್ಯ ಒಣಹವೆಯತ್ತ ಸಾಗುತ್ತಿದೆ. ಮಧ್ಯಾಹ್ನದ ಸಮಯದಲ್ಲಿ ವಿಪರೀತ ಬಿಸಿಲು ನೋಡಿದರೆ ಸಂಜೆ ಹಾಗೂ ಬೆಳಗ್ಗೆ ವಿಪರೀತ ಚಳಿ ಕಾಡುತ್ತಿದೆ. ಇನ್ನು ಬೆಂಗಳೂರಿನಲ್ಲಿ ಏಕಾಏಕಿ ಬಿಸಿಲು ಏರಿಕೆಯಾಗಿದೆ.
ಈ ನಡುವೆ ಮುಂದಿನ 1 ವಾರಗಳ ಕಾಲ ರಾಜ್ಯದ ಹವಾಮಾನ ಹೇಗಿರಲಿದೆ ಎಂದು ರಾಜ್ಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕಳೆದ ವಾರಕ್ಕಿಂತ ಮುಂದಿನ ಒಂದು ವಾರಗಳ ಕಾಲ ಬೆಂಗಳೂರು ಬಿಸಿಲಿನಿಂದ ಸುಡಲಿದೆಯಂತೆ. ರಾಜ್ಯದ ಬಹುತೇಕ ಕಡೆ ತಾಪಮಾನ ಏರಿಕೆಯಾಗಲಿದೆ ಎಂದಿದೆ.

ನಗರದಲ್ಲಿ ಎರಡಕ್ಕಿಂತ ಹೆಚ್ಚು ಡಿಗ್ರಿ ಸೆಲ್ಸಿಯಸ್ ತಾಪಮಾನ ಏರಿಕೆಯಾಗುತ್ತಿದೆ. ಇದು ಜನರನ್ನು ಬಿಸಿಲಿನಲ್ಲಿ ಬೇಯುವಂತೆ ಮಾಡಲಿದೆ. ಸೋಮವಾರ ನಗರದಲ್ಲಿ 31.9 ಡಿಗ್ರಿ ಸೆಲ್ಸಿಯಸ್ ಅತೀ ಹೆಚ್ಚು ತಾಪಮಾನ ವರದಿಯಾಗಿದೆ. ಈ ನಡುವೆ ರಾಜ್ಯದ ಉತ್ತರ ಒಳನಾಡು ಹಾಗೂ ದಕ್ಷಿಣ ಒಳನಾಡಿನಲ್ಲೂ ತಾಪಮಾನ ಏರಿಕೆ ಕಂಡಿದೆ.
ಆದರೆ ಸಂಜೆ ಹಾಗೂ ಬೆಳಗ್ಗೆ ತಾಪಮಾನ ಕನಿಷ್ಠ ಮಟ್ಟಕ್ಕೆ ಕುಸಿಯುತ್ತಿದೆ. ತಮಿಳುನಾಡಿನಿಂದ ಪೂರ್ವ ಮಾರುತಗಳು ಬೀಸುತ್ತಿರುವ ಪರಿಣಾಮ ಬೆಂಗಳೂರು ಸೇರಿ ರಾಜ್ಯದ ದಕ್ಷಿಣ ಭಾಗದಲ್ಲಿ ತಾಪಮಾನ ಏರಿಕೆಗೆ ಕಾರಣವಾಗಿದೆ ಎಂದು ತಿಳಿಸಲಾಗಿದೆ. ಹಾಗೆ ಮುಂದಿನ ಎರಡು ವಾರಗಳಲ್ಲಿ ಈಶಾನ್ಯ ಮಾರುಗಳು ರಾಜ್ಯವನ್ನು ಪ್ರವೇಶಿಸಲಿದೆ. ಇದು ದಕ್ಷಿಣ ಒಳನಾಡಿನಲ್ಲಿ ತಂಪಿನ ವಾತಾವರಣಕ್ಕೆ ಕಾರಣವಾಗುತ್ತದೆ. ಆದರೆ ಅದಕ್ಕೂ ಮುನ್ನ ಉಷ್ಣ ಗಳಿ ಬೀಸುವುದು ತಾಪಮಾನ ಏರಿಕೆಗೆ ಕಾರಣವಾಗುತ್ತದೆ.
ಮುಂದಿನ ವಾರ ರಾಜ್ಯದಲ್ಲಿ ಮಳೆಯಾಗುವ ಯಾವುದೇ ಮುನ್ಸೂಚನೆ ಇಲ್ಲ. ಹಾಗೆ ತಾಪಮಾನ ಏರಿಕೆ ಬೇಸಿಗೆ ಆರಂಭದ ಮುನ್ಸೂಚನೆ ಕೂಡ ಅಲ್ಲ. ಫೆಬ್ರವರಿಯ ಕೊನೆಯ ವಾರದಲ್ಲೂ ಚಳಿ ಇರಲಿದೆ. ಆದರೆ ಮಾರ್ಚ್ ಹಾಗೂ ಏಪ್ರಿಲ್‌ನಲ್ಲಿ ಮತ್ತೆ ತಾಪಮಾನ ಏರಿಕೆ ನೋಡಬಹುದಾಗಿದೆ ಎಂದು ತಜ್ಞರು ವಿವರಿಸಿದ್ದಾರೆ.
ಒಂದು ವಾರ ದಟ್ಟ ಮಂಜು
ಕಳೆದ ಕೆಲ ದಿನಗಳಿಂದ ರಾಜ್ಯದ ಹಲವು ಭಾಗದಲ್ಲಿ ದಟ್ಟ ಮಂಜು ಆವರಿಸಿದೆ. ರಾತ್ರಿಯಿಂದ ಹಿಡಿದು ಬೆಳಗ್ಗೆ ಮಂಜಿನ ಪ್ರಮಾಣ ದಟ್ಟವಾಗಿದ್ದು ಮುಂದಿನ ಒಂದು ವಾರಗಳ ಕಾಲ ಈ ರೀತಿ ಮುಂದುವರೆಯಲಿದೆ ಎಂದು ತಿಳಿದುಬಂದಿದೆ.
ಮುಂದಿನ ಒಂದು ವಾರ ಮಧ್ಯಾಹ್ನ ಉರಿ ಬಿಸಿಲು
ಮುಂದಿನ ಒಂದು ವಾರಗಳ ಕಾಲ ಮಧ್ಯಾಹ್ನದ ಸಮಯದಲ್ಲಿ ತಾಪಮಾನ 33 ಡಿಗ್ರಿ ವರೆಗೂ ಏರಿಕೆಯಾಗಬಹುದು. ಇದು ಬಿಸಿಲಿನ ಧಗೆ ಹೆಚ್ಚಿಸಲಿದ್ದು, ಈ ಸಮಯದಲ್ಲಿ ಹೊರಬರದಿರುವುದು ಉತ್ತಮ. ಏಕೆಂದರೆ ಚಳಿಗಾಲದ ಸಮಯದಲ್ಲಿ ಬಿಸಿಲಿಗೆ ಒಡ್ಡಿಕೊಳ್ಳುವುದು ಸಮಸ್ಯೆ ತರಬಹುದು, ಹಾಗೆ ಸನ್‌ಸ್ಕ್ರೀನ್ ಬಳಸುವುದು ಉತ್ತಮ. ಸೂರ್ಯನ ಬೆಳಕು ನೇರವಾಗಿ ಮೈ ಮೇಲೆ ಬೀಳದಂತೆ ಎಚ್ಚರ ವಹಿಸುವುದು ಉತ್ತಮ.
ಕಳೆದ ಬಾರಿಗೆ ಹೋಲಿಸಿದರೆ ಈ ಸಮಯದಲ್ಲಿ ತಾಪಮಾನ ಯಥಾಸ್ಥಿತಿಯಲ್ಲಿತ್ತು. ಕಳೆದ ಬಾರಿ ಕೂಡ ಇದೇ ರೀತಿ ಶುಷ್ಕ ವಾತಾವರಣ ವರಿಯಾಗಿತ್ತು. ಹಾಗೆ ದಟ್ಟ ಮಂಜು ಉರಿ ಬಿಸಿಲು ಮುಂದುವರೆದಿತ್ತು. ಮಾರ್ಚ್‌ನಲ್ಲಿ ಕೆಲವೊಂದು ಕಡೆಗಳಲ್ಲಿ ಸಣ್ಣದಾಗಿ ಮಳೆಯ ನಿರೀಕ್ಷೆ ಕೂಡ ಮಾಡಲಾಗಿದೆ. ಇನ್ನು ಮುಂದಿನ ವಾರ ಬೆಂಗಳೂರಿನಲ್ಲಿ ಯಾವುದೇ ರೀತಿ ಮಳೆಯ ನಿರೀಕ್ಷೆ ಇಲ್ಲ.



Click it and Unblock the Notifications
