Latest Updates
-
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್! -
ವಿಶ್ವ ಛಾಯಾಗ್ರಹಣ ದಿನ: ಮನೆಯಲ್ಲೇ ಫೋಟೋ ಸ್ಟುಡಿಯೋ ಮಾಡಿ, ನಿಮ್ಮ ಗಿಡಗಳ ಫೋಟೋ ವೈರಲ್ ಆಗುವಂತೆ ಕ್ಲಿಕ್ ಮಾಡಿ! -
98% ಅಂಕ ಪಡೆದರೂ ಅಂಗಡಿ ಬಂದ್: FDAಗೆ ಹೈಕೋರ್ಟ್ ತರಾಟೆ, ಕಲಬೆರಕೆ ಸಿಹಿ ಪತ್ತೆಹಚ್ಚುವುದು ಹೇಗೆ? -
BWF ವಿಶ್ವ ಚಾಂಪಿಯನ್ಷಿಪ್ 2026: ಲಕ್ಷ್ಯ ಸೇನ್ ಅಬ್ಬರಕ್ಕೆ ದೆಹಲಿ ಸಜ್ಜು, ಲೈವ್ ಮಿಸ್ ಮಾಡ್ಬೇಡಿ! -
ವಿಶ್ವ ಹಿರಿಯ ನಾಗರಿಕರ ದಿನ: ಪೋಷಕರ ಆರೋಗ್ಯ ಮತ್ತು ಸಮತೋಲನ ಹೆಚ್ಚಿಸುವ ಸರಳ ಬೆಳಗಿನ ವ್ಯಾಯಾಮಗಳು -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಪ್ಪಿಸಲು ಇಲ್ಲಿದೆ 12 ನಿಮಿಷದ ಸೂತ್ರ! -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಡೆಯಲು ಈ 'ಕಪಲ್ ಸ್ಕ್ರಿಪ್ಟ್ಸ್' ಬಳಸಿ!
ಕಾಂತಾರಕ್ಕಾಗಿ ಬೃಹತ್ ಕದಂಬರ ಕಾಲದ ಸೆಟ್..! ಏಕೆ ಗೊತ್ತಾ?
ನಟ ರಿಷಬ್ ಶೆಟ್ಟಿ ಅಭಿನಯ ಹಾಗೂ ನಿರ್ದೇಶನದ ಕಾಂತಾರ ಸಿನಿಮಾ ಪ್ಯಾನ್ ಇಂಡಿಯಾ ಹಿಟ್ ಆದ ಬಳಿಕ ಮತ್ತೊಮ್ಮೆ ಹೊಂಬಾಳೆ ಫಿಲ್ಮ್ಸ್ ಜೊತೆ ಸೇರಿ ಕಾಂತಾರ ಚಾಪ್ಟರ್-1 ತೆಗೆ ಮೇಲೆ ತರಲು ಸಿದ್ಧತೆ ನಡೆಸಿದ್ದಾರೆ. ಈಗಾಗಲೇ ಸಿನಿಮಾದ ಶೂಟಿಂಗ್ ಸಹ ಆರಂಭಗೊಂಡಿದ್ದು, ಈ ಮೊದಲು ರಿಲೀಸ್ ಆಗಿರುವ ಫಸ್ಟ್ ಲುಕ್ ಪೋಸ್ಟರ್‌ಗಳು ಎಲ್ಲೆಡೆ ಭಾರಿ ವೈರಲ್ ಆಗಿದ್ದಲ್ಲದೆ ಸಿನಿಮಾ ಕುರಿತು ಭಾರೀ ನಿರೀಕ್ಷೆ ಹುಟ್ಟಿಸಿದೆ.
2022ರಲ್ಲಿ ಕಾಂತಾರ ಬಿಡುಗಡೆಯಾದ ನಂತರ ಪ್ಯಾನ್ ಇಂಡಿಯಾದಲ್ಲಿ ಸುದ್ದಿಯಾಗಿತ್ತು. ಈ ಮೂಲಕ ರಿಷಬ್ ಶೆಟ್ಟಿ ಅವರಿಗೆ ರಾಷ್ಟ್ರ ಪ್ರಶಸ್ತಿ ಕೂಡ ಲಭಿಸುವಂತೆ ಮಾಡಿತ್ತು. ಈಗ ಮತ್ತೊಂದು ಭಾಗದ ಚಿತ್ರೀಕರಣ ಕೂಡ ಆರಂಭಗೊಂಡಿದೆ.ಈಗ ಕುಂದಾಪುರದಲ್ಲಿ ಚಿತ್ರೀಕರಣ ಆರಂಭಗೊಂಡಿದ್ದು ಸಿನಿಮಾಗಾಗಿ ಬಹುದೊಡ್ಡದಾದ ಸೆಟ್ ಹಾಕಲಾಗಿದೆ ಎಂಬ ಸುದ್ದಿ ಹರಿದಾಡುತ್ತದೆ.

ಕಾಂತಾರ ಚಾಪ್ಟರ್-1ರಲ್ಲಿ ಕದಂಬ ರಾಜರ ಆಳ್ವಿಕಯ ಕಾಲದ ಚಿತ್ರಣ ಇರಲಿದೆ ಎಂಬ ಮಾಹಿತಿ ಲಭ್ಯವಾಗಿದೆ. ಇದಕ್ಕಾಗಿ ಕುಂದಾಪುರದಲ್ಲಿ ಕದಂಬರ ವಾಸ್ತುಶಿಲ್ಪ ಸಾರುವಂತಹ ಅತ್ಯಂತ ದೊಡ್ಡ ಸೆಟ್ ಹಾಕಲಾಗಿದೆ. ಹೊಂಬಾಳೆ ಫಿಲ್ಮ್ಸ್ ಮತ್ತು ನಟ ರಿಷಬ್ ಶೆಟ್ಟಿ ಕುಂದಾಪುರದಲ್ಲಿ ಕದಂಬ ಸಾಮ್ರಾಜ್ಯವನ್ನು ಜೀವಂತಗೊಳಿಸಿದ್ದಾರೆ.
ಬನವಾಸಿಯ ಕದಂಬರ ಕಾಲದಲ್ಲಿ ಈ ಚಿತ್ರದ ಕಥೆ ಸಾಗಲಿದೆ. ಹೀಗಾಗಿ ಬಹುದೊಡ್ಡದಾದ ಸೆಟ್ ಹಾಕಲಾಗಿದೆ. ನೈಜವಾಗಿ ಕಾಣಬೇಕೆಂಬ ಉದ್ದೇಶದಿಂದ 80 ಅಡಿ ಎತ್ತರದ ಬೃಹತ್ ಸೆಟ್ ಹಾಕಲಾಗಿದೆ. ಹಾಗೆ ಅತ್ಯಂತ ವಿಸ್ತಾರವಾಗಿದೆ. ಎಕರೆಗೂ ಅಧಿಕ ಜಾಗದಲ್ಲಿ ಈ ಸೆಟ್ ಹಾಕಲಾಗಿದೆ. ಒಂದು ಕಾಲದಲ್ಲಿ ಕರ್ನಾಟಕದ ವಾಸ್ತುಶಿಲ್ಪ ಮತ್ತು ಸಂಸ್ಕೃತಿಯನ್ನು ರೂಪಿಸುವಲ್ಲಿ ಪ್ರಮುಖ ಶಕ್ತಿಯಾಗಿದ್ದ ಕದಂಬ ರಾಜವಂಶಸ್ಥರ ಕಾಲಕ್ಕೆ ಮತ್ತೆ ಕಾಂತಾರ ಕರೆದೊಯ್ಯಲಿದೆ.
ಕದಂಬರ ಕಾಲವೇ ಏಕೆ?
ಕನ್ನಡದ ಮೊದಲ ರಾಜ ಮನೆತನವಾಗಿದ್ದ ಕದಂಬರು 4ರಿಂದ 6ನೇ ಶತಮಾನದವರೆಗೂ ಕರ್ನಾಟಕವನ್ನು ಆಳಿದ್ದರು. ಅವರ ಸಾಮ್ರಾಜ್ಯ ಅತ್ಯಂತ ಶ್ರೀಮಂತವಾಗಿತ್ತು. ಹರಿವರ್ಮ ಬನವಾಸಿಯ ಕೊನೆಯ ರಾಜನಾಗಿದ್ದ ತ್ರಿಪರ್ವತದ 2ನೆ ಕೃಷ್ಣವರ್ಮನಿಂದ ಹರಿವರ್ಮನ ಕೊಲೆಯಾಗುತ್ತದೆ. ಇದರಿಂದ ಬನವಾಸಿ ಆಡಳಿತ ಅಂತ್ಯವಾಗುತ್ತದೆ. ಮುಂದೆ ಚಾಲುಕ್ಯರ 1ನೇ ಪುಲಕೇಶಿ ಕೃಷ್ಣವರ್ಮನನ್ನು ಯುದ್ಧದಲ್ಲಿ ಕೊಂದು ಬನವಾಸಿಯನ್ನು ವಶಪಡಿಸಿಕೊಂಡನು. ನಾವು ಕಾಂತಾರ ಸಿನಿಮಾದಲ್ಲಿ ಈ ರೀತಿಯ ಯಾವುದಾದರೊಂದು ಸನ್ನಿವೇಶವನ್ನು ಎದುರು ನೋಡಬಹುದಾದ ಸಂಭವವಿದೆ.
ಕದಂಬರು ಹೊಸ ಶೈಲಿಯ ವಾಸ್ತುಶಿಲ್ಪಕ್ಕೆ ಹೆಸರಾಗಿದ್ದರು. ಐಹೊಳೆ , ಬಾದಾಮಿ ಮತ್ತು ಹಂಪಿಯಲ್ಲಿನ ಅನೇಕ ದೇವಾಲಯಗಳನ್ನು ಕದಂಬ ಶೈಲಿಯಲ್ಲಿ ನಿರ್ಮಿಸಲಾಗಿದೆ. ಹೀಗಾಗಿ ಕದಂಬರ ಕಾಲವು ವಾಸ್ತು ಶಿಲ್ಪದ ಶ್ರೀಮಂತ ಕಾಲ ಎಂಬ ಹೆಸರಿನಿಂದ ಕರೆಯಲಾಗಿತ್ತು. ಮಯೂರ ವರ್ಮ ಕದಂಬರ ಅತ್ಯಂತ ಪ್ರಸಿದ್ಧ ದೊರೆಯಾಗಿದ್ದನು. ಇದೇ ಕಾಲಘಟ್ಟದಲ್ಲಿ ಕಾಂತಾರ ಸಿನಿಮಾದ ಯಾವುದಾದರು ದೃಶ್ಯ ಕಾವ್ಯ ಮೂಡಿಬರಲಿದ್ಯಾ ಎಂಬ ಕುತೂಹಲಕ್ಕೆ ಈ ಸೆಟ್ ಕಾರಣವಾಗುತ್ತಿದೆ.
ಸದ್ಯ 60 ದಿನಗಳ ಬಳಿಕ ಮತ್ತೆ ಕಾಂತಾರ ಸಿನಿಮಾದ ಶೂಟಿಂಗ್ ಆರಂಭಗೊಂಡಿದೆ. ಇತ್ತೀಚಿಗೆ ಹಾಲಿವುಡ್‌ನ ಸ್ಟಂಟ್ ಮಾಸ್ಟರ್ ಟೊಡರ್ ಲ್ಯಾಜರೋವ್ ತಂಡ ಸೇರಿಕೊಂಡಿದ್ದಾರೆ. ಇವರು ಆರ್‌ಆರ್‌ಆರ್ ಸಿನಿಮಾಗೆ ಸಾಹಸ ನಿರ್ದೇಶನ ಮಾಡಿದ್ದರು. ಹಾಗೆ ರಿಷಬ್ ಶೆಟ್ಟಿ ತೆಲುಗು ನಟ ರಾಣಾ ದಗ್ಗುಬಾಟಿ ಅವರನ್ನು ಕೂಡ ಭೇಟಿಯಾಗಿದ್ದರು. ಇದು ಕೂಡ ಭಾರಿ ಕುತೂಹಲ ಮೂಡಿಸಿತ್ತು.



Click it and Unblock the Notifications