Latest Updates
-
ದೆಹಲಿ ಧೂಳು ತಡೆಯಲು ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ -
FSSAI ದಾಳಿ: ವಿಷಕಾರಿ ಹಣ್ಣುಗಳನ್ನು ಗುರುತಿಸುವುದು ಹೇಗೆ ಗೊತ್ತಾ? -
ಅಕ್ಷಯ ತೃತೀಯ ಸಂಭ್ರಮ: ಈ ಟ್ರೆಂಡಿ ಆಭರಣಗಳೇ ಈಗ ಹವಾ -
ಹೀಟ್ವೇವ್ ಎಚ್ಚರಿಕೆ: ಬಿಸಿಲಿನ ತಾಪದಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ -
ಮದುವೆಗೂ ಮುನ್ನ ಈ 48 ಗಂಟೆಗಳ ಚೆಕ್ಲಿಸ್ಟ್ ಮರೆಯದಿರಿ -
ಬಿಸಿಲ ಬೇಗೆಯಿಂದ ಪಾರಾಗಲು ಮನೆಯನ್ನು ತಂಪಾಗಿರಿಸುವ ಅದ್ಭುತ ಟಿಪ್ಸ್ -
ಬಿಸಿಲ ಬೇಗೆಯಿಂದ ಪಾರಾಗಲು ಈ ಪಾನೀಯಗಳೇ ಮದ್ದು! -
ಬಿಸಿಲ ಬೇಗೆಯಿಂದ ಪಾರಾಗಲು ಈ ಟ್ರೆಂಡ್ಸ್ ಮಿಸ್ ಮಾಡ್ಬೇಡಿ -
ಬಿಸಿಲ ಬೇಗೆಯಿಂದ ಪಾರಾಗಲು ನಿಮ್ಮ ವ್ಯಾಯಾಮದ ಸಮಯ ಬದಲಾಯಿಸಿ -
ಅಕ್ಷಯ ತೃತೀಯ: ಮದುವೆ ಮತ್ತು ಚಿನ್ನದ ಖರೀದಿಗೆ ಹೀಗೆ ಪ್ಲಾನ್ ಮಾಡಿ
ಕನ್ನಡ ಮೊದಲ ಲೇಡಿ ಸೂಪರ್ ಸ್ಟಾರ್ ಬಿ ಸರೋಜಾ ದೇವಿ: ಕೊನೆ ಗಳಿಗೆಯಲ್ಲಿ ಅವರಿಗೆ ಆಗಿದ್ದೇನು?
ಕನ್ನಡ ಮೊದಲ ಲೇಡಿ ಸೂಪರ್ ಸ್ಟಾರ್, ಮೇರು ನಟಿ ಬಿ. ಸರೋಜಾ ದೇವಿ ನಿಧನರಾಗಿದ್ದಾರೆ. ವಯೋಸಹಜ ಅನಾರೋಗ್ಯಕ್ಕೆ ತುತ್ತಾಗಿದ್ದ ಅವರು ತಮ್ಮ 87ನೇ ವಯಸ್ಸಿನಲ್ಲಿ ವಿಧಿವಶರಾಗಿದ್ದಾರೆ. ಇಂದು ಬೆಳಗ್ಗೆ 9 ಗಂಟೆ ಸುಮಾರಿಗೆ ಬೆಂಗಳೂರಿನ ಮಲ್ಲೇಶ್ವರದಲ್ಲಿರುವ ಅವರ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ.
ಅವ್ರು ಕನ್ನಡ, ತಮಿಳು, ತೆಲುಗು ಹಾಗೂ ಹಿಂದಿ ಸಿನಿಮಾಗಳಲ್ಯೂ ಅಭಿನಯಿಸಿ ಸೈಎನಿಸಿಕೊಂಡರು. ಹಾಗೆ ಸೂಪರ್ ಸ್ಟಾರ್‌ಗಳ ಜೊತೆಯೂ ಸಹ ಅವರು ನಟಿಸಿದ್ದಾರೆ. ಡಾ ರಾಜ್‌ಕುಮಾರ್ ಅವರ ಜೊತೆ ಕೂಡ ನಟಿಸಿರುವ ಅವರು ಹಿಟ್ ಸಿನಿಮಾಗಳ ನೀಡಿದ್ದಾರೆ. ಈವರೆಗೂ ಅವರು ಸುಮಾರು 200ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ ಎಂದು ತಿಳಿದುಬಂದಿದೆ.

ತಮ್ಮ ಅದ್ಭುತ ನಟನೆಯಿಂದ ಹೆಸರಾಗಿದ್ದ ಅವರಿಗೆ ಹಲವು ಬಿರುದುಗಳಿದ್ದವು, ಅಭಿನಯ ಸರಸ್ವತಿ ಎಂದೂ ಹಾಗೆ ತಮಿಳು ಚಿತ್ರರಂಗದಲ್ಲಿ ಅವರನ್ನು 'ಕನ್ನಡತು ಪೈಂಗಿಲಿ' ಅಂದರೆ 'ಕನ್ನಡದ ಅರಗಿಣಿ' ಎಂಬ ಹೆಸರು ನೀಡಲಾಗಿತ್ತು. 1955ರಲ್ಲಿ ಮಹಾಕವಿ ಕಾಳಿದಾಸ ಚಿತ್ರದ ಮೂಲಕ ಸರೋಜಾ ದೇವಿ ಅವರು ಮೊದಲ ಬಾರಿಗೆ ನಾಯಕಿಯಾಗಿ ಸಿನಿಮಾಗೆ ಎಂಟ್ರಿ ಕೊಟ್ಟರು.
ಬಿ ಸರೋಜಾ ದೇವಿ ಜೀವನ
ಬಿ. ಸರೋಜಾ ದೇವಿ 1938 ಜನವರಿ 7ರಂದು ಬೆಂಗಳೂರಿನಲ್ಲಿ ಜನಿಸಿದರು. ಅವರ ತಂದೆ ಅಂದಿನ ಮೈಸೂರು ಪ್ರದೇಶದಲ್ಲಿ ಪೊಲೀಸ್ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದರು. ಸಣ್ಣ ವಯಸ್ಸಿನಲ್ಲೇ ಅವರು ಚಿತ್ರರಂಗಕ್ಕೆ ಎಂಟ್ರಿಕೊಟ್ಟಿದ್ದರು. ಕನ್ನಡ, ತಮಿಳು, ತೆಲುಗು ಸಿನಿಮಾಗಳಲ್ಲಿ ಸತತವಾಗಿ ನಟಿಸುತ್ತಿದ್ದರು, 150ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಉಳಿದಂತೆ ಪೋಷಕ ಪಾತ್ರಗಳಲ್ಲೂ ಕೂಡ ಅವರು ಕಾಣಿಸಿಕೊಂಡಿದ್ದರು.
ಅವರ ಚಿತ್ರರಂಗದಲ್ಲಿನ ಕೊಡುಗೆಯನ್ನು ಗುರುತಿಸಿ. 1992ರಲ್ಲಿ ಪದ್ಮಭೂಷಣ, 1969ರಲ್ಲಿ ಪದ್ಮಶ್ರೀ, 2009ರಲ್ಲಿ ಡಾ ರಾಜ್‌ಕುಮಾರ್ ಜೀವಮಾನ ಸಾಧನೆ ಪ್ರಶಸ್ತಿ, 2009ರಲ್ಲಿ ಎನ್‌ಟಿಆರ್ ನ್ಯಾಷನಲ್ ಅವಾರ್ಡ್, 1993ರಲ್ಲಿ ಎಂಜಿಆರ್ ಪ್ರಶಸ್ತಿ, 1998ರಲ್ಲಿ ರಾಜ್ಯೋತ್ಸವ ಪ್ರಶಸ್ತಿ ಸೇರಿ ಹಲವು ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡರು. ಕೊನೆಯದಾಗಿ ಅವರು ಕನ್ನಡದಲ್ಲಿ ಪುನೀತ್ ರಾಜ್‌ಕುಮಾರ್ ನಟನೆಯ ನಟ ಸಾರ್ವಭೌಮ ಸಿನಿಮಾದಲ್ಲಿ ನಟಿಸಿದ್ದು ಅವರ ಕೊನೆಯ ಚಿತ್ರವಾಗಿದೆ.
ಕನ್ನಡದ ಮೊಟ್ಟಮೊದಲ ವರ್ಣಮಯ ಚಿತ್ರ ಅಮರ ಶಿಲ್ಪಿ ಜಕಣಾಚಾರಿ ಚಿತ್ರದ ನಾಯಕಿಯಾಗಿ ನಟಿಸಿದ್ದರು. ಬಳಿಕ ಮಲ್ಲಮ್ಮನ ಪವಾಡ, ಭಾಗ್ಯವಂತರು, ಬಬ್ರುವಾಹನ, ಶ್ರೀ ಕೃಷ್ಣ ರುಕ್ಮಿಣಿ ಸತ್ಯಭಾಮಾ, ಲಕ್ಷ್ಮೀಸರಸ್ವತಿ, 'ಕಥಾಸಂಗಮ'ದಲ್ಲೂ ನಟಿಸಿದರು, ಆದರೆ 1961ರ ಕಿತ್ತೂರು ಚೆನ್ನಮ್ಮ ಸಿನಿಮಾ ಅವರಿಗೆ ಬ್ರೇಕ್ ನೀಡಿತ್ತು.
ಇಂದು ಬೆಳಗ್ಗೆ ಅವರಿಗೆ ಆಗಿದ್ದೇನು?
ಅವರು ಬೆಂಗಳೂರಿನ ನಿವಾಸದಲ್ಲಿದ್ದರು ಬೆಳಗ್ಗೆ ಎದ್ದ ತಕ್ಷಣ ಅವರ ಆರೋಗ್ಯದಲ್ಲಿ ಏರುಪೇರು ಕಂಡುಬಂದಿದೆ. ತಲೆ ಸುತ್ತು ಬಂದು ಅವರು ಕುಸಿದು ಬಿದ್ದಿದ್ದಾರೆ. ತಕ್ಷಣವೇ ಅವರನ್ನು ಮನೆಯವರು ಹತ್ತಿರದ ಮಣಿಪಾಲ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಾರೆ. ಆದರೆ ಆಸ್ಪತ್ರೆಗೆ ಬರುವಾಗಲೇ ಅವರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಸರೋಜಾ ದೇವಿ ಅವರು ಜನಿಸಿದ್ದು ಬೆಂಗಳೂರು ಆದರು ಅವರು ಮೂಲತಃ ಚನ್ನಪಟ್ಟಣ ತಾಲೂಕಿನ ದಶವಾರ ಗ್ರಾಮದವರು. ಅಲ್ಲಿಯೇ ಮನೆ ಹಾಗೂ ಜಮೀನು ಕೂಡ ಹೊಂದಿದ್ದಾರೆ. ಸರೋಜಾದೇವಿ ಅವರ ಕುಟುಂಬ ಕೂಡ ಈ ಗ್ರಾಮದಲ್ಲಿ ವಾಸವಿದೆ. ತಮ್ಮ ಬಾಲ್ಯವನ್ನು ಇದೇ ಗ್ರಾಮದಲ್ಲಿ ಕಳೆದ ಸರೋಜಾ ದೇವಿ ಅವರು ತಮ್ಮ 10ನೇ ವಯಸ್ಸಿನಲ್ಲಿ ಬೆಂಗಳೂರಿಗೆ ಬಂದು ನೆಲೆಸಿದರು ಎಂದು ತಿಳಿದುಬಂದಿದೆ.
ಸದ್ಯ ನಾಳೆ ಅವರ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಅವರ ನಿಧನಕ್ಕೆ ಚಿತ್ರರಂಗದ ಗಣ್ಯರು ಸೇರಿ ಹಲವರು ಸಂತಾಪ ಸೂಚಿಸಿದ್ದಾರೆ.



Click it and Unblock the Notifications











