Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಕನ್ನಡ ಲೇಖಕಿ ಬಾನು ಮುಷ್ತಾಕ್‌ಗೆ ಹೆಸರಾಂತ ಬೂಕರ್ ಪ್ರಶಸ್ತಿ! ಯಾರು ಈ ಮುಷ್ತಾಕ್ ಗೊತ್ತಾ?
ಕನ್ನಡದ ಹೆಸರಾಂತ ಲೇಖಕಿ ಬಾನು ಮುಷ್ತಾಕ್ ಅವರಿಗೆ ಹೆಸರಾಂತ ಪ್ರತಿಷ್ಠಿತ ಇಂಟರ್ ನ್ಯಾಷನಲ್ ಬೂಕರ್ ಪ್ರಶಸ್ತಿ ಲಭಿಸಿದೆ. ಕನ್ನಡದ ಸಾಹಿತ್ಯಕ್ಕೆ ಒಲಿದಿರುವ ಅತ್ಯುನ್ನತ ಪ್ರಶಸ್ತಿಗಳಲ್ಲಿ ಇದು ಕೂಡ ಒಂದಾಗಿದೆ. ಬಾನು ಮುಷ್ತಾಕ್ ಅವರು ಬರೆದಿರುವ ಹಸೀನಾ ಮತ್ತು ಇತರೆ ಕಥೆಗಳು ಎಂಬ ಕಥಾ ಸಂಕಲನದ ಇಂಗ್ಲೀಷ್ ಅನುವಾದಿತ ಹಾರ್ಟ್ ಲ್ಯಾಂಪ್ ಕೃತಿಯು ಈ ಪ್ರಶಸ್ತಿಗೆ ಆಯ್ಕೆಯಾಗಿದೆ.
ಈ ಕಥಾಸಂಕಲನವು ಮುಸ್ಲಿಂ ಸಮುದಾಯದ ಬಾಲಕಿಯರು ಹಾಗೂ ಹೆಣ್ಣುಮಕ್ಕಳ ದೈನಂದಿನ ಬದುಕು ಈ ಕತೆಗಳಲ್ಲಿ ಅನಾವರಣಗೊಂಡಿದೆ. ಈ ಪ್ರಶಸ್ತಿಯು 50,000 ಪೌಂಡ್ ನಗದು ಹಾಗೂ ಪ್ರಶಸ್ತಿಯನ್ನು ಒಳಗೊಂಡಿರಲಿದೆ. ಅದಕ್ಕಿಂತ ಮುಖ್ಯವಾಗಿ ಅಂತಾರಾದಷ್ಟ್ರೀಯ ವೇದಿಕೆಯಲ್ಲಿ ಕನ್ನಡದ ಒಂದು ಪುಸ್ತಕ ಪ್ರಶಸ್ತಿಗೆ ಆಯ್ಕೆಯಾಗಿರುವುದು ಬಹಳ ದೊಡ್ಡ ಸಾಧನೆಯಾಗಿದೆ. ಈ ಕಥಾ ಸಂಕಲನವು 12 ಕಥೆಗಳನ್ನು ಹೊಂದಿದೆ. 1990ರಿಂದ 2023ರ ವರೆಗಿನ ಮುಸ್ಲಿಂ ಮಹಿಳೆಯರ ಹೋರಾಟಗಳ ವಿವರಿಸಲಾಗಿದೆ.

ಬೂಕರ್ ಪ್ರಶಸ್ತಿಗೆ ಆಯ್ಕೆಯಾಗುವುದೇ ದೊಡ್ಡ ಸಾಧನೆ ಎಂದು ಪರಿಗಣಿಸಲಾಗಿದೆ. ಹಾಗೆ ಈ ಪ್ರಶಸ್ತಿ ಪಡೆಯಲು ಹಲವು ಬಹಳ ಸ್ಪರ್ಧೆ ಕೂಡ ಇರಲಿದೆ. ಹೀಗಾಗಿ ಈ ಪ್ರಶಸ್ತಿ ಪಡೆಯುವುದು ಅಷ್ಟೊಂದು ಸುಲಭವಲ್ಲ. ಸ್ಪರ್ಧೆಯಲ್ಲಿ ಅಂತಾರಾಷ್ಟ್ರೀಯ ಮಟ್ಟದ ಲೇಖಕರ ಕೃತಿಗಳು ಕೂಡ ಸ್ಥಾನ ಪಡೆದಿರುತ್ತವೆ. ಆದ್ರೆ ಕನ್ನಡ ಲೇಖಕಿಗೆ ಈ ಬಾರಿಯ ಬೂಕರ್ ಪ್ರಶಸ್ತಿ ಒಲಿದುಬಂದಿದೆ.
ಯಾರು ಈ ಲೇಖಕಿ ಬಾನು ಮುಷ್ತಾಕ್?
ಬಾನು ಮುಷ್ತಾಕ್ ಹಾಸನದಲ್ಲಿ ಹುಟ್ಟಿ ಬೆಳೆದವರು ಅಲ್ಲಿಯೇ ಶಿಕ್ಷಣ ಪಡೆದವರು. ಆರಂಭದಲ್ಲಿ ಶಾಲಾ ಜೀವನದಲ್ಲಿಯೇ ಅವರು ಸಾಹಿತ್ಯದ ಕಡೆಗೆ ಒಲವು ಹೊಂದಿದ್ದರು, ಈ ಸಮಯದಲ್ಲಿ ಅವರು ಸಣ್ಣ ಕಥೆಗಳ ಬರೆದು ಶಿಕ್ಷಕರಿಂದ ಹಿಡಿದು ಎಲ್ಲರ ಗಮನ ಸೆಳೆದಿದ್ದರು. ಶಾಲೆಯಿಂದಲೂ ಅವರು ಸಣ್ಣ ಪುಟ್ಟ ಕಥೆಗಳ ಬರೆಯುತ್ತಿದ್ದರು.
ಆದ್ರೆ ತಮ್ಮ 26ನೇ ವಯಸ್ಸಿನಲ್ಲಿ ಅವರು ಪ್ರಜಾಮತ ಎಂಬ ಕನ್ನಡ ನಿಯತಕಾಲಿಕೆಗೆ ಬರೆದ ಕಥೆಯೊಂದು ಎಲ್ಲರಲ್ಲೂ ಅಚ್ಚರಿಯ ಜೊತೆಗೆ ಅವರ ಹೆಸರು ಮತ್ತಷ್ಟು ಜನಪ್ರಿಯವಾಗಲು ಕಾರಣವಾಯಿತು. ಅವರು ಆರು ಸಣ್ಣ ಕಥಾ ಸಂಕಲನಗಳು, ಒಂದು ಕಾದಂಬರಿ, ಒಂದು ಪ್ರಬಂಧ ಸಂಗ್ರಹ ಮತ್ತು ಒಂದು ಕವನ ಸಂಕಲನವನ್ನು ಬರೆದಿದ್ದಾರೆ.
ಹಾಸನ ನಗರ ಪುರಸಭೆಯಲ್ಲಿ ಎರಡು ಅವಧಿಗೆ ಅವರು ಸೇವೆ ಸಲ್ಲಿಸಿದ್ದಾರೆ. ಅವರು ಬರೆದಿರುವ ಕರಿ ನಾಗರಗಳು ಕೃತಿ ಸಿನಿಮಾ ಕೂಡ ಆಗಿದೆ. ಗಿರೀಶ್ ಕಾಸರವಳ್ಳಿ ನಿರ್ದೇಶನದ ಹಸೀನಾ ಚಿತ್ರಕ್ಕೂ ಈ ಕೃತಿ ಸ್ಪೂರ್ತಿಯಾಗಿದೆ. ಈ ಸಿನಿಮಾಗೆ ರಾಷ್ಟ್ರೀಯ ಪ್ರಶಸ್ತಿ ಕೂಡ ಬಂದಿರುವುದು ಇಲ್ಲಿ ಗಮನಿಸಬಹುದು. ಸಾಮಾನ್ಯವಾಗಿ ಬೂಕರ್ ಪ್ರಶಸ್ತಿಯು ಇಂಗ್ಲೀಷ್ ಲೇಖಕಕರಿಗೆ ದೊರೆಯುವುದು ನೋಡಬಹುದಿತ್ತು. ಇಂಗ್ಲಿಷ್ ನಲ್ಲಿ ಬರೆದ ಹಾಗೂ ಯುಕೆ ಮತ್ತು ಐರ್ಲೆಂಡ್‌ನಲ್ಲಿ ಪ್ರಕಟವಾದ ಉತ್ತಮ ಕಥೆಗಳಿಗೆ ಇದು ಲಭ್ಯವಾಗುತ್ತಿತ್ತು.
ಮುಷ್ತಾಕ್ ತಮ್ಮ ಬಾಲ್ಯದಲ್ಲಿಯೇ ದಲಿತ ಚಳುವಳಿ, ರೈತರ ಚಳುವಳಿ, ಭಾಷಾ ಚಳುವಳಿ, ಮಹಿಳಾ ಹೋರಾಟಗಳು, ಪರಿಸರ ಹೋರಾಟದಿಂದ ಸ್ಪೂರ್ತಿ ಪಡೆದಿದ್ದರಂತೆ. ಹಾಗೆ ಅವರು ತಮ್ಮ ಸಾಹಿತ್ಯ ಕಡೆಗಿನ ಆಸಕ್ತಿ ಹೆಚ್ಚಿಸಿಕೊಂಡ ಪರಿಣಾಮ ಹಾಗೆ ಮುಸ್ಲಿಂ ಮಹಿಳೆಯರ ಅಂದಿನ ಸವಾಲುಗಳನ್ನು ಜಗತ್ತಿನ ಮುಂದಿಡಲು ಬರವಣಿಗೆಯನ್ನು ಆಯ್ಕೆ ಮಾಡಿಕೊಂಡರು.
ಪತ್ರಕರ್ತೆ ಮತ್ತು ವಕೀಲರಾಗಿಯೂ ಮುಷ್ತಾಕ್ ಗುರುತಿಸಿಕೊಂಡಿದ್ದಾರೆ. ಹಾಗೆ ಸಮಾಜಮುಖಿ ಕಾರ್ಯಗಳಿಂದ ಹಿಡಿದು, ಮಹಿಳೆಯರ ಹಕ್ಕುಗಳು, ಸಾಮಾಜಿಕ ನ್ಯಾಯದಂತಹ ಕಾರ್ಯದಲ್ಲಿ ಅವರು ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಅವರ ಹಲವು ಕೃತಿಗಳಲ್ಲಿ ಈ ಸವಾಲುಗಳ ಕುರಿತಾಗಿ ನೋಡಬಹುದು. ಸದ್ಯ ಅವರು ಕರ್ನಾಟಕ ಸಾಹಿತ್ಯ ಅಕಾಡೆಮಿ ಮತ್ತು ದಾನ ಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿಗಳು ಸೇರಿ ಹಲವು ಪ್ರಮುಖ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾರೆ. ಅವರ ಹಲವು ಕೃತಿಗಳು ಭಾರತದ ವಿವಿಧ ಭಾಷೆಗಳಿಗೆ ಅನುವಾದಗೊಂಡಿವೆ.



Click it and Unblock the Notifications


