Latest Updates
-
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್! -
ನವರಾತ್ರಿ ಸಂಭ್ರಮ: ಅತ್ತೆ-ಮಾವಂದಿರ ಮನೆಗೆ ಹೋಗುವಾಗ ನವದಂಪತಿಗಳು ಮರೆಯದೆ ಪಾಲಿಸಬೇಕಾದ ಶಿಷ್ಟಾಚಾರಗಳಿವು! -
ದೆಹಲಿ ಮಳೆ ಅಲರ್ಟ್: ಮನೆಯಲ್ಲಿ ನೀರು ಸೋರಿಕೆ ತಡೆಯಲು 20 ನಿಮಿಷದ ಈ ಕೆಲಸ ಮಾಡಿ!
ರಾಜ್ಯಕ್ಕೆ ಖುಷಿ ಸುದ್ದಿ ಕೊಟ್ಟವಳು, ಹನಿಟ್ರ್ಯಾಪ್ ಮಾಡಿ ಆದಳು ಬಿಸಿ ಬಿಸಿ ಸುದ್ದಿ: ನೈತಿಕ ಜವಾಬ್ದಾರಿ ಅರಿಯದವರು ಪತ್ರಕರ್ತರಾ
ಪತ್ರಿಕೋದ್ಯಮ ವೃತ್ತಿ ಎಂಬುವುದು ಅತ್ಯಂತ ಜವಾಬ್ದಾರಿ ಇರುವ ಹುದ್ದೆ, ಪತ್ರಕರ್ತರು ಅಂದರೆ ಸಮಾಜದ ಕಾವಲುಗಾರರು ಎಂದು ಹೇಳಲಾಗುವುದು.
ಆದರೆ ಈಗೀನ ಕೆಲ ಪತ್ರಕರ್ತರು ಎನ್ನುವ ಸೋಗಿನಲ್ಲಿರುವ ಕೆಲವರಿಗೆ ಪತ್ರಿಕೋದ್ಯಮದ ಮೌಲ್ಯವೇ ಗೊತ್ತಿರುವುದಿಲ್ಲ, ಅದರ ಪರಿಣಾಮ ಈಗ ಜನರು ಮಾಧ್ಯಮದವರು ಎಂದರೆ ಅಸಡ್ಡೆಯಿಂದ ನೋಡುತ್ತಾರೆ, ಆಡಿಕೊಂಡು ನಗಾಡುತ್ತಾರೆ, ಪತ್ರಿಕೋದ್ಯಮದ ಮೌಲ್ಯವೇ ಗೊತ್ತಿಲ್ಲದೆ ಚಾನಲ್ ಇಟ್ಟುಕೊಂಡರೆ ಅವರು ಸಮಾಜಕ್ಕೆ ನೀಡುವ ಸಂದೇಶವೇನು ಎಂಬುವುದನ್ನು ಹಲವಾರು ಪ್ರಕರಣದಲ್ಲಿ ನೋಡಿದ್ದೇವೆ.

ಹೆತ್ತ ಮಗ ತೋರಿ ಹೋದಾಗ ಅಳುತ್ತಿದ್ದರೆ ಆ ತಂದೆ-ತಾಯಿ ಬಳಿ ಹೋಗಿ ಈಗ ನಿಮಗೆ ಏನನಿಸುತ್ತೆ? ಎಂದು ಕೇಳುವ ಪತ್ರಕರ್ತರಿಗೆ ಜನರೇ ಬುದ್ಧಿ ಕಲಿಸಬೇಕು. ಹುಚ್ಚರಂತೆ ಪ್ರಶ್ನೆ ಕೇಳಿದರೆ ಅದಕ್ಕೆ ಅಷ್ಟೇ ಖಾರವಾಗಿ ಪ್ರತಿಕ್ರಿಯಿಸಿದರೆ ಇಂಥವರ ಬಾಯಿ ಮುಚ್ಚಿಸಬಹುದು, ಇತ್ತೀಚೆಗೆ ಒಂದು ವಿಡಿಯೋ ತುಂಬಾನೇ ವೈರಲ್ ಆಗಿತ್ತು...
ದಿ ಗ್ರೇಟ್ ಪತ್ರಕರ್ತೆ ಎಂದು ತನ್ನನ್ನು ತಾನು ಅಂದುಕೊಂಡಿರುವ ಆಕೆ ಪ್ರಕಾಶ್ ರೈ ಅವರಿಗೆ ಏನೋ ಹೇಳಲು ಹೋಗಿ ತನ್ನಲ್ಲಿಯೂ ಜ್ಞಾನ ಬಂಡಾರವಿದೆ ಎಂದು ತೋರಿಸಲು ಹೋಗಿ ನಿರ್ಗತಿಕರು ಎಂದು ಹೇಳಿ ಅವರ ಕೈಯಿಂದ ಮುಖಕ್ಕೆ ಹೊಡೆದಂತೆ ಹೇಳಿಸಿಕೊಂಡ ವೀಡಿಯೋ ವೈರಲ್ ಆಗಿತ್ತು. ಪತ್ರಕರ್ತರಾಗಲು ಕೆಲವೊಂದು ಮೌಲ್ಯ ಗೊತ್ತಿರಬೇಕು., ಅದು ಗೊತ್ತಿಲ್ಲದೆ ಹೋದರೆ ಇವರಿಂದಾಗಿ ಒಳ್ಳೆಯ ಪತ್ರಕರ್ತರನ್ನೂ ಜನರು ಸಂಶಯದಿಂದ ನೋಡುವಂತಾಗಿದೆ.
ರಾಜ್ಯಕ್ಕೆ ಖುಷಿ ಸುದ್ದಿ ಪತ್ರಕರ್ತೆ ಎನ್ನುವ ಸೋಗು ಹಾಕಿದ ವ್ಯಕ್ತಿಯಲ್ಲಿ ಹನಿಟ್ರ್ಯಾಪ್‌ನಲ್ಲಿ ಸುದ್ದಿ ರಾಜ್ಯಕ್ಕೆ ಹಸಿ ಬಿಸಿ ಸುದ್ದಿ ಆಗಿದ್ದಾಳೆ
ಯಾರೋ ಇಬ್ಬ ನಟಿ ಗರ್ಭಿಣಿಯಾದರೆ ಅದ್ಹೇಗೆ ಇಡೀ ರಾಜ್ಯಕ್ಕೆ ಖುಷಿ ಕೊಡುವ ಸುದ್ದಿಯೋ ದೇವರಿಗೆ ಗೊತ್ತು, ಪಾಪ ಈಕೆಯ ನ್ಯೂಸ್ ಆ ನಟಿಯ ಖುಷಿಗೆ ಪೆಟ್ಟು ತಂದಿತು ಎಂಬುವುದಷ್ಟೇ ವಾಸ್ತವ. ಇದೀಗ ಐಷಾರಾಮಿ ಜೀವನದ ಆಸೆಗೆ ಬಿದ್ದು ಕಂಬಿ ಎಣಿಸುವ ಗತಿ ಬಂದಿದೆ. ಇದು ಊಹಾಪೋಹಾವಲ್ಲ, ಪೊಲೀಸರೇ ಹೇಳುತ್ತಿದ್ದಾರೆ.
ಇವರ ಗುಂಪು ಹನಿಟ್ರ್ಯಾಪ್ ಮಾಡಿ ಅಡ್ಡ ಮಾರ್ಗದ ಮೂಲಕ ಹಣ ಗಳಿಸುತ್ತಿದ್ದರು. ಇದೀಗ ಪ್ರತಿಷ್ಠಿತ ವೈದ್ಯ ಸೇರಿದಂತೆ ಸ್ಪಾಕ್ಕೂ ಹನಿಟ್ರ್ಯಾಪ್ ಮಾಡಿ ಹಣ ಕೇಳಿ ಈಗ ಪೊಲೀಸರ ಅತಿಥಿಯಾಗುವ ಪರಿಸ್ಥಿತಿ ಬಂದಿದೆ.
ಒಂದು ಪತ್ರಕರ್ತರಿಗೆ ಎಷ್ಟು ಸಂಬಳ ಬರುತ್ತದೆ ಎಂಬುವುದು ಆ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಗೊತ್ತಿರುತ್ತದೆ. ಬಡ ಕುಟುಂಬದಿಂದ ಬಂದು ಆ ಖಾಸಗಿ ಚಾನಲ್ ಮೂಲಕ ಪತ್ರಕರ್ತೆ ಎಂದು ಗುರಿತಿಸಿರುವ ದಿವ್ಯಾ ವಸಂತ ಸಕತ್ ಸುದ್ದಿಯಾಗಿದ್ದು ರಾಜ್ಯಕ್ಕೆ ಖುಷಿ ನೀಡುವ ಸುದ್ದಿಯಿಂದ, ಜನರು ಟ್ರೋಲ್ ಮಾಡುತ್ತಿದ್ದಾಗ ಆ ಟ್ರೋಲ್ ಅನ್ನೇ ಬಂಡವಾಳ ಮಾಡಿಕೊಳ್ಳಲು ಪ್ರಯತ್ನಿಸಿದಾಕೆ.
ಮತ್ತೊಂದು ಖಾಸಗಿ ವಾಹಿನಿಯಲ್ಲಿ ಮನರಂಜನಾ ಕಾರ್ಯಕ್ರಮದಲ್ಲಿ ಸ್ಪರ್ಧಿಯಾಗಿ ಬಂದಾಗ ತನಗಿದ್ದ ನೆಗೆಟಿವ್ ಇಮೇಜ್ ಹೋಗಲಾಡಿಸಿ ಅಲ್ಲಿ ಸಿಂಪತಿ ಗಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು. ಅದೇ ರೀತಿ ಒಳ್ಳೆಯ ಕಾರ್ಯ ಮಾಡುತ್ತಿದ್ದರೆ ರಾಜ್ಯಕ್ಕೆ ಬಿಸಿ ಬಿಸಿ ಸುದ್ದಿಯಾಗುವ ಪರಿಸ್ಥಿತಿ ಬರ್ತಾ ಇರಲಿಲ್ಲ. ನಾಯಿ ಬಾಲ ಡೊಂಕೇ ಎಂಬ ಮಾತು ಇವರನ್ನು ನೋಡಿ ಹೇಳಿರಬೇಕು ಅಲ್ವಾ?



Click it and Unblock the Notifications
