Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಪಾರು, ವಧು ಸೀರಿಯಲ್ ನಟ ಶ್ರೀಧರ್ ಇನ್ನಿಲ್ಲ: ಅವರಿಗೆ ಕಾಡಿದ ಸಮಸ್ಯೆ ಏನು?
ಕನ್ನಡ ಕಿರುತೆರೆ ನಟ, ಪಾರು ಸೀರಿಯಲ್ ಖ್ಯಾತಿಯ ಶ್ರೀಧರ್ ನಾಯಕ ನಿನ್ನೆ ರಾತ್ರಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಹಲವು ಸಮಯದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯತ್ತಿದ್ದ ಅವರು ಅಸುನೀಗಿದ್ದಾರೆ. ಬಹುಕಾಲದ ಅನಾರೋಗ್ಯದಿಂದ ಬಳಲಿದ್ದ ಅವರು ಚಿಕಿತ್ಸೆಗಾಗಿ ಪರದಾಡಿದ್ದರು. ಆರ್ಥಿಕ ಸಹಾಯಕ್ಕೂ ಕೂಡ ಮನವಿ ಮಾಡಿದ್ದರು.
ಈ ಮೊದಲು ಆಸ್ಪತ್ರೆ ಬೆಡ್ ಮೇಲೆ ಮಲಗಿದ್ದ ಅವರ ವಿಡಿಯೋವೊಂದು ವೈರಲ್ ಆಗಿತ್ತು. ಗುರುತು ಸಿಗದಷ್ಟು ಬದಲಾಗಿದ್ದ ಅವರ ದೃಶ್ಯಗಳ ನೋಡಿ ಕಲಾವಿದರು ಸೇರಿದಂತೆ ವೀಕ್ಷಕರು ಕೂಡ ಅಚ್ಚರಿೆ ಒಳಗಾಗಿದ್ದರು. ಆದರೆ ಈಗ ಚಿಕಿತ್ಸೆ ಫಲಿಸದೆ ಅವರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಬೆಂಗಳೂರಿನ ಬ್ಯಾಪಿಸ್ಟ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದು, ಅಲ್ಲಿಯೇ ಅವರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ ಎಂದು ವರದಿಯಾಗಿದೆ. ಅವರು ಪಾರು, ವಧು ಧಾರಾವಾಹಿಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದರು. ಹಾಗೆ ಕಿಚ್ಚ ಸುದೀಪ್ ನಟನೆಯ ಇತ್ತೀಚಿಗೆ ಬಿಡುಗಡೆಯಾಗಿದ್ದ ಮ್ಯಾಕ್ಸ್ ಚಿತ್ರದಲ್ಲೂ ಚಿಕ್ಕದಾದ ಪಾತ್ರವೊಂದನ್ನು ಮಾಡಿದ್ದರು.
1978ರಲ್ಲಿ ಜನಿಸಿದ ಶ್ರೀಧರ್ ಅವರು ಪಾರು ಧಾರಾವಾಹಿಯ ಮೂಲಕ ಮನೆ ಮಾತಾದರು, ಕೇವಲ 47ನೇ ವಯಸ್ಸಿನಲ್ಲಿ ಅವರು ಇಹಲೋಕ ತ್ಯಜಿಸಿದ್ದಾರೆ. ಹಾಗಾದ್ರೆ ಅವರಿಗೆ ಕಾಡಿದ್ದ ಸಮಸ್ಯೆ ಏನು? ಚಿಕ್ಕ ವಯಸ್ಸಿನಲ್ಲೇ ಅವರು ಹಾಸಿಗೆ ಹಿಡಿದಿದ್ದು ಏಕೆ?
ಕೊರೊನಾ ಸಮಯದಿಂದಲೇ ಕೆಲಸವಿಲ್ಲದೆ ಆರ್ಥಿಕ ಸಮಸ್ಯೆಗೆ ತುತ್ತಾಗಿದ್ದ ಅವರು ಈ ವರ್ಷದ ಆರಂಭದಲ್ಲೇ ಅನಾರೋಗ್ಯಕ್ಕೆ ತುತ್ತಾಗಿದ್ದರು. ಕಳೆದ ಎರಡು ಮೂರು ತಿಂಗಳಿನಿಂದ ಹಾಸಿಗೆ ಹಿಡಿದಿದ್ದ ಅವರು ನಡೆದಾಡಲು ಕೂಡ ಕಷ್ಟಪಡುತ್ತಿದ್ದರು. ಇನ್ಫೆಕ್ಷನ್‌ಗೆ ಒಳಗಾದ ಅವರು ಚಿಕಿತ್ಸೆಗಾಗಿಯೇ ನಿತ್ಯ 10ರಿಂದ 15 ಸಾವಿರ ರೂಪಾಯಿ ವ್ಯಯಿಸಬೇಕಾಯಿತು. ಹೀಗಾಗಿ ಆರ್ಥಿಕ ಸಹಾಯ ಕೋರಿ ಅವರು ಮನವಿ ಕೂಡ ಮಾಡಿದ್ದರು.
ಸಹಾಯಕ್ಕೆ ಅಂಗಲಾಚಿದ್ದರು ಶ್ರೀಧರ್
ಧಾರಾವಾಹಿ ಶೂಟಿಂಗ್ ಮಾಡುವಾಗಲೇ ಅವರು ಅನಾರೋಗ್ಯಕ್ಕೆ ತುತ್ತಾಗಿದ್ದರು, ಇದರಿಂದ ಹಲವು ಬಾರಿ ಆಸ್ಪತ್ರೆಗೆ ಭೇಟಿ ನೀಡಿದ್ದರು. ಕಳೆದ ಏಪ್ರಿಲ್ ತಿಂಗಳಿನಲ್ಲಿ ಅವರ ಆರೋಗ್ಯ ಬಹಳ ಹದಗೆಟ್ಟ ಕಾರಣದಿಂದ ವಧು ಸೀರಿಯಲ್‌ನಿಂದ ಹೊರಬಂದು ಆಸ್ಪತ್ರೆಗೆ ದಾಖಲಾದರು, ಆದ್ರೆ ಆರೋಗ್ಯ ಕ್ಷೀಣಿಸುತ್ತಲೇ ಬಂದಿತ್ತು.
ಇದಾದ ಬಳಿಕ ಅವರು ಹಣಕಾಸಿನ ನೆರವಿಗಾಗಿ ಆಸ್ಪತ್ರೆಯಿಂದಲೇ ಮನವಿ ಕೂಡ ಮಾಡಿದ್ದರು. ನಮಸ್ತೆ ನಾನು ಶ್ರೀಧರ.. ಇದ್ದಕ್ಕಿದ್ದ ಹಾಗೆ ನಾನು ಅನಾರೋಗ್ಯಕ್ಕೆ ತುತ್ತಾಗಿ ಬಹಳಷ್ಟು ಸಂಕಷ್ಟದಲ್ಲಿದ್ದೇನೆ. ಆಸ್ಪತ್ರೆಯ ಖರ್ಚನ್ನು ಭರಿಸಲಾಗದಷ್ಟು ತೊಂದರೆಯಾಗಿದೆ. ಹೆಬ್ಬಾಳದಲ್ಲಿರುವ ಬ್ಯಾಪ್ಟಿಸ್ಟ್ ಆಸ್ಪತ್ರೆಯಲ್ಲಿ ಅಡ್ಮಿಟ್ ಆಗಿದ್ದೇನೆ. ಒಂದು ದಿನಕ್ಕೆ ಆಸ್ಪತ್ರೆಯ ಖರ್ಚು, ಮಾತ್ರೆಯ ಖರ್ಚು 10ರಿಂದ 15 ಸಾವಿರ ಆಗುತ್ತಿದೆ. ಉಳಿತಾಯದ ಹಣ, ಸಹಾಯದ ಹಣ.. ಎಲ್ಲವೂ ಮುಗಿದುಹೋಗಿದೆ. ದಯಮಾಡಿ ತಾವೆಲ್ಲರೂ ಶ್ರೀಧರನಿಗೆ ಕೈಲಾದ ಹಣದ ಸಹಾಯ ಮಾಡಬೇಕೆಂದು ಅಂಗಲಾಚಿ ಬೇಡಿಕೊಳ್ಳುತ್ತಿದ್ದೇನೆ. ಶ್ರೀಧರನನ್ನು ಕಾಪಾಡಿ.. ನನ್ನನ್ನು ಬದುಕಿಸಲು ಪ್ರಯತ್ನಿಸಿ.. ಕೈಲಾದಷ್ಟು ಹಣದ ಸಹಾಯ ಮಾಡಿ, ಎಂದು ಖುದ್ದು ಅವರೇ ಹೇಳಿಕೊಂಡಿದ್ದರು ಎಂದು ಸೀರಿಯಲ್ ನಟಿ ಸಪ್ನಾ ದೀಕ್ಷಿತ್ ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಹಂಚಿಕೊಂಡಿದ್ದರು.
ಇದಾದ ಬಳಿಕ ಅವರನ್ನು ನೋಡಲು ಹಲವು ಕಲಾವಿದರು ಆಸ್ಪತ್ರೆಗೆ ತೆರಳಿದ್ದರು. ಈ ವೇಳೆ ಕೂಡ ಸಹಾಯಕ್ಕಾಗಿ ಮನವಿ ಮಾಡಲಾಗಿತ್ತು. ಹಾಗೆ ಅವರಿಗೆ ಸ್ಪಂಧನೆಯೂ ಸಿಕ್ಕಿತ್ತು. ಆದ್ರೆ ಚಿಕಿತ್ಸೆ ಫಲಿಸದೆ ಅವರು ಮೃತಪಟ್ಟಿದ್ದಾರೆ.
ನಟ ಶ್ರೀಧರ್‌ಗೆ ಏನಾಗಿತ್ತು?
ಅವರೇ ಹೇಳಿಕೊಂಡಿರುವಂತೆ ಅಕ್ಟೋಬರ್‌ನಲ್ಲೇ ಅವರಿಗೆ ಅನಾರೋಗ್ಯ ಆರಂಭಗೊಂಡಿತ್ತು. 'ನನಗೆ ವಿಟಮಿನ್, ಪ್ರೋಟಿನ್ ಎಲ್ಲಾ ಕಮ್ಮಿ ಆಗಿದೆ. ಮೊದಲು ಜ್ವರ ಬಂತು, ಆಮೇಲೆ ಕಫ ಆಗಿದೆ ಅಂತ ಡಾಕ್ಟರ್‌ಗೆ ತೋರಿಸಿದೆ ಎಲ್ಲೂ ಸರಿ ಆಗಲಿಲ್ಲ. ಅದರಲ್ಲೇ ನಾನು ವಧು, ಸಿಂಧೂ ಭೈರವಿ ಶೂಟಿಂಗ್‌ಗೆ ಹೋಗ್ತಿದ್ದೆ. ನಂತರ ನನಗೆ ತುಂಬಾ ಸುಸ್ತು ಆಗೋಕೆ ಶುರುವಾಯ್ತು. ನಾನೊಬ್ಬನೇ ಇರೋದ್ರಿಂದ ಯಾರೂ ಕೇರ್ ಮಾಡೋರು ಇರಲಿಲ್ಲ. ಯಾರಾದರೂ ಇದ್ದಿದ್ರೆ ನನಗೆ ಈ ಸ್ಥಿತಿ ಬರುತ್ತಿರಲಿಲ್ಲ' ಎಂದು ಅವರು ಹೇಳಿಕೊಂಡಿದ್ದರು.



Click it and Unblock the Notifications