Latest Updates
-
ಹೊಸ ರೀತಿಯ ಟೊಮೆಟೊ ಚಕ್ಕುಲಿ ಸುಲಭವಾಗಿ ಮಾಡಿ: ಇಲ್ಲಿದೆ ಮಾಡುವ ವಿಧಾನ -
ಶನಿ ಸಂಚಾರ 2026: ಮಾರ್ಚ್ನಿಂದ ಈ 5 ರಾಶಿ ಜನರು ಎಚ್ಚರವಹಿಸಿ, ವೈಯಕ್ತಿಕ ಹಾನಿ ಸಂಭವ! -
ಮಸಾಲೆ ಲೆಸ್ ವೈಟ್ ಪಲಾವ್; ವಿಭಿನ್ನ ರುಚಿ ವಿಶೇಷ ಖಾದ್ಯ ಸಿದ್ದಮಾಡಿ ನೋಡಿ! -
ಅಂತಾರಾಷ್ಟ್ರೀಯ ಮಹಿಳಾ ದಿನ: ದಕ್ಷಿಣ ಏಷ್ಯಾದಲ್ಲಿ ಹೆಚ್ಚಾಗುತ್ತಿದೆ ರಕ್ತಹೀನತೆ, ಮಹಿಳೆಯರೇ ಬಲಿಪಶು ಏಕೆ? -
March 08 Horoscope: ಯಾರ ಬಳಿಯಾದರು ಸಾಲ ಪಡೆಯುವ ಆಲೋಚನೆ ಮುಂದೂಡಿ! -
ನೀನೇ ನನ್ನ ಶಕ್ತಿ.. ನಿಮ್ಮ ಪ್ರಿಯತಮೆಗೆ ಕಳಿಸಿ ಈ ರೊಮ್ಯಾಂಟಿಕ್ ಶುಭಾಶಯಗಳು! ಆಕೆಯ ಮುಖದಲ್ಲಿ ನಗು ತರಿಸಿ -
ಕೊನೆಗೂ ಬಂತು ರಾಜಯೋಗ: ಈ ರಾಶಿಗಳಿಗೆ ನಸೀಬಲ್ಲೇ ಇಲ್ಲದ ಸುಖ-ಸಂಪತ್ತು ಪ್ರಾಪ್ತಿ! ಪ್ರೀತಿಯಲ್ಲಿ ದೊಡ್ಡ ಯಶಸ್ಸು -
ಎಂದಾದರೂ ಮೊಸರು ಪರೋಟ ತಿಂದಿದ್ದೀರಾ? ಒಮ್ಮೆ ಇದರ ರುಚಿ ನೋಡಿ.. ಹಿಟ್ಟು ಕಲಸುವಾಗ ಈ ಟ್ರಿಕ್ ಬಳಸಿ -
ಹುಷಾರ್.. ಗಂಡನಿಗೆ ಈ 4 ಮಾತು ಹೇಳ್ತೀರಾ? ಮನೇಲಿ ಬೆಂಕಿ ಉರಿಯುತ್ತೆ.. ಹೀಗೆ ಮಾಡಿದ್ರೆ ಸಂಸಾರದಲ್ಲಿ ಸುಖ ಇರುತ್ತೆ -
ಸಿಸ್ಟರ್.. 30+ ಬಳಿಕ ಈ ಸೂತ್ರಗಳನ್ನು ಬೆಳೆಸಿಕೊಳ್ಳಿ! ಆರೋಗ್ಯ ಸದಾ ಚೆನ್ನಾಗಿ ಇರುತ್ತೆ
ಈ ರಾಶಿಯವರು ಕನಕ ಪುಷ್ಯರಾಗ ಹರಳು ಧರಿಸಿದ್ರೆ ಹಣಕಾಸು ಸಮಸ್ಯೆಯೇ ಹತ್ತಿರ ಸುಳಿಯಲ್ಲ!!
ಜ್ಯೋತಿಷ್ಯಶಾಸ್ತ್ರದಲ್ಲಿ ಹರಳುಗಳಿಗೆ ಬಹಳಷ್ಟು ಪ್ರಾಮುಖ್ಯತೆ ನೀಡಲಾಗಿದೆ. ಅದರಲ್ಲೂ ಹಲವು ಹರಳುಗಳಿಗೆ ಹಲವು ರೀತಿಯ ಪ್ರಯೋಜನಗಳಿರುವುದು ನೋಡಬಹುದು. ಹಾಗೆ ತಮ್ಮ ರಾಶಿಗೆ ಅನುಗುಣವಾಗಿ ಅವರು ಆಯಾ ಹರಳುಗಳ ಧರಿಸಿದರೆ ಅದರಿಂದಾಗುವ ಲಾಭವನ್ನೂ ಕೂಡ ಅವರು ಅನುಭವಿಸಬಹುದು. ಜ್ಯೋತಿಷ್ಯದ ಪ್ರಕಾರ ಪ್ರತಿಯೊಂದು ಹರಳುಗಳು ಸಹ ಅದರದ್ದೇ ಲಾಭ ನಷ್ಟಗಳ ಹೊಂದಿದೆ. ಹಾಗೆ ಯಾವ ರಾಶಿಯಲ್ಲಿ ಜನಿಸಿದವರು ಹಾಗೆ ಯಾವ ನಕ್ಷತ್ರದಲ್ಲಿ ಜನಿಸಿದವರು ಯಾವ ಹರಳು ಧರಿಸಿದರೆ ಅವರಿಗೆ ಲಾಭವಾಗಬಹುದು ಎಂಬುದನ್ನು ಕೂಡ ವಿವರಿಸಲಾಗಿದೆ.
ಹಾಗೆ ಹಲವು ಗ್ರಹಗತಿಗಳ ಬದಲಾವಣೆ ಮತ್ತು ಆಯಾ ರಾಶಿಯಲ್ಲಾಗುವ ಗ್ರಹಗಳ ಚಲನೆ ಕೂಡ ಈ ಹರಳು ಧರಿಸಿರುವವರ ಮೇಲೆ ಧನಾತ್ಮಕ ಹಾಗೂ ಋಣಾತ್ಮಕ ಪರಿಣಾಮಗಳ ಉಂಟುಮಾಡುತ್ತಿರುತ್ತದೆ. ಈಗ ನಾವು ನವರತ್ನಗಳಲ್ಲಿ ಒಂದಾಗಿರುವ ಕನಕ ಪುಷ್ಯ ಹರಳಿನ ಕುರಿತಾಗಿ ಹಾಗೂ ಅದರನ್ನು ಧರಿಸುವವರಲ್ಲಿ ಉಂಟಾಗುವ ಧನಾತ್ಮಕ ಲಾಭದ ಕುರಿತು ತಿಳಿದುಕೊಳ್ಳೋಣ.

ಅದರಲ್ಲೂ ಈ ಕನಕ ಪುಷ್ಯರಾಗ ಹರಳು ಗುರು ಗ್ರಹಕ್ಕೆ ಸಂಬಂಧಿಸಿದ ಹರಳಾಗಿದೆ. ಈ ಹರಳು ಗುರು ಗ್ರಹವನ್ನು ಪ್ರತಿನಿಧಿಸಲಿದೆ. ಗುರುವನ್ನು ಜ್ಞಾನ, ಸಮೃದ್ಧಿ, ಮಕ್ಕಳ ಆರೋಗ್ಯ, ಸಂಪತ್ತು, ಮದುವೆಗೆ ಸಂಬಂಧಿಸಿದ ಅದೃಷ್ಟವೆಂದು ಪರಿಗಣಿಸಲಾಗಿದೆ. ಯಾರ ಜಾತಕದಲ್ಲಿ ಗುರುಬಲ ಇರಲಿದ್ಯೋ ಅವರ ಜೀವನವೂ ಯಶಸ್ಸಿನಿಂದ ಕೂಡಿರಲಿದೆ. ಹಾಗೆ ಜೀವನ ಸಂತೋಷದಿಂದ ತುಂಬಿರಲಿದೆ.
ಹಾಗಾದ್ರೆ ಈ ಪುಷ್ಯರಾಗ ಮಣಿಯು ಯಾವ ರಾಶಿಯವರಲ್ಲಿ ಜನಿಸಿದವರಿಗೆ ಶ್ರೇಷ್ಠವಾಗಿದೆ, ಹಾಗೆ ಯಾರಿಗೆ ಇದು ಹಣಕಾಸು ವಿಚಾರದಲ್ಲಿ ಬಹಳ ಲಾಭ ತರಲಿದೆ ಯಾರ ಆರ್ಥಿಕ ಸ್ಥಿತಿಯನ್ನು ಸುಧಾರಿಸಬೇಕಾದರೆ ಅವರು ಈ ಪುಷ್ಯರಾಗ ಹರಳನ್ನು ಧರಿಸಬೇಕು ಎಂಬುದನ್ನು ನಾವಿಲ್ಲಿ ತಿಳಿದುಕೊಳ್ಳೋಣ.
ಧನು ರಾಶಿ
ನೀವು ಧನು ರಾಶಿಯಲ್ಲಿ ಜನಿಸಿದವರಾಗಿದ್ದರೆ ನೀವು ಕನಕ ಪುಷ್ಯರಾಗ ಹರಳಿನ ಉಂಗುರ ಧರಿಸಬಹುದು. ಹಾಗೆ ಈ ಸಮಯದಲ್ಲಿ ನಿಮ್ಮ ಆರ್ಥಿಕ ಸ್ಥಿತಿಗತಿಯನ್ನು ಸುಧಾರಿಸಲು ಇದು ಬಹಳ ನೆರವಿಗೆ ಬರಲಿದೆ. ನೀವು ವೃತ್ತಿ ಬದುಕಿನಲ್ಲಿದ್ದರೆ ಅದಕ್ಕೆ ಸಂಬಂಧಿಸಿದಂತೆ ಪ್ರಗತಿ ನೋಡಬೇಕಾದರೆ ಈ ಪುಷ್ಯರಾಗ ಹರಳು ಬಹಳ ಮುಖ್ಯ. ಹಾಗೆ ನಿಮ್ಮ ಅನೇಕ ಆರ್ಥಿಕ ಸಮಸ್ಯೆಗಳು ನಿವಾರಣೆಯಾಗಬಹುದು. ಬಹಳ ಸಮಯದ ಆರ್ಥಿಕ ಸಮಸ್ಯೆಗೆ ಈ ಸಮಯದಲ್ಲಿ ಕಡಿವಾಣ ಹಾಕಬಹುದು. ಪುಷ್ಯರಾಗ ಹರಳು ಸಂಪತ್ತನ್ನು ಆಕರ್ಷಿಸಲಿದೆ, ಹೀಗಾಗಿ ಹೊಸ ಆದಾಯ ಮೂಲದಿಂದ ನಿಮಗೆ ಧನ ಲಾಭವಾಗಬಹುದು.
ಮೀನ ರಾಶಿ
ಮೀನ ರಾಶಿಯ ಅಧಿಪತಿ ಆಗಿರುವ ಗುರುಗ್ರಹ ಮೀನ ರಾಶಿಯವರಿಗೆ ಲಾಭ ಉಂಟು ಮಾಡಲಿದೆ. ಹಾಗೆ ಮೀನ ರಾಶಿಯವರು ಈ ಕನಕ ಪುಷ್ಯ ಹರಳನ್ನು ಧರಿಸುವುದು ಅವರ ಆರ್ಥಿಕ ಸಮಸ್ಯೆಗಳನ್ನು ತಕ್ಕಮಟ್ಟಿಗೆ ಸುಧಾರಿಸಲಿದೆ. ಈ ಹರಳಿನ ಉಂಗುರವನ್ನು ತೋರು ಬೆರಳಿಗೆ ಧರಿಸುವುದು ಹಣಕಾಸಿಗೆ ಸಂಬಂಧಿಸಿದ ಸಮಸ್ಯೆಗಳನ್ನು ನಿವಾರಿಸಲಿದೆ. ಮುಖ್ಯವಾಗಿ ಮೀನ ರಾಶಿಯ ಮಂದಿ ಕನಕ ಪುಷ್ಯರಾಗ ಹರಳು ಧರಿಸುವುದು ಬಹಳ ಲಾಭದಾಯಕ ದಿನಗಳ ನೋಡಬಹುದು.
ಹಾಗೆ ಈ ಪುಷ್ಯರಾಗ ಹರಳು ಧರಿಸುವುದು ನಿಮ್ಮ ಬುದ್ದಿಶಕ್ತಿ, ಆಧ್ಯಾತ್ಮಿಕ ಒಲವು, ಪಿಶಾಚಿ ಕಾಟ, ಸಾಲ ಮಾಡದಂತೆ ತಡೆಯುವುದು, ಸಂಬಂಧಿಕರಿಂದ ಹಾಗೆ ಸಮಾಜದಲ್ಲಿ ಗೌರವ ಹೆಚ್ಚುವಂತೆ ಮಾಡಲು ಇದು ಸಹಕಾರಿಯಾಗಿದೆ. ನಿಮ್ಮ ಆತ್ಮವಿಶ್ವಾಸ ಹೆಚ್ಚಿಕೊಳ್ಳಬೇಕಾದರೆ ಈ ಕನಕ ಪುಷ್ಯ ಹರಳನ್ನು ಧರಿಸಬೇಕಂತೆ ಆದರೆ ಎಲ್ಲಾ ರಾಶಿಯವರಿಗೂ ಇದು ಸೂಕ್ತ ಹರಳಲ್ಲ. ನೀವು ಜ್ಯೋತಿಷಿಗಳ ಸಲಹೆ ಪಡೆದು ನಿಮ್ಮ ರಾಶಿಗೆ ಹಾಗೂ ನಕ್ಷತ್ರಕ್ಕೆ ಸರಿಹೊಂದು ಹರಳನ್ನು ಧರಿಸುವುದು ಸೂಕ್ತ.
(ಹಕ್ಕುತ್ಯಾಗ: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳು ಹಾಗೂ ಆನ್‌ಲೈನ್ ಮಾಹಿತಿಯನ್ನು ಆಧರಿಸಿದೆ. ಅದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಲಿದೆ. ಯಾವುದೇ ಹರಳನ್ನು ಧರಿಸುವ ಮೊದಲು ಪ್ರಮಾಣಿಕೃತ ಜ್ಯೋತಿಷಿ ಅಥವಾ ಹರಳುಗಳ ತಜ್ಞರನ್ನು ಸಂಪರ್ಕಿಸುವಂತೆ ನಾವು ಶಿಫಾರಸು ಮಾಡುತ್ತೇವೆ. ಈ ಲೇಖನವು ಕೇವಲ ಮಾಹಿತಿ ಒದಗಿಸುವ ಉದ್ದೇಶದಿಂದ ಪ್ರಕಟಿಸಲಾಗಿದೆ)



Click it and Unblock the Notifications











