Latest Updates
-
ಸಮಲಿಂಗಿ ಜೋಡಿಗಳೇ ಎಚ್ಚರ: ಗಿಫ್ಟ್ ಟ್ಯಾಕ್ಸ್ನಿಂದ ಪಾರಾಗಲು ಈ ದಾಖಲೆಗಳು ಕಡ್ಡಾಯ! -
ಅಡುಗೆ ಎಣ್ಣೆ ಬೆಲೆ ಏರಿಕೆ: ಬಜೆಟ್ ಮತ್ತು ಆರೋಗ್ಯ ಕಾಪಾಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಯುಪಿಐನಲ್ಲಿ ಎಐ ಕ್ರಾಂತಿ: ಇನ್ಮುಂದೆ ನಿಮ್ಮ ಬಿಲ್ ಪಾವತಿಗಳನ್ನು ಡಿಜಿಟಲ್ ಏಜೆಂಟ್ ನೋಡಿಕೊಳ್ಳಲಿದೆ! -
ಉತ್ತರಾಖಂಡದಲ್ಲಿ ಆರೆಂಜ್ ಅಲರ್ಟ್: ಹೋಟೆಲ್ ರೂಮ್ನಲ್ಲೇ ಫಿಟ್ ಆಗಿರಲು ಈ ಸರಳ ವ್ಯಾಯಾಮಗಳನ್ನು ಮಾಡಿ! -
UGC-NET ಪರೀಕ್ಷೆಯ ಗೊಂದಲ: ವಿದ್ಯಾರ್ಥಿಗಳ ಆತಂಕ ದೂರ ಮಾಡಲು ಪೋಷಕರಿಗೆ ಇಲ್ಲಿದೆ 48 ಗಂಟೆಗಳ ಸ್ಟಡಿ-ರಿಸೆಟ್ ಪ್ಲಾನ್! -
ದೆಹಲಿ ಮಳೆ: ಗುಡುಗು-ಮಿಂಚಿನಿಂದ ನಿಮ್ಮ ಎಲೆಕ್ಟ್ರಾನಿಕ್ ವಸ್ತುಗಳನ್ನು ರಕ್ಷಿಸಲು ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಎನರ್ಜಿ ಡ್ರಿಂಕ್ಸ್ ಕುಡಿಯುವ ಮುನ್ನ ಎಚ್ಚರ! FSSAI ಹೊಸ ನಿಯಮ ಮತ್ತು ಆರೋಗ್ಯಕರ ಪರ್ಯಾಯಗಳು -
ಗುರುಗ್ರಾಮದಲ್ಲಿ ವರುಣನ ಆರ್ಭಟ: ಕಚೇರಿಗೆ ಹೋಗ್ಬೇಡಿ, ಮನೆಯಿಂದಲೇ ಕೆಲಸ ಮಾಡಿ - ಪೊಲೀಸರ ಮಹತ್ವದ ಸೂಚನೆ -
ಮಳೆಗಾಲದ ಜಡತ್ವಕ್ಕೆ ಗುಡ್ ಬೈ: ಮುಂಬೈ-ಪುಣೆ ಜನರಿಗಾಗಿ 10 ನಿಮಿಷದ ಸರಳ ವ್ಯಾಯಾಮಗಳು -
ಮುಂಬೈ ಮಳೆ ಆರ್ಭಟ: ಸಂಗಾತಿಯ ಸುರಕ್ಷತೆಗಾಗಿ ನೀವು ಮಾಡಬೇಕಾದ ಪ್ರಮುಖ ಕೆಲಸಗಳಿವು!
ಕೈಲಾಸ ಯಾತ್ರೆ ಮತ್ತಷ್ಟು ಸುಲಭ..30 ಭಕ್ತರಿದ್ದ ಮೊಟ್ಟ ಮೊದಲ ವಿಮಾನ ಹಾರಾಟ ಯಶಸ್ವಿ..!
ಹಿಂದೂ, ಜೈನ ಮತ್ತು ಬೌದ್ಧ ಧರ್ಮಗಳಿಗೆ ಪವಿತ್ರ ಸ್ಥಳವಾಗಿರುವ ಮಾನಸ ಸರೋವರ ತಪ್ಪಲಿನ ಕೈಲಾಸವು ಎಲ್ಲಾರು ಭೇಟಿ ನೀಡಬೇಕು ಎಂದುಕೊಳ್ಳುವ ಸ್ಥಳವಾಗಿದೆ. ಹಿಂದೂಗಳಿಗೆ ಕೈಲಾಸ ಪರ್ವತ ಏರಿ ಕೈಲಾಸ ವಾಸಿ ಶಿವನ ಕಾಣುವ ಹಂಬಲ ಹೊಂದಿರುತ್ತಾರೆ. ಪ್ರತಿ ವರ್ಷ ಲಕ್ಷ ಲಕ್ಷ ಮಂದಿ ಮೈ ಕೊರೆಯುವ ಚಳಿಯನ್ನೂ ಲೆಕ್ಕಿಸದೆ ಹರನ ದರ್ಶನ ಪಡೆಯುತ್ತಾರೆ.
ಆದರೆ ಕೈಲಾಸ ಪರ್ವತ ಯಾತ್ರೆ ಎಂದರೆ ಅದೊಂದು ಸಾಹಸಮಯ ದಾರಿ. ಅದೆಷ್ಟೋ ಮಂದಿ ಅರ್ಧಕ್ಕೆ ಮರಳಿರುವುದು ಉಂಟು. ಇಲ್ಲವೆ ಪಾಕೃತಿಕ ವಿಕೋಪಗಳಿಗೆ ಸಿಲುಕಿ ಪ್ರಾಣ ಕಳೆದುಕೊಂಡವರೂ ಇದ್ದಾರೆ. ಏಕೆಂದರೆ ಕೈಲಾಸ ದಾರಿಯೇ ಅಷ್ಟು ಕಠಿಣ ಎಂಬುದು ಭಕ್ತರ ವಾದವಾಗಿದೆ.
ಆದರೆ ಈಗ ಕೈಲಾಸ ತಲುಪುವುದು ಮತ್ತಷ್ಟು ಸುಲಭವಾಗಿದೆ. ಕಲ್ಲು, ಮುಳ್ಳು, ಹಿಮ, ನದಿ, ತೊರೆ ದಾಟುವ ಯಾವುದೇ ಕಷ್ಟವಿಲ್ಲದೆ ನೇರವಾಗಿ ವಿಮಾನದ ಮೂಲಕ ತೆರಳಬಹುದು. ಹೌದು ಇದೇ ಮೊದಲ ಬಾರಿಗೆ ಮಾನಸ ಸರೋವರದ ಕಡೆ ಲಘು ವಿಮಾನವೊಂದು ಭಕ್ತರ ತುಂಬಿಕೊಂಡು ತೆರಳಿದೆ.

ಇದೇ ಜನವರಿ 29ರಂದು 30 ಮಂದಿ ಭಾರತೀಯ ಭಕ್ತರನ್ನು ತುಂಬಿದ್ದ ಚಾರ್ಟರ್ಡ್ ವಿಮಾನವೊಂದು ನೇಪಾಲ್‌ಗಂಜ್‌ನಿಂದ ಹಾರಾಟ ನಡೆಸಿ ಯಶಸ್ವಿಯಾಗಿದೆ. ಇದು ಮುಂದಿನ ದಿನಗಳಲ್ಲಿ ಭಕ್ತರಿಗೆ ಸೇವೆ ಒದಗಿಸಲಿದ್ದು, ಭಕ್ತರಲ್ಲಿ ಹೊಸ ಆಶಾಭಾವನೆ ಮೂಡಿದೆ.
ಕೈಲಾಸ-ಮಾನಸ ಸರೋವರ ದರ್ಶನ ವಿಮಾನ ಎಂದು ಕರೆಯಲ್ಪಡುವ ಈ ವಿಮಾನವು ಪವಿತ್ರ ಯಾತ್ರಿಕ ಸ್ಥಳಗಳಾದ ಕೈಲಾಸ ಪರ್ವತ ಮತ್ತು ಮಾನಸ ಸರೋವರದ ಭವ್ಯವಾದ ಹತ್ತಿರದ ನೋಟವನ್ನು ನೀಡಲಿದೆ.
COVID-19 ಸಾಂಕ್ರಾಮಿಕದ ನಂತರ ಚೀನಾವು 2023ರಲ್ಲಿ ಕೈಲಾಸ ಮಾನಸ ಸರೋವರ ತೀರ್ಥಯಾತ್ರೆಯನ್ನು ತೆರೆದಿದೆ. ಆದಾಗ್ಯೂ, ಶುಲ್ಕಗಳಲ್ಲಿ ಭಾರಿ ಹೆಚ್ಚಳ ಮತ್ತು ವೀಸಾಗಳ ಮೇಲೆ ಬಹು ನಿರ್ಬಂಧಗಳು, ವಿಶೇಷವಾಗಿ ಭಾರತೀಯ ಯಾತ್ರಾರ್ಥಿಗಳಿಗೆ, ಪ್ರಾಯೋಗಿಕವಾಗಿ ಯಾತ್ರೆಗೆ ಅವಕಾಶ ನೀಡಿರಲಿಲ್ಲ.
"38 ಭಾರತೀಯ ಪ್ರವಾಸಿಗರೊಂದಿಗೆ ಶ್ರೀ ಏರ್‌ಲೈನ್ಸ್‌ನ ಈ ಚಾರ್ಟರ್ಡ್ ವಿಮಾನವು ಪ್ರವಾಸವನ್ನು ಪೂರ್ಣಗೊಳಿಸಲು ಸುಮಾರು ಒಂದೂವರೆ ಗಂಟೆಗಳ ಸಮಯ ತೆಗೆದುಕೊಂಡಿತು" ಎಂದು ಉದ್ಯಮವನ್ನು ಪ್ರಾರಂಭಿಸಿದ ಸಿದ್ಧಾರ್ಥ ಬ್ಯುಸಿನೆಸ್ ಗ್ರೂಪ್‌ನ ಪ್ರಾದೇಶಿಕ ನಿರ್ದೇಶಕ ಕೇಶವ್ ನ್ಯೂಪಾನೆ ತಿಳಿಸಿದ್ದಾರೆ.
ಮೊದಲ ವಿಮಾನವು ನವದೆಹಲಿ, ಮುಂಬೈ ಸೇರಿದಂತೆ ಭಾರತದ ವಿವಿಧ ನಗರಗಳಿಂದ ಮತ್ತು ಗುಜರಾತ್ ಮತ್ತು ಉತ್ತರ ಪ್ರದೇಶ ರಾಜ್ಯಗಳಿಂದ ಪ್ರವಾಸಿಗರನ್ನು ಹೊಂದಿತ್ತು."ಮೌಂಟ್ ಕೈಲಾಶ್ ಮತ್ತು ಮಾನಸ ಸರೋವರಕ್ಕೆ ವಿಮಾನವು ಅಗ್ಗವಾಗಿದೆ, ತ್ವರಿತ, ವಿಶ್ವಾಸಾರ್ಹ ಮತ್ತು ಸುರಕ್ಷಿತವಾಗಿದೆ" ಎಂದು ನ್ಯೂಪಾನೆ ಹೇಳಿದರು.
ಮುಂದಿನ ಚಾರ್ಟರ್ಡ್ ವಿಮಾನ ಯಾತ್ರೆಯು ಫೆಬ್ರವರಿ ಮೊದಲ ವಾರದಲ್ಲಿ ನಡೆಯಲಿದೆ.ನಾವು ಬೇಡಿಕೆಯ ಆಧಾರದ ಮೇಲೆ ಆಗಾಗ್ಗೆ ಸಾಧ್ಯವಾದಷ್ಟು ವಿಮಾನ ಸೇವೆ ನೀಡಲು ಪ್ರಯತ್ನಿಸುತ್ತೇವೆ" ಎಂದಿದ್ದಾರೆ.
ಮಾನಸ ಸರೋವರವು ಭಾರತ-ನೇಪಾಳ ಗಡಿಯಲ್ಲಿರುವ ಕೈಲಾಸ ಪರ್ವತದಲ್ಲಿದೆ. ಭಾರತದ ವ್ಯಾಪ್ತಿಗೆ ಒಳಪಟ್ಟಿರುವ ಕೈಲಾಸ ಮಾನಸ ಸರೋವರದ 6,836 ಚದರ ಕಿ.ಮೀ ಭಾಗವು ಪೂರ್ವದಲ್ಲಿ ನೇಪಾಳ ಮತ್ತು ಉತ್ತರದಲ್ಲಿ ಚೀನಾದ ಗಡಿಯನ್ನು ಹಂಚಿಕೊಂಡಿದೆ. ಈ ಪರ್ವತವು ಸಮುದ್ರಮಟ್ಟದಿಂದ 15 ಸಾವಿರ ಅಡಿಗಳಷ್ಟು ಎತ್ತರದಲ್ಲಿದೆ.
ಕೈಲಾಸ ಪರ್ವತ ಯಾತ್ರೆಗೆ ಸರಿಯಾದ ಸಮಯವೇನು?
ಕೈಲಾಸ ಪರ್ವತ ಯಾತ್ರೆಗೆ ಹೊರಡಲು ತುಂಬಾ ಸಮಯದ ತಯಾರಿಯ ಅಗತ್ಯವಿದೆ. ಜೂನ್ ಮತ್ತು ಸೆಪ್ಟೆಂಬರ್ ನಡುವಿನ ಸಮಯದಲ್ಲಿ ಈ ಯಾತ್ರೆ ಕೈಗೊಳ್ಳುವುದು ತುಂಬ ಅನುಕೂಲವಾಗಲಿದೆ. ಏಕೆಂದರೆ ಉಳಿದ ಸಮಯದಲ್ಲಿ ಚಳಿಗಾಲದ ಕಾರಣ ದಡ್ಡ ಮಂಜು ಕವಿದಿರುತ್ತದೆ. ಹಿಮದ ಕಾರಣದಿಂದಾಗಿ ಪ್ರಯಾಣ ಅಷ್ಟು ಸುಲಭವಾಗಿರುವುದಿಲ್ಲ.



Click it and Unblock the Notifications
