Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
ಮೇಷದಲ್ಲಿ ಸೆ. 4ರಿಂದ ಗುರು ವಕ್ರೀಯ ಚಲನೆ: 12 ರಾಶಿಗಳ ಮೇಲೆ ಇದರ ಪ್ರಭಾವ ಹೇಗಿರಲಿದೆ?
ಗುರುವು ಸೆಪ್ಟೆಂಬರ್ 4ಕ್ಕೆ ಮೇಷ ರಾಶಿಯಲ್ಲಿ ಹಿಮ್ಮುಖ ಚಲನೆ ಮಾಡಲಿದೆ. ಗುರು ಹಿಮ್ಮುಖ ಚಲನೆ ಮಾಡಿದಾಗ ಹಲವು ರಾಶಿಯವರು ಅನೇಕ ಸಮಸ್ಯೆಗಳನ್ನು ಎದುರಿಸಬಹುದು, ಇನ್ನು ಕೆಲವರು ರಾಶಿಯವರಿಗೆ ಒಳ್ಳೆಯದಿದೆ. ಗುರು 118 ದಿನ ಮೇಷ ರಾಶಿಯಲ್ಲಿ ಹಿಮ್ಮುಖ ಚಲನೆ ಮಾಡಲಿದೆ. ಇದರ ಪ್ರಭಾವ 12 ರಾಶಿಗಳ ಮೇಲೆ ಹೇಗಿರಲಿದೆ ಎಂದು ನೋಡೋಣ ಬನ್ನಿ:

ಮೇಷ ರಾಶಿ
ಗುರುವು ನಿಮ್ಮ ಲಗ್ನ ಮನೆಯಲ್ಲಿ ಹಿಮ್ಮೆಟ್ಟುತ್ತಾನೆ. ಗುರುಗ್ರಹವು ಲಗ್ನದಲ್ಲಿ ಹಿಮ್ಮುಖವಾಗಿದ್ದಾಗ ನೀವು ಗೊಂದಲಕ್ಕೊಳಗಾಗಬಹುದು. ಸ್ವಂತ ನಿರ್ಧಾರಗಳನ್ನು ತೆಗೆದುಕೊಳ್ಳಲು ಕಷ್ಟವಾಗಬಹುದು. ನಿಮ್ಮ ಆರೋಗ್ಯದ ಬಗ್ಗೆ ನೀವು ಗಮನ ಹರಿಸಬೇಕಾಗುವುದು. ಗುರುವಿನ ಹಿಮ್ಮುಖ ಅವಧಿಯಲ್ಲಿ ನಿಮ್ಮ ತಂದೆಗೆ ಹಳೆಯ ಕಾಯಿಲೆ ಮರುಕಳಿಸುವ ಸಾಧ್ಯತೆ ಇದೆ.
ಈ ಅವಧಿಯಲ್ಲಿ ಧನಹಾನಿ ಅಥವಾ ಔಷಧಗಳಿಗೆ ಅನಗತ್ಯ ವೆಚ್ಚವಾಗುವ ಸಂಭವವಿದೆ. ಈ ಸಮಯದಲ್ಲಿ, ತಂದೆ, ಗುರು ಮತ್ತು ಧರ್ಮದ ಕಡೆಗೆ ನಿಮ್ಮ ಜವಾಬ್ದಾರಿಯನ್ನು ಪೂರೈಸುವ ಅವಕಾಶವನ್ನು ನೀವು ಪಡೆಯುತ್ತೀರಿ. ನಿಮ್ಮ ಇಷ್ಟಾರ್ಥಗಳು ಈಡೇರುತ್ತವೆ. ವಿದೇಶದಲ್ಲಿ ಓದಲು ಬಯಸುವ ವಿದ್ಯಾರ್ಥಿಗಳಿಗೆ ಈ ಸಮಯ ವಿಶೇಷವಾಗಿರುತ್ತದೆ. ವಿವಾಹಿತರು ತಮ್ಮ ವೈವಾಹಿಕ ಜೀವನದಲ್ಲಿ ತಪ್ಪುಗಳಾಗದಂತೆ ಎಚ್ಚರವಹಿಸಿ. ನಿಮ್ಮ ಹಣಕಾಸಿನ ನಷ್ಟಗಳು ಮತ್ತು ವೆಚ್ಚಗಳ ಬಗ್ಗೆಯೂ ನೀವು ಯೋಚಿಸ ಬೇಕು.
ಪರಿಹಾರ: ಪ್ರತಿದಿನ ಗುರು ಬೀಜ ಮಂತ್ರಪಠಿಸಿ.
ವೃಷಭ ರಾಶಿ
ಗುರು ನಿಮ್ಮ ಹನ್ನೆರಡನೇ ಮನೆಯಲ್ಲಿ ಹಿಮ್ಮುಖವಾಗುತ್ತದೆ. ಗುರು ಗ್ರಹವು ಶುಕ್ರನೊಂದಿಗೆ ಪ್ರತಿಕೂಲ ಸಂಬಂಧವನ್ನು ಹೊಂದಿದೆ, ಆದ್ದರಿಂದ ಮೇಷ ರಾಶಿಯಲ್ಲಿ ಗುರು ಹಿಮ್ಮೆಟ್ಟುವಿಕೆ ವೃಷಭ ರಾಶಿಯವರಿಗೆ ಅನುಕೂಲಕರವಲ್ಲ. ಈ ಹಿಮ್ಮೆಟ್ಟುವಿಕೆಯು ನಿಮಗೆ ಯಕೃತ್ತಿನ ಅಸ್ವಸ್ಥತೆಗಳು, ಮಧುಮೇಹ ಅಥವಾ ಮಹಿಳೆಯರಲ್ಲಿ ಹಾರ್ಮೋನುಗಳ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡಬಹುದು. ಅಂತಹ ಪರಿಸ್ಥಿತಿಯಲ್ಲಿ, ನಿಮ್ಮ ಆರೋಗ್ಯದ ಬಗ್ಗೆ ಜಾಗರೂಕರಾಗಿರಿ, ಹಣಕಾಸಿನ ಹೂಡಿಕೆ ಮಾಡುವಾಗ ಜಾಗ್ರತೆವಹಿಸಿ. ಈ ಅವಧಿಯಲ್ಲಿ ನಿಮ್ಮ ವೃತ್ತಿ ಜೀವನದ ಕಡೆ ಹೆಚ್ಚಿನ ಗಮನಹರಿಸಬೇಕು. ಹೊಸ ಮನೆ ಅಥವಾ ಆಸ್ತಿ ಖರೀದಿಸಲು ಬಯಸುವುದಾದರೆ ಸ್ವಲ್ಪ ಕಾಯುವುದು ಒಳ್ಳೆಯದು.
ಪರಿಹಾರ: ಗುರುವಾರದಂದು ಶ್ರೀವಿಷ್ಣುವನ್ನು ಆರಾಧಿಸಿ.
ಮಿಥುನ ರಾಶಿ
ಮಿಥುನ ರಾಶಿಯಲ್ಲಿ 11ನೇ ಮನೆಯಲ್ಲಿ ಹಿಮ್ಮುಖವಾಗಿ ಚಲಿಸಲಿದೆ. ಪಾಲುದಾರಿಕೆಯಲ್ಲಿ ವ್ಯಾಪಾರ ಮಾಡುವವರಿಗೆ ಈ ಸಮಯವು ತುಂಬಾ ಕಷ್ಟಕರವಾಗಿರುತ್ತದೆ. ಈ ಸಮಯದಲ್ಲಿ ನಿಮ್ಮ ಪಾಲುದಾರರೊಂದಿಗೆ ಹೂಡಿಕೆ ಅಥವಾ ಲಾಭದ ಕುರಿತು ಭಿನ್ನಾಭಿಪ್ರಾಯ ಉಂಟಾಗುವ ಸಾಧ್ಯತೆ ಇದೆ. ಕೆಲಸದಲ್ಲಿ ಬೇರೆಯವರ ಪ್ರಭಾವದಿಂದ ನಿಮ್ಮ ನಡುವೆ ತಪ್ಪು ತಿಳುವಳಿಕೆ ಉಂಟಾಗುವ ಸಾಧ್ಯತೆ ಇದೆ. ಈ ವಿಚಾರದಲ್ಲಿ ನೀವು ಜಾಗರೂಕರಾಗಿರಬೇಕು. ಮೇಷ ರಾಶಿಯ ಹಿಮ್ಮುಖ ಅವಧಿಯಲ್ಲಿ ಗುರುವು ನಿಮ್ಮ ಶಿಕ್ಷಣ ಅಥವಾ ಉನ್ನತ ಶಿಕ್ಷಣ ಮತ್ತು ವೈವಾಹಿಕ ನಿರ್ಧಾರಗಳನ್ನು ಪುನರ್ವಿಮರ್ಶಿಸುವಂತೆ ಮಾಡುವುದು. ವಿವಾಹಿತರು ತಮ್ಮ ವೈವಾಹಿಕ ಜೀವನದಲ್ಲಿ ಮಾಡಿದ ತಪ್ಪು ಸರಿಪಡಿಸುವತ್ತ ಗಮನಹರಿಸುತ್ತೀರಿ.
ಪರಿಹಾರ: ಗುರುವಾರದಂದು ಹಸುಗಳಿಗೆ ಬೆಲ್ಲ ಹಾಕಿದ ಹಿಟ್ಟನ್ನು ನೀಡಿ.
ಕರ್ಕ ರಾಶಿ
ಕರ್ಕ ರಾಶಿಯಲ್ಲಿ ಹತ್ತನೇ ಮನೆಯಲ್ಲಿ ಹಿಮ್ಮುಖವಾಗಲಿದೆ. ಈ ಅವಧಿಯಲ್ಲಿ ವೃತ್ತಿಪರ ಜೀವನದಲ್ಲಿ ಹಲವಾರು ಬದಲಾವಣೆಗಳು ಆಗಲಿದೆ. ನಿಮ್ಮ ಕೆಲಸವನ್ನು ಬದಲಾಯಿಸಲು ನೀವು ಯೋಜಿಸುತ್ತಿದ್ದರೆ, ಈ ಸಮಯವು ನಿಮಗೆ ಅನುಕೂಲಕರವಾಗಿದೆ. ಈ ಸಮಯದಲ್ಲಿ, ನಿಮ್ಮ ಕೆಲಸದ ಸ್ಥಳದಲ್ಲಿ ನೀವು ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು, ಇದರಿಂದಾಗಿ ನೀವು ಕೆಲಸವನ್ನು ಬದಲಾಯಿಸಲು ಯೋಚಿಸುತ್ತಿದ್ದರೆ ಈ ಅವಧಿ ನಿಮಗೆ ಉತ್ತಮವಾಗಿರಲಿದೆ. ಆರೋಗ್ಯದ ಬಗ್ಗೆ ಈ ಅವಧಿಯಲ್ಲಿ ಜಾಗ್ರತೆ. ನೀವು ಯಕೃತ್ತು ಅಥವಾ ಮಧುಮೇ, ಹಾರ್ಮೋನುಗಳ ಸಮಸ್ಯೆ ಹೊಂದಿದ್ದರೆ ಈ ಅವಧಿಯಲ್ಲಿ ಜಾಗ್ರತೆವಹಿಸಿ.
ಪರಿಹಾರ: ನಿತ್ಯವೂ ಶಿವನ ಆರಾಧನೆ ಮಾಡಿ.
ಸಿಂಹ ರಾಶಿ
ಸಿಂಹ ರಾಶಿಯವರಲ್ಲಿ ಗುರು 9ನೇ ಮನೆಯಲ್ಲಿ ಹಿಮ್ಮುಖವಾಗಲಿದೆ. ಈ ಅವಧಿಯಲ್ಲಿ ನಿಮ್ಮ ತಂದೆಯೊಂದಿಗೆ ಭಿನ್ನಾಭಿಪ್ರಾಯ ಉಂಟಾಗಬಹುದು. ನೀವು ಅವರ ಆರೋಗ್ಯದ ಕಡೆಗೆ ಅಧಿಕ ಗಮನ ಹರಿಸಬೇಕು. ಮಗುವನ್ನು ಅಪೇಕ್ಷಿತ ದಂಪತಿ ಈ ಅವಧಿಯಲ್ಲಿ ಉತ್ತಮ ವೈದ್ಯರನ್ನು ಕಂಡರೆ ನಿಮ್ಮ ಸಮಸ್ಯೆ ಪರಿಹಾರ ಸಿಗಲಿದೆ. ಪ್ರೇಮಿಗಳು ಈ ಅವಧಿಯಲ್ಲಿ ಕೆಲ ಸಮಸ್ಯೆ ಎದುರಿಸಬಹುದು. ವಿದ್ಯಾರ್ಥಿಗಳು ಈ ಅವಧಿಯಲ್ಲಿ ಹೊಸದನ್ನು ಕಲಿಯಬಹುದು.
ಪರಿಹಾರ: ನಿರ್ಗತಿಕ ಅಥವಾ ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕಾಗಿ ದೇಣಿಗೆ ನೀಡಿ.
ಕನ್ಯಾ ರಾಶಿ
ಕನ್ಯಾ ರಾಶಿಯ ಎಂಟನೇ ಮನೆಯಲ್ಲಿ ಗುರು ಹಿಮ್ಮುಖ ಚಲನೆ ಮಾಡಲಿದೆ. ಈ ಅವಧಿಯಲ್ಲಿ ವೈವಾಹಿಕ ಜೀವನದ ಕಡೆ ಅಧಿಕ ಗಮನಹರಿಸಬೇಕು. ಈ ವರ್ಷ ಮದುವೆಯಾಗಲು ಬಯಸುವವರು ಎಲ್ಲಾ ರೀತಿಯಲ್ಲಿ ಆಲೋಚಿಸಿ ತೀರ್ಮಾನ ತೆಗೆದುಕೊಳ್ಳಿ, ನೀವು ವಿವಾಹವಾಗುವ ವ್ಯಕ್ತಿಯ ಬಗ್ಗೆ ಚೆನ್ನಾಗಿ ವಿಚಾರಿಸಿ ನಂತರ ಮದುವೆ ಮಾತುಕತೆ ನಡೆಸಿ. ಮನೆ ಕಟ್ಟಲು ಯೋಚಿಸುತ್ತಿದ್ದರೆ ಸ್ವಲ್ಪ ಕಾಯಿರಿ. ಹೂಡಿಕೆಯಿಂದ ಲಾಭ ಗಳಿಸುವಿರಿ.
ಪರಿಹಾರ: ಈ ಅವಧಿಯಲ್ಲಿ ಮನೆಯಲ್ಲಿ ಸತ್ಯ ನಾರಾಯಣನ ಪೂಜೆ ಮಾಡಿ.
ತುಲಾ ರಾಶಿ
ತುಲಾ ರಾಶಿಯವರಲ್ಲಿ ಗುರು ಏಳನೇ ಮನೆಯಲ್ಲಿ ಹಿಮ್ಮುಖವಾಗಿದೆ. ಈ ಅವಧಿಯಲ್ಲಿ ವೈವಾಹಿಕ ಜೀವನದಲ್ಲಿ ಕೆಲ ಸಮಸ್ಯೆಗಳು ಎದುರಾಗಬಹುದು. ಇದರಿಂದ ನಿಮ್ಮ ಧೈರ್ಯ ಮತ್ತು ಆತ್ಮವಿಶ್ವಾಸವೂ ಕಡಿಮೆಯಾಗುವ ಸಾಧ್ಯತೆ ಇದೆ. ವಿವಾಹಿತರು ತಮ್ಮ ವೈವಾಹಿಕ ಜೀವನದಲ್ಲಿ ಮಾಡಿದ ತಪ್ಪುಗಳನ್ನು ಸರಿಪಡಿಸಲು ಮತ್ತು ಸಮಸ್ಯೆಗಳನ್ನು ಪರಿಹರಿಸಲು ಪ್ರಯತ್ನಿಸಬೇಕು. ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಬೇಡ. ಮೇಷ ರಾಶಿಯಲ್ಲಿ ಗುರುವಿನ ಹಿನ್ನಡೆಯ ಅವಧಿಯಲ್ಲಿ ನಿಮ್ಮ ಕಿರಿಯ ಸಹೋದರ ಅಥವಾ ಸಹೋದರಿಯೊಂದಿಗಿನ ನಿಮ್ಮ ಸಂಬಂಧವು ಹದಗೆಡುವ ಸಾಧ್ಯತೆಯಿದೆ. ಅವರನ್ನು ನೀವು ಅರ್ಥಮಾಡಿಕೊಳ್ಳಲು ಪ್ರಯತ್ನಿಸಬೇಕು ಇದರಿಂದ ನಿಮ್ಮಿಬ್ಬರ ನಡುವಿನ ಭಿನ್ನಾಭಿಪ್ರಾಯಗಳನ್ನು ಪರಿಹರಿಸಬಹುದು.
ಪರಿಹಾರ: ಗುರುವಾರ ಗುರು ಬೀಜ ಮಂತ್ರ ಪಠಿಸಿ.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯವರಲ್ಲಿ ಗುರು 6ನೇ ಮನೆಯಲ್ಲಿ ಹಿಮ್ಮುಖ ಚಲನೆಯಲ್ಲಿದೆ. ಈ ಅವಧಿಯಲ್ಲಿ ಕುಟುಂಬದಲ್ಲಿ ಅನೇಕ ಸಮಸ್ಯೆಗಳು ಇರಲಿದೆ. ಮಕ್ಕಳನ್ನು ಬೆಳೆಸುವಲ್ಲಿ ಪೋಷಕರು ಸವಾಲುಗಳನ್ನು ಎದುರಿಸುತ್ತೀರಿ. ಆರೋಗ್ಯದ ಕಡೆ ಹೆಚ್ಚಿನ ಗಮನಹರಿಸಬೇಕು, ಮಕ್ಕಳ ಶಿಕ್ಷಣದ ಚಿಂತೆ ಕೂಡ ಕಾಡುವುದು. ನೀವು ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದರೆ ಹೆಚ್ಚಿನ ಶ್ರಮಹಾಕಬೇಕಾಗಿದೆ. ಈ ಅವಧಿಯಲ್ಲಿ ಮಾತನಾಡುವಾಗ ತುಂಬಾನೇ ಎಚ್ಚರವಹಿಸಬೇಕು. ಉಳಿತಾಯದ ಕಡೆ ಗಮನಹರಿಸಿ.
ಪರಿಹಾರ: ಬೃಹಸ್ಪತಿ ಬೀಜ ಮಂತ್ರವನ್ನು ಪ್ರತಿದಿನ 108 ಬಾರಿ ಜಪಿಸಿ.
ಧನು ರಾಶಿ
ಗುರುವು 5ನೇ ಮನೆಯಲ್ಲಿ ಹಿಮ್ಮುಖ ಚಲನೆಯಲ್ಲಿದೆ. ಗುರುವು ಮೇಷ ರಾಶಿಯಲ್ಲಿ ಹಿಮ್ಮೆಟ್ಟಿಸಿದಾಗ, ನಿಮ್ಮ ಆರೋಗ್ಯದ ಬಗ್ಗೆ ನೀವು ಗಮನ ಹರಿಸಬೇಕು. ಈ ಅವಧಿಯಲ್ಲಿ ತಾಯಿಯ ಆರೋಗ್ಯದ ಕಡೆಗೆ ಗಮನಹರಿಸಿ. ಮಗು ಅಪೇಕ್ಷಿತ ದಂಪತಿಗೆ ಸಿಹಿ ಸುದ್ದಿ ಸಿಗಲಿದೆ. ಪ್ರೇಮ ಜೀವನದಲ್ಲಿ ಕೆಲ ಮನಸ್ತಾಪಗಳು ಬರಬಹುದು. ಧನು ರಾಶಿಯ ವಿದ್ಯಾರ್ಥಿಗಳು ತಮ್ಮ ಅಧ್ಯಯನಕ್ಕೆ ಸಂಬಂಧಿಸಿದ ನಿರ್ಧಾರಗಳ ಬಗ್ಗೆ ಮತ್ತೊಮ್ಮೆ ಯೋಚಿಸಲು ಅವಕಾಶವನ್ನು ಪಡೆಯುತ್ತಾರೆ.
ಪರಿಹಾರ: ಗುರುವಾರದಂದು ನಿಮ್ಮ ತೋರು ಬೆರಳಿಗೆ ನೀಲಮಣಿ ರತ್ನವಿರುವ ಚಿನ್ನದ ಉಂಗುರ ಧರಿಸಿ.
ಮಕರ ರಾಶಿ
ಮಕರ ರಾಶಿಯಲ್ಲಿ ಗುರು 4ನೇ ಮನೆಯಲ್ಲಿ ಹಿಮ್ಮುಖವಾಗಿದೆ. ಈ ಅವಧಿಯಲ್ಲಿ ನೀವು ತಾಯಿ ಬಗ್ಗೆ ವಿಶೇಷ ಕಾಳಜಿವಹಿಸಿ. ಮೇಷ ರಾಶಿಯಲ್ಲಿ ಗುರುವಿನ ಹಿಮ್ಮುಖ ಅವಧಿಯು ನೀವು ಹಿಂದೆ ಮಾಡಿದ ತಪ್ಪುಗಳನ್ನು ಸರಿಪಡಿಸುವ ಅವಕಾಶವನ್ನು ನೀಡುತ್ತದೆ. ನೀವು ಹೊಸ ಮನೆ ಇತ್ಯಾದಿಗಳನ್ನು ಖರೀದಿಸುವ ಆಲೋಚನೆಯಲ್ಲಿದ್ದರೆ, ಸ್ವಲ್ಪ ಸಮಯ ಕಾಯಿರಿ. ನಿಮ್ಮ ಹಣಕಾಸಿನ ನಿರ್ಧಾರಗಳು ಮತ್ತು ಹಿಂದೆ ಮಾಡಿದ ಹೂಡಿಕೆಗಳನ್ನು ಸಹ ನೀವು ಮರುಪರಿಶೀಲಿಸಬೇಕು.
ಪರಿಹಾರ: ಗುರುವಾರದಂದು ಬಾಳೆಗಿಡಕ್ಕೆ ನೀರು ಹಾಕಿ.
ಕುಂಭ ರಾಶಿ
ಕುಂಭ ರಾಶಿಯಲ್ಲಿ ಗುರು 3ನೇ ಮನೆಯಲ್ಲಿ ಹಿಮ್ಮುಖ ಚಲನೆಯಲ್ಲಿದೆ. ಗುರುವು ನಿಮ್ಮ ಹಣಕಾಸಿನ ಮೇಲೆ ಪರಿಣಾಮ ಬೀರುತ್ತದೆ. ಉಳಿತಾಯ ಮತ್ತು ಹೂಡಿಕೆಯ ವಿಷಯದಲ್ಲಿ ಸ್ವಲ್ಪ ಜಾಗರೂಕರಾಗಿರಿ. ಹೂಡಿಕೆಯು ಲಾಭವನ್ನು ನೀಡುತ್ತಿದ್ದರೂ ಅಷ್ಟೇ ಖರ್ಚು ಬರಲಿದೆ. ಬಡ್ತಿಗಾಗಿ ಕಾಯುತ್ತಿರುವವರು ಇನ್ನೂ ಕಾಯಬೇಕು. ಈ ಅವಧಿಯಲ್ಲಿ ಮಾತಿನ ಮೇಲೆ ಹಿಡಿತವಿರಲಿ, ನಿಮ್ಮ ವರ್ತನೆ ನಿಮ್ಮ ಆಪ್ತರ ಮನಸ್ಸಿಗೆ ನೋವಾಗದಂತೆ ಎಚ್ಚರವಹಿಸಿ.
ಪರಿಹಾರ: ಸಾಧ್ಯವಾದರೆ ಗುರುವಾರ ಉಪವಾಸ ಮಾಡಿ.
ಮೀನ ರಾಶಿ
ಗುರುವು ನಿಮ್ಮ ಎರಡನೇ ಮನೆಯಲ್ಲಿ ಹಿಮ್ಮುಖ ಚಲನೆಯಲ್ಲಿದೆ. ಗುರು ಹಿಮ್ಮೆಟ್ಟುವುದರಿಂದ ನಿಮ್ಮ ಆರೋಗ್ಯಕ್ಕೆ ಹಾನಿಯಾಗುವ ಸಂಭವವಿದೆ. ನಿಮ್ಮ ಆರೋಗ್ಯವನ್ನು ಗಂಭೀರವಾಗಿ ಪರಿಗಣಿಸುವುದು ಉತ್ತಮ. ಗುರುವು ನಿಮ್ಮ ಹತ್ತನೇ ಮನೆಗೆ ಅಧಿಪತಿಯಾಗಿದ್ದಾನೆ, ಆದ್ದರಿಂದ ಮೇಷ ರಾಶಿಯಲ್ಲಿ ಗುರುವಿನ ಹಿಮ್ಮುಖ ಚಲನೆ ನಿಮ್ಮ ವೃತ್ತಿಪರ ಜೀವನದಲ್ಲಿ ಬದಲಾವಣೆಯಯನ್ನು ತರಬಹುದು. ನೀವು ಉದ್ಯೋಗ ಅಥವಾ ವೃತ್ತಿಯನ್ನು ಬದಲಾಯಿಸುವ ಬಗ್ಗೆ ಯೋಚಿಸುತ್ತಿದ್ದರೆ, ಈ ಸಮಯವು ನಿಮಗೆ ಉತ್ತಮವಾಗಿರುತ್ತದೆ. ಈ ಸಮಯದಲ್ಲಿ ದುಂದುಗಾರಿಕೆಯನ್ನು ತಪ್ಪಿಸಿ.
ಪರಿಹಾರ: ಹಳದಿ ಬಣ್ಣದ ಕರವಸ್ತ್ರವನ್ನು ಸದಾ ನಿಮ್ಮ ಬಳಿ ಇಟ್ಟುಕೊಳ್ಳಿ.



Click it and Unblock the Notifications











