Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ಜೂನ್ 17, ಶನಿ ಅಮವಾಸ್ಯೆಯಂದೇ ಕಾಕತಾಳೀಯವಾಗಿ 3 ಘಟನೆ ಸಂಭವಿಸಲಿದೆ: ಇದರ ಪ್ರಭಾವ ಹೇಗಿರಲಿದೆ ಗೊತ್ತಾ?
ಶನಿವಾರ ಅಮವಾಸ್ಯೆ ಬಂದಿದೆ. ಈ ರೀತಿ ಶನಿವಾರ ಅಮವಾಸ್ಯೆ ಬಂದರೆ ಶನಿ ಅಮವಾಸ್ಯೆ ಎಂದು ಕರೆಯಲಾಗುವುದು. ವೈದಿಕ ದೃಷ್ಟಿಯಿಂದ ಶನಿ ಅಮವಾಸ್ಯೆ ತುಂಬಾನೇ ಮಹತ್ವವಾದ ದಿನವಾಗಿದೆ. ಶನಿವಾರ ಶನಿದೇವನ ಪೂಜೆಗೆ ಮೀಸಲಾದ ದಿನ, ಆ ದಿನ ಅಮವಾಸ್ಯೆ ಬಂದರೆ ಶನಿ ದೇವನ ಪೂಜೆಗೆ ಮತ್ತಷ್ಟು ಶ್ರೇಷ್ಠವಾದ ದಿನವೆಂದು ಪರಿಗಣಿಸಲಾಗಿದೆ. ಅದರಲ್ಲೂ ಈ ಬಾರಿಯ ಅಮವಾಸ್ಯೆ ಹಲವು ವಿಶೇಷತೆಗಳಿಂದ ಕೂಡಿದ್ದು ಕಾಕತಾಳೀಯವಾಗಿ ಹಲವು ಪ್ರಮುಖ ಘಟನೆಗಳು ಒಂದೇ ದಿನ ಘಟಿಸಲಿದೆ. ಈ ಕಾರಣಕ್ಕೆ ಜೂನ್ 17ಕ್ಕೆ ತುಂಬಾನೇ ಪ್ರಮುಖವಾಗಿದೆ.

ಜೂನ್ 17ರ ಶನಿವಾರ ತುಂಬಾನೇ ಪ್ರಾಮುಖ್ಯಯಿಂದ ಕೂಡಿದೆ ಏಕೆ?
* ಶನಿ ಅಮವಾಸ್ಯೆಯಂದೇ ಶನಿದೇವ ಕುಂಭ ರಾಶಿಯಲ್ಲಿ ವಕ್ರೀಯವಾಗಿ ಚಲಿಸಲಿದೆ. 30 ವರ್ಷಗಳ ಬಳಿಕ ಶನಿಯು ವಕ್ರೀಯವಾಗಿ ಚಲಿಸಲಿದೆ.
* ಇದೇ ದಿನ ತ್ರಿಕೋನ ರಾಜಯೋಗ ಮತ್ತು ಶಶರಾಜಯೋಗವು ರೂಪುಗೊಳ್ಳುತ್ತದೆ
* ಈ ದಿನ ಸರ್ವಾರ್ಥ ಸಿದ್ಧಿ ಮತ್ತು ಅಮೃತ ಸಿದ್ಧಿ ಯೋಗವೂ ರೂಪಗೊಳ್ಳಲಿದೆ.
ಕುಂಭ ರಾಶಿಯಲ್ಲಿ ಶನಿ ವಕ್ರೀಯ ಚಲನೆ: ವೈದಿಕ ದೃಷ್ಟಿಯಿಂದ ಶನಿಯ ವಕ್ರೀಯ ಚಲನೆಗೆ ತುಂಬಾನೇ ಮಹತ್ವವಿದೆ. 30 ವರ್ಷಗಳ ನಂತರ ಶನಿಯು ಕುಂಭ ರಾಶಿಯಲ್ಲಿ ಹಿಮ್ಮುಖ ಚಲನೆಯಲ್ಲಿ ಚಲಿಸಲಿದೆ. ನವೆಂಬರ್ 4ರವರೆಗೆ ಶನಿಯು ಕುಂಭ ರಾಶಿಯಲ್ಲಿ ಹಿಮ್ಮುಖ ಚಲನೆಯಲ್ಲಿ ಇರಲಿದ್ದು ನಂತರ ಮಾರ್ಗಿಯಾಗಲಿದೆ. ಈ ಅವಧಿಯಲ್ಲಿ ಶನಿಯು ದ್ವಾದಶ ರಾಶಿಗಳ ಮೇಲೆ ಪ್ರಭಾವ ಬೀರಲಿದೆ. ನಾಲ್ಕು ತಿಂಗಳು ಶನಿಯು ಹಿಮ್ಮುಖ ಚಲನೆಯಲ್ಲಿ ಇದ್ದಾಗ ದೇಶ ಹಾಗೂ ಪ್ರಪಂಚದ ಮೇಲೆ ಹಲವು ರೀತಿಯಲ್ಲಿ ಪ್ರಭಾವ ಬೀರಲಿದೆ. ಹವಾಮಾನದಲ್ಲಿ ತುಂಬಾನೇ ಬದಲಾವಣೆ ಆಗಲಿದೆ. ರಾಜಕೀಯ ಕ್ಷೇತ್ರದಲ್ಲೂ ಅನೇಕ ಬದಲಾವಣೆಗಳು ಕಂಡು ಬರಲಿದೆ.
ತ್ರಿಕೋನ ರಾಜಯೋಗ ಮತ್ತು ಶಶರಾಜಯೋಗ: ಈ ದಿನ ತ್ರಿಕೋನ ರಾಜಯೋಗ ಮತ್ತು ಶಶರಾಜಯೋಗ ಏರ್ಪಡುವುದರಿಂದ ಶನಿ ಸಾಡೇಸಾತಿ, ಶನಿ ಧೈಯ್ಯ ಇರುವವರು ಶನಿ ದೇವನಿಗೆ ಪರಿಹಾರ ಮಾಡುವುದರಿಂದ ಸಂಕಷ್ಟಗಳು ಕಡಿಮೆಯಾಗಲಿದೆ. ಅಲ್ಲದೆ ಈ ದಿನ ಸರ್ವಾರ್ಥ ಸಿದ್ಧಿ ಮತ್ತು ಅಮೃತ ಸಿದ್ಧಿ ಯೋಗವೂ ರೂಪಗೊಂಡಿರುವುದರಿಂದ ಈ ದಿನ ಪೂಜಾ ಕಾರ್ಯಗಳಿಗೆ ತುಂಬಾನೇ ಶುಭವಾಗಿದೆ. ಈ ದಿನದಲ್ಲಿ ಪೂಜೆ ಮಾಡುವುದರಿಂದ ಹೆಚ್ಚಿನ ಫಲ ಸಿಗಲಿದೆ.
ಪಿತೃದೋಷಕ್ಕೆ ಪರಿಹಾರ
ಈ ದಿನ ಪಿತೃದೋಷಕ್ಕೆ ಪರಿಹಾರ ಮಾಡಲು ಕೂಡ ಈ ದಿನ ತುಂಬಾನೇ ಶ್ರೇಷ್ಠವಾಗಿದೆ. ಈ ದಿನ ಪಿತೃಗಳನ್ನು ತೃಪ್ತಿ ಪಡಿಸುವುದರಿಂದ ಪಿತೃದೋಷದಿಂದ ಮುಕ್ತರಾಗಬಹುದು. ಈ ದಿನ ಬಡವರಿಗೆ ದಾನ ಮಾಡಿ. ಹಿರಿಯರನ್ನು ಗೌರವಿಸಿ.
ಈ ಪರಿಹಾರ ಮಾಡಿ
* ಶನಿ ಅಮಾವಾಸ್ಯೆಯ ದಿನದಂದು ಹನುಮಂತನಿಗೆ ತುಳಸಿ ಮಾಲೆಯನ್ನು ಅರ್ಪಿಸಬೇಕು. ಇದನ್ನು ಮಾಡುವುದರಿಂದ ಹನುಮಾನ್ನ ಕೃಪೆಗೆ ಪಾತ್ರರಾಗುವಿರಿ, ಇದರಿಂದ ಶನಿಯ ಅಶುಭ ಪರಿಣಾಮಗಳು ಕಡಿಮೆಯಾಗುವುದು.
* ಹನುಮಾನ್ ಚಾಲೀಸಾ ಪಠಿಸಿ.
* ಹನುಮಂತನಿಗೆ ಕುಂಕುಮವನ್ನು ಅರ್ಪಿಸಿ ಪೂಜೆ ಮಾಡಿ.
* ಈ ದಿನ ಕಪ್ಪು ಎಳ್ಳು ಹಾಗೂ ಉದ್ದು ದಾನ ಮಾಡಿ
* ಶನಿ ಮಂತ್ರಗಳನ್ನು ಪಠಿಸಿ.
ಶನಿಗೆ ಪರಿಹಾರ ಮಾಡುವುದರಿಂದ ಸಾಡೇಸಾತಿ ಮತ್ತು ಶನಿಧೈಯ್ಯ ಇರುವವರಿಗೆ ಶನಿಯ ಕೆಟ್ಟ ಪ್ರಭಾವ ಕಡಿಮೆಯಾಗಲಿದೆ.



Click it and Unblock the Notifications
