Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಜುಲೈ ಮಾಸದಲ್ಲಿರುವ ಪ್ರಮುಖ ಆಚರಣೆಗಳು, ವ್ರತಗಳ ಬಗ್ಗೆ ಸಂಪೂರ್ಣ ಮಾಹಿತಿ
ವರ್ಷದ ಅರ್ಧ ವರ್ಷ ಕಳೆದಾಯ್ತು ಜುಲೈ ಮಾಸ ಶುರುವಾಗಲಿದೆ, ಜುಲೈ ಮಾಸದಲ್ಲಿ ಆಷಾಢ ಕೂಡ ಇದೆ, ಈ ಜುಲೈ ಮಾಸ ಧಾರ್ಮಿಕ ದೃಷ್ಟಿಯಿಂದಲೂ ಮಹತ್ವದ್ದಾಗಿದೆ, ಈ ಮಾಸದಲ್ಲಿ ಬರುವ ಹಬ್ಬಗಳು, ವ್ರತಗಳ ಬಗ್ಗೆ ಮಾಹಿತಿ ಇಲ್ಲಿದೆ:

ಜುಲೈ ಮಾಸದಲ್ಲಿ ಬರುವ ಹಬ್ಬಗಳು, ವ್ರತಗಳು
ಜುಲೈ 2, ಮಂಗಳವಾರ ಯೋಗಿನಿ ಏಕಾದಶಿ
ಜುಲೈ 7, ಭಾನುವಾರ, ಜಗ್ನನಾಥ ರಥ ಯಾತ್ರೆ ಪ್ರಾರಂಭ
ಜುಲೈ 16, ಮಂಗಳವಾರ: ಕರ್ಕ ಸಂಕ್ರಾಂತಿ
ಜುಲೈ 21, ಭಾನುವಾರ: ಗುರು ಪೂರ್ಣಿಮಾ
ಯೋಗಿನಿ ಏಕಾದಶಿ
ಯೋಗಿನಿ ಏಕಾದಶಿ ಆಚರಣೆ ಮಾಡುವುದರಿಂದ ನಮ್ಮೆಲ್ಲಾ ಪಾಪಗಳು ನಿರ್ಮೂಲನೆಯಾಗುವುದು, ಜೀವನದಲ್ಲಿ ಸಂತೋಷ, ಸಮೃದ್ಧಿ ಹೆಚ್ಚಾಗುವುದು. ಈ ಏಕಾದಶಿ ಆಚರಣೆ ಮಾಡುವುದರಿಂದ ನೂರು ಬ್ರಾಹ್ಮಣರಿಗೆ ದಾನ ಮಾಡಿದ ಪುಣ್ಯ ಸಿಗುವುದು. ಯಾರು ಈ ಏಕಾದಶಿಯನ್ನು ಆಚರಣೆ ಮಾಡುತ್ತಾರೋ ಅವರು ಸಾವಿನ ನಂತರ ಮೋಕ್ಷ ಪಡೆಯುತ್ತಾರೆ ಎಂದು ಹೇಳಲಾಗುವುದು.
ಯೋಗಿನಿ ಏಕಾದಶಿಯ ಬೆಳಗ್ಗೆ ಬೇಗ ಎದ್ದು ಸ್ನಾನ ಮಾಡಿ ಹಳದಿ ಬಟ್ಟೆ ಧರಿಸಬೇಕು, ಶ್ರೀ ವಿಷ್ಣುವಿನ ಫೋಟೋ ಅಥವಾ ಮೂರ್ತಿಗಳನ್ನು ತೊಳೆದು ಅಲಂಕರಿಸಿ, ನಂತರ ಹಳದಿ ಬಣ್ಣದ ಹೂವುಗಳನ್ನು ಅರ್ಪಿಸಿ. ಈ ದಿನ ಓಂ ಭಗವತೇ ವಾಸುದೇವಾಯ ನಮಃ ಎಂದು ಪಠಿಸಿ.
ಪುರಿ ಜಗ್ನನಾಥ ರಥ ಯಾತ್ರೆ
ವಿಶ್ವ ಪ್ರಸಿದ್ಧ ಪುರಿ ಜಗ್ನನಾಥ ರಥ ಯಾತ್ರೆಗೆ 5000 ವರ್ಷಗಳ ಇತಿಹಾಸವಿದೆ. ವೈಭವದ ಈ ರಥ ಯಾತ್ರೆ ಕಣ್ತುಂಬಿಕೊಳ್ಳಲು ನೂರಾರು ಜನರು ಆಗಮಿಸುತ್ತಾರೆ. ಈ ರಥ ಯಾತ್ರೆಯಲ್ಲಿ ಜಗ್ನನಾಥ, ಬಲಭಧ್ರ, ಸುಭದ್ರರನ್ನು ಬೇರೆ-ಬೇರೆ ರಥಗಳಲ್ಲಿ ಕೂರಿಸಿ ಮೆರವಣಿಗೆ ಮಾಡಲಾಗುವುದು. ಪ್ರತಿವರ್ಷ ಈ ರಥಗಳನ್ನು ಹೊಸದಾಗಿ ನಿರ್ಮಿಸಲಾಗುವುದು. ಈ ರಥಗಳಿಗೆ ಕೆಂಪು, ಹಳದಿ, ಹಸಿರು ಛತ್ರಿಗಳನ್ನು ಹೊದಿಸಲಾಗುವುದು. ಜಗ್ನನಾಥ ಸ್ವಾಮಿಯ ರಥವನ್ನು ನಂದಿಘೋಷ್ ಅಥವಾ ಚಕ್ರಧ್ವಜ ಎಂದು ಕರೆಯಲಾಗುವುದು. ಜಗ್ನನಾಥವನ್ನು ಕೊಂಡೊಯ್ಯುವ ರಥ 65 ಟನ್ ಭಾರವಿರುತ್ತದೆ.
ಕರ್ಕ ಸಂಕ್ರಾಂತಿ
ಸೂರ್ಯನು ಪ್ರತಿ ಮಾಸ ರಾಶಿ ಬದಲಾವಣೆ ಮಾಡುತ್ತಾರೆ, ಸೂರ್ಯನು ಮಿಥುನ ರಾಶಿಯಿಂದ ಕರ್ಕ ರಾಶಿಗೆ ಸಂಚರಿಸಿದಾಗ ಕರ್ಕ ಸಂಕ್ರಾಂತಿ ಉಂಟಾಗುವುದು. ಸೂರ್ಯನು ಪ್ರತಿಯೊಂದು ರಾಶಿಯಲ್ಲಿರುವಾಗ ಅದು ದ್ವಾದಶ ರಾಶಿಗಳ ಮೇಲೆ ಬೀರುವ ಪ್ರಭಾವ ಭಿನ್ನವಾಗಿರುತ್ತದೆ. ಸೂರ್ಯ 30 ದಿನಗಳವರೆ ಕರ್ಕ ರಾಶಿಯಲ್ಲಿದ್ದು ನಂತರ ಸಿಂಹ ರಾಶಿಗೆ ಸಂಚರಿಸಲಿದೆ.
ಗುರು ಪೂರ್ಣಿಮೆ
ಈ ದಿನವನ್ನು ನಮ್ಮ ಗುರುಗಳಿಗೆ ಅರ್ಪಿಸಲಾಗಿದೆ, ಧರ್ಮಗ್ರಂಥಗಳ ಪ್ರಕಾರ ಮಹರ್ಷಿ ವೇದವ್ಯಾಸರು ಜನಿಸಿದರು. ವ್ಯಾಸರು ವೇದಗಳ ಜ್ಞಾನವನ್ನು ಈ ಮನುಕುಲಕ್ಕೆ ನೀಡಿದವರು. ಗುರು ತನ್ನ ಶಿಷ್ಯರನ್ನು ಉತ್ತಮ ದಾರಿಯಲ್ಲಿ ನಡೆಯುವಂತೆ ಮಾರ್ಗದರ್ಶನ ನೀಡುತ್ತಾರೆ. ಈ ದಿನ ದೇವರಿಗೆ ನಮಿಸಿ, ನಂತರ ಗುರುಗಳಿಗೆ ವಂದಿಸಿ ಆಶೀರ್ವಾದ ಪಡೆಯಬೇಕು.
ಜುಲೈ 2 ಯೋಗಿನಿ ಏಕಾದಶಿ
ಜುಲೈ 3, ರೋಹಿಣಿ ವ್ರತ, ಪ್ರದೋಷ ವ್ರತ
ಜುಲೈ 5, ಅಮವಾಸ್ಯೆ
ಜುಲೈ 8, ಸೋಮವಾರ ವ್ರತ'
ಜುಲೈ 17, ಶಯನಿ ಏಕಾದಶಿ
ಜಲೈ 19, ಜಯ ಪಾರ್ವತಿ ವ್ರತ
ಜುಲೈ 21, ಗುರು ಪೂರ್ಣಿಮಾ
ಜುಲೈ 31, ಕಾಮಿಕಾ ಏಕಾದಶಿ



Click it and Unblock the Notifications
