Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಹೆತ್ತ ತಾಯಿಗೆ ಅನ್ನ, ನೀರು ನೀಡದೆ ಕೂಡಿ ಹಾಕಿ ಕುಂಭಮೇಳಕ್ಕೆ ಪತ್ನಿ, ಮಕ್ಕಳು, ಅತ್ತೆ-ಮಾವ ಜೊತೆ ಹೋದ ಪಾಪಿ ಮಗ!
ಮಾಡಿರುವುದೆಲ್ಲಾ ಮಹಾಪಾಪದ ಕೆಲಸ, ನಂತರ ಕುಂಭಮೇಳಕ್ಕೆ ಹೋಗಿ ಪುಣ್ಯ ಕಟ್ಟಿಕೊಳ್ಳಲು ಬಯಸಿದ ಪಾಪಿ ಮಗನ ಕತೆಯಿದು. ಇಂಥ ಮಕ್ಕಳು ಇದ್ದಾರಾ? ಅಂತ ಕೆಲವರು ಕೇಳಬಹುದು, ಆದರೆ ಇಂಥ ಅನೇಕ ಮಕ್ಕಳಿದ್ದಾರೆ, ಇಂಥವರಿಗೆ ತಕ್ಕ ಶಿಕ್ಷೆಯಾದರೆ ಮಾತ್ರ ತಂದೆ-ತಾಯಿಗಳಿಗೆ ಹಿಂಸೆ ಕೊಡುವುದನ್ನು ಕಡಿಮೆ ಮಾಡಬಹುದು.

ಈ ಘಟನೆ ನಡೆದಿರುವುದು ಜಾರ್ಖಂಡ್‌ನಲ್ಲಿ, ಆತ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಕುಂಭಮೇಳಕ್ಕೆ ಹೋಗಿ ಗಂಗೆಯಲ್ಲಿ ಮಿಂದು ಪುಣ್ಯ ಕಟ್ಟಿಕೊಳ್ಳಲು ಬಯಸುತ್ತಾನೆ, ಇಂಥವರು ಆ ಗಂಗೆಯಲ್ಲಿ ಮುಳುಗಿದರೆ ಗಂಗೆಯೂ ಮಲೀನವಾಗುತ್ತಾಳೆ ಅಂಥ ಪಾಪಿಗಳು, ಏಕೆಂದರೆ ಈತ ತಾನು ಕುಂಭಮೇಳಕ್ಕೆ ಹೋಗಲು ತನ್ನ 65 ವರ್ಷದ ತಾಯಿಯನ್ನು ಮನೆಯೊಳಗೆ ಕೂಡಿ ಹಾಕಿ ಅನ್ನ, ನೀರು ಸಿಗದೆ ಆ ತಾಯಿ ನರಳುವಂತೆ ಮಾಡಿದ್ದಾನೆ.
ಮಗ ತನ್ನ ತಾಯಿಯನ್ನು ಮಾತ್ರ ಮನೆಯಯೊಳಗೆ ಕೂಡಿ ಹಾಕಿ ಪತ್ನಿ, ಮಕ್ಕಳು ಹಾಗೂ ಪತ್ನಿಯ ಪೋಷಕರ ಜೊತೆಗೆ ಪ್ರಯಾಗ್‌ರಾಜ್‌ಗೆ ಹೋಗಿದ್ದಾನೆ. ಮನೆಯಲ್ಲಿರುವ ತಾಯಿಗೆ ಒಂದು ಊಟದ ವ್ಯವಸ್ಥೆಯನ್ನೂ ಮಾಡಿರಲಿಲ್ಲ, ಆ ತಾಯಿಗೆ ಒಂದೆರಡು ದಿನ ಉಳಿದ ಹಳಸಿದ ಅನ್ನ ತಿಂದಿದ್ದಾಳೆ ನಂತರ ಹಸಿವು ತಡೆಯಲಾರದೆ ಜೋರಾಗಿ ಕಿರುಚುತ್ತಾಳೆ, ಆ ಶಬ್ದ ಕೇಳಿಸಿದ ನೆರೆಹೊರೆಯವರು ಬಂದು ವಿಚಾರಣೆ ಮಾಡಿದಾಗ ತಾಯಿ ಆಹಾರವಿಲ್ಲದೆ ಕಷ್ಟಪಡುತ್ತಿರುವುದು ತಿಳಿಯುತ್ತದೆ.
ನಂತರ ಆ ತಾಯಿಯ ಮಗಳಿಗೆ ವಿಷಯ ತಿಳಿಸಲಾಗುವುದು, ಪೊಲೀಸರ ಸಮೇತ ಬಂದ ಆಕೆ ತಾಯಿಯನ್ನು ರಕ್ಷಣೆ ಮಾಡ್ತಾಳೆ. ಕೂಡಲೇ ತಾಯಿಗೆ ಆಹಾರ, ಔಷಧ ನೀಡಿ ನಂತರ ಸಮೀಪದ ಆಸ್ಪತ್ರೆಗೆ ಚಿಕಿತ್ಸೆ ಕರೆದೊಯ್ಯಲಾಯ್ತು.
ಈ ಘಟನೆ ಬಗ್ಗೆ ಮಗನಿಗೆ ಹೇಳಿದಾಗ CCL(Central Coalfields Limited) ಉದ್ಯೋಗಿಯಾಗಿರುವ ಆತ, ಇಲ್ಲ ನಾನು ತಾಯಿಗೆ ಆಹಾರ ವ್ಯವಸ್ಥೆ ಮಾಡಿದ್ದೆ, ಆದರೆ ತಾಯಿ ಆ ಆಹಾರ ಮುಟ್ಟಿಲ್ಲ ಎಂಬುವುದಾಗಿ ಹೇಳುತ್ತಾನೆ. ಮಗ ದೊಡ್ಡ ಹುದ್ದೆಯಲ್ಲಿದ್ದರೂ ತನ್ನ ತಾಯಿಯನ್ನು ಸರಿಯಾಗಿ ನೋಡಿಕೊಳ್ಳದೆ ಇರುವ ವಿಷಯ ವೈರಲ್ ಆಗಿದ್ದು ಇದರಿಂದಾಗಿ ಆತ ತೀವ್ರ ಮುಜುಗರ ಪಡುವಂತಾಗಿದೆ, ಆತನಿಗೆ ಅದು ಆಗಬೇಕಾಗಿದಿದ್ದೇ....
ತಾಯಿಯನ್ನು ಜೊತೆಗೆ ಕರೆದೊಯ್ಯಲು ಸಾಧ್ಯವಾಗದೆ ಇದ್ದರೆ ಅವರಿದ್ದ ಸ್ಥಳದಿಂದ 5 ಕಿ.ಮೀ ದೂರದಲ್ಲಿರುವ ತಂಗಿಯ ಮನೆಗೆ ಕರೆದುಕೊಂಡು ಹೋಗಿ ಬಿಟ್ಟು ನಂತರ ಕುಂಭಮೇಳಕ್ಕೆ ಹೋಗಬಹುದಿತ್ತು, ಸಂಬಂಧಗಳು ಅಷ್ಟಾಗಿ ಸರಿಯಿರಲ್ಲ ಕಾಣುತ್ತೆ, ಅದೇನೆ ಇರಲಿ ಆರೋಗ್ಯ ಸರಿಯಿಲ್ಲದ ತಾಯಿಯನ್ನು ಇಷ್ಟೊಂದು ಬೇಜಾವ್ದಾರಿಯಿಂದ ಬಿಟ್ಟು ಹೋಗಿದ್ದಾನೆ, ಅವರು ಹೇಗೆ ಇರ್ತಾರೆ ಎಂಬ ಚಿಕ್ಕ ಕಲ್ಪನೆಯೂ ಆತನಿಗೆ ಬರಲಿಲ್ಲ ಕಾಣುತ್ತೆ.
ಹೆತ್ತ ತಂದೆ-ತಾಯಿಗೆ ಕಷ್ಟಕೊಟ್ಟು ಯಾವ ದೇವಾಲಯದಲ್ಲಿ ಹೋಗಿ ಕೈ ಮುಗಿದರೂ ಪುಣ್ಯ ದೊರೆಯಲ್ಲ, ಇದನ್ನು ಪ್ರತಿಯೊಬ್ಬ ಮಕ್ಕಳು ಅರೆತುಕೊಂಡರೆ ಈ ಸಮಾಜದಲ್ಲಿ ವೃದ್ಧಾಶ್ರಮ ಅವಶ್ಯಕತೆ ಬರುವುದೇ ಇಲ್ಲ ಅಲ್ವಾ?



Click it and Unblock the Notifications
