ಜಯ ಏಕಾದಶಿ: ವಿಷ್ಣುವನ್ನು ಪೂಜಿಸಿ ಪಾಪ ಕರ್ಮಗಳಿಂದ ಮುಕ್ತಿ ಹೊಂದಿ..!

ಜಯ ಏಕಾದಶಿ ಆಚರಿಸುವುದರಿಂದ ಎಲ್ಲಾ ರೀತಿಯ ಪಾಪಗಳು ಮತ್ತು ಕೆಟ್ಟ ಅಭ್ಯಾಸಗಳಿಂದ ಮುಕ್ತಿ ಸಿಗುತ್ತದೆ ಎಂದು ಪದ್ಮ ಪುರಾಣದಲ್ಲಿ ಉಲ್ಲೇಖಿಸಲಾಗಿದೆ. ಆತ ಜೀವನದಲ್ಲಿ ಎಲ್ಲಾ ಭೌತಿಕ ಮತ್ತು ಆಧ್ಯಾತ್ಮಿಕ ಸಂತೋಷವನ್ನು ಪಡೆಯುತ್ತಾನೆ. ಜಯ ಏಕಾದಶಿ ಉಪವಾಸವನ್ನು ಆಚರಿಸುವುದರಿಂದ ಮರಣಾನಂತರ ಮೋಕ್ಷವನ್ನು ಪಡೆಯುತ್ತಾನೆ ಎಂದು ನಂಬಲಾಗಿದೆ.

ಫೆಬ್ರವರಿ 20, ಮಂಗಳವಾರದಂದು ಜಯ ಏಕಾದಶಿಯ ಉಪವಾಸವನ್ನು ಆಚರಿಸಲಾಗುತ್ತದೆ. ಇಂದು ನೀವು ಸೂರ್ಯೋದಯದ ಸಮಯದಿಂದ ಶ್ರೀ ಹರಿ ವಿಷ್ಣುವನ್ನು ಪೂಜಿಸಬೇಕು, ಏಕೆಂದರೆ ಈ ಸಮಯದಲ್ಲಿ ಪ್ರೀತಿ ಯೋಗ ಮತ್ತು ರವಿ ಯೋಗ ಇರುತ್ತದೆ. ಹಾಗೆಯೇ ಈ ದಿನ ಬೆಳಗ್ಗೆ 05.14 ರಿಂದ 06.05 ರವರೆಗೆ ಬ್ರಹ್ಮ ಮುಹೂರ್ತವಿರುತ್ತದೆ. ಅಭಿಜಿತ್ ಮುಹೂರ್ತವು ಮಧ್ಯಾಹ್ನ 12:12 ರಿಂದ 12:58 ರವರೆಗೆ ಇರುತ್ತದೆ. ಈ ಸಮಯದಲ್ಲಿ ಪೂಜಿಸುವುದರಿಂದ ನೀವು ಭಗವಾನ್ ವಿಷ್ಣುವಿನ ಅನುಗ್ರಹವನ್ನು ಪಡೆಯಬಹುದು ಎಂದು ನಂಬಲಾಗಿದೆ.

Jaya Ekadashi in kannada

ಜಯ ಏಕಾದಶಿಯು ಹಿಂದೂ ತಿಂಗಳ ಮಾಘ ಮಾಸದ ಶುಕ್ಲ ಪಕ್ಷದ ಹನ್ನೊಂದನೇ ದಿನದಂದು ಆಚರಿಸಲಾಗುವ ಮಂಗಳಕರವಾದ ಉಪವಾಸವಾಗಿದೆ. ಜಯ ಏಕಾದಶಿಯನ್ನು ಭೀಷ್ಮ ಏಕಾದಶಿ ಎಂದೂ ಕರೆಯುತ್ತಾರೆ. ಮಹಾಭಾರತದ ಸಮಯದಲ್ಲಿ ಕೌರವ ಪಡೆಗಳ ಸರ್ವೋಚ್ಚ ಸೇನಾಧಿಪತಿಯಾದ ಭೀಷ್ಮನು ತಾನು ಯಾವಾಗ ಸಾಯುತ್ತಾನೆಂದು ಆಯ್ಕೆ ಮಾಡುವ ಶಕ್ತಿಯನ್ನು ಹೊಂದಿದ್ದನೆಂದು ಹೇಳಲಾಗುತ್ತದೆ ಮತ್ತು ಅವನು ತನ್ನ ಮರಣದ ದಿನವಾಗಿ ಅತ್ಯಂತ ಮಂಗಳಕರವಾದ ಜಯ ಏಕಾದಶಿಯನ್ನು ಆರಿಸಿಕೊಂಡನು.

ಜಯ ಏಕಾದಶಿ ಉಪವಾಸವನ್ನು ಸಾಮಾನ್ಯವಾಗಿ 24 ಗಂಟೆಗಳ ಅವಧಿಯಲ್ಲಿ ಆಚರಿಸಲಾಗುತ್ತದೆ ಮತ್ತು ಜನರು ಇದನ್ನು 'ನಿರ್ಜಲ' ಉಪವಾಸವಾಗಿ (ನೀರಿಲ್ಲದೆ) ಆಚರಿಸಬಹುದು ಅಥವಾ ಅವರು ಹಣ್ಣುಗಳು ಮತ್ತು ದ್ರವಗಳನ್ನು ಸೇವಿಸಬಹುದು. ಏಕಾದಶಿ ಉಪವಾಸದ ಮರುದಿನ ಸೂರ್ಯೋದಯದ ನಂತರ ಏಕಾದಶಿ ಪಾರಣವನ್ನು ಮಾಡಲಾಗುತ್ತದೆ.

ಜಯ ಏಕಾದಶಿಯ ಮಹತ್ವ

ಹಿಂದೂ ಧರ್ಮಗ್ರಂಥಗಳ ಪ್ರಕಾರ, ಜಯ ಏಕಾದಶಿಯ ದಿನದಂದು, ಒಬ್ಬ ವ್ಯಕ್ತಿಯು ದಿನವಿಡೀ ಉಪವಾಸವನ್ನು ಆಚರಿಸುವ ಮೂಲಕ ಹಿಂದಿನ ಜನ್ಮದಲ್ಲಿ ಅಥವಾ ಈ ಜನ್ಮದಲ್ಲಿ ಮಾಡಿದ ಪಾಪಗಳನ್ನು ತೊಡೆದುಹಾಕಬಹುದು ಎಂದು ನಂಬಲಾಗಿದೆ. ಉಪವಾಸವನ್ನು ಆಚರಿಸುವ ವ್ಯಕ್ತಿಯು ಉತ್ತಮ ಆರೋಗ್ಯ, ಅವರ ಕುಟುಂಬದ ಯೋಗಕ್ಷೇಮ ಮತ್ತು ಯಶಸ್ಸು ಮತ್ತು ಸಮೃದ್ಧಿಯನ್ನು ಹೊಂದುತ್ತಾನೆ. ಏಕಾದಶಿಯ ಉಪವಾಸದ ದಿನದಂದು ವಿಷ್ಣು ಸಹಸ್ತ್ರನಾಮ ಸ್ತೋತ್ರವನ್ನು ಪಠಿಸುವುದು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ.

ಜಯ ಏಕಾದಶಿ ಉಪವಾಸ ಕಥೆ

ಇಂದ್ರನ ಆಸ್ಥಾನದಲ್ಲಿ ಸಂಭ್ರಮಾಚರಣೆ ನಡೆಯುತ್ತಿತ್ತು. ದೇವರು, ಸಂತರು, ದೈವಿಕ ವ್ಯಕ್ತಿಗಳು ಎಲ್ಲರೂ ಉತ್ಸವದಲ್ಲಿ ಉಪಸ್ಥಿತರಿದ್ದರು. ಆ ಸಮಯದಲ್ಲಿ ಗಂಧರ್ವರು ಹಾಡುಗಳನ್ನು ಹಾಡುತ್ತಿದ್ದರು ಮತ್ತು ಗಂಧರ್ವ ಬಾಲೆಯರು ನೃತ್ಯ ಮಾಡುತ್ತಿದ್ದರು. ಈ ಗಂಧರ್ವರಲ್ಲಿ ಮಾಲ್ಯವನೆಂಬ ಗಂಧರ್ವನು ಬಹಳ ಸುಶ್ರಾವ್ಯವಾಗಿ ಹಾಡುತ್ತಿದ್ದನು. ಆತನ ಕಂಠ ಸೌಂದರ್ಯದಷ್ಟೇ ಮಧುರವಾಗಿತ್ತು. ಮತ್ತೊಂದೆಡೆ ಗಂಧರ್ವ ಹುಡುಗಿಯರಲ್ಲಿ ಪುಷ್ಯವತಿ ಎಂಬ ಸುಂದರ ನರ್ತಕಿಯೂ ಇದ್ದಳು. ಪುಷ್ಯವತಿ ಮತ್ತು ಮಾಲ್ಯವಾನ್ ಒಬ್ಬರನ್ನೊಬ್ಬರು ನೋಡಿದಾಗ ಹಾಡು ಮತ್ತು ಆಕೆಯ ನೃತ್ಯ ಹಾಳಾಯಿತಂತೆ.

ಇದರಿಂದ ಕೋಪಗೊಂಡ ಇಂದ್ರನು ಮರ್ತ್ಯಲೋಕದಲ್ಲಿ ನೀವಿಬ್ಬರು ರಕ್ತಪಿಶಾಚಿಯಂತೆ ಹುಟ್ಟಬೇಕು ಎಂದು ಶಾಪ ಕೊಟ್ಟನಂತೆ.

ಶಾಪದ ಪ್ರಭಾವದಿಂದ ಇಬ್ಬರೂ ನರಳತೊಡಗಿದರು. ರಕ್ತಪಿಶಾಚಿಯಾಗಿ ಮರ್ತ್ಯಲೋಕದಲ್ಲಿ ಅವರು ಅಲೆದಾಡುತ್ತಿದ್ದರು. ಇಬ್ಬರೂ ತುಂಬಾ ದುಃಖಿತರಾಗಿದ್ದರು. ಆದರೆ ಮಾಘ ಮಾಸದ ಶುಕ್ಲ ಪಕ್ಷದ ಏಕಾದಶಿ ದಿನ ಅವರಿಬ್ಬರೂ ಇಡೀ ದಿನ ಉಪವಾಸವಿದ್ದು ವಿಷ್ಣುವನ್ನು ಪ್ರಾರ್ಥಿಸಿದರು. ಅಂದು ವಿಷ್ಣು ಇಬ್ಬರಿಗೂ ದರ್ಶನ ಕೊಟ್ಟು ಅವರ ಪಾಪ ಕರ್ಮಗಳನ್ನು ಕ್ಷಮಿಸಿ ಅವರಿಗೆ ಮುಕ್ತಿ ನೀಡಿದ ಎಂದು ಪುರಾಣ ಕಥೆ ಹೇಳುತ್ತದೆ.

English summary

Jaya Ekadashi: Jaya Ekadashi Rituals And Story Behind Vishnu Pooja

Jaya Ekadashi on Tuesday. See why Vishnu should be worshiped on Jaya Ekadashi, what is the story behind it.
Story first published: Monday, February 19, 2024, 19:00 [IST]
X
Desktop Bottom Promotion