Latest Updates
-
ಅಮಾವಾಸ್ಯೆಯ ದಿನ ಜಗಳ ಬೇಡ: ದಂಪತಿಗಳ ನಡುವಿನ ಪ್ರೀತಿ ಹೆಚ್ಚಿಸಲು ಈ ಸಂಭಾಷಣೆ ಸೂತ್ರಗಳು -
ಆರೆಂಜ್ ಅಲರ್ಟ್: ಭಾರಿ ಮಳೆಯಿಂದ ಮನೆ ರಕ್ಷಿಸಲು ಈ 5 ಟಿಪ್ಸ್ ಪಾಲಿಸಿ, ಸುರಕ್ಷಿತವಾಗಿರಿ! -
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್ -
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು
ಫೆಬ್ರವರಿ 8ಕ್ಕೆ ಜಯ ಏಕಾದಶಿ: ಸವಾಲು, ಸಮಸ್ಯೆಗಳನ್ನು ದೂರ ಮಾಡಲು ಈ ಏಕಾದಶಿ ಹೇಗೆ ಆಚರಿಸಬೇಕು, ಪೂಜಾ ವಿಧಿಗಳೇನು?
ಏಕಾದಶಿ ಶ್ರೀ ವಿಷ್ಣುವಿನ ಪೂಜೆಗೆ ಇರುವ ವಿಶೇಷವಾದ ದಿನ. ವರ್ಷದಲ್ಲಿ 24 ಏಕಾದಶಿ ಬರುತ್ತದೆ, ಪ್ರತಿಯೊಂದು ಏಕಾದಶಿಗೆ ಅದರದ್ದೇ ಆದ ಮಹತ್ವವಿದೆ, ಫೆಬ್ರವರಿಯಲ್ಲಿ ಜಯ ಏಕಾದಶಿ ಇದೆ, ಈ ಏಕಾದಶಿಯ ಮಹತ್ವವೇನು, ಇದರ ಮಹತ್ವವೇನು ಎಂದು ನೋಡೋಣ ಬನ್ನಿ:

ಜಯ ಏಕಾದಶಿ ತಿಥಿ
ಜಯ ಏಕಾದಶಿ ತಿಥಿ ಬೆಳಗ್ಗೆ 08:48ರಿಂದ ರಾತ್ರಿ 08:15ರವರೆಗೆ ಇರಲಿದೆ
ಜಯ ಏಕಾದಶಿ ಪೂಜಾ ಸಮಯ
ಬ್ರಹ್ಮ ಮುಹೂರ್ತ: ಬೆಳಗ್ಗೆ 05:21ರಿಂದ ಬೆಳಗ್ಗೆ 06:13ರವರೆಗೆ
ಅಭಿಜಿತ್ ಮುಹೂರ್ತ: ಮಧ್ಯಾಹ್ನ 12:13ರಿಂದ 12:57ರವರೆಗೆ
ವಿಜಯ್ ಮುಹೂರ್ತ: ಮಧ್ಯಾಹ್ನ 02:26ರಿಂದ 03:10ರವರೆಗೆ
ಅಮೃತ ಕಾಲ:ಬೆಳಗ್ಗೆ 09:31ರಿಂದ 11:05ರವರೆಗೆ
ರವಿಯೋಗ: ಬೆಳಗ್ಗೆ 07:05ರಿಂದ ಸಂಜೆ 06:07ರವರೆಗೆ
ಜಯ ಏಕಾದಶಿಯಂದು ಚೋಘಡಿಯ ಮುಹೂರ್ತ
ಶುಭ ಉತ್ತಮ: ಬೆಳಗ್ಗೆ 08:28ರಿಂದ 09:50ರವರೆಗೆ
ಪ್ರಯೋಜನಗಳು: ಮಧ್ಯಾಹ್ನ 01:58ರಿಂದ 03:21ರವರೆಗೆ
ಅಮೃತ ಮುಹೂರ್ತ ಮಧ್ಯಾಹ್ನ 03:21ರಿಂದ ಸಂಜೆ 04:44ರವರೆಗೆ
ಸಂಜೆ ಪೂಜೆಯ ಸಮಯ: ಸಂಜೆ 06:06ರವರೆಗೆ 07:43ರವರೆಗೆ
ಪಾರಣ ಸಮಯ: ಫೆಬ್ರವರಿ 09: ಬೆಳಗ್ಗೆ 07:04ರಿಂದ 09:17ರವರೆಗೆ
ಜಯ ಏಕಾದಶಿ
ಹಿಂದೂ ನಂಬಿಕೆಗಳ ಪ್ರಕಾರ ಜಯ ಏಕಾದಶಿ ಆಚರಣೆ ಮಾಡುವುದರಿಂದ ವ್ಯಕ್ತಿಯು ತನ್ನ ಪಾಪದಿಂದ ಮುಕ್ತಾನಾಗುತ್ತಾನೆ, ಮೋಕ್ಷವನ್ನು ಪಡೆಯುತ್ತಾನೆ ಅವನ ಕೆಲಸ ಕಾರ್ಯಗಳಲ್ಲಿ ಜಯ ಸಿಗಲಿದೆ ಎಂದು ಹೇಳಲಾಗುವುದು.
ನಿರಂತರ ಸೋಲು, ಬದುಕಿನಲ್ಲಿ ಅನೇಕ ಸವಾಲುಗಳು, ಮನೆಯಲ್ಲಿ ನೆಮ್ಮದಿ ಇಲ್ಲದಿರುವುದು ಈ ಬಗೆಯ ಸಮಸ್ಯೆಯಿದ್ದರೆ ಜಯ ಏಕಾದಶಿ ಆಚರಣೆ ಮಾಡಿದರೆ ಆ ಎಲ್ಲಾ ಸಮಸ್ಯೆ ಬಗೆಹರಿಯಲಿದೆ ಎಂಬುವುದು ಭಕ್ತರ ಅಚಲ ನಂಬಿಕೆ.
ಪೂಜಾ ವಿಧಿಗಳೇನು?
ಜಯಾ ಏಕಾದಶಿಯಂದು ಬೆಳಗ್ಗೆ ಬೇಗನೆ ಎದ್ದು ಸ್ನಾನ ಮಾಡಿ ಮಡಿ ಬಟ್ಟೆ ಧರಿಸಿ ದೇವರ ಕೋಣೆಯನ್ನು ಸ್ವಚ್ಛಗೊಳಿಸಬೇಕು.
ಶ್ರೀ ವಿಷ್ಣುವಿನ ಮೂರ್ತಿ ಅಥವಾ ಫೋಟೋಗಳನ್ನು ಹೂವುಗಳಿಂದ ಅಲಂಕರಿಸಿ
ಶ್ರೀ ವಿಷ್ಣುವಿಗೆ ಪ್ರಸಾದವನ್ನು ಅರ್ಪಿಸಿ
ನಂತರ ಶ್ರೀವಿಷ್ಣುವಿನ ಮಂತ್ರಗಳನ್ನು ಪಠಿಸುತ್ತಾ ಪೂಜಿಸಿ.
ಓಂ ನಮೋ ಭಗವತೇ ವಾಸುದೇವಾಯ
ಈ ಮಂತ್ರ ಪಠಣೆ ಮಾಡಿ ಶ್ರೀ ವಿಷ್ಣುವಿಗೆ ಪ್ರಣಾಮಗಳನ್ನು ಸಲ್ಲಿಸಿ
ವಿಷ್ಣು ಗಾಯತ್ರಿ ಮಂತ್ರ:
ಓಂ ನಾರಾಯಣಯೇ ವಿದ್ಮಹೇ ವಾಸುದೇವಾಯ ಧೀಮಹಿ ತನ್ನೋ ವಿಷ್ಣು ಪ್ರಚೋದಯಾತ್
ಈ ಮಂತ್ರ ಪಠಣೆ ಮಾಡುವ ಮೂಲಕ ನನ್ನಲ್ಲಿರುವ ಅಜ್ಞಾನ ದೂರ ಮಾಡು, ನನ್ನ ಮನಸ್ಸು ಬದುಕನ್ನು ಮತ್ತಷ್ಟು ಉಜ್ವಲಗೊಳಿಸು ಎಂದು ಬೇಡಲಾಗುವುದು.
ಮುಕ್ತಿ ಮಂತ್ರ: ಓಂ ಭಗವತೇ ವಾಸುದೇವಾಯ ನಮಃ
ಈ ಮಂತ್ರವನ್ನು ಪೂಜೆ ಮಾಡುವಾಗ ನಿರಂತರವಾಗಿ ಪಠಿಸುತ್ತಲೇ ಇರಿ.



Click it and Unblock the Notifications
