Latest Updates
-
UGC-NET ಪರೀಕ್ಷೆಯ ಗೊಂದಲ: ವಿದ್ಯಾರ್ಥಿಗಳ ಆತಂಕ ದೂರ ಮಾಡಲು ಪೋಷಕರಿಗೆ ಇಲ್ಲಿದೆ 48 ಗಂಟೆಗಳ ಸ್ಟಡಿ-ರಿಸೆಟ್ ಪ್ಲಾನ್! -
ದೆಹಲಿ ಮಳೆ: ಗುಡುಗು-ಮಿಂಚಿನಿಂದ ನಿಮ್ಮ ಎಲೆಕ್ಟ್ರಾನಿಕ್ ವಸ್ತುಗಳನ್ನು ರಕ್ಷಿಸಲು ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಎನರ್ಜಿ ಡ್ರಿಂಕ್ಸ್ ಕುಡಿಯುವ ಮುನ್ನ ಎಚ್ಚರ! FSSAI ಹೊಸ ನಿಯಮ ಮತ್ತು ಆರೋಗ್ಯಕರ ಪರ್ಯಾಯಗಳು -
ಗುರುಗ್ರಾಮದಲ್ಲಿ ವರುಣನ ಆರ್ಭಟ: ಕಚೇರಿಗೆ ಹೋಗ್ಬೇಡಿ, ಮನೆಯಿಂದಲೇ ಕೆಲಸ ಮಾಡಿ - ಪೊಲೀಸರ ಮಹತ್ವದ ಸೂಚನೆ -
ಮಳೆಗಾಲದ ಜಡತ್ವಕ್ಕೆ ಗುಡ್ ಬೈ: ಮುಂಬೈ-ಪುಣೆ ಜನರಿಗಾಗಿ 10 ನಿಮಿಷದ ಸರಳ ವ್ಯಾಯಾಮಗಳು -
ಮುಂಬೈ ಮಳೆ ಆರ್ಭಟ: ಸಂಗಾತಿಯ ಸುರಕ್ಷತೆಗಾಗಿ ನೀವು ಮಾಡಬೇಕಾದ ಪ್ರಮುಖ ಕೆಲಸಗಳಿವು! -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆಯ ಮಳೆನೀರು ಕೊಯ್ಲು ವ್ಯವಸ್ಥೆ ಹಾಳಾಗದಂತೆ ತಡೆಯುವುದು ಹೇಗೆ? -
ಮಳೆಗಾಲದಲ್ಲಿ ಮಕ್ಕಳ ಲಂಚ್ಬಾಕ್ಸ್ ಸುರಕ್ಷತೆ: ಆರೋಗ್ಯಕರ ಮತ್ತು ಹೈ-ಪ್ರೋಟೀನ್ ಆಹಾರದ ಟಿಪ್ಸ್ -
ಮುಂಬೈನಲ್ಲಿ ಭಾರೀ ಮಳೆ: ಇಂದು ಶಾಲೆ-ಕಾಲೇಜುಗಳಿಗೆ ರಜೆ ಘೋಷಣೆ, ಪೋಷಕರು ಗಮನಿಸಿ! -
ಕರಾವಳಿ ರೆಡ್ ಅಲರ್ಟ್: ಮನೆಯಲ್ಲೇ ಸುರಕ್ಷಿತವಾಗಿ ಫಿಟ್ ಆಗಿರಲು ಈ 12 ನಿಮಿಷಗಳ ವರ್ಕೌಟ್ ಟ್ರೈ ಮಾಡಿ!
ಕೃಷ್ಣ ಜನ್ಮಾಷ್ಟಮಿಯಂದು ಭೇಟಿ ನೀಡಲೇಬೇಕಾದ ದೇವಾಲಯಗಳು!
ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ದೇಶದಾದ್ಯಂತ ವಿಜೃಂಭಣೆಯಿಂದ ಆಚರಣೆ ಮಾಡಲಾಗುತ್ತಿದೆ. ಕಂಸನನ್ನು ಕೊಲ್ಲೋದಕ್ಕಾಗಿ ಅವತರಿಸಿ ಬಂದ ಕೃಷ್ಣನ ಹುಟ್ಟು ತುಂಬಾನೇ ವಿಶೇಷವಾಗಿದೆ. ಈ ಬಾರಿ ಸೆಪ್ಟೆಂಬರ್ 6ರಂದು ದೇಶದಾದ್ಯಂತ ಕೃಷ್ಣ ಜನ್ಮಾಷ್ಟಮಿಯನ್ನು ಆಚರಿಸಲಾಗ್ತಿದ್ರು ಕೂಡ ಒಂದೊಂದು ಕಡೆ ಒಂದೊಂದು ರೀತಿಯಲ್ಲಿ ಆಚರಣೆ ಮಾಡಲಾಗ್ತಿದೆ.

ವಿಶೇಷವಾಗಿ ದೇಶದ ಕೆಲವು ದೇವಾಲಯಗಳನ್ನು ಕೃಷ್ಣನ ಆರಾಧನೆಗಾಗಿ ಅರ್ಪಣೆ ಮಾಡಲಾಗ್ತಿದೆ. ಅದ್ರಲ್ಲೂ ಮುಖ್ಯವಾಗಿ ಈ ದೇವಾಲಯಗಳು ಟಾಪ್ ಸ್ಥಾನದಲ್ಲಿದೆ. ಅಷ್ಟಕ್ಕೂ ಯಾವೆಲ್ಲಾ ದೇವಾಲಯಗಳನ್ನು ಕೃಷ್ಣನಿಗಾಗಿ ಅರ್ಪಣೆ ಮಾಡಲಾಗ್ತಿದೆ ಅನ್ನೋದನ್ನು ತಿಳಿಯೋಣ.
1. ಮಥುರಾ ದೇವಾಲಯ
ಮಥುರಾದಲ್ಲಿ ಶ್ರೀಕೃಷ್ಣ ಜನಿಸಿದನೆಂದು ನಂಬಲಾಗಿದೆ. ಈ ದೇವಾಲಯವನ್ನು ಕೃಷ್ಣನ ಮೊಮ್ಮಗನಾದ ವಜ್ರನಾಭನು ನಿರ್ಮಿಸಿದನು. ಮಥುರಾದಲ್ಲಿ ಜನ್ಮಾಷ್ಟಮಿಯ 10 ದಿನಗಳ ಮೊದಲು ದೇವಾಲಯವನ್ನು ದೀಪಾಲಂಕಾರಗಳಿಂದ ಅಲಂಕರಿಸಲಾಗುತ್ತದೆ. ಹಬ್ಬದ ಸಂದರ್ಭದಲ್ಲಿ ಆಧ್ಯಾತ್ಮಿಕ ಕಾರ್ಯಕ್ರಮಗಳು, ಭಜನೆಗಳನ್ನು ಆಯೋಜಿಸಲಾಗುತ್ತದೆ.
ಇದು ಕೃಷ್ಣನ ಜನ್ಮ ಸ್ಥಳ ಆಗಿರೋದ್ರಿಂದ ಪ್ರಪಂಚದ ವಿವಿಧ ಭಾಗಗಳಿಂದ ಕೃಷ್ಣ ಜನ್ಮಾಷ್ಟಮಿಯನ್ನು ನೋಡಲು ಮತ್ತು ಮಥುರಾದಲ್ಲಿ ಪೂಜೆಯಲ್ಲಿ ಪಾಲ್ಗೊಳ್ಳಲು ಭಕ್ತರು ಬರುತ್ತಾರೆ.
2. ಉಡುಪಿ ಕೃಷ್ಣಮಠ
ಉಡುಪಿಯ ಶ್ರೀ ಕೃಷ್ಣನ ದೇವಸ್ಥಾನವು ದ್ವೈತ ಸಿದ್ಧಾಂತಕ್ಕೆ ಜನಪ್ರಿಯ ದೇವಾಲಯವಾಗಿದೆ. ಕರ್ನಾಟಕದ ಉಡುಪಿಯಲ್ಲಿರುವ ಈ ದೇವಸ್ಥಾನವನ್ನು ಉಡುಪಿ ಅನಂತೇಶ್ವರ ದೇವಸ್ಥಾನ ಎಂದೂ ಕರೆಯುತ್ತಾರೆ. ನವಗ್ರಹ ಕಿಟಿಕಿ ಎಂಬ ಒಂಬತ್ತು ರಂಧ್ರಗಳನ್ನು ಹೊಂದಿರುವ ಬೆಳ್ಳಿಯ ಕಿಟಕಿಯ ಮೂಲಕ ಪ್ರಾರ್ಥನೆಗಳು ಮತ್ತು ಪೂಜೆಯನ್ನು ನೆರವೇರಿಸಲಾಗುತ್ತದೆ.
ಕೃಷ್ಣ ಜನ್ಮಾಷ್ಟಮಿಯು ಈ ದೇವಾಲಯದಲ್ಲಿ ಆಚರಿಸಲಾಗುವ ಪ್ರಮುಖ ಹಬ್ಬಗಳಲ್ಲಿ ಒಂದಾಗಿದೆ. ಮತ್ತು ಈ ಸಮಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಇಲ್ಲಿಗೆ ಭೇಟಿ ನೀಡುತ್ತಾರೆ.
3. ಇಸ್ಕಾನ್ ದೇವಾಲಯ, ಬೆಂಗಳೂರು
ಬೆಂಗಳೂರಿನ ಇಸ್ಕಾನ್ ದೇವಾಲಯವು ಭಾರತದ ಜನಪ್ರಿಯ ಕೃಷ್ಣನ ದೇವಾಲಯಗಳಲ್ಲಿ ಒಂದಾಗಿದೆ. ಇಲ್ಲಿ ಭಗವಾನ್ ಕೃಷ್ಣ ಮತ್ತು ರಾಧೆಯನ್ನು ಪೂಜಿಸಲಾಗುತ್ತದೆ. ಇವರೊಂದಿಗೆ ಕೃಷ್ಣ-ಬಲರಾಮ ಮತ್ತು ವೆಂಕಟೇಶ್ವರನನ್ನು ಪೂಜಿಸಲಾಗುತ್ತದೆ.
ಬೆಂಗಳೂರಿನ ಇಸ್ಕಾನ್ ದೇವಾಲಯದಲ್ಲಿ ಕೃಷ್ಣ ಜನ್ಮಾಷ್ಟಮಿಯನ್ನು ವಿಜೃಂಭಣೆಯಿಂದ ಆಚರಣೆ ಮಾಡಲಾಗುತ್ತದೆ. ಈ ದೇವಾಲಯವನ್ನು ಹೂವಿನಿಂದ ಅಲಂಕರಿಸಲಾಗುತ್ತದೆ. ಆ ದಿನ ಅನೇಕ ಆಚರಣೆಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು, ವಿಶೇಷ ಸೇವೆಗಳನ್ನು ಸಲ್ಲಿಸಲಾಗುತ್ತದೆ.
4. ದ್ವಾರಕಾ ದೇವಾಲಯ, ಗುಜರಾತ್
ದ್ವಾರಕಾ ಕೂಡ ಶ್ರೀ ಕೃಷ್ಣನ ಪ್ರಮುಖ ದೇವಾಲಯಗಳಲ್ಲಿ ಒಂದಾಗಿದೆ. ಈ ದೇವಾಲಯವು 2 ವಿಶೇಷ ದ್ವಾರಗಳೊಂದಿಗೆ ಅತ್ಯುತ್ತಮ ವಾಸ್ತುಶಿಲ್ಪವನ್ನು ಹೊಂದಿದೆ. ಅನೇಕ ಭಕ್ತರು ಕೃಷ್ಣ ಜನ್ಮಾಷ್ಟಮಿಯ ಸಮಯದಲ್ಲಿ ದ್ವಾರಕಾ ದೇವಾಲಯಕ್ಕೆ ಭೇಟಿ ನೀಡುತ್ತಾರೆ. ಮತ್ತು ಆ ದಿನ ದೇವಾಲಯದಲ್ಲಿ ವಿಶೇಷ ಅಲಂಕಾರ, ವಿಶೇಷ ಪ್ರಾರ್ಥನೆಗಳು, ಭಜನೆಗಳು, ದ್ವಾರಕಾ ದರ್ಶನ ಯಾತ್ರೆಯನ್ನು ಹಮ್ಮಿಕೊಳ್ಳಲಾಗುತ್ತದೆ.
5. ಪ್ರೇಮ ಮಂದಿರ, ಬೃಂದಾವನ
ಶ್ರೀ ಕೃಷ್ಣಾನು ತನ್ನ ಬಾಲ್ಯ ಮತ್ತು ಹದಿಹರೆಯವನ್ನು ಕಳೆದ ಸ್ಥಳವೇ ಬೃಂದಾವನ. ಇಲ್ಲಿ ಶ್ರೀಕೃಷ್ಣನು ಗೋಪಿಯರೊಂದಿಗೆ ರಾಸಲೀಲೆಯನ್ನು ಮಾಡಿದನು. ಪ್ರೇಮ ಮಂದಿರವನ್ನು ಕೃಷ್ಣನ ಪ್ರೀತಿಯ ದೇವಾಲಯ ಎಂದು ಕರೆಯಲಾಗುತ್ತದೆ. ಇದನ್ನು ರಾಧಾ-ಕೃಷ್ಣ ಮತ್ತು ಸೀತಾ-ರಾಮರಿಗೆ ಸಮರ್ಪಿಸಲಾಗಿದೆ. ಈ ಅತ್ಯಂತ ಸುಂದರವಾದ ದೇವಾಲಯವು ಉತ್ತರ ಪ್ರದೇಶದ ಬೃಂದಾವನದಲ್ಲಿದೆ. ಕೃಷ್ಣ ಜನ್ಮಾಷ್ಟಮಿಯ ದಿನದಂದು ಇಲ್ಲಿ ವಿಶೇಷ ಪೂಜೆಯನ್ನು ನೆರವೇರಿಸಲಾಗುತ್ತದೆ.
6. ಪುರಿಯ ಜಗನ್ನಾಥ ದೇವಾಲಯ, ಒಡಿಶಾ
ಒಡಿಶಾದ ಪುರಿಯಲ್ಲಿರುವ ಒಂದು ಜನಪ್ರಿಯ ಯಾತ್ರಾಸ್ಥಳಕ್ಕೆ ಜಗನ್ನಾಥ ಪುರಿ ದೇವಸ್ಥಾನ ಎಂದು ಹೆಸರಿಸಲಾಗಿದೆ. ಭಗವಾನ್ ವಿಷ್ಣುವಿನ ಅವತಾರ ಸ್ಥಳ ಎಂತಲೂ ಇದನ್ನು ಕರೆಯಲಾಗುತ್ತದೆ.ಇಲ್ಲಿ ರಥಯಾತ್ರೆಯ ಜೊತೆಗೆ ಕೃಷ್ಣ ಜನ್ಮಾಷ್ಟಮಿಯನ್ನು ವಿವಿಧ ಆಚರಣೆಗಳೊಂದಿಗೆ ಆಚರಿಸಲಾಗುತ್ತದೆ. ಶ್ರೀ ಕೃಷ್ಣ ಜನ್ಮಾಷ್ಟಮಿಯ ದಿನ ಕೃಷ್ಣನ ಆಶೀರ್ವಾದಕ್ಕೆ ಪಾತ್ರವಾಗಬೇಕು ಎನ್ನುವವರು ಈ ಸ್ಥಳಕ್ಕೆ ಭೇಟಿ ನೀಡಬಹುದು.
ಈ ದೇವಾಲಯಗಳು ಜಗತ್ತಿನಲ್ಲೇ ವಿಶ್ವ ವಿಖ್ಯಾತಿ ಪಡೆದಿರುವ ಕೃಷ್ಣ ದೇವಾಲಯಗಳಲ್ಲಿ ಒಂದಾಗಿದೆ. ಜೀವನದಲ್ಲಿ ಒಮ್ಮೆಯಾದರೂ ಇಲ್ಲಿಗೆ ಭೇಟಿ ನೀಡಿದರೆ ಒಳ್ಳೆಯದು.



Click it and Unblock the Notifications