Jagannath Rath Yatra 2025: ವಿಶ್ವಪ್ರಸಿದ್ಧ ಜಗನ್ನಾಥ ರಥಯಾತ್ರೆ ಶುರು: 250+ AI ಕ್ಯಾಮರಾ! 3 ಬೃಹತ್ ರಥಗಳ ವಿಶಿಷ್ಟ ಇಲ್ಲಿದೆ

ವಿಶ್ವಪ್ರಸಿದ್ಧ ಪುಣ್ಯಕ್ಷೇತ್ರ ಪುರಿಯಲ್ಲಿ ಇಂದು ಶ್ರೀ ಜಗನ್ನಾಥ ರಥಯಾತ್ರೆ ವಿಜೃಂಭಣೆಯಿಂದ (Jagannath Rath Yatra Begins Today) ಆರಂಭವಾಗಲಿದೆ. ಒಂಭತ್ತು ದಿನಗಳ ಕಾಲ ನಡೆಯುವ ಈ ರಥೋತ್ಸವವು ಧರ್ಮ, ಸಂಸ್ಕೃತಿ ಮತ್ತು ಸಾಮರಸ್ಯದ ಪ್ರತೀಕವಾಗಿದೆ. ಹೌದು, ಜಗನ್ನಾಥ ರಥಯಾತ್ರೆಯು ಭಾರತದ ಶ್ರೀಮಂತ ಸಂಸ್ಕೃತಿ ಮತ್ತು ಸಂಪ್ರದಾಯವನ್ನು ಬಿಂಬಿಸುವ ಒಂದು ಅದ್ಭುತ ಉತ್ಸವ. ರಥಗಳ ನಿರ್ಮಾಣದ ವಿಧಾನ ಮತ್ತು ಭವ್ಯತೆ ಅದ್ಭುತವೇ ಸರಿ. ಲಕ್ಷಾಂತರ ಭಕ್ತರನ್ನು ಆಕರ್ಷಿಸುತ್ತದೆ. ಈ ರಥಯಾತ್ರೆಯು ಭಾರತದ ಏಕತೆ ಮತ್ತು ಸಹೋದರತ್ವವನ್ನು ಎತ್ತಿ ತೋರಿಸುತ್ತದೆ. ಈ ಕುರಿತ ಹೆಚ್ಚಿನ ಮಾಹತಿ ಇಲ್ಲಿದೆ.

ವಿಶ್ವವಿಖ್ಯಾತ ಜಗನ್ನಾಥ ರಥಯಾತ್ರೆಯು (Jagannath Rath Yatra 2025) ಇಂದಿನಿಂದ ವಿಜೃಂಭಣೆಯಿಂದ ಪ್ರಾರಂಭವಾಗಲಿದೆ. ಈ ರಥೋತ್ಸವದಲ್ಲಿ ಜಗನ್ನಾಥ, ಬಲಭದ್ರ ಮತ್ತು ಸುಭದ್ರಾ ದೇವಿಯರ ವಿಗ್ರಹಗಳನ್ನು ಜಗನ್ನಾಥ ದೇವಾಲಯದಿಂದ ಗುಂಡಿಚಾ ದೇವಾಲಯದವರೆಗೆ ರಥದಲ್ಲಿ ಮೆರವಣಿಗೆಯಲ್ಲಿ ಕೊಂಡೊಯ್ಯಲಾಗುತ್ತದೆ. ಭಕ್ತರ ಜಯಘೋಷ, ಗಂಟೆ ಮತ್ತು ಶಂಖನಾದಗಳೊಂದಿಗೆ ರಥಗಳು ಸಾಗಲಿದ್ದು, ಪುರಿಯ ವಾತಾವರಣವು ದೈವಿಕ ಶಕ್ತಿಯಿಂದ ತುಂಬಿರುತ್ತದೆ. ಒಂಭತ್ತು ದಿನಗಳ ಕಾಲ ನಡೆಯುವಈ ಐತಿಹಾಸಿಕ ಮತ್ತು ಆಧ್ಯಾತ್ಮಿಕ ಉತ್ಸವವನ್ನು ಕಣ್ತುಂಬಿಕೊಳ್ಳಲು ಈಗಾಗಲೇ ಲಕ್ಷಾಂತರ ಭಕ್ತರು ಪುರಿಗೆ ಆಗಮಿಸಿದ್ದಾರೆ.

Jagannath Rath Yatra Begins Today

ರಥಯಾತ್ರೆಯ ಮಹತ್ವ

ಪುರಾಣಗಳ ಪ್ರಕಾರ ಈ ದಿನದಂದು ಜಗನ್ನಾಥ (ಶ್ರೀಕೃಷ್ಣ), ಅವನ ಸಹೋದರ ಬಲಭದ್ರ ಮತ್ತು ಸಹೋದರಿ ಸುಭದ್ರಾ ತಮ್ಮ ಚಿಕ್ಕಮ್ಮನ ಮನೆಯಾದ ಗುಂಡಿಚಾ ದೇವಸ್ಥಾನಕ್ಕೆ ಭೇಟಿ ನೀಡಲಿದ್ದಾರೆ. ಈ ರಥವನ್ನು ಎಳೆಯುವ ಅಥವಾ ಸ್ಪರ್ಶಿಸುವ ಭಕ್ತರಿಗೆ ಪುಣ್ಯ ಮತ್ತು ಮೋಕ್ಷ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಇದೆ. ಈ ರಥಯಾತ್ರೆಯು ಭಾತೃತ್ವ, ಏಕತೆ ಮತ್ತು ಸಮರ್ಪಣಾ ಭಾವದ ಸಂಕೇತವಾಗಿದೆ. ಭಾರತವು ವೈವಿಧ್ಯಮಯ ಸಂಸ್ಕೃತಿಗಳನ್ನು ಹೊಂದಿರುವ ನಾಡು. ಇಲ್ಲಿನ ಪ್ರತಿಯೊಂದು ಹಬ್ಬವು ತನ್ನದೇ ಆದ ಮಹತ್ವವನ್ನು ಹೊಂದಿದೆ. ಅದರಂತೆ ಜಗನ್ನಾಥ ರಥಯಾತ್ರೆಯು ಸಹ ಒಂದು ವಿಶಿಷ್ಟ ಆಚರಣೆಯಾಗಿದೆ.

ರಥಗಳ ವೈಶಿಷ್ಟ್ಯ

ಜಗನ್ನಾಥ ರಥಯಾತ್ರೆಯಲ್ಲಿ ಮೂರು ಬೃಹತ್ ರಥಗಳನ್ನು ಬಳಸಲಾಗುತ್ತದೆ. ಇದು ದೇಶದ ಮೂಲೆ ಮೂಲೆಗಳಿಂದ ಭಕ್ತರನ್ನು ಆಕರ್ಷಿಸುತ್ತದೆ. ಮೂರು ಬೃಹತ್ ರಥಗಳ ಬಗ್ಗೆ ಇಲ್ಲಿದೆ ಮಾಹಿತಿ.

• ನಂದಿಘೋಷ: ಇದು ಭಗವಾನ್ ಶ್ರೀ ಜಗನ್ನಾಥನ (Lord Jagannat) ರಥ. ಇದು 18 ಚಕ್ರಗಳನ್ನು ಹೊಂದಿದ್ದು, ಸುಮಾರು 45 ಅಡಿ ಎತ್ತರವಿದೆ.
ತಾಲಧ್ವಜ: ಇದು ಬಲಭದ್ರನ ರಥವಾಗಿದ್ದು, 16 ಚಕ್ರಗಳನ್ನು ಹೊಂದಿದೆ. ಇದು 44 ಅಡಿ ಎತ್ತರವಿದೆ.
ದರ್ಪದಾಳನ: ಇದು ಸುಭದ್ರಾ ದೇವಿಯ ರಥವಾಗಿದ್ದು, 14 ಚಕ್ರಗಳನ್ನು ಹೊಂದಿದೆ. ಇದರ ಎತ್ತರ 43 ಅಡಿ.

ಈ ರಥಗಳ ನಿರ್ಮಾಣ ಕಾರ್ಯವು ಹಲವು ತಿಂಗಳುಗಳ ಕಾಲ ನಡೆಯುತ್ತದೆ. ಸಾಂಪ್ರದಾಯಿಕ ಕುಶಲಕರ್ಮಿಗಳು ತಮ್ಮ ಪರಿಣತಿಯನ್ನು ಬಳಸಿ ರಥಗಳನ್ನು ನಿರ್ಮಿಸುತ್ತಾರೆ. ರಥಗಳ ಮೇಲೆ ಕೆತ್ತಲಾದ ಕಲಾಕೃತಿಗಳು ಭಾರತೀಯ ಸಂಸ್ಕೃತಿಯನ್ನು ಬಿಂಬಿಸುತ್ತವೆ.

ರಥಗಳ ನಿರ್ಮಾಣ ಮತ್ತು ಅಲಂಕಾರ

ಈಗಾಗಲೇ ಶ್ರೀ ಜಗನ್ನಾಥ ದೇವರ ನಂದಿಘೋಷ, ಬಲಭದ್ರನ ತಾಳಧ್ವಜ ಮತ್ತು ಸುಭದ್ರೆಯ ದರ್ಪದಾಳನ ರಥಗಳು ಸಿದ್ಧವಾಗಿ ನಿಂತಿವೆ. ಇವುಗಳನ್ನು ಭವ್ಯವಾಗಿ ಅಲಂಕರಿಸಲಾಗಿದೆ. ಈ ರಥಗಳನ್ನು ನಿರ್ಮಿಸಲು ಸಾಂಪ್ರದಾಯಿಕ ಕುಶಲಕರ್ಮಿಗಳು ತಿಂಗಳುಗಟ್ಟಲೆ ಶ್ರಮಿಸಿದ್ದಾರೆ. ರಥಗಳ ಭವ್ಯತೆ ಮತ್ತು ಸಾಂಪ್ರದಾಯಿಕ ಕಲಾ ಶೈಲಿಯು ಇವುಗಳನ್ನು ವಿಶಿಷ್ಟವಾಗಿಸುತ್ತದೆ.

ರಥಯಾತ್ರೆಗೆ ಮುನ್ನ ರಥಗಳನ್ನು ಹಲವು ಬಗೆಯ ಹೂವುಗಳು ಮತ್ತು ಬಣ್ಣಗಳಿಂದ ಅಲಂಕರಿಸಲಾಗುತ್ತದೆ. ಬಳಿಕ ರಥದ ಮೇಲೆ ದೇವರ ವಿಗ್ರಹಗಳನ್ನು ಪ್ರತಿಷ್ಠಾಪಿಸಲಾಗುತ್ತದೆ. ರಥ ಎಳೆಯುವ ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ಎಲ್ಲಾ ರೀತಿಯ ಮುಂಜಾಗ್ರತೆಗಳನ್ನು ತೆಗೆದುಕೊಳ್ಳಲಾಗುತ್ತದೆ.

ಗುಂಡಿಚಾ ದೇವಾಲಯದ ವಿಶೇಷತೆ ಏನು?

ರಥಯಾತ್ರೆಯ ಸಂದರ್ಭದಲ್ಲಿ, ಭಗವಾನ್ ಜಗನ್ನಾಥ, ಬಲಭದ್ರ ಮತ್ತು ಸುಭದ್ರಾ ದೇವಿಯು ಗುಂಡಿಚಾ ದೇವಸ್ಥಾನಕ್ಕೆ ಪ್ರಯಾಣಿಸುತ್ತಾರೆ. ಅಲ್ಲಿ ಒಂಬತ್ತು ದಿನಗಳ ಕಾಲ ನೆಲೆಸುತ್ತಾರೆ. ಈ ಸಮಯದಲ್ಲಿ, ಗುಂಡಿಚಾ ದೇವಸ್ಥಾನವು ಭಕ್ತರಿಂದ ತುಂಬಿರುತ್ತದೆ. ನಂತರ ಬಹುಧಾ ಯಾತ್ರೆಯಲ್ಲಿ ಅವರು ಮರಳಿ ಶ್ರೀ ಮಂದಿರಕ್ಕೆ ಹಿಂದಿರುಗುತ್ತಾರೆ. ಗುಂಡಿಚಾ ದೇವಾಲಯವನ್ನು ಜಗನ್ನಾಥನ ತೋಟದ ಮನೆ ಎಂತಲೂ ಕರೆಯುವರು. ರಥಯಾತ್ರೆಯ ಸಮಯದಲ್ಲಿ ಇಲ್ಲಿ ವಿಶೇಷ ಪೂಜೆಗಳು ನಡೆಯುತ್ತವೆ.

250ಕ್ಕೂ ಹೆಚ್ಚು ಎಐ ಕ್ಯಾಮರಾ

ವರ್ಷಕ್ಕೊಮ್ಮೆ ಜಾತಿ, ಮತ ಮತ್ತು ಧರ್ಮಗಳನ್ನು ಮೀರಿ ಭಕ್ತರೊಂದಿಗೆ ಬೆರೆಯಲು ದೇಗುಲದಿಂದ ದೇವತೆಗಳು ಹೊರಬರುತ್ತಾರೆ. ಜುಲೈ 8ರಂದು ದೇವತೆಗಳು ಮುಖ್ಯ ದೇವಾಲಯಕ್ಕೆ ಹಿಂತಿರುಗುವುದರೊಂದಿಗೆ ರಥಯಾತ್ರೆಯು ಅಂತ್ಯವಾಗಲಿದೆ. ಈ ರಥಯಾತ್ರೆ ಆಚರಣೆಗಾಗಿ ಒಡಿಶಾ ಪೊಲೀಸರ ಜೊತೆಗೆ ಕೇಂದ್ರ ಸಶಸ್ತ್ರ ಪೊಲೀಸ್ ಪಡೆಯ ಎಂಟು ತುಕಡಿಗಳನ್ನು ನಿಯೋಜನೆ ಮಾಡಲಾಗಿದೆ. ಸುಮಾರು 10,000 ಭದ್ರತಾ ಸಿಬ್ಬಂದಿಯನ್ನು ನೇಮಿಸಲಾಗಿದೆ. ಹಾಗೆಯೇ ನಗರದ ವಿವಿಧ ಸ್ಥಳಗಳಲ್ಲಿ 250ಕ್ಕೂ ಹೆಚ್ಚು ಎಐ (ಕೃತಕ ಬುದ್ಧಿಮತ್ತೆ) ಕ್ಯಾಮರಾಗಳನ್ನು ಅಳವಡಿಸಲಾಗಿದೆ.

English summary

Jagannath Rath Yatra 2025: Lord Jagannath and his 2 siblings begins 9 Day Festival Begins Today

Jagannath Rath Yatra 2025: Lord Jagannath and his 2 siblings begins 9 Day Festival Begins Today
Story first published: Friday, June 27, 2025, 10:00 [IST]
X
Desktop Bottom Promotion