Latest Updates
-
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್! -
ವಿಶ್ವ ಛಾಯಾಗ್ರಹಣ ದಿನ: ಮನೆಯಲ್ಲೇ ಫೋಟೋ ಸ್ಟುಡಿಯೋ ಮಾಡಿ, ನಿಮ್ಮ ಗಿಡಗಳ ಫೋಟೋ ವೈರಲ್ ಆಗುವಂತೆ ಕ್ಲಿಕ್ ಮಾಡಿ! -
98% ಅಂಕ ಪಡೆದರೂ ಅಂಗಡಿ ಬಂದ್: FDAಗೆ ಹೈಕೋರ್ಟ್ ತರಾಟೆ, ಕಲಬೆರಕೆ ಸಿಹಿ ಪತ್ತೆಹಚ್ಚುವುದು ಹೇಗೆ? -
BWF ವಿಶ್ವ ಚಾಂಪಿಯನ್ಷಿಪ್ 2026: ಲಕ್ಷ್ಯ ಸೇನ್ ಅಬ್ಬರಕ್ಕೆ ದೆಹಲಿ ಸಜ್ಜು, ಲೈವ್ ಮಿಸ್ ಮಾಡ್ಬೇಡಿ! -
ವಿಶ್ವ ಹಿರಿಯ ನಾಗರಿಕರ ದಿನ: ಪೋಷಕರ ಆರೋಗ್ಯ ಮತ್ತು ಸಮತೋಲನ ಹೆಚ್ಚಿಸುವ ಸರಳ ಬೆಳಗಿನ ವ್ಯಾಯಾಮಗಳು -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಪ್ಪಿಸಲು ಇಲ್ಲಿದೆ 12 ನಿಮಿಷದ ಸೂತ್ರ! -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಡೆಯಲು ಈ 'ಕಪಲ್ ಸ್ಕ್ರಿಪ್ಟ್ಸ್' ಬಳಸಿ!
ಆಗಸ್ಟ್ 22ರ ವರೆಗೂ ವಿಪರೀತ ಚಳಿ.! ಈ ಎಚ್ಚರಿಕೆ ಸಂದೇಶ ನಿಮಗೂ ಬಂದಿದ್ಯಾ? ಸತ್ಯವೇನು?
ರಾಜ್ಯದಲ್ಲಿ ಮಳೆ ಅಬ್ಬರ ಜೋರಾಗಿದೆ. ಹಲವು ಜಿಲ್ಲೆಗಳಲ್ಲಿ ಮಳೆಯ ಅಬ್ಬರದ ಕಾರಣ ಶಾಲಾ ಕಾಲೇಜಿಗೆ ರಜೆ ಘೋಷಿಸಲಾಗಿದೆ. ಹಾಗೆ ರಾಜ್ಯದ ಹಲವು ಭಾಗದಲ್ಲಿ ಮುಂದಿನ ಕೆಲವು ದಿನಗಳ ಕಾಲ ಮಳೆ ಮುಂದುವರೆಯಬಹುದು ಎಂದು ಹವಾಮಾನ ಇಲಾಖೆ ಸೂಚನೆ ನೀಡಿದೆ. ಹಾಗೆ ಈಗ ಇಡಿ ರಾಜ್ಯ ಮಳೆಯ ಜೊತೆಗೆ ಶೀತ ಗಾಳಿ ಎದುರಿಸಲಿದೆ ಎಂಬ ಸಂದೇಶವೊಂದು ಈಗ ಎಲ್ಲಡೆ ಹರಿದಾಡುತ್ತಿದೆ.
ಹೌದು ಮಳೆಗಾಲದ ನಡುವೆ ಅಪರೂಪದಲ್ಲಿ ಈ ವಿದ್ಯಮಾನ ಸಂಭವಿಸುತ್ತಿದೆ. ಆಗಸ್ಟ್ 22ರ ವರೆಗೂ ಸಾಮಾನ್ಯಕ್ಕಿಂತ ಹೆಚ್ಚು ಚಳಿಯನ್ನು ನೀವು ಅನುಭವಿಸಬಹುದು ಎಂಬೆಲ್ಲಾ ಮಾಹಿತಿ ಇರುವ ಸಂದೇಶವೊಂದು ವಾಟ್ಸಾಪ್ ಮೂಲಕ ಹರಿಬಿಡಲಾಗಿದೆ. ಹಾಗೆ ಸಾಮಾನ್ಯ ದಿನಗಳಿಗೆ ಹೋಲಿಸಿದರೆ ಬೆಳಗ್ಗೆಯಿಂದ ಸಂಜೆಯವರೆಗೂ ಶೀತ ಗಾಳಿ ಬೀಸುವುದು ನೋಡಬಹುದು, ಇದರಿಂದ ಚಳಿಯ ಅನುಭವ ಆಗಲಿದೆ ಎಂದು ಸಂದೇಶದಲ್ಲಿ ಹೇಳಲಾಗಿದೆ.

ಈ ಸಮಯದಲ್ಲಿ ವೈರಲ್ ಜ್ವರ, ಶೀತ, ಕೆಮ್ಮು, ನೆಗಡಿಯಂತಹ ಅನಾರೋಗ್ಯ ಸಮಸ್ಯೆಗಳು ಕೂಡ ಕಾಡಬಹುದು. ಇದು ನಮ್ಮ ದೇಹದ ಮೇಲೂ ಪರಿಣಾಮ ಉಂಟು ಮಾಡಲಿದೆ. ಹಿರಿಯರಲ್ಲಿ ಕೀಲು ನೋವು, ಸಂಧಿ ವಾತ, ಮೈ ಕೈ ನೋವಿನಂತಹ ಸಮಸ್ಯೆಗಳನ್ನು ಕೂಡ ತರಬಹುದು. ಈ ಪ್ರಕ್ರಿಯೆ ಆಗಸ್ಟ್ 22ರ ವರೆಗೆ ನೋಡಬಹುದು ಎಂದು ಸೂಚಿಸಲಾಗಿದೆ.
ಆದರೆ ಈ ಸಂದೇಶದಲ್ಲಿ ಯಾವುದೇ ಸತ್ಯವಿಲ್ಲ. ಸಾಮಾನ್ಯವಾಗಿ ಈ ವಿದ್ಯಮಾನ ನಡೆಯುವ ಯಾವುದೇ ಮುನ್ಸೂಚನೆ ಇಲ್ಲ, ಹಾಗೆ ಹವಾಮಾನ ಇಲಾಖೆ ಕೂಡ ಯಾವುದೇ ಮುನ್ಸೂಚನೆಗಳ ನೀಡಿಲ್ಲ.
ನಾಳೆಯಿಂದ ಆಗಸ್ಟ್ 22 ರವರೆಗೆ, ವಾತಾವರಣದಲ್ಲಿ ಕಳೆದ ವರ್ಷಕ್ಕಿಂತ ಹವಾಮಾನವು ತೀರಾ ಕಡಿಮೆಯಾಗಿರುತ್ತದೆ. ಇದನ್ನು ಆಲ್ಫೆಲಿಯನ್ ಸನ್ನಿವೇಶ ಎಂದು ಕರೆಯಲಾಗುತ್ತದೆ. ಇದು ನಾಳೆ ಬೆಳಿಗ್ಗೆ 5ರಿಂದ 7ರ ನಡುವೆ ಪ್ರಾರಂಭವಾಗುತ್ತದೆ. ಎಲ್ಲೆಡೆ ತಂಪಾದ ವಾತಾವರಣ ಆಗಸ್ಟ್ 22, 2025 ರಂದು ಕೊನೆಗೊಳ್ಳುತ್ತದೆ.....ಎಂದು ಸಂದೇಶಗಳು ಹರಿದಾಡಿವೆ. ಆದ್ರೆ ಇದರಲ್ಲಿ ಸತ್ಯವಿಲ್ಲ.
ಈ ರೀತಿಯ ವಿದ್ಯಮಾನವನ್ನು ಆಲ್ಫೆಲಿಯನ್ ಪರಿಣಾಮ ಎಂದು ಕರೆಯಲಾಗುತ್ತದೆಯಾದರೂ ಆಗಸ್ಟ್‌ನಲ್ಲಿ ಈ ವಿದ್ಯಮಾನ ಸಂಭವಿಸುವುದೇ ಇಲ್ಲ. ಹಾಗಾದ್ರೆ ಈ ಆಲ್ಫೆಲಿಯನ್ ಪರಿಣಾಮ ಎಂದರೇನು?
ಆಲ್ಫೆಲಿಯನ್ ವಿದ್ಯಮಾನವು ಆಗಾಗ ಸಂಭವಿಸುವುದಿಲ್ಲ ಬದಲಿಗೆ ಬಹಳ ಅಪರೂಪಕ್ಕೆ ಸಂಭವಿಸಲಿದೆ. ಇದಕ್ಕೆ ಮುಖ್ಯ ಕಾರಣ ಭೂಮಿಯ ಚಲನೆ ಆಗಿರಲಿದೆ. ಭೂಮಿ ಸೂರ್ಯನನ್ನು ಸುತ್ತುವಾಗ ಅದು ಮೊಟ್ಟೆ ಆಕಾರದ ಕಕ್ಷೆಯಲ್ಲಿ ಸುತ್ತಲಿದೆ. ಸೂರ್ಯನಿಂದ ಅತ್ಯಂತ ದೂರದಲ್ಲಿದ್ದಾಗ ಆಲ್ಫೆಲಿಯನ್ ಎಂದು ಹಾಗೆ ಸೂರ್ಯನಿಗೆ ತುಂಬಾ ಹತ್ತಿರದಲ್ಲಿದ್ದಾಗ ಪೆರಿಹೆಲಿಯನ್ ಬಿಂದು ಎಂದು ಕರೆಯಲಾಗುತ್ತದೆ.
ಹಾಗೆ ಯಾವುದೇ ಗ್ರಹವು ಆಲ್ಪೇರಿಯನ್ ಸ್ಥಿತಿಯಲ್ಲಿದ್ದಾಗ ನಿಧಾನವಾಗಿ ಚಲಿಸುತ್ತವೆ. ಹಾಗೆ ಪೆರಿಹೆಲಿಯನ್‌ನಲ್ಲಿದ್ದಾಗ ವೇಗವಾಗಿ ಚಲಿಸುತ್ತವೆ ಎಂದು ಕೂಡ ಹೇಳಲಾಗಿದೆ. ಸದ್ಯದ ಪರಿಸ್ಥಿತಿಯಲ್ಲಿ ಭೂಮಿಯು ಆಲ್ಪೆರಿಯನ್ ಸ್ಥಿತಿಯಲ್ಲಿದೆ. ಅಂದರೆ ಸೂರ್ಯನಿಂದ ಅತ್ಯಂತ ದೂರದ ಬಿಂದುವಿನಲ್ಲಿ ಭೂಮಿ ಚಲಿಸುತ್ತಿದೆ. ಇದರಿಂದ ಭೂಮಿಗೆ ಸೂರ್ಯನ ಕಿರಣಗಳು ಪ್ರಬಲವಾಗಿ ಬೀಳುವುದಿಲ್ಲ. ಹೀಗಾಗಿ ಸಾಮಾನ್ಯಕ್ಕಿಂತಲು ಈ ಸಮಯದಲ್ಲಿ ಚಳಿ ಹೆಚ್ಚಾಗಬಹುದು ಆದ್ರೆ ವಿಪರೀತ ಚಳಿ ಇರಲಿದೆ ಎಂಬುದೆಲ್ಲಾ ಯಾವುದೂ ಸಂಭವಿಸುವುದಿಲ್ಲ.
ಸಾಮಾನ್ಯವಾಗಿ ಪೆರಿಪೆಲಿಯನ್ ಹಾಗೂ ಆಲ್ಪೆರಿಯನ್ ವಿದ್ಯಮಾನವು 4ರಿಂದ 5 ದಿನಗಳ ಕಾಲ ಜರುಗಬಹುದು. ಬಳಿಕ ಭೂಮಿಯ ಕಕ್ಷೆಯ ಯಥಾಸ್ಥಿತಿಗೆ ಬರಲಿದೆ. ಇನ್ನು 2025ರಲ್ಲಿ ಭೂಮಿಯು ಜುಲೈ 3 ರಂದು ಸೂರ್ಯನಿಂದ ಅತ್ಯಂತ ದೂರದ ಬಿಂದುವಾದ ಆಲ್ಪೆಲಿಯನ್ ಅನ್ನು ತಲುಪಿತ್ತು. ನಿರ್ದಿಷ್ಟವಾಗಿ ಭೂಮಿಯು ಸೂರ್ಯನಿಂದ ಸರಿಸುಮಾರು 94.5 ಮಿಲಿಯನ್ ಮೈಲುಗಳು (152 ಮಿಲಿಯನ್ ಕಿಲೋಮೀಟರ್) ದೂರದಲ್ಲಿತ್ತು, ಇದು ಅತ್ಯಂತ ದೂರ ಬಿಂದು ಗುರುತಿಸಲಾಗಿದೆ.



Click it and Unblock the Notifications