Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ನಿತ್ಯಾನಂದ ಸ್ವಾಮಿ ಮೃತಪಟ್ಟಿದ್ದಾರಾ? ಸೋದರಳಿಯ ಅಚ್ಚರಿ ಹೇಳಿಕೆ! ಯಾವುದು ಸತ್ಯ?
ಸ್ವಯಂ ಘೋಷಿತ ದೇವ ಮಾನವ ನಿತ್ಯಾನಂದ ಸ್ವಾಮಿ ಕುರಿತು ಯಾರಿಗೆ ತಿಳಿದಿಲ್ಲ ಹೇಳಿ. ಅವರ ಒಂದೊಂದು ವಿವಾದಗಳು ಚಿರಪರಿಚಿತ. ಅತ್ಯಾಚಾರ ಆರೋಪ ಎದುರಿಸುತ್ತಿರುವ ಸ್ವಯಂ ಘೋಷಿತ ದೇವಮಾನವನಿಗಾಗಿ ಪೊಲೀಸರ ಹುಡುಕಾಟ ಮುಂದುವರೆದಿದೆ. ಈ ನಡುವೆ ಆತ ಕೈಲಾಸ ಎಂಬ ಹೊಸ ದೇಶವನ್ನೇ ಸೃಷ್ಟಿಸಿದರುವುದಾಗಿ ಹೇಳಿಕೊಂಡಿದ್ದಾನೆ. ಹಾಗೆ ಅಲ್ಲಿಗೆ ಬಂದು ನೆಲೆಸುವಂತೆ ಹಿಂದೂಗಳಿಗೆ ಕರೆ ನೀಡಿದ್ದೂ ಕೂಡ ನೀವೆಲ್ಲಾ ತಿಳಿದಿರಬಹುದು.
ಆದ್ರೆ ಈಗ ನಿತ್ಯಾನಂದ ಸ್ವಾಮಿ ಮೃತಪಟ್ಟಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಅವರ ಸೋದರ ಅಳಿಯ ಸುಂದರೇಶ್ವರನ್, ನಿತ್ಯಾನಂದ ಮೃತಪಟ್ಟಿದ್ದಾರೆ ಎಂದು ಹೇಳಿರುವ ವಿಡಿಯೋವೊಂದು ವೈರಲ್ ಆಗಿದ್ದು ಈ ಕುರಿತು ಅಧಿಕೃತವಾಗಿ ಯಾವ ಮಾಹಿತಿಯೂ ಹೊರಬಿದ್ದಿಲ್ಲ. ಅವರು ಎಲ್ಲಿದ್ದಾರೆ? ಹೇಗೆ ಮೃತಪಟ್ಟರು? ಹೀಗೆ ಹತ್ತಾರು ಪ್ರಶ್ನೆಗಳಿಗೆ ಇನ್ನು ಉತ್ತರ ಸಿಕ್ಕಿಲ್ಲ ಆದ್ರೆ ಸೋದರಳಿಯ ಸುಂದರೇಶ್ವರನ್ ಅವರು ಮಾಡಿರುವ ವಿಡಿಯೋ ಭಾರೀ ವೈರಲ್ ಆಗಿದೆ.

2019ಲ್ಲಿ ಭಾರತ ತೊರೆದು ಅವರು ಬೇರೊಂದು ದೇಶಕ್ಕೆ ಪಲಾಯನ ಮಾಡಿದ್ದರು. ಅವರು ದೇಶ ಬಿಡುವ ಮುನ್ನ ಅವರ ಬಂಧನಕ್ಕೆ ಪೊಲೀಸರು ಮುಂದಾಗಿದ್ದರು. ಆದರೆ ಅಂದಿನಿಂದ ದ್ವೀಪವೊಂದನ್ನು ಖರೀದಿಸಿ ಕೈಲಾಸ ಎಂದು ನಾಮಕರಣ ಮಾಡಿರುವುದಾಗಿ ಸುದ್ದಿಯಾಗಿದ್ದರು.
ಜನವರಿ 1 1978 ರಂದು ತಮಿಳುನಾಡಿನ ತಿರುವಣ್ಣಾಮಲೈನಲ್ಲಿ ಜನಿಸಿದ ಸ್ವಾಮಿ ನಿತ್ಯಾನಂದ ಅವರು ಆಶ್ರಮ ಕಟ್ಟಿ ಬಳಿಕ ಬಿಡದಿಯಲ್ಲಿ ನೆಲೆಸಿದ್ದರು. ಆಧ್ರೆ ನಟಿಯೊಬ್ಬರ ಜೊತೆಗಿನ ವಿಡಿಯೋ ವೈರಲ್ ಆದ ಬಳಿಕ ಪ್ರಕರಣ ದಾಖಲಾಗಿತ್ತು. ಹಾಗೆ 2019ರಲ್ಲಿ ಭಾರತದಿಂದ ಪಲಾಯನ ಮಾಡಿದ್ದರು.
ಅವರ ವೆಬ್‌ಸೈಟ್‌ನಲ್ಲಿ ಹಂಚಿಕೊಳ್ಳಲಾಗಿರುವ ವಿಡಿಯೋ ಪ್ರಕಾರ ನಿತ್ಯಾನಂದ 12 ನೇ ವಯಸ್ಸಿನಲ್ಲಿ 'ಜ್ಞಾನೋದಯ' ಪಡೆದಿದ್ದಾರಂತೆ. ಈ ವೀಡಿಯೊ ಅವರನ್ನು ಹಿಂದೂ ಧರ್ಮದ ಆಧ್ಯಾತ್ಮಿಕ ನಾಯಕ ಎಂದು ಪರಿಚಯಿಸಲಾಗಿದೆ. ಅವರು 47 ದೇಶಗಳಲ್ಲಿ ಕೇಂದ್ರಗಳನ್ನು ನಿರ್ವಹಿಸುತ್ತಿದ್ದಾರೆ ಎಂದು ಕೂಡ ಹೇಳಲಾಗಿದೆ. ಅದರ ಜೊತೆಗೆ ನಿತ್ಯಾನಂದ ಧ್ಯಾನಪೀಠ ಸ್ಥಾಪಿಸಿದ ಅವರು ಅದರ ಮುಖ್ಯಸ್ಥರು ಕೂಡ ಆಗಿದ್ದಾರೆ ಎಂದು ವಿವರಿಸಲಾಗಿದೆ.
ಭಾರತದಿಂದ ಕಣ್ಮರೆಯಾದ ಬಳಿಕ ನಿತ್ಯಾನಂದ ದೂರದ ದ್ವೀಪವೊಂದರಲ್ಲಿ 'ಕೈಲಾಸ' ಎಂಬ ಸ್ವಯಂ ಘೋಷಿತ ರಾಷ್ಟ್ರವನ್ನು ಸ್ಥಾಪಿಸಿದರು, ಅದು ಸಾರ್ವಭೌಮ ಹಿಂದೂ ರಾಷ್ಟ್ರ ಎಂದು ಹೇಳಿಕೊಂಡರು. ಆದರೆ ಅವರನ್ನು ಹುಡುಕುವ ನಿಯಂತರ ಪ್ರಯತ್ನದಲ್ಲಿ ಪೊಲೀಸರು ಯಶಸ್ವಿಯಾಗಲಿಲ್ಲ. ಈ ಸಮಯದಲ್ಲೇ ಭಾರತ ಇಂಟರ್‌ಪೋಲ್ ಮೂಲಕ ರೆಡ್ ಕಾರ್ನರ್ ನೋಟಿಸ್ ಕೂಡ ಹೊರಡಿಸಿತ್ತು.
2019 ರಲ್ಲಿ ಅಹಮದಾಬಾದ್ ಮೂಲದ ಆಶ್ರಮದಲ್ಲಿ ನಿತ್ಯಾನಂದ ಮತ್ತು ಅವರ ಇಬ್ಬರು ಅನುಯಾಯಿಗಳ ವಿರುದ್ಧ ಇಬ್ಬರು ಅಪ್ರಾಪ್ತ ವಯಸ್ಕರು ಮತ್ತು 19 ವರ್ಷದ ಮಹಿಳೆಯನ್ನು ಅಪಹರಿಸಿ, ಚಿತ್ರಹಿಂದೆ ನೀಡಿದ ಆರೋಪದ ಮೇಲೆ ಎಫ್‌ಐಆರ್ ದಾಖಲಾಗಿತ್ತು. ಬಳಿಕ ಪೊಲೀಸರು ಆಶ್ರಮಕ್ಕೆ ಆಗಮಿಸಿ ಇಬ್ಬರು ವ್ಯವಸ್ಥಾಪಕರ ಬಂಧಿಸಿ ಅಪ್ರಾಪ್ತ ಬಾಲಕಿಯರ ರಕ್ಷಿಸಿದ್ದರು. ಈ ಪ್ರಕರಣದಲ್ಲೂ ನಿತ್ಯಾನಂದ ಪೊಲೀಸರಿಂದ ಪಲಾಯನ ಮಾಡಿದ್ದ.
ಈಗ ನಿತ್ಯಾನಂದ ಸ್ವಾಮಿ ಮೃತಪಟ್ಟಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದ್ದು ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ. ಆದ್ರೆ ಅವರ ಸಾವಿನ ಸುದ್ದಿ ಹರಡಿರುವುದು ಇದೇನು ಮೊದಲಲ್ಲ. 2022 ರಲ್ಲಿ ಅವರು ಯಾರನ್ನು ಗುರುತು ಹಿಡಿಯುತ್ತಿಲ್ಲ, ಯಾವ ಸ್ಥಳದಲ್ಲಿದ್ದೇನೆ ಎಂಬುದು ಕೂಡ ಅವರಿಗೆ ತಿಳಿಯುತ್ತಿಲ್ಲ, ವೈದ್ಯರ ತಂಡ ಅವರ ಚಿಕಿತ್ಸೆ ನೋಡಿಕೊಳ್ಳುತ್ತಿದ್ದಾರೆ ಎಂಬ ಸುದ್ದಿ ಹರಡಿತ್ತು. ಹಾಗೆ ಮತ್ತೊಮ್ಮೆ ಅವರು ಸ್ವಯಂ ಸಮಾಧಿಯಾಗಲು ಮುಂದಾಗಿದ್ದಾರೆ ಎಂಬ ಸುದ್ದಿ ಕೂಡ ಹರಡಿದಾಡಿತ್ತು. ಆದ್ರೆ ಈಗ ಅವರ ಸೋದರಳಿಯ ಈ ಹೇಳಿಕೆ ನೀಡಿರುವುದು ಅಚ್ಚರಿ ಮೂಡಿಸಿದೆ.
ಇನ್ನು ಒಂದು ಏಪ್ರಿಲ್ ಫೂಲ್ ಡೇ ಆಗಿರುವುದರಿಂದ ಅವರು ಮತ್ತೊಮ್ಮೆ ಸುದ್ದಿಯಾಗಲು ಈ ರೀತಿ ಟ್ರಿಕ್ಸ್ ಬಳಸಿದ್ದಾರೆ ಅಂತಲೂ ವರದಿಯಾಗಿವೆ. ಆದರೆ ಯಾವ ಅಧಿಕೃತ ಹೇಳಿಕೆಗಳು ವರದಿಯಾಗಿಲ್ಲ. ಆದ್ರೆ ಈ ಕುರಿತು ಸುಳ್ಳು ಸುದ್ದಿ ಹಬ್ಬಿಸಿರುವ ಮಾಧ್ಯಮ ಸಂಸ್ಥೆಗಳ ವಿರುದ್ಧ ನಿತ್ಯಾನಂದ ಸ್ವಾಮಿ ಅವರ ತಂಡವು ಕಾನೂನಾತ್ಮಕ ಕ್ರಮಕ್ಕೆ ಮುಂದಾಗಿದ್ದು, ನೋಟಿಸ್ ಸಹ ಜಾರಿ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಹಾಗೆ ನಿತ್ಯಾನಂದ ಅವರು ಆರೋಗ್ಯವಾಗಿದ್ದಾರೆ, ಇದು ಸುಳ್ಳು ಸುದ್ದಿ ಎಂದು ತಿಳಿಸಿದ್ದಾರೆ.



Click it and Unblock the Notifications