Latest Updates
-
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ! -
ಡೆಂಗ್ಯೂ ಭೀತಿ: ಕೇವಲ 10 ನಿಮಿಷದಲ್ಲಿ ನಿಮ್ಮ ಮನೆಯಲ್ಲಿ ಸೊಳ್ಳೆಗಳ ಸಂತಾನೋತ್ಪತ್ತಿ ತಡೆಯಿರಿ -
ಹಬ್ಬದ ಸೀಸನ್: ಕಲಬೆರಕೆ ಆಹಾರದಿಂದ ಎಚ್ಚರ! ಮಹಾರಾಷ್ಟ್ರ FDA ಕಠಿಣ ತಪಾಸಣೆ ಆರಂಭ -
ಶಿಕ್ಷಕರ ದಿನಾಚರಣೆ 2026: ನಿಮ್ಮ ಪೋಸ್ಟ್ ಟ್ರೆಂಡ್ ಆಗಲು ಬೆಸ್ಟ್ ಕ್ಯಾಪ್ಷನ್ಸ್ ಮತ್ತು ಗಿಫ್ಟ್ ಐಡಿಯಾಗಳು! -
ಮಳೆಗಾಲದ ಎಚ್ಚರಿಕೆ: ಹೊರಗೆ ವಾಕಿಂಗ್ ಹೋಗುವ ಮುನ್ನ ಈ ವಿಷಯ ಗಮನಿಸಿ, ಮನೆಯಲ್ಲೇ ಫಿಟ್ ಆಗಿರಿ -
ಗೃಹಹಿಂಸೆಯ ಸುಳಿಯಲ್ಲಿ ಸಿಲುಕಿದ್ದೀರಾ? ಸುರಕ್ಷಿತವಾಗಿ ಪಾರಾಗಲು ಈ ಮಾರ್ಗದರ್ಶಿ ಮತ್ತು ತುರ್ತು ಸಹಾಯವಾಣಿಗಳು ನಿಮಗೆ ನೆರವಾಗಲಿವೆ
ಊಟ ಮಾಡುವಾಗ ನೀರು ಸೇವಿಸಬೇಕೆ? ಎಷ್ಟು ಸೇವಿಸಬೇಕು? ಆಯುರ್ವೇದ ಹೇಳೋದೇನು?
ನಮ್ಮ ದೇಹ ಸೂಕ್ತ ರೀತಿಯಲ್ಲಿ ಕೆಲಸ ಮಾಡಬೇಕಾದರೆ ಆಹಾರ ಅಗತ್ಯವಾಗಿ ಬೇಕಾಗುತ್ತದೆ. ಹಾಗೆ ಊಟ ಮಾಡುವಾಗಲು ಹಲವು ನಿಯಮಗಳಿವೆ. ಇನ್ನು ಊಟ ಮಾಡುವಾಗ ನೀರು ಸೇವಿಸಬೇಕೆ? ಸೇವಿಸಿದರೂ ಎಷ್ಟು ಸೇವಿಸಬೇಕು? ಯಾವಾಗ ಸೇವಿಸಬೇಕು ಎಂಬುದು ಬಹಳ ಹಿಂದಿನಿಂದಲೂ ಎಲ್ಲರಿಗೂ ಕಾಡುವ ಪ್ರಶ್ನೆಯಾಗಿರಲಿದ. ಊಟದ ಮಾಡುವಾಗ ಎಷ್ಟು ನೀರು ಯಾವಾಗ ಸೇವಿಸಬೇಕು ಎಂಬುದನ್ನು ನಾವಿಲ್ಲಿ ತಿಳಿಯೋಣ.
ಅದ್ರಲ್ಲೂ ಒಬ್ಬೊಬ್ಬರು ಒಂದೊಂದು ತೀರಿಯಾಗಿ ಹೇಳುವುದು ನೋಡಬಹುದು. ಕೆಲವರು ಊಟದ ಸಮಯದಲ್ಲಿ ನೀರನ್ನು ಸೇವಿಸುವುದನ್ನು ಒಪ್ಪುವುದಿಲ್ಲ. ಹೆಚ್ಚು ನೀರು ಕುಡಿದರೆ ಊಟ ಸರಿಯಾಗಿ ಸೇರುವುದಿಲ್ಲ ಎನ್ನುತ್ತಾರೆ. ಹಾಗೆ ನೀರು ಕುಡಿಯುವುದು ಜೀರ್ಣಕ್ರಿಯೆಗೆ ಅಡ್ಡಿಪಡಿಸಲಿದೆ ಎಂಬ ತಪ್ಪು ಕಲ್ಪನೆಯೂ ನಮ್ಮ ನಡುವೆ ಇದೆ.

ಹಾಗೆ ಊಟದ ನಡುವೆ ನೀರು ಸೇವನೆ ಆರೋಗ್ಯದ ಮೇಲೆ ಯಾವ ರೀತಿಯ ಪರಿಣಾಮ ಎದುರಿಸಲಿದೆ ಎಂಬುದಕ್ಕೆ ಹಲವು ರೀತಿಯ ಊಹಾಪೂಹಗಳಿವೆ. ಅದರಲ್ಲೂ ಜಾನಪದ ಒಂದು ರೀತಿಯ ನಿಯಮ ಹೇಳಿದರೆ ವೈದ್ಯರು ಒಂದು ರೀತಿ ಹೇಳುತ್ತಾರೆ. ಹಾಗೆ ಆಯುರ್ವೇದ ಮತ್ತೊಂದು ರೀತಿಯಲ್ಲಿ ಹೇಳಲಿದೆ. ಹಾಗಾದ್ರೆ ನೈಜವಾಗಿ ನಾವು ಯಾವಾಗ ನೀರು ಕುಡಿಯಬೇಕು?
ಹಲವರ ಪ್ರಕಾರ ಊಟದ ಮಾಡುವಾಗ ಮಧ್ಯದಲ್ಲಿ ನೀರು ಕುಡಿಯಬಾದು. ಊಟವಾದ ಬಳಿಕ ಕುಳಿತುಕೊಂಡೆ ನೀರು ಕುಡಿಯಬೇಕು ಎಂದು ಹೇಳುತ್ತಾರೆ. ಹಾಗೆ ಊಟದ ಆರಂಭದಲ್ಲಿ ನೀರು ಕುಡಿಯಬೇಕು. ಅನಂತರ ಊಟವಾದ ಬಳಿಕ ಕುಡಿಯಬೇಕು ಎಂದು ಹೇಳುತ್ತಾರೆ.
ಇನ್ನು ಊಟದ ನಡುವೆ ಆಗಾಗ ನೀರು ಕುಡಿಯಬೇಕು ಎಂದು ಕೂಡ ಹೇಳಲಾಗುತ್ತದೆ. ಆದ್ರೆ ನಾವಿಂದು ಊಟ ಹಾಗೂ ನೀರು ಸೇವಿಸುವ ಕುರಿತಾಗಿ ಆಯುರ್ವೇದದಲ್ಲಿ ಏನು ಹೇಳಲಾಗಿದೆ ಎಂಬುದನ್ನು ತಿಳಿದುಕೊಳ್ಳೋಣ. ಅದ್ರಲ್ಲೂ ಸಂಕೃತದಲ್ಲಿ ಒಂದು ಶ್ಲೋಕದ ಮೂಲಕ ಈ ನೀರು ಕುಡಿಯುವ ಸಂಬಂಧವಾಗಿ ಹೇಳಲಾಗಿದೆ.
अजिर्णे भेसजं वारी जिर्णे वारी बालप्रदम |
भोजने कामृतं वरि भोजनानते विषापहम् ||
(ಅಜಿರ್ನೇ ಭೇಷಜಂ ವಾರಿ ಜೀರ್ಣೇ ವಾರಿ ಬಲಪ್ರದಂ)ಇದರ ಅರ್ಥ ಆಹಾರದೊಂದಿಗೆ ನೀರು ಅಮೃತ ಮತ್ತು ಆಹಾರದ ಕೊನೆಯಲ್ಲಿ ವಿಷ ಎಂಬ ಅರ್ಥ ನೀಡಲಿದೆ.
ಅಜೀರ್ಣವಾದಾಗ ನೀರು ಕುಡಿದರೆ ಔಷಧಿಯಂತೆ ಕೆಲಸ ಮಾಡಲಿದೆ. ಹಾಗೆ ಜೀರ್ಣ ಕ್ರಿಯೆ ಚೆನ್ನಾಗಿ ಇದ್ದಾಗ ನೀರು ಕುಡಿದರೆ ನಿಮ್ಮ ಸಾಮರ್ಥ್ಯ ಹೆಚ್ಚಾಗಲಿದೆ ಎಂದು ಹೇಳಲಾಗಿದೆ. ಊಟ ಮಾಡುವಾಗ ಸ್ವಲ್ಪ ಸ್ವಲ್ಪ ನೀರು ಕುಡಿಯುವುದು ಅಮೃತವಾಗಲಿದೆ, ಹಾಗೆ ಊಟದ ಬಳಿಕ ಹೆಚ್ಚು ನೀರು ಕುಡಿಯುವುದು ವಿಷಕ್ಕೆ ಸಮವಾಗಬಹುದು ಎಂಬುದು ಆಯುರ್ವೇದದಲ್ಲಿನ ಒಂದು ಸಾರವಾಗಿದೆ.

ಅಂದರೆ ಆಯುರ್ವೇದದ ಪ್ರಕಾರ ಊಟದ ಮಧ್ಯದಲ್ಲಿ ನೀರು ಕುಡಿಯಬೇಕಂತೆ. ಜಠರದಲ್ಲಿ ಸ್ವಲ್ಪ ಆಹಾರ ಹಾಗೆ ನೀರು ಮತ್ತೆ ಆಹಾರ ಹಾಗೆ ನೀರು ಸೇರಿಸುತ್ತಾ ಹೋದರೆ ಜೀರ್ಣಕ್ರಿಯೆಗೆ ಸಹಕಾರಿಯಾಗಲಿದೆ ಎಂಬುದು ಇದರ ಒಳಾರ್ಥವಾಗಿದೆ. ಮತ್ತೆ ಕೆಲವರು ಊಟದ ನಂತರ ಲೀಟರ್‌ನಷ್ಟು ನೀರು ಕುಡಿಯುತ್ತಾರೆ ಇದು ಅಜೀರ್ಣ ಸಮಸ್ಯೆ ಇರುವವರು ಹಾಗೆ ಗ್ಯಾಸ್ಟ್ರಿಕ್ ಸಮಸ್ಯೆ ಇದ್ದವರಿಗೆ ಮತ್ತಷ್ಟು ಸಮಸ್ಯೆ ತರಬಹುದು.
ಹಾಗೆ ಆಯುರ್ವೇದದರಲ್ಲಿ ತಾಮ್ರದ ಪಾತ್ರೆಯಲ್ಲಿ ನೀರು ಇಟ್ಟು ಕುಡಿಯುವ ಕುರಿತಾಗಿಯೂ ಬಹಳ ಉಪಯೋಗಕಾರಿಯಾದ ಅಂಶವನ್ನು ವಿವರಿಸಲಾಗಿದೆ. ನೀರನ್ನು ತಾಮ್ರದ ಪಾತ್ರೆಯಲ್ಲಿ ಅಥವಾ ಬಾಟಲಿಯಲ್ಲಿ ಇಟ್ಟು ಕುಡಿಯುವುದು ಆರೋಗ್ಯಕ್ಕೆ ಉತ್ತಮ ಎಂದು ಹೇಳಲಾಗಿದೆ. ನಿತ್ಯ ತಾಮ್ರದ ಪಾತ್ರೆಯಲ್ಲಿ ಶೇಖರಿಸಿದ ನೀರು ಸೇವಿಸುವುದರಿಂದ ವಾತಾ, ಪಿತ್ತ ಮತ್ತು ಕಫದಂತಹ ದೋಷಗಳನ್ನು ನಿವಾರಿಸುತ್ತದೆ ಎಂದು ಆಯುರ್ವೇದ ಈಗಾಗಲೇ ದೃಢಪಡಿಸಿದೆ. ಹಾಗೆ ತಾಮ್ರದ ಪಾತ್ರೆಯಲ್ಲಿ ನೀರು ಕುಡಿಯುವುದರಿಂದ ಬಹುತೇಕ ವಯಸ್ಕರಲ್ಲಿ ಕಾಡುವ ಕೀಲು ನೋವಿನಿಂದ ಪರಿಹಾರ ಸಹ ಸಿಗುತ್ತದೆ.
ತಾಮ್ರದ ಪಾತ್ರೆಯಲ್ಲಿ ಶೇಖರಿಸಿದ ನೀರು ಹೊಟ್ಟೆ, ಯಕೃತ್ತು ಮತ್ತು ಮೂತ್ರಪಿಂಡಗಳನ್ನು ನಿರ್ವಿಷಗೊಳಿಸಲು ಸಹಾಯ ಮಾಡುತ್ತದೆ. ಇದು ಎಲ್ಲಾ ರೀತಿಯ ಬ್ಯಾಕ್ಟೀರಿಯಾಗಳನ್ನು ಕೊಲ್ಲುವ ಗುಣವನನ್ನು ಹೊಂದಿದೆ. ಹಾಗೆ ತಾಮ್ರದ ಅಂಶ ನಮ್ಮ ದೇಹ ಸೇರುವುದು ಹಲವು ರೀತಿಯಲ್ಲಿ ಉತ್ತಮವಾಗಲಿದೆ. ರಕ್ತಹೀನತೆ ಮತ್ತು ಕಬ್ಬಿಣದ ಕೊರತೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಶೀತ ವಾತಾವರಣದಲ್ಲಿ ತಾಮ್ರದ ಪಾತ್ರೆ ಬಳಕೆ ಮಾಡಿದರೆ ಉತ್ತಮ.
ಅತೀಯಾಗಿ ನೀರು ಸೇವಿಸಿದರೆ ಏನಾಗುತ್ತದೆ?
ಆಯುರ್ವೇದದಲ್ಲಿ ನೀರನ್ನು ಹೇಗೆ? ಯಾವಾಗ ಕುಡಿಯಬೇಕು ಎಂಂದು ಹೇಳಿರುವ ಜೊತೆಗೆ ಅತೀಯಾಗಿ ನೀರು ಸೇವಿಸುವುದು ಏನೆಲ್ಲಾ ಸಮಸ್ಯೆಗಳ ತರಲಿದೆ ಎಂಬುದನ್ನು ಸಹ ವಿವರಿಸಲಾಗಿದೆ. ಅದರ ಪ್ರಕಾರ, ಹೆಚ್ಚು ನೀರು ಕುಡಿದಾಗ ನೀರಿನ ವಿಷ, ಅಮಲು ಉಂಟಾಗುವ ಸ್ಥಿತಿ ಎದುರಿಸಬೇಕಾಗುತ್ತದೆ ಎಂದು ಹೇಳಲಾಗಿದೆ. ದೇಹದ ತೂಕದ ಅನುಗುಣವಾಗಿ ಪ್ರತಿ 20 ಕೆಜಿಗೆ 1 ಲೀಟರ್ ನೀರು ಕುಡಿಯಬೇಕು ಎಂದು ಹೇಳಲಾಗಿದೆ. ದೇಹದಲ್ಲಿನ ಹೆಚ್ಚುವರಿ ನೀರು ದೇಹದ ಉಪ್ಪಿನಂಶವನ್ನು ಕಡಿಮೆ ಮಾಡುತ್ತದೆ ಮತ್ತು ಜೀವಕೋಶಗಳು ಊದಿಕೊಳ್ಳುತ್ತದೆ. ಈ ಊತವು ದೊಡ್ಡದಾಗಿ ಬೆಳೆಯಲು ಕಾರಣವಾಗುತ್ತದೆ ಎಂದು ವಿವರಿಸಲಾಗಿದೆ.



Click it and Unblock the Notifications
