Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ಇರಾನ್-ಇಸ್ರೇಲ್ ಸಂಘರ್ಷ: ಬೆಲೆ ಏರಿಕೆಯ ಭರಿಸಲು ಸಿದ್ಧರಾಗಿ!!
ಇರಾನ್ ಹಾಗೂ ಇರಾಕ್ ನಡುವಿನ ಯುದ್ಧ ಆತಂಕ ದಿನದಿಂದ ದಿನಕ್ಕೆ ಹೆಚ್ಚಳ ಆಗುತ್ತಲೇ ಇದೆ. ಅದರಲ್ಲೂ ಎರಡು ದೇಶಗಳ ನಡುವಿನ ಸಂಬಂಧ ಸೇರಿ ಹಲವು ದೇಶಗಳೊಂದಿಗಿನ ಸಂಬಂಧಗಳು ಕೂಡ ಹೆಚ್ಚಾಗಿವೆ. ಕಳೆದೊಂದು ವಾರದಿಂದ ಎರಡು ದೇಶಗಳ ನಡುವೆ ಭಾರೀ ಪ್ರಮಾಣದಲ್ಲಿ ಕ್ಷಿಪಣಿ ದಾಳಿ ಆಗುತ್ತಿದೆ. ಹಾಗೆ ಸಾವು ನೋವಿನ ಸಂಖ್ಯೆ ಕೂಡ ಹೆಚ್ಚಾಗುತ್ತಿದೆ.
ಮಧ್ಯಪ್ರಾಚ್ಯ ದೇಶಗಳಲ್ಲಿ ಯುದ್ದದ ಆತಂಕ ಇದ್ದರೂ ಏಷ್ಯಾ ಭಾಗದ ಹಲವು ದೇಶಗಳ ಮೇಲೆ ಇದರ ಪರಿಣಾಮ ಉಂಟಾಗಲಿದೆ. ಈ ಪರಿಣಾಮ ಸಾಮಾನ್ಯವಾಗಿರುವುದಿಲ್ಲ. ಏಕೆಂದರೆ ಏಷ್ಯಾ ಹಾಗೂ ಯೂರೋಪ್ ದೇಗಗಳೇ ಹೆಚ್ಚಾಗಿ ತೈಲ ಆಮದು ಮಾಡಿಕೊಳ್ಳುತ್ತೆ. ಹೀಗಾಗಿ ಏಷ್ಯಾ ಭಾಗದಲ್ಲಿ ತೈಲ ಏರಿಕೆಯ ಭೀತಿ ಹೆಚ್ಚಳವಾಗಿದೆ.

ಇರಾನ್ ದೇಶಕ್ಕೆ ಆದಾಯ ಗಳಿಸುವ ಮೂಲ ಎಂದರೆ ಅದು ತೈಲವಾಗಿದೆ. ಹಲವು ದೇಶಗಳಿಗೆ ಇರಾನ್‌ನಂದ ತೈಲ ಆಮದಾಗುತ್ತದೆ. ಭಾರತ ಕೂಡ ಇರಾನ್‌ನಿಂದ ತೈಲ ಆಮದು ಮಾಡಿಕೊಳ್ಳುವ ದೇಶಗಳಲ್ಲಿ ಒಂದಾಗಿದೆ. ಆದ್ರೆ ಈಗ ಈ ನೈಸರ್ಗಿಕ ಅನಿಲ ಉದ್ಯಮಗಳನ್ನೇ ಗುರಿಯಾಗಿಸಿಕೊಂಡು ಇಸ್ರೇಲ್ ದಾಳಿ ನಡೆಸುತ್ತಿದೆ. ಇದು ಇರಾನ್ ಮಾತ್ರವಲ್ಲ ಹಲವು ದೇಶಗಳ ಆತಂಕಕ್ಕೆ ಕಾರಣವಾಗಿದೆ.
ಭಾರತದಲ್ಲಿ ತೈಲ ದರ ಏರಿಕೆಯಾಗುತ್ತಾ?
ಹಿಂದೆ ರಷ್ಯಾ ಹಾಗೂ ಉಕ್ರೇನ್ ನಡುವಿನ ಯುದ್ಧದ ಸಮಯದಲ್ಲಿ ಭಾರತವೂ ಸೇರಿ ಜಾಗತಿಕವಾಗಿ ಕಚ್ಚಾ ತೈಲದರದ ಏರಿಕೆಯ ಬಿಸಿಗೆ ತುತ್ತಾಗಿದ್ದವು. ಈಗ ಇರಾನ್ ಹಾಗೂ ಇಸ್ರೇಲ್ ನಡುವಿನ ಸಂಘರ್ಷದಲ್ಲೂ ಕೂಡ ತೈಲ ದರ ಮತ್ತೆ ಹೆಚ್ಚಳವಾಗುವ ಭೀತಿ ಇದೆ. ಜಾಗತಿಕ ತೈಲ ನಿಕ್ಷೇಪಗಳಲ್ಲಿ ಇರಾನ್ ಶೇ. 9ರಷ್ಟು ನಿಕ್ಷೇಪಗಳನ್ನು ಹೊಂದಿದೆ. ಪ್ರತಿ ದಿನ 1.5 ರಿಂದ 2 ಮಿಲಿಯನ್ ಬ್ಯಾರೆಲ್ ತೈಲವನ್ನು ರಫ್ತು ಮಾಡುತ್ತದೆ. ಇಸ್ರೇಲ್ ದಾಳಿಯಿಂದಾಗಿ ಇರಾನ್‌ನಲ್ಲಿ ತೈಲ ಉತ್ಪಾದನೆ ಕುಂಠಿತಗೊಂಡಿದೆ. ಹಾಗೆ ತೈಲ ಉತ್ಪಾದನಾ ಘಟಕಗಳು ತೀವ್ರ ಕಟ್ಟೆಚ್ಚರದಲ್ಲಿದ್ದು, ಆಮದು ಕೂಡ ಕಡಿಮೆಯಾಗಿದೆ. ಇದು ಜಾಗತಿಕವಾಗಿ ತೈಲ ಬೆಲೆ ಏರಿಕೆಯ ಆತಂಕ ಹುಟ್ಟಿಸಿದೆ. ಈ ಸಂಘರ್ಷ ಮುಂದುವರೆದು ತೈಲ ಸರಬರಾಜು ಪ್ರಮಾಣದಲ್ಲಿ ಕಡಿಮೆಯಾದರೆ ಮುಂದಿನ ಒಂದು ವಾರದಲ್ಲಿ ಮಾರುಕಟ್ಟೆಯಲ್ಲಿ ತೈಲ ದರದ ಬಿಸಿ ನೋಡಬೇಕಾಗಬಹುದು.
ಇಸ್ರೇಲ್-ಇರಾನ್ ಸಂಘರ್ಷ ಏಕೆ?
ಇಸ್ರೇಲ್ ಹಾಗೂ ಇರಾನ್ ಯಾವುದೇ ಭೂ ಭಾಗ ಹಂಚಿಕೊಂಡಿಲ್ಲ, ಯಾವ ಒಪ್ಪಂದ, ಗಡಿ ರೇಖೆ ಇದ್ಯಾವುದೂ ಇಲ್ಲ, ಆದರೂ ಎರಡು ದೇಶಗಳ ನಡುವೆ ಸಂಘರ್ಷವಿದೆ. ಆದ್ರೆ ಎರಡು ದೇಶದ ನಡುವೆ ಸಂಘರ್ಷಕ್ಕೆ ಕಾರಣವಾಗಿರುವುದು ಪ್ರತಿಷ್ಠೆ ಹಾಗೂ ತಾನೇ ಬಲಶಾಲಿ ಎಂದು ನಿರೂಪಿಸಲು ಹೊರಟಿರುವ ಮೊಂಡುತನ ಎನ್ನಬಹುದು. ಇಸ್ರೇಲ್ ತನ್ನ ಸುತ್ತಲಿನ ದೇಶಗಳಿಂದ ಆಗಾಗ ಅಪಾಯ ಎದುರಿಸುತ್ತದೆ. ಅಲ್ಲಿ ಭಯೋತ್ಪಾದಕ ದಾಳಿ, ಬಂಡುಕೋರರಿಂದ ದಾಳಿಯಂತಹ ಕಾರ್ಯ ನಡೆಯುತ್ತಲೇ ಇರುತ್ತದೆ. ಇದಕ್ಕೆ ಇರಾನ್ ಶಸ್ತ್ರಾಸ್ತ್ರ ಪೂರೈಸುತ್ತಿದೆ ಎಂಬುದು ಇಸ್ರೇಲ್ ವಾದವಾಗಿದೆ. ಹಾಗೆ ಇರಾನ್ ಅಣ್ವಸ್ತ್ರ ಹೊಂದಿರುವ ದೇಶಗಳ ಪಟ್ಟಿಗೆ ಸೇರಬೇಕು ಎಂಬ ಬಯಕೆಯಲ್ಲಿದೆ. ಆದ್ರೆ ಇರಾನ್‌ಗೆ ಅಣ್ವಸ್ತ್ರದ ಬಲ ಬಂದರೆ ಇಸ್ರೇಲ್‌ಗೆ ಅಪಾಯ ಎಂದು ಅರಿತುಕೊಂಡಿದೆ. ಹೀಗಾಗಿ ಇಬ್ಬರ ನಡುವಿನ ಈ ಪ್ರತಿಷ್ಠೆಯ ಕಿಡಿ ಈಗ ಎರಡೂ ದೇಶಗಳ ಸುಡುತ್ತಿದೆ.
ಎರಡು ದೇಶಗಳ ನಡುವಿನ ಸಂಘರ್ಷ ಇದು ಮೊದಲೇನಲ್ಲ. ಇದಕ್ಕೂ ಮೊದಲು ಹಲವು ಬಾರಿ ಯುದ್ಧ ಭೀತಿ ಆವರಿಸಿದ್ದು ನಾವು ನೋಡಬಹುದು. ಸದ್ಯ ಇಸ್ರೇಲ್ ಸಂಘರ್ಷವನ್ನು ನಿಲ್ಲಿಸುವ ಲಕ್ಷಣ ಕಾಣಿಸುತ್ತಿಲ್ಲ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಒಪ್ಪಂದ ನಡೆದರೆ ಮಾತ್ರವೇ ಎರಡು ರಾಷ್ಟ್ರಗಳ ನಡುವಿನ ಈ ಘರ್ಷಣೆಗೆ ವಿರಾಮ ನೀಡಬಹುದು.



Click it and Unblock the Notifications

