Latest Updates
-
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್! -
ವಿಶ್ವ ಛಾಯಾಗ್ರಹಣ ದಿನ: ಮನೆಯಲ್ಲೇ ಫೋಟೋ ಸ್ಟುಡಿಯೋ ಮಾಡಿ, ನಿಮ್ಮ ಗಿಡಗಳ ಫೋಟೋ ವೈರಲ್ ಆಗುವಂತೆ ಕ್ಲಿಕ್ ಮಾಡಿ! -
98% ಅಂಕ ಪಡೆದರೂ ಅಂಗಡಿ ಬಂದ್: FDAಗೆ ಹೈಕೋರ್ಟ್ ತರಾಟೆ, ಕಲಬೆರಕೆ ಸಿಹಿ ಪತ್ತೆಹಚ್ಚುವುದು ಹೇಗೆ? -
BWF ವಿಶ್ವ ಚಾಂಪಿಯನ್ಷಿಪ್ 2026: ಲಕ್ಷ್ಯ ಸೇನ್ ಅಬ್ಬರಕ್ಕೆ ದೆಹಲಿ ಸಜ್ಜು, ಲೈವ್ ಮಿಸ್ ಮಾಡ್ಬೇಡಿ! -
ವಿಶ್ವ ಹಿರಿಯ ನಾಗರಿಕರ ದಿನ: ಪೋಷಕರ ಆರೋಗ್ಯ ಮತ್ತು ಸಮತೋಲನ ಹೆಚ್ಚಿಸುವ ಸರಳ ಬೆಳಗಿನ ವ್ಯಾಯಾಮಗಳು -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಪ್ಪಿಸಲು ಇಲ್ಲಿದೆ 12 ನಿಮಿಷದ ಸೂತ್ರ! -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಡೆಯಲು ಈ 'ಕಪಲ್ ಸ್ಕ್ರಿಪ್ಟ್ಸ್' ಬಳಸಿ!
ಮಹಿಳಾ ದಿನ: ಮಾರ್ಚ್ 8ರಂದು ನೇರಳೆ ಬಣ್ಣ ಬಳಸುವುದು ಏಕೆ? ಈ ಬಣ್ಣ ಏನು ಸೂಚಿಸುತ್ತದೆ?
ಮಾರ್ಚ್ 8 ಮಹಿಳಾ ದಿನವನ್ನು ಆಚರಿಸಲಾಗುವುದು. ಮಹಿಳೆ ಸಾಮಾಜಿಕವಾಗಿ, ಆರ್ಥಿಕವಾಗಿ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಗಮನ ಚೆಲ್ಲಿ, ಅವರನ್ನು ಮತ್ತಷ್ಟು ಸಬಲರನ್ನಾಗಿಸಲು ಈ ದಿನವನ್ನು ಆಚರಿಸಲಾಗುವುದು. ಈ ದಿನ ಸವಾಲುಗಳನ್ನು ಎದುರಿಸಿ ಸಾಧನೆ ಮಾಡಿದ ಮಹಿಳೆಯರನ್ನು ಗೌರವಿಸಲಾಗುವುದು.
ಒಂದು ಮನೆಯ ಬೆಳಕು ಮಹಿಳೆ. ಆದರೆ ಎಷ್ಟೋ ಮಹಿಳೆಯರು ಇನ್ನೂ ದೌರ್ಜನ್ಯಕ್ಕೆ ಒಳಗಾಗುತ್ತಿದ್ದಾರೆ, ಅವರು ಅನುಭವಿಸುತ್ತಿರುವ ದೌರ್ಜನ್ಯದ ವಿರುದ್ಧ ದ್ವನಿ ಎತ್ತಲೂ ಸಾಧ್ಯವಾಗದೆ ನೋವು ಅನುಭವಿಸುತ್ತಿರುತ್ತಾಳೆ, ಆದರೆ ಇನ್ನು ಕೆಲವು ಮಹಿಳೆಯರು ಈ ದೇಶದ ಉನ್ನತ ಹುದ್ದೆಯನ್ನು ಅಲಂಕರಿಸಿದ್ದಾರೆ. ಈ ರೀತಿಯ ಮಹಿಳೆಯರು ಇತರ ಮಹಿಳೆಯರಿಗೆ ಸ್ಪೂರ್ತಿಯಾಗಬೇಕಾಗಿದೆ, ಮಹಿಳೆಯರಲ್ಲಿ ಆತ್ಮವಿಶ್ವಾಸ ಹೆಚ್ಚಿಸಲು, ಅವಳು ಮಹಿಳೆ ಎಂಬ ಸ್ಥಾನವನ್ನು ಗೌರವದಿಂದ ಅಲಂಕರಿಸಲು ಈ ದಿನವನ್ನು ಆಚರಿಸಲಾಗುವುದು.

ಮಗಹಿಳೆಯರ ದಿನದಂದು ನೀಲಿ ಬಣ್ಣ ಬಳಸುತ್ತಾರೆ, ಸಾಮಾನ್ಯವಾಗಿ ಗಂಡು-ಹೆಣ್ಣು ಎಂಬುವುದನ್ನು ಪಿಂಕ್, ನೀಲಿ ಬಣ್ಣದಲ್ಲಿ ಹೇಳಲಾಗುವುದು, ಆದರೆ ಮಹಿಳಾ ದಿನದಂದು ನೇರಳ ಬಣ್ಣದ ಚಿಹ್ನೆ ಬಳಸಲಾಗುವುದು.
ಮಹಿಳಾ ದಿನಕ್ಕೆ ನೇರಳೆ ಬಣ್ಣದ ಪ್ರಾಮುಖ್ಯತೆಯೇನು?
ಮಹಿಳಾ ದಿನದಂದು ನೀಲಿ, ನೇರಳೆ, ಹಸಿರು, ಬಿಳಿ ಪ್ರಮುಖ ಬಣ್ಣಗಳಾಗಿವೆ, ನೆರಳ ಗೌರವ ಹಾಗೂ ನ್ಯಾಯಾದ ಸಂಕೇತ. ಮಹಿಳೆಯರಿಗೆ ಗೌರವ ಸಿಗಬೇಕು, ಅವಳಿಗೆ ಎಲ್ಲಿಯೂ ಅನ್ಯಾಯವಾಗಬಾರದು ಎಂಬ ಸೂಚನೆಯಾಗಿದೆ.
ಅಮೆರಿಕದ ನ್ಯಾಷನಲ್ ವುಮನ್ ಪಾರ್ಟಿ ನೇರಳೆ, ಬಿಳಿ, ಗೋಲ್ಡ್ ಬಣ್ಣವನ್ನು ಆಯ್ದುಕೊಂಡಿತು. ನೇರಳೆ ನಿಯತ್ತು, ಬಿಳಿ ಶುದ್ಧತೆಯ ಸಂಕೇತವಾಗಿದೆ.
ಬಹುತೇಕ ಮಹಿಳೆಯರ ಬದುಕು ಇನ್ನೂ ಬದಲಾಗಬೇಕಾಗಿದೆ
ನಾವಿಂದು ಮಹಿಳೆ ಇರದ ಸ್ಥಳಗಳಲ್ಲಿ, ಅಡುಗೆ ಮನೆಗೆ ಮಾತ್ರ ಸೀಮಿತವಾಗಿರದೆ ಬಾಹ್ಯಾಕಾಶಕ್ಕೆ ಕೂಡ ಹೋಗಿ ಬರುತ್ತಿದ್ದಾಳೆ ಎಂದು ಹೆಮ್ಮೆಯಿಂದ ಹೇಳುತ್ತೇವೆ, ಮಹಿಳೆಯರು ದೊಡ್ಡ-ದೊಡ್ಡ ಅದಿಕಾರಿಗಳಾಗಿದ್ದಾರೆ, ಉದ್ಯಮಿಗಳಾಗಿದ್ದಾರೆ , ಅರ್ಥಶಾಸ್ತ್ರಜ್ಞರು, ವಕೀಲರು, ನ್ಯಾಯಾಧೀಶರು ಹೀಗೆ ದೊಡ್ಡ ಹುದ್ದೆಗ:ನ್ನು ಅಲಂಕರಿಸುತ್ತಿದ್ದಾರೆ, ಇದು ಖುಚಿಯ ವಿಚಾರ, ಆದರೆ ಇದು ಎಷ್ಟು ಹೆಣ್ಣು ಮಕ್ಕಳು ಎಂದು ನೋಡಿದಾಗ ಆಘಾತವಾಗುವುದು ಸಹಜ.
ಇಂದಿಗೂ ಶೋಷಣೆಗೆ ಒಳಗಾಗುತ್ತಿದ್ದಾರೆ
ಅವಳನ್ನು ಭೋಗದ ವಸ್ತುವಾಗಿ ಕಾಣುವ ಕೆಟ್ಟ ಮನಸ್ಸಿನವರು ನಮ್ಮ ನಡುವೆ ಇನ್ನೂ ಇದ್ದಾರೆ, ಹಾಗಾಗಿಯೇ ಇಂದಿಗೂ ಲೈಂಗಿಕ ಅತ್ಯಾಚಾರ ತಪ್ಪಿಲ್ಲ, ಅವಳ ಮೇಲಾಗುತ್ತಿರುವ ಕೌಟುಂಬಿಕ ದೌರ್ಜನ್ಯ ತಪ್ಪಿಲ್ಲ, ಎಷ್ಟೋ ಹೆಣ್ಣು ಮಕ್ಕಳು ದಿನಾ ಕಣ್ಣೀರಿನಲ್ಲಿ ಬದುಕುತ್ತಿದ್ದಾರೆ, ಪ್ರತಿಯೊಂದು ಹೆಣ್ಣು ಮಕ್ಕಳು ಬೆಳೆಯುವಂತೆ ಆಗಬೇಕು, ಹಾಗಾಗಬೇಕಾದರೆ ಏನು ಬದಲಾವಣೆಯಾಗಬೇಕು?
ಹೆಣ್ಣು ಸಬಲಳಾಗಲು ಮೊದಲು ಮಾಡಬೇಕಾಗಿರುವುದು ಏನು?
ಇಂದು ಎಷ್ಟೋ ಹೆಣ್ಣು ಮಕ್ಕಳ ಸಮಸ್ಯೆಗೆ ಕಾರಣ ಆರ್ಥಿಕ ಸ್ವತಂತ್ರ್ಯ ಇಲ್ಲದಿರುವುದು, ಯಾವುದೇ ಹೆಣ್ಣು ಮಕ್ಕಳು ಮೊದಲು ಆರ್ಥಿಕವಾಗಿ ಸ್ವತಂತ್ರರಾಗಲು ಪ್ರಯತ್ನಿಸಬೇಕು. ಚಿಕ್ಕ ಕೆಲಸವಾಗಿರಲಿ ದೊಡ್ಡ ಕೆಲಸವಾಗಿರಲಿ ಮೊದಲು ಆರ್ಥಿಕವಾಗಿ ಸ್ವಾವಲಂಬಿಯಾಗಬೇಕು.
ಪೋಷಕರು ಈ ನಿಟ್ಟಿನಲ್ಲಿ ಯೋಚಿಸಬೇಕು?
ಹೆಣ್ಣು ಹೆತ್ತ ಪೋಷಕರಲ್ಲಿ ಬಹುತೇಕರು ಅವಳ ಮದುವೆ ಬಗ್ಗೆ ಯೋಚಿಸುತ್ತಾರೆ, ಆದರೆ ಅದಕ್ಕಿಂತ ಮೊದಲು ಅವಳನ್ನು ಆರ್ಥಿಕ ಸ್ವಾವಲಂಬಿಯನ್ನಾಗಿ ಯೋಚಿಸಬೇಕು, ನಂತರವಷ್ಟೇ ಮದುವೆ ಬಗ್ಗೆ ಯೋಚಿಸಬೇಕು. ಇನ್ನು ಹೆಣ್ಣು ಮಕ್ಕಳು ಅಷ್ಟೇ ಮದುವೆಗೆ ಮೊದಲು ತಾವು ತಮ್ಮ ಸ್ವಂತ ಕಾಲಿನಲ್ಲಿ ನಿಲ್ಲಲು ಅಂದರೆ ಆರ್ಥಿಕ ಸ್ವಾವಲಂಬಿಯಾಗಿರಲು ಪ್ರಯತ್ನಿಸಬೇಕು. ಮೊದಲು ನೀವು ಆರ್ಥಿಕವಾಗಿ ಸ್ವತಂತ್ರರಾದರೆ ನಿಮ್ಮ ಮೇಲಾಗುವ ಅನೇಕ ದೌರ್ಜನ್ಯ ನಿಲ್ಲುತ್ತದೆ, ಕೌಟುಂಬಿಕ ದೌರ್ಜನ್ಯವಾಗುತ್ತಿದ್ದರೆ ಅದರಿಂದ ಹೊರಬರಲು ನಿಮಗೆ ದೈರ್ಯ ಬರುವುದು. ಅವಳು ಆರ್ಥಿಕವಾಗಿ ಸಬಲಳಾದರೆ ಅವಳ ಸಾಮಾಜಿಕ ಗೌರವ ಕೂಡ ಹೆಚ್ಚಾಗುವುದು.



Click it and Unblock the Notifications