Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಭಾರತದ ಪುರಾತನ ಧರ್ಮವಾದ ಜೈನ ಧರ್ಮದ ಕುರಿತ ಈ ಆಸಕ್ತಿಕರ ಸಂಗತಿಗಳು ಗೊತ್ತಾ?
ಜೈನ ಧರ್ಮವು ಭಾರತದ ಅತ್ಯಂತ ಪ್ರಾಚೀನ ಧರ್ಮಗಳಲ್ಲಿ ಒಂದಾಗಿದೆ. ಜೈನ ಧರ್ಮವು ಬೌದ್ಧ ಧರ್ಮಕ್ಕಿಂತ ಪುರಾತನವಾದ ಧರ್ಮವಾಗಿದೆ. ಜೈನ ಧರ್ಮವು ವಿಶ್ವದ ಅನಂತ ಸತ್ಯಗಳ ಮೇಲೆ ಆಧಾರಿತವಾದ ಧರ್ಮವಾಗಿದೆ.
ಜೈನ ಧರ್ಮದಲ್ಲಿ ಒಟ್ಟು 24 ತೀರ್ಥಂಕರಗಳನ್ನು ಆರಾಧಿಸಲಾಗುವುದು. ತೀರ್ಥಂಕರ ಆದಿನಾಥ ಮೊದಲ ತೀರ್ಥಂಕರ ಗುರುವಾದರೆ ಮಹಾವೀರನು 24ನೇಯ ತೀರ್ಥಂಕರ ಗುರುವಾಗಿದ್ದಾರೆ.

ಕರ್ನಾಟಕದಲ್ಲಿ ಜೈನಧರ್ಮದ ನಂಟು ಕ್ರಿ. ಪೂ 6ನೇ ಶತಮಾನದಿಂದಲೂ ಇದೆ ಎನ್ನಲಾಗುವುದು. ಕರ್ನಾಟಕದಲ್ಲಿ ಜೈನ ಧರ್ಮ ಪುರಾತನವಾದ ಧರ್ಮವೆಂಬುವುದಕ್ಕೆ ಹಲವಾರು ಸ್ಮಾರಕಗಳು ದೊರೆಯುತ್ತವೆ. ಗುಡಿ, ಬಸದಿ, ಗೊಮ್ಮಟನ ವಿಗ್ರಹಗಳು, ಸಾಸನಗಳು, ಸ್ತಂಭಗಳು ಜೈನ ಧರ್ಮದ ಬಗ್ಗೆ ಮತ್ತಷ್ಟು ಮಾಹಿತಿಯನ್ನು ನೀಡುವಂಥ ಸ್ಮಾರಕಗಳಾಗಿವೆ.'
ಕರ್ನಾಟಕದಲ್ಲಿ ಅನೇಕ ಬಸದಿಗಳಿವೆ, ಅವುಗಳಲ್ಲಿ ಪ್ರಮುಖ ಬಸದಿಗಳೆಂದರೆ
* ಶ್ರವಣಬೆಳಗೊಳದ ಚಂದ್ರಗಿರಿ, ಚಂದ್ರಗುಪ್ತ ಬಸದಿ ಹಾಗೂ ಚತುರ್ಮುಖ ಬಸದಿ.
* ಇಂದ್ರಗಿರಿಯ ಒದೆಗಲ್ ಬಸದಿ
* ಮೂಡಬಿದ್ರೆ ಸಾವಿರ ಕಂಬದ ಬಸದಿಯಲ್ಲದೆ ಇನ್ನೂ 18 ಬಸದಿಗಳಿವೆ.
* ಕಾರ್ಕಳ ಹಾಗೂ ಗೇರುಸೊಪ್ಪದ ಚತುರ್ಮುಖ ಬಸದಿ
* ಧರ್ಮಸ್ಥಳದ ಚಂದ್ರನಾಥ ಬಸದಿ
* ಬೆಳಗಾವಿಯ ಆದಿನಾಥ ಬಸದಿ
ಕರ್ನಾಟಕದಲ್ಲಿರುವ ಗೊಮ್ಮಟೇಶ್ವರ ವಿಗ್ರಹಗಳ ವಿಶೇಷತೆ
ಶ್ರವಣ ಬೆಳಗೊಳದ ಗೊಮ್ಮಟೇಶ್ವರ ವಿಗ್ರಹ 57.8 ಅಡಿ ಎತ್ತರವಿದೆ
ವೇಣೂರಿನ ಗೊಮ್ಮಟೇಶ್ವರ ವಿಗ್ರಹ 45 ಅಡಿ ಎತ್ತರವಿದೆ
ಕಾರ್ಕಳದ ಗೊಮ್ಮಟೇಶ್ವರ ವಿಗ್ರಹ 42 ಅಡಿ ಎತ್ತರವಿದೆ
ಧರ್ಮಸ್ಥಳದ ಗೊಮ್ಮಟೇಶ್ವರ ವಿಗ್ರಹ 39 ಅಡಿ ಎತ್ತರವಿದೆ
ಗೊಮ್ಮಟಗಿರಿಯ ಗೊಮ್ಮಟೇಶ್ವರ ವಿಗ್ರಹ 20 ಅಡಿ ಎತ್ತರದಲ್ಲಿದೆ.
ಜೈನಧರ್ಮದ ಮುನಿಗಳಲ್ಲಿ 2 ಪಂಗಡಗಳಿವೆ
ಜೈನಧರ್ಮದಲ್ಲಿ ಶ್ವೇತಾಂಬರರು ಹಾಗೂ ದಿಗಂಬರರು ಎಂಬ ಎರಡು ಪಂಗಡಗಳಿವೆ
* ಶ್ವೇತಾಂಬರರು ಬಿಳಿ ವಸ್ತ್ರ ಧರಿಸುತ್ತಾರೆ. ಇವರು ಉತ್ತರ ಭಾರತದಲ್ಲಿ ಕಂಡು ಬರುತ್ತಾರೆ. ಇವರು ಪಾರ್ಶ್ವನಾಥನ ಅನುಯಾಯಿಗಳು
ದಿಗಂಬರು
ಈ ಜೈನ ಮುನಿಗಳು ವಸ್ತ್ರಗಳನ್ನು ಧರಿಸುವುದಿಲ್ಲ, ಇವರು ದಕ್ಷಿಣ ಭಾರತದಲ್ಲಿ ಕಂಡು ಬರುತ್ತಾರೆ.
ದಿಗಂಬರರ ಕಾಶಿಯೆಂದು ಶ್ರವಣಬೆಳಗೊಳವನ್ನು ಕರೆಯಲಾಗುವುದು.
ಜೈನ ಧರ್ಮದಲ್ಲಿ ಈ ತತ್ವಗಳನ್ನು ಪಾಲಿಸಲಾಗುವುದು
ಸತ್ಯ
ಅಹಿಂಸೆ
ಅಸ್ತೇಯ (ಕಳ್ಳತನ ಮಾಡಬಾರದು)
ಅಪರಿಗ್ರಹ: ಅವಶ್ಯಕತೆಗಿಂತ ಹೆಚ್ಚಿನ ಸಂಪತ್ತು ಹೊಂದಬಾರದು
ಬ್ರಹ್ಮಚರ್ಯೆ



Click it and Unblock the Notifications

