Latest Updates
-
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ!
ಬೆಂಗಳೂರ ಬಗ್ಗೆ ಬಾಯಿಗೆ ಬಂದಂತೆ ಮಾತನಾಡಿದವಳಿಗೆ ತಕ್ಕ ಶಾಸ್ತಿ ಕಲಿಸಿದ ಕನ್ನಡಿಗರು, ಆಕೆಯ ಕೆಲಸವೂ ಹೋಯ್ತು
ಕರ್ನಾಟಕದಲ್ಲಿ ಬದುಕು ಕಟ್ಟಿಕೊಳ್ಳೋಕೆ ಬಂದು ನಮ್ಮ ವಿರುದ್ಧವೇ ಮಾತನಾಡುವ ವಿಷ ಜಂತುಗಳು ಇನ್ಮುಂದೆ ಬಾಲ ಬಿಚ್ಚಲು ಹಿಂದೆ ಮುಂದೆ ನೋಡುತ್ತಾರೆ, ಏಕೆಂದರೆ ಕನ್ನಡಿಗರು ಎಲ್ಲಾ ಸಹಿಸಿಕೊಳ್ಳುತ್ತಾರೆ, ಆದರೆ ಕನ್ನಡದ ವಿಷಯಕ್ಕೆ ಬಂದರೆ ಮಾತ್ರ ಸಹಿಸಲ್ಲ, ಮೊನ್ನೆ ಬಾಯಿಗೆ ಬಂದಂತೆ ಮಾತನಾಡಿದ ಸುಗಂಧ್ ಶರ್ಮಾ ಎಂಬ ಮಹಿಳೆಗೆ ಕನ್ನಡಿಗರು ತಕ್ಕ ಪಾಠ ಕಲಿಸಿದ್ದಾರೆ.
ಬೆಂಗಳೂರಿನಲ್ಲಿದ್ದು ಕನ್ನಡಿಗರ ವಿರುದ್ಧ ಮಾತನಾಡಿದಳು
ಆಕೆ ಕನ್ನಡಿಗರನ್ನು ಬಾಯಿಗೆ ಬಂದಂತೆ ಹೇಳಿದರೆ ತನ್ನ ರೀಚ್ ಹೆಚ್ಚಿಸಿಕೊಳ್ಳಬಹುದು ಎಂದು ಯೋಚಿಸಿದ್ದಿರಬಹುದು, ಆಕೆ ಅಂದು ಕೊಂಡಂತೆ ಆ ವೀಡಿಯೋಗೆ ಒಳ್ಳೆಯ ರೀಚ್ ಸಿಕ್ಕಿದೆ, ಎಷ್ಟರ ಮಟ್ಟಿಗೆ ಎಂದರೆ ಆಕೆಗೆ ಕರ್ನಾಟಕದ ನೆಲವನ್ನು ಬಿಟ್ಟು ಓಡಬೇಕಾದ ಪರಿಸ್ಥಿತಿ ಬಂದಿದೆ, ಅವಳಂಥವರು ಕನ್ನಡ ನೆಲದಲ್ಲಿ ಬಂದಿರುವುದು ಕನ್ನಡಿಗರಿಗೆ ಬೇಕಾಗಿಲ್ಲ, ಅವಳು ಅವಳ ಊರಲ್ಲಿ ಆರಾಮವಾಗಿರಲಿ, ಇಲ್ಲಿಂದ ತೊಲಗು ತಾಯಿ ಎಂದು ಸರಿಯಾಗಿಯೇ ಬಿಸಿ ಮುಟ್ಟಿಸಿದ್ದಾರೆ.
ಕನ್ನಡ ಪರ ಹೋರಾಟಗಾರ ರೂಪೇಶ್ ರಾಜಣ್ಣ ಆಕೆ ಕೆಲಸ ಮಾಡುತ್ತಿದ್ದ ಕಂಪನಿಗೆ ಹೋದಾಗ ಆಕೆ ಅಲ್ಲಿ ಕೆಲಸಕ್ಕೆ ರಾಜೀನಾಮೆ ಸಲ್ಲಿಸಿ ಹೋಗಿದ್ದಾಳೆ ಎಂಬುವುದು ತಿಳಿದು ಬಂದಿದೆ. ಅವಳು ಕರ್ನಾಟಕದ ಯಾವುದೆ ಕಂಪನಿಯಲ್ಲಿ ಕೆಲಸ ಮಾಡಲಿಕ್ಕೆ ಸಾಧ್ಯವಾಗದಂಥ ಪರಿಸ್ಥಿತಿ ತನ್ನ ಕೈಯಾರೆ ತಂದುಕೊಂಡಿದ್ದಾಳೆ.

ಆಕೆ ಹೇಳಿದ್ದೇನು?
ಒಂದು ವೀಡಿಯೋದಲ್ಲಿ ಆಕೆ ಹೇಳುತ್ತಾಳೆ ಉತ್ತರ ಭಾರತದವರು ಬೆಂಗಳೂರು ಬಿಟ್ಟು ತೊಲಗಿದರೆ ಪಬ್‌ಗಳು ಖಾಲಿ-ಖಾಲಿಯಾಗುತ್ತವೆ, ಪಬ್‌ಗಳಲ್ಲಿ ಸುಂದರ ಹುಡುಗಿಯರು ಕಾಣ ಸಿಗಲ್ಲ (ಅಂದರೆ ನಮ್ಮ ಕನ್ನಡದ ಹೆಣ್ಮಕ್ಕಳು ರೂಪವಂತಿಯರು ಅಲ್ಲವೇ? ಇನ್ನು ನಮ್ಮ ಮನೆಯ ಮಕ್ಕಳು ಪಬ್‌ಗಿಬ್ ಅಂತ ಹೋಗುವುದಕ್ಕೆ ಯಾವ ಪೋಷಕರು ಒಪ್ಪುವುದೂ ಇಲ್ಲ), ಪಿಜಿಗಳು ಖಾಲಿ ಖಾಲಿಯಾಗುತ್ತವೆ, ಹೀಗಾಗಿ ಮಾತನಾಡುವ ಮುನ್ನ ಆಲೋಚಿಸಿ ಎಂದು ಕನ್ನಡಿಗರಿಗೆ ಉತ್ತರ ಭಾರತದವರನ್ನು ಬಿಟ್ಟರೆ ಗತಿಯೇ ಇಲ್ಲ ಎಂಬ ರೀತಿಯಲ್ಲಿ ಮಾತನಾಡಿದಳು.
ಕನ್ನಡ ನೆಲದಲ್ಲಿ ಇರಲು ಇಷ್ಟವಿಲ್ಲದಿದ್ದರೆ ಬೆಂಗಳೂರು ಬಿಟ್ಟು ಹೋಗುವಂತೆ ಆಗ್ರಹಿಸಿದ ನೆಟ್ಟಿಗರು
ಆಕೆಯ ದುರಂಹಕಾರ ನೋಡಿ ಅಂಥವಳಿಂದ ಕರ್ನಾಟಕಕ್ಕೆ ಏನೂ ಆಗಬೇಕಾಗಿಲ್ಲ, ಅವಳು ಇಲ್ಲಿಂದ ಹೊರಡಲಿ ಎಂದು ಆಗ್ರಹ ವ್ಯಕ್ತಪಡಿಸಲಾರಂಭಿಸಿದರು. ಕನ್ನಡ ಪರ ಹೋರಾಟಗಾರರು ಆಕೆ ಎಲ್ಲಿ ಕೆಲಸ ಮಾಡುತ್ತಿದ್ದಾಳೆ ಎಂದು ತಿಳಿದುಕೊಂಡು ಅಲ್ಲಿಗೆ ಹೋಗಿ ನೋಡಿದರೆ ಹೆದರಿ ರಾಜೀನಾಮೆ ಕೊಟ್ಟು ಪರಾರಿಯಾಗಿದ್ದಾಳೆ, ಅಲ್ಲಾ ಇಲ್ಲೇ ಕೆಲಸಕ್ಕೆ ಅಂತ ಬಂದು ಈ ರೀತಿ ವರ್ತಿಸುವವರಿಗೆ ಈ ರೀತಿ ಅಗಲೇಬೇಕಾಗಿದೆ ತಕ್ಕ ಶಾಸ್ತಿ.
ದೇಶದ ಯಾವ ರಾಜ್ಯಕ್ಕೆ ಹೋದರೂ ಈ ರೀತಿ ಗಾಂಚಾಲಿ ತೋರಿಸಕ್ಕೆ ಆಗಲ್ಲ, ಅದರೆ ಬೆಂಗಳೂರಿಗೆ ಬಂದು ಇಲ್ಲಿಯವರನ್ನೇ ಕೀಳಾಗಿ ಕಾಣುವ ಕೆಟ್ಟ ಮನಸ್ಥಿತಿ
ನಾವು ಉತ್ತರ ಭಾರತದ ಕಡೆಗೆ ಹೋಗಿ ನೆಲೆಸಿದರೆ ಹಿಂದಿ, ತಮಿಳುನಾಡಿಗೆ ಹೋದರೆ ತಮಿಳು, ಕೇರಳಕ್ಕೆ ಹೋದರೆ ಮಲಯಾಳಂ ಅಂತ ಕಲಿಯಬೇಕಾಗುತ್ತದೆ, ಹಾಗಾಗಿ ಅಲ್ಲಿಗೆ ಹೋದ ಒಂದೆರಡು ತಿಂಗಳಿನಲ್ಲಿ ಆ ಭಾಷೆಗಳಲ್ಲಿ ಮಾತನಾಡುತ್ತಾರೆ. ಆದರೆ ಬೆಂಗಳೂರಿಗೆ ಬಂದು ದಶಕಗಳೇ ಕಳೆದರು ಒಂದು ಶಬ್ದವೂ ಕನ್ನಡ ಕಲಿಯಲ್ಲ ಎಂದು ಧೀಮಾಕು ತೋರಿಸುವವರಿಗೇನು ಕಡಿಮೆಯಿಲ್ಲ, ಅದಕ್ಕೆ ತಕ್ಕಂತೆ ನಮ್ಮ ಮಾಲ್‌ಗಳು, ದೊಡ್ಡ ದೊಡ್ಡ ರೆಸ್ಟೋರೆಂಟ್‌ಗಳು. ಅಲ್ಲಿಗೆ ಹೋದಾಗ ಫುಡ್ ಆರ್ಡರ್ ಮಾಡಲು ಹಿಂದಿ ಅಥವಾ ಇಂಗ್ಲಿಷ್‌ನಲ್ಲಿ ಕೇಳಬೇಕು, ಕನ್ನಡದಲ್ಲಿ ಕೇಳಿದರೆ ನಾವೇ ಏನೋ ಅಪರಾಧ ಮಾಡಿದವರಂತೆ ವರ್ತಿಸುತ್ತಾರೆ ಇಂಥ ಮನಸ್ಥಿತಿ ಬದಲಾಗಬೇಕೆಂದರೆ ಪ್ರತಿಯೊಬ್ಬ ಕನ್ನಡಿಗನೂ ಪ್ರಯತ್ನಿಸಬೆಕು.
ನಮ್ಮ ಕನ್ನಡ ಭಾಷೆ ಎಷ್ಟೊಂದು ಸೊಗಸಾಗಿದೆ, ನಮ್ಮ ವ್ಯವಹಾರ ಜ್ಞಾನಕ್ಕೆ ಇತರ ಭಾಷೆ ಕಲಿಯೋಣ, ಆದರೆ ಕರ್ನಾಟಕದಲ್ಲಿ ನಮ್ಮ ನಾವು ಬೇರೆಯವರ ಜೊತೆ ಮಾತನಾಡುವಾಗ ಕನ್ನಡದಲ್ಲಿಯೇ ಮಾತನಾಡೋಣ. ಆವಾಗ ಅವರು ಕೂಡ ಕಲಿಯುತ್ತಾರೆ, ಜೈ ಕರ್ನಾಟಕ...



Click it and Unblock the Notifications
