Latest Updates
-
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್
ಇನ್ಫೂಸಿಸ್‌ನ ಆಫಿಸ್ ಬಾಯ್ ಈಗ ₹2 ಕೋಟಿ ಆದಾಯದ ಕಂಪನಿಯ ಒಡೆಯ..!!
ಯಾರ ಜೀವನ ಯಾವಾಗ, ಯಾವ ಕ್ಷಣದಲ್ಲಿ ಬದಲಾಗುತ್ತದೆ ಅನ್ನೋದನ್ನ ಯಾರು ಸಹ ಊಹಿಸಲು ಸಾಧ್ಯವಿಲ್ಲ. ಹಾಗೆ ಯಾರ ಅದೃಷ್ಟದಿಂದ ಉತ್ತುಂಗಕ್ಕೆ ಏರಬಹುದು ಯಾವಾಗ ಜೀವನ ಬದಲಾಗಬಹುದು ಎಂಬುದು ಸಹ ಅರಿವಿರುವುದಿಲ್ಲ. ಹಾಗೆ ಕಷ್ಟಪಟ್ಟು ಕೆಲಸ ಮಾಡಿದರೆ ಅದರ ಪ್ರತಿಫಲ ಸಿಕ್ಕೆ ಸಿಗುತ್ತದೆ ಎಂಬ ಮಾತು ಸಹ ಸತ್ಯವಾದ ಅದೆಷ್ಟೋ ಪ್ರಸಂಗಗಳ ನಾವು ನೋಡಿದ್ದೇವೆ, ಕೇಳಿದ್ದೇವೆ ಕೂಡ.
ಕಷ್ಟ ಪಟ್ಟು ದುಡಿದರೆ, ತಮ್ಮ ದುಡಿಮೆಯನ್ನೇ ಶ್ರದ್ಧೆಯಿಂದ ಮಾಡಿದರೆ ಎಂತಹ ಯಶಸ್ಸನ್ನಾದರು ಗಳಿಸಬಹುದು ಎಂಬುದಕ್ಕೆ ಈ ದಾದಾಸಾಹೇಬ್ ಭಗತ್ ಎಂಬಾತನೇ ಜೀವಂತ ಸಾಕ್ಷಿ. ಆತ ಮಹಾರಾಷ್ಟ್ರದ ಬೀಡ್ ಎಂಬ ಪುಟ್ಟ ಗ್ರಾಮವೊಂದರಿಂದ ಬಂದು ದೊಡ್ಡ ಕಂಪನಿಯಲ್ಲಿ ಆಫಿಸ್ ಬಾಯ್ ಆಗಿ ಕೆಲಸ ಮಾಡಿ ಈಗ ಕಂಪನಿ ಸಿಇಒ ಆಗಿ ಬೆಳೆದು ನಿಂತಿದ್ದಾನೆ.

ಸಣ್ಣ ಹಳ್ಳಿಯಾಗಿ ಹುಟ್ಟಿ ಬೆಳೆದ ದಾದಾಸಾಹೇಬ್ ಭಗತ್ ಪ್ರೌಢಶಾಲೆ ಮುಗಿಸುತ್ತಿದ್ದಂತೆ ದೊಡ್ಡ ಕನಸಿನೊಂದಿಗೆ ಪುಣೆಗೆ ಬಂದಿಳಿದಿದ್ದ. ಆತನಿಗೆ ಓದಿಗಿಂತಲೂ ಕೆಲಸ ಮಾಡುವುದೇ ಆ ಸಮಯಕ್ಕೆ ಮುಖ್ಯವಾಗಿತ್ತು. ಹೀಗಾಗಿ ಕೆಲಸಕ್ಕಾಗಿ ಆತ ಬೀದಿ ಬೀದಿ ಅಲೆದಾಡಿದ್ದ. ಈ ವೇಳೆ ರೂಮ್ ಬಾಯ್ ಆಗಿ ತಿಂಗಳಿಗೆ ಕೇವಲ 9 ಸಾವಿರ ರೂಪಾಯಿ ಪಡೆಯುವ ಕೆಲಸಕ್ಕೆ ಸೇರಿದರು. 2009ರಲ್ಲಿ ಆತ ಈ ಕೆಲಸ ಪಡೆದಿದ್ದನಂತೆ.
ಇದಾದ ಬಳಿಕ ಇನ್ಫೋಸಿಸ್ ಕಂಪನಿಗೆ ಆಫಿಸ್ ಬಾಯ್ ಆಗಿ ಸೇರಿದ್ದರಂತೆ. ಈ ವೇಳೆಗಾಗಲೆ ಅವರಲ್ಲಿ ಸಾಫ್ಟ್‌ವೇರ್, ಕೋಡಿಂಗ್ ಕುರಿತಂತೆ ಆಸಕ್ತಿ ಮೂಡಿತ್ತು. ಇದೇ ಆಫಿಸ್‌ನಲ್ಲಿ ಟೀ, ಕಾಫಿ, ಊಟ, ತಿಂಡಿ, ನೀರು ಕೊಡುವ ಕಾರ್ಯ ಮಾಡುತ್ತಿದ್ದರು. ಆದರೆ ಸಾಫ್ಟ್‌ವೇರ್‌ನಲ್ಲಿ ಆಸಕ್ತಿ ಇದ್ದರೆ ಏನು ಮಾಡಲು ಸಾಧ್ಯವಿಲ್ಲ ಆ ಕುರಿತ ಡಿಗ್ರಿಯ ಅಗತ್ಯವಿದೆ ಎಂದು ತಿಳಿದುಕೊಂಡರು.
ಹೀಗಾಗಿ ಹಗಲು ಕೆಲಸ ಮಾಡಿ ರಾತ್ರಿ ಕಾಲೇಜು ಸೇರಿದರು. ಅನಿಮೇಷನ್ ಮತ್ತು ಡಿಸೈನರ್ ಕೋರ್ಸ್ ತೆಗೆದುಕೊಂಡರು. ಬಳಿಕ ಮುಂಬೈ ಬಿಟ್ಟು ಹೈದರಾಬಾದ್‌ಗೆ ತೆರಳಿದರು ಇನ್ನು ಡಿಸೈನಿಂಗ್ ಗ್ರಾಫಿಕ್ಸ್ ಕೆಲಸ ಮಾಡುವಾಗಲೇ ಕೋಡಿಂಗ್ ಕಲಿಯಲು ಮುಂದಾದರು. ಕೋಡಿಂಗ್ ಕಲಿತ ಅವರು ಮುಂಬೈಗೆ ಮರಳಿದರು. ಅಲ್ಲಿ ಫ್ರೈಮ್ ಫೋಕರ್ಸ್ ವರ್ಲ್ಡ್ ಸಂಸ್ಥೆಯಲ್ಲಿ ರೋಟೋ ಆರ್ಟಿಸ್ಟ್ ಆಗಿ ಕೆಲಸ ಮಾಡಲು ಆರಂಭಿಸಿದರು. ಈ ಸಂಸ್ಥೆ ಹಾಲಿವುಡ್ ಸಿನಿಮಾಗಳಿಗೂ ವಿಎಫ್ಎಕ್ಸ್, ಗ್ರಾಫಿಕ್ಸ್, ಅನಿಮೇಷನ್ ನೀಡುತ್ತಿತ್ತು.
ಅನಿಮೇಷನ್ ಕೋರ್ಸ್ ಮುಗಿಸಿದ ನಂತರ, ದಾದಾಸಾಹೇಬ್ ಭಗತ್ ಮುಂಬೈನಲ್ಲಿ ತಮ್ಮ ಮೊದಲ ನಿಜವಾದ ಉದ್ಯೋಗವನ್ನು ಪಡೆದರು. "ನಾರ್ನಿಯಾ" ಮತ್ತು "ಸ್ಟಾರ್ ವಾರ್ಸ್" ನಂತಹ ಹಾಲಿವುಡ್ ಚಲನಚಿತ್ರಗಳಿಗೆ ಕೊಡುಗೆ ನೀಡಿದ ಪ್ರೈಮ್ ಫೋಕಸ್ ವರ್ಲ್ಡ್‌ನಲ್ಲಿ ರೋಟೋ ಆರ್ಟಿಸ್ಟ್ ಆಗಿ ಕೆಲಸ ಮಾಡುವುದನ್ನು ಅವರ ವೃತ್ತಿಜೀವನವು ಕಂಡಿತು. ಅವರು ರಿಲಯನ್ಸ್ ಮೀಡಿಯಾವರ್ಕ್ಸ್ ಲಿಮಿಟೆಡ್ ಮತ್ತು ಮ್ಯಾಜಿಕ್ ಎನ್ ಕಲರ್ಸ್ ಇಂಕ್‌ನಲ್ಲಿ ತಮ್ಮ ಕೌಶಲ್ಯಗಳನ್ನು ಮತ್ತಷ್ಟು ಹೆಚ್ಚಿಸಿಕೊಂಡರು, ವಿವಿಧ ಅನಿಮೇಷನ್ ಮತ್ತು ದೃಶ್ಯ ಪರಿಣಾಮಗಳ ಯೋಜನೆಗಳಲ್ಲಿ ಕೆಲಸ ಮಾಡಿದರು.
ಇದಾದ ಬಳಿಕ ಭಗತ್ 2015ರಲ್ಲಿ ತಮ್ಮದೆ ಅನಿಮೇಷನ್ ಸಂಸ್ಥೆ ತೆರೆಯಲು ಮುಂದಾದರು, ಬಳಿಕ ಇದಕ್ಕೆ Ninthmotion ಎಂದು ಹೆಸರಿಟ್ಟರು. ಇದು ಬಿಬಿಸಿ ಮತ್ತು 9XM ಎಂಬ ದೊಡ್ಡ ದೊಡ್ಡ ಚಾನಲ್‌ಗಳಿಗೆ ತಮ್ಮ ಅನಿಮೇಷನ್ ಹಂಚಿಕೊಂಡಿತು, ಇಲ್ಲಿಂದ ಭಗತ್ ಜೀವನ ಸಂಪೂರ್ಣ ಬದಲಾಯಿತು. ಇದಾಗಿ ಭಗತ್ ಡೂಗ್ರಾಫಿಕ್ಸ್ ಎಂಬ ಸಂಸ್ಥೆ ಕಟ್ಟಿದರು. ಮಹಾರಾಷ್ಟ್ರ, ದೆಹಲಿ, ಬೆಂಗಳೂರು ಮತ್ತು ಅಂತರರಾಷ್ಟ್ರೀಯ ಸ್ಥಳಗಳು ಸೇರಿದಂತೆ ವಿವಿಧ ಪ್ರದೇಶಗಳಿಂದ 10,000 ಸಕ್ರಿಯ ಬಳಕೆದಾರರನ್ನು ಡೂಗ್ರಾಫಿಕ್ಸ್ ಹೊಂದಿತ್ತು. ಈಗ ಈ ಕಂಪನಿ ವಾರ್ಷಿಕ 2 ಕೋಟಿಗೂ ಹೆಚ್ಚಿನ ಆದಾಯ ಗಳಿಸುತ್ತಿದೆ.



Click it and Unblock the Notifications
