Latest Updates
-
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು?
ಹೋಟೆಲ್ ಬಿಲ್ ನೀಡಲು ಹುಡುಗರನ್ನು ಜಾಲಕ್ಕೆ ಬೀಳಿಸುವುದು ಹೇಗೆ? ಯುವತಿಯ ವಿಡಿಯೋ ವೈರಲ್..!
ಆನ್‌ಲೈನ್‌ನಲ್ಲಿ ತಾವು ಫೇಮಸ್ ಆಗಬೇಕು ಅನ್ನೋ ಬರದಲ್ಲಿ ಯಡವಟ್ಟು ಮಾಡಿಕೊಳ್ಳುವವರಿಗೇನು ಕಡಿಮೆ ಇಲ್ಲ. ಕೆಲವರು ಗೊತ್ತಿದ್ದೂ ಇಂತಹ ಯಡವಟ್ಟು ಮಾಡಿಕೊಂಡರೆ ಇನ್ನೂ ಕೆಲವರು ಏನೋ ಮಾಡಲು ಇನ್ನೇನೋ ಮಾಡಿ ಜನರ ಕೈಲಿ ಸಿಕ್ಕಿಬೀಳ್ತಾರೆ. ಇಲ್ಲೊಬ್ಬ ಯುವತಿ ಸಹ ಈ ರೀತಿ ವಿಡಿಯೋವೊಂದು ಮಾಡಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಜನರು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ.
ಇನ್ಸ್‌ಸ್ಟಾಗ್ರಾಮ್‌ನಲ್ಲಿ ವೀವ್ಸ್‌ಗಾಗಿ ವಿಡಿಯೋ ಮಾಡಿದ್ದ ಆಕೆ ತನ್ನನ್ನು ಇನ್‌ಫ್ಲುಯೆನ್ಸರ್ ಎಂದು ಕರೆದುಕೊಂಡಿದ್ದಾಳೆ. ಆಕೆ ಐಷಾರಾಮಿ ಹೋಟೆಲ್‌ಗೆ ಹೋಗಿ ಬಿಲ್ ಕೊಡದೆ ಬರುವುದು ಹೇಗೆ ಎಂಬ ಕುರಿತು ವಿಡಿಯೋ ಮಾಡಿ ಈಗ ಜನರಿಂದ ಆಕ್ರೋಶಕ್ಕೆ ಒಳಗಾಗಿದ್ದಾಳೆ. ಹಾಗಾದರೆ ಆಕೆ ಮಾಡಿದ್ದೇನು? ಹೋಟೆಲ್ ಬಿಲ್ ನೀಡದಿರಲು ಆಕೆ ಮಾಡಿದ ಪ್ಲಾನ್ ಏನು ಗೊತ್ತಾ? ಇಲ್ಲಿದೆ ನೋಡಿ ಉತ್ತರ.
ಆಕೆ ಹೋಟೆಲ್ ಬಿಲ್ ಪಾವತಿಸಲು ಒಬ್ಬ ವ್ಯಕ್ತಿಯನ್ನು ಹೇಗೆ ಮೋಸ ಮಾಡಬೇಕು ಎಂಬ ಕುರಿತು ವಿಡಿಯೋ ಮಾಡಿ ಅಪ್‌ಲೋಡ್ ಮಾಡಿದ್ದಾಳೆ. ಇದು ಲಿಂಗತಾರತಮ್ಯ ಹಾಗೂ ಜನರನ್ನು ತಪ್ಪುದಾರಿಗೆಳೆಯುವ ಹಾನಿಗೆ ಕಾರಣವಾಗಿದೆ ಎಂಬ ಚರ್ಚೆ ಹುಟ್ಟುಹಾಕಿದೆ. ರುಚಿ ಕೊಕ್ಚಾ ಎಂಬ ಎಕ್ಸ್ ಬಳಕೆದಾರರೊಬ್ಬರು ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

ಕ್ಲಬ್ ಅಥವಾ ಹೋಟೆಲ್‌ನಲ್ಲಿ ನೀವು ಬಿಲ್ ನೀಡದೆ ಬರಬಹುದು ಹೇಗೆ ಅನ್ನೋದನ್ನು ನಾನು ತೋರಿಸುತ್ತೇನೆ ಎಂಬ ಮಾತಿನಿಂದ ಈ ವಿಡಿಯೋ ಆರಂಭವಾಗುತ್ತದೆ. ಆಕೆಯ ಜೊತೆ ಮತ್ತೊಬ್ಬ ಹುಡುಗ ಸಹ ಈ ವಿಡಿಯೋ ಮಾಡಲು ಸಹಾಯ ಮಾಡಿದ್ದಾನೆ. ಆಕೆ ಹೋಟೆಲ್‌ನಲ್ಲಿ ಯಾರಾದರು ಒಬ್ಬ ಹುಡುಗನ ಮೊದಲು ಓಲೈಸಿಕೊಳ್ಳಿ ಎನ್ನುತ್ತಾಳೆ. ಆತನನ್ನು ನಿಮ್ಮ ಮೋಸದ ಜಾಲಕ್ಕೆ ಬೀಳಿಸಿಕೊಳ್ಳಿ. ಅವನ ಹಿಂದೆ ಮುಂದೆ ಸುತ್ತಾಡಿ ಅವನು ನಿಮ್ಮನ್ನು ನೋಡುವಂತೆ ಮಾಡಿ, ಬಳಿಕ ನಿಧಾನವಾಗಿ ಪರಿಚಯ ಮಾಡಿಕೊಳ್ಳಿ. ನಂತರ ನಿಮ್ಮ ಗ್ಯಾಂಗ್ ಅನ್ನು ಕರೆದು ಪಾರ್ಟಿ ಮಾಡಿ, ಪಾರ್ಟಿ ಬಳಿಕ ಬಿಲ್ ಅವನೇ ಕೊಡಬೇಕು. ಇವರೆಲ್ಲ ಬಿಲ್ ಕೊಡಲಷ್ಟೇ ಯೋಗ್ಯರು ಹೃದಯ ಕೊಡಲು ಅಲ್ಲ ಎಂದು ಆಕೆ ವಿಡಿಯೋದಲ್ಲಿ ಹೇಳುತ್ತಾಳೆ.
ಈ ವಿಡಿಯೋ ಬರೋಬ್ಬರಿ 4.3 ಮಿಲಿಯನ್ ವೀಕ್ಷಣೆ ಕಂಡಿದೆ. ಪ್ರಿಯಾಂಕಾ ತ್ಯಾಗಿ ಎಂಬುವರು ಈ ವಿಡಿಯೋ ಮಾಡಿರುವುದು ತಿಳಿದುಬಂದಿದೆ. ಆದರೆ ಈ ವಿಡಿಯೋ ವೈರಲ್ ಆದ ಬಳಿಕ ಆಕೆಯ ವರ್ತನೆಗೆ ಆಕ್ರೋಶ ಕೇಳಿಬಂದಿದೆ.
"ಆಕೆಯ ಜಾಗದಲ್ಲಿ ಒಬ್ಬ ವ್ಯಕ್ತಿ ಈ ರೀತಿಯ ಕೆಲಸ ಮಾಡಿದ್ದರೆ ಅದರ ಪರಿಣಾಮದ ಬಗ್ಗೆ ಊಹಿಸಿ. ಇಂತಹ ಕೆಲಸವನ್ನು ಮಾಡಲು ಪ್ರಯತ್ನಿಸುವ ಪುರುಷನ ಮೇಲೆ ಹಲವಾರು ಪ್ರಕರಣಗಳನ್ನು ದಾಖಲಿಸುವ ಮಹಿಳೆಯರಿಗೆ ನಮ್ಮ ಕಾನೂನಿನಲ್ಲಿ ಹಲವು ನಿಬಂಧನೆಗಳಿವೆ ಆದರೆ ವಂಚಿಸುವ ಅಂತಹ ಮಹಿಳೆಯರಿಗೆ ಯಾವುದೂ ಇಲ್ಲ. ಸುಳ್ಳು ಸಂಬಂಧದ ಭರವಸೆಗಳನ್ನು ನೀಡುವ ಮೂಲಕ ಪುರುಷರು ತಮ್ಮ ಹಣವನ್ನು ಕಳೆದುಕೊಳ್ಳುತ್ತಾರೆ. ಇದು ಸಮಾನ ಕಾನೂನು ಜಾರಿಗೆ ಸಮಯವೇ? ಎಂದು ಪ್ರಶ್ನಿಸಿದ್ದಾರೆ.
"ಸ್ತ್ರೀವಾದಿಗಳು ಇಂತಹ ರೀಲ್‌ಗಳ ಮೇಲೆ ಆಕ್ರೋಶ ವ್ಯಕ್ತಪಡಿಸುವುದಿಲ್ಲ, ಒಬ್ಬ ಪುರುಷ ಪ್ರಭಾವಿ ಮಹಿಳೆಯನ್ನು ಹೇಗೆ ಬಳಸಬೇಕು ಮತ್ತು ಅವಳನ್ನು ಎಸೆಯಬೇಕು ಎಂದು ರೀಲ್ ಮಾಡಿದ್ದರೆ ಇಷ್ಟು ಹೊತ್ತಿಗೆ ಅವನು ಸಂಪೂರ್ಣವಾಗಿ ಕುಸಿದು ಬೀಳುತ್ತಿದ್ದ'' ಎಂದು ಮತ್ತೊಬ್ಬ ಬಳಕೆದಾರ ಎಚ್ಚರಿಸಿದ್ದಾರೆ.
"ಇದು ನಿಜವಾಗಿಯೂ ತಮಾಷೆ ಎಂದು ಭಾವಿಸುವ ಎಲ್ಲಾ ಕಾಮೆಂಟೇಟರ್‌ಗಳಿಗೆ ನಾನು ನಿಮಗೆ ಹೇಳುತ್ತೇನೆ, ಇದು ನಿಜವಾಗಿಯೂ ತಮಾಷೆಯಲ್ಲ ಅಥವಾ ಪ್ರಶ್ನೆಯಲ್ಲ, ಅದು ತಮಾಷೆಯಾಗಿದ್ದರೂ ಸಹ ಅವಳು ಇನ್‌ಸ್ಟಾಗ್ರಾಮ್‌ನಲ್ಲಿ ಅಂತಹ ರೀಲ್ ಅನ್ನು ಏಕೆ ಪೋಸ್ಟ್ ಮಾಡಲು ಸಾಧ್ಯವಾಯಿತು ಎಂಬುದು ಪ್ರಶ್ನೆ. ಪುರುಷರನ್ನು ಅಪಹಾಸ್ಯ ಮಾಡುವುದು ಮತ್ತು ನಿಮ್ಮ ಬಿಲ್ ಪಾವತಿಸಲು ಅವರನ್ನು ಬಲೆಗೆ ಬೀಳಿಸುವುದು. ನಿಜ, ಎಲ್ಲರೂ "ಇದು ಹಾಸ್ಯ" ಎಂದು ಅವಳನ್ನು ಸಮರ್ಥಿಸಿಕೊಳ್ಳುತ್ತಾರೆ ..ಇದನ್ನು ಪುರುಷರು ಮಾಡಿದರೆ, ಅದೇ ಜನರು "ಕೆಲವು ವಿಷಯಗಳು ತಮಾಷೆಗಾಗಿ ಅಲ್ಲ ಎಂದು ಉಗ್ರವಾಗಿ ವಾದ ಮಾಡುತ್ತಿದ್ದರು'' ಎಂದು ಮತ್ತೊಬ್ಬರು ಆಕ್ರೋಶ ಹೊರಹಾಕಿದ್ದಾರೆ.
ಇಂತಹ ವಿಡಿಯೋಗಳು ಜನರನ್ನು ದಾರಿ ತಪ್ಪಿಸಲಿದೆ. ಆಕೆಯ ವಿಡಿಯೋ ನೋಡಿದ ಇತರರು ಇದನ್ನೇ ಅನುಸರಿಸುತ್ತಾರೆ. ಇದರಿಂದ ಯುವತಿಯ ಜೀವನಕ್ಕೆ ಅಪಾಯವಾಗಬಹುದು. ಬಿಲ್ ನೀಡುವ ಸಲುವಾಗಿ ಹುಡುಗರನ್ನು ಮೋಸಕ್ಕೆ ಬೀಳಿಸುವುದು ಎಷ್ಟು ಸರಿ ಎಂಬುದು ನೆಟ್ಟಿಗರ ವಾದವಾಗಿದೆ.



Click it and Unblock the Notifications
