Latest Updates
-
ಅಮಾವಾಸ್ಯೆಯ ದಿನ ಜಗಳ ಬೇಡ: ದಂಪತಿಗಳ ನಡುವಿನ ಪ್ರೀತಿ ಹೆಚ್ಚಿಸಲು ಈ ಸಂಭಾಷಣೆ ಸೂತ್ರಗಳು -
ಆರೆಂಜ್ ಅಲರ್ಟ್: ಭಾರಿ ಮಳೆಯಿಂದ ಮನೆ ರಕ್ಷಿಸಲು ಈ 5 ಟಿಪ್ಸ್ ಪಾಲಿಸಿ, ಸುರಕ್ಷಿತವಾಗಿರಿ! -
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್ -
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು
ಸಾಕು ನಾಯಿಗೆ ಶರ್ಮಾಜಿ ಎಂದು ನಾಮಕರಣ: ಪೊಲೀಸ್ ಠಾಣೆ ಮೆಟ್ಟಿಲೇರಿತು ಪ್ರಕರಣ..ಏಕೆ ಗೊತ್ತಾ?
ಈಗ ಮನೆ ಮನೆಯಲ್ಲೂ ನಾಯಿಯನ್ನು ಸಾಕುವುದು ಫ್ಯಾಷನ್ ಆಗಿದೆ. ಅದ್ರಲ್ಲೂ ನಗರ ಪ್ರದೇಶದಲ್ಲಿ ಸಾವಿರದಿಂದ ಲಕ್ಷ ರೂಪಾಯಿ ನಾಯಿಗಳ ತಂದು ಸಾಕುವುದು ನೋಡಬಹುದು. ಹಾಗೆ ನಾಯಿ ಸಾಕುವುದಕ್ಕೂ ಹಲವು ನಿಯಮಗಳ ಹೇರಿಕೆ ಮಾಡುವುದು ಸಹ ನೋಡಿರುತ್ತೇವೆ. ಸಾಮಾನ್ಯವಾಗಿ ನಗರದಲ್ಲಿ ನಾಯಿಗಳ ಸಾಕುವುದು ಈಗ ಕಷ್ಟ ಎನ್ನುವಂತಾಗಿದೆ. ಅವುಗಳ ಔಷದೋಪಚಾರ, ಸುರಕ್ಷತೆಗೆ ಈಗ ಹೆಚ್ಚು ಸಮಯ ನೀಡಬೇಕಾಗುತ್ತದೆ.
ಹಾಗೆ ಸಾಕು ನಾಯಿಗಳು ಯಾರ ಮೇಲಾದರು ದಾಳಿ ಮಾಡಿದರೆ ಮಾಲೀಕರ ಮೇಲೆ ಈಗ ಪ್ರಕರಣ ದಾಖಲಾಗುತ್ತದೆ. ಇನ್ನು ಇಂತಹ ನಾಯಿ ದಾಳಿ ಪ್ರಕರಣಗಳು ಹೆಚ್ಚುತ್ತಲೇ ಇದೆ. ಆದ್ರೆ ಇಲ್ಲೊಂದು ಕಡೆ ನಾಯಿಗೆ ಹೆಸರಿಟ್ಟ ಕಾರಣಕ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಘಟನೆ ತೀವ್ರ ಹಿಂಸಾಚಾರಕ್ಕೆ ತಿರುಗಿದೆ.

ಮಧ್ಯಪ್ರದೇಶದ ಇಂದೋರ್‌ನಲ್ಲಿ ವ್ಯಕ್ತಿಯೊಬ್ಬ ತನ್ನ ನಾಯಿಗೆ 'ಶರ್ಮಾಜಿ' ಎಂದು ನಾಮಕರಣ ಮಾಡಿದ್ದಾನೆ. ಜರ್ಮನ್ ಶಫರ್ಡ್ ತಳಿಯ ನಾಯಿಗೆ ಆತ ಶರ್ಮಾಜಿ ಎಂದು ಹೆಸರಿಟ್ಟಿರುವುದು ಈಗ ಪೊಲೀಸ್ ಠಾಣೆ ಮೆಟ್ಟಿಲೇರುವಂತೆ ಮಾಡಿದೆ. ಏಕೆಂದರೆ ನಾಯಿ ಮಾಲಿಕರು ತನ್ನ ಪಕ್ಕದ ಮನೆಯಲ್ಲಿ ವಾಸವಿರುವ ವ್ಯಕ್ತಿಯ ಹೆಸರನ್ನು ನಾಯಿಗೆ ಇಟ್ಟುದ್ದಾನೆ ಎಂದು ಆರೋಪಿಸಲಾಗಿದೆ.
ವೀರೇಂದ್ರ ಶರ್ಮಾ ಮತ್ತು ಅವರ ಪತ್ನಿ ಕಿರಣ್ ಸಲ್ಲಿಸಿದ ದೂರಿನಲ್ಲಿ, ಭೂಪೇಂದ್ರ ಸಿಂಗ್ 'ಉದ್ದೇಶಪೂರ್ವಕವಾಗಿ ನಾಯಿಯನ್ನು 'ಶರ್ಮಾ ಜಿ' ಎಂದು ಕರೆದರು ಮತ್ತು ಸ್ನೇಹಿತರ ಮುಂದೆ ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಿದರು.' ಸಿಂಗ್ ತಮ್ಮ ನಾಯಿಗೆ 'ಶರ್ಮಾ' ಎಂದು ಹೆಸರಿಸಿದ್ದರಿಂದ ಅವರು ಅಸಮಾಧಾನಗೊಂಡಿದ್ದಾರೆ. ಈ ವಿಚಾರವಾಗಿ ನಾಯಿ ಮಾಲಿಕರು ಕೇಳಿದಾಗ ಇಬ್ಬರ ನಡುವೆ ಗಲಾಟೆ ನಡೆದು ಬಡಿದಾಡಿಕೊಂಡಿದ್ದಾರೆ. ಗಾಯಗೊಂಡ ದಂಪತಿ ಪೊಲೀಸ್ ಠಾಣೆಗೆ ಹೋಗಿ ರಾಜೇಂದ್ರ ನಗರ ಪೊಲೀಸ್ ಠಾಣೆಯಲ್ಲಿ ಅಧಿಕೃತ ದೂರು ದಾಖಲಿಸಿದ್ದಾರೆ.
ಭಾರತದಲ್ಲಿ ನಾಯಿ ಸಾಕಲು ಇರುವ ನಿಯಮಗಳೇನು ಗೊತ್ತಾ?
ಭಾರತದಲ್ಲಿ ನಾಯಿಗಳ ಸಾಕಲು ಹಲವು ನಿಯಮಗಳಿಗೆ. ಆಯಾ ರಾಜ್ಯ ಸರ್ಕಾರಗಳು ಒಂದೊಂದು ರೀತಿಯ ನಿಯನಗಳು, ಕಾನೂನುಗಳ ಜಾರಿ ಮಾಡಿವೆ. ದೆಹಲಿ ಸೇರಿದಂತೆ ಭಾರತದಾದ್ಯಂತ ಅನೇಕ ನಗರಗಳಲ್ಲಿ, ನಾಯಿಯನ್ನು ಸಾಕಲು ಪರವಾನಗಿ ಪಡೆಯುವುದು ಅಗತ್ಯ. ಎಲ್ಲಾ ರಾಜ್ಯಗಳಲ್ಲಿ ಸ್ಥಳೀಯ ಆಡಳಿಗಳು ಈ ಕೆಲಸ ಮಾಡುತ್ತವೆ. ಹಾಗೆ ಮರಿಗಳ ಹಾಕಿದಾಗ ಅಥವಾ ಹೊಸದಾಗಿ ಮನೆಗೆ ತಂದಾಗ ಅವುಗಳ ನೋಂದಣಿ ಮಾಡುವುದು ಕೂಡ ಕಡ್ಡಾಯ. ಈ ಪರವಾನಗಿ ವರ್ಷಕ್ಕೊಮ್ಮೆ ನವೀಕರಿಸಬೇಕು. ಇದು ರೇಬಿಸ್ ಚುಚ್ಚು ಮದ್ದು ಹಾಕಿಸಲು ಕೂಡ ಸಹಕಾರಿಯಾಗಲಿದೆ.
ಇನ್ನು ಸೂರತ್‌ನಲ್ಲಿ ನಾಯಿ ಸಾಕಬೇಕಾದರೆ ಕನಿಷ್ಠ 10 ಮನೆಯವರ ಎನ್‌ಒಸಿ ಪಡೆಯಬೇಕಿದೆ. ಅಕ್ಕ ಪಕ್ಕದ 10 ಮನೆಯವರ ಬಳಿ ಸಹಿ ಸಂಗ್ರಹಿಸಿ ತಕರಾರಿ ಇಲ್ಲ ಎಂಬುದನ್ನು ಲಿಖಿತ ರೂಪದಲ್ಲಿ ನೀಡಬೇಕಿದೆ. ಹಾಗೆ ಪರವಾನಗಿ ಇಲ್ಲದೆ ನಾಯಿಯನ್ನು ಸಾಕುವುದು ಕಾನೂನು ಬಾಹಿರ ಆಗಲಿದೆ. ಅಂತಹ ಸಂದರ್ಭಗಳಲ್ಲಿ, ಮಾಲೀಕರಿಗೆ ದಂಡ ವಿಧಿಸಬಹುದು. ಸಾಮಾನ್ಯವಾಗಿ ಮೊದಲು ಎಚ್ಚರಿಕೆ ನೀಡಲಾಗುತ್ತದೆ, ಆದರೆ ಸಾಕುಪ್ರಾಣಿ ಗಮನಿಸದೆ ತಿರುಗಾಡುತ್ತಿರುವುದು ಕಂಡುಬಂದರೆ, ಸ್ಥಳಿಯಾಡಳಿತ ವಶಕ್ಕೆ ಪಡೆಯಬಹುದು. ಲಕ್ನೋದಂತಹ ಕೆಲವು ನಗರಗಳಲ್ಲಿ ಪರವಾನಗಿ ಪಡೆಯದ ನಾಯಿಗಳಿಗೆ
5,000 ರೂ.ಗಳವರೆಗೆ ದಂಡ ವಿಧಿಸುವ ಕಾನೂನು ಕೂಡ ಇದೆ.



Click it and Unblock the Notifications
