Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
Indore Couple Case: ಸೋನಂ ರಘುವಂಶಿ ಲವರ್ ಯಾರು? ಅವನೆಂದರೆ ಯಾಕಿಷ್ಟು ಹುಚ್ಚು? ಸತ್ಯ ತಿಳಿದ್ರೆ ಬೆಚ್ಚಿ ಬೀಳ್ತೀರಾ!
ಅವರಿಬ್ಬರು ಮದುವೆಯಾಗಿ ಕೇವಲ 12 ದಿನಗಳು ಮಾತ್ರ ಆಗಿತ್ತು. ಹನಿಮೂನ್‌ಗಾಗಿ ಮೇಘಾಲಯದ ಶಿಲ್ಲಾಂಗ್‌ಗೆ ಹೋಗಿದ್ದರು. ಅಲ್ಲಿನ ಸುಂದರ ತಾಣ ಮತ್ತು ಪ್ರದೇಶಗಳನ್ನು ಅನುಭವಿಸುವುದು ಅವರ ಪ್ಲಾನ್ ಆಗಿತ್ತು. ಆದರೆ, ಅಲ್ಲಿ ಹೆಂಡತಿಯ ಪ್ಲಾನ್ ಬೇರೆನೇ ಇತ್ತು. ಹನಿಮೂನ್‌ಗೆ ಹೋದವಳು ಗಂಡನ ಹೆಣ ಬೀಳಿಸಿದ್ದಾಳೆ. ಈ ಘಟನೆ ದೇಶಾದ್ಯಂತ ಭಾರೀ ಸಂಚಲನ ಮೂಡಿಸುತ್ತಿದೆ. ಕೈಯಲ್ಲಿ ಮೆಹಂದಿ ಮಾಸುವ ಮುಂಚೆಯೇ, ಹೆಂಡತಿ ಜೈಲು ಸೇರಿದ್ದಾಳೆ. ಈ ಪ್ರಕರಣವು ಕೇವಲ ಭೀಕರ ಕೊಲೆಯಷ್ಟೇ ಅಲ್ಲ, ಅಕ್ರಮ ಸಂಬಂಧ, ವಂಚನೆ, ದುರಾಸೆ ಮತ್ತು ಪಿತೂರಿಯ ವಿವಿಧ ಮಜಲುಗಳನ್ನು ಸಹ ಒಳಗೊಂಡಿದೆ.
ಹೌದು, ಇಂದೋರ್‌ನ ಸಾರಿಗೆ ಉದ್ಯಮಿ ರಾಜ ರಘುವಂಶಿ (Raja Raghuvanshi) ಅವರ ಕೊಲೆ ಪ್ರಕರಣ ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ. ಇದೀಗ, ಹನಿಮೂನ್‌ಗೆಂದು ಮೇಘಾಲಯಕ್ಕೆ ತೆರಳಿದ್ದ ಇಂದೋರ್ ದಂಪತಿ ನಾಪತ್ತೆ ಪ್ರಕರಣವು ಮಹತ್ವ ತಿರುವು ಪಡೆದುಕೊಂಡಿದೆ. ಪತಿಯ ಹತ್ಯೆಗೆ ಪತ್ನಿಯೇ ಸುಪಾರಿ ನೀಡಿದ್ದಾಗಿ ಪೊಲೀಸರ ಮುಂದೆ ಪತ್ನಿಯು ಒಪ್ಪಿಕೊಂಡಿದ್ದಾಳೆ. ರಾಜಾ ರಘುವಂಶಿ (30) ಹತ್ಯೆ ಕೇಸ್‌ನಲ್ಲಿ ಪತ್ನಿ ಸೋನಮ್ (Sonam Raghuvanshi) ಸೇರಿ ನಾಲ್ವರನ್ನು ಬಂಧಿಸಲಾಗಿದೆ. ಪತ್ನಿ ಸೋನಮ್‌ಗೆ ಬೇರೆಯೊಬ್ಬರ ಜೊತೆ ಅಕ್ರಮ ಸಂಬಂಧವಿತ್ತು. ಹೀಗಾಗಿ, ಹನಿಮೂನ್ ಪ್ಲ್ಯಾನ್ ಮಾಡಿ, ಪತಿಯನ್ನು ಕೊಲೆ ಮಾಡಿಸಿದ್ದಾಳೆ ಎಂದು ಮೇಘಾಲಯ ಡಿಜಿಪಿ ಇದಶಿಶಾ ನೊಂಗ್ರಾಂಗ್ ಹೇಳಿದ್ದಾರೆ.

11 ಮೇ 2025 ರಂದು ರಾಜಾ ರಘುವಂಶಿ ಮತ್ತು ಸೋನಂ ರಘುವಂಶಿ (Sonam Raghuvanshi Love Story) ಅವರ ವಿವಾಹ ನಡೆದಿತ್ತು. ಮದುವೆಯಾದ ಕೇವಲ ಆರು ದಿನಗಳ ಬಳಿಕ ಸೋನಂ, ತನ್ನ ಪ್ರಿಯಕರ ರಾಜ್ ಕುಶ್ವಾಹ ಜೊತೆ ಸೇರಿ ತನ್ನ ಗಂಡನನ್ನು ಕೊಲ್ಲಲು ಸಂಚು ರೂಪಿಸಿದ್ದಳು. ಸೋನಂ ಈಗಾಗಲೇ ರಾಜ್ ಕುಶ್ವಾಹ ಜೊತೆ ಪ್ರೇಮ ಸಂಬಂಧ ಹೊಂದಿದ್ದಳು ಮತ್ತು ಮದುವೆಯ ನಂತರವೂ ಅವರು ಈ ಸಂಬಂಧವನ್ನು ಕೊನೆಗೊಳಿಸಿರಲಿಲ್ಲ ಎಂದು ಪೊಲೀಸ್ ತನಿಖೆಯಲ್ಲಿ ತಿಳಿದುಬಂದಿದೆ. ಬದಲಾಗಿ, ತನ್ನ ಪ್ರಿಯಕರನನ್ನು ಪಡೆಯಲು ಈಕೆ ತನ್ನ ಗಂಡನನ್ನು ಮಸಣಕ್ಕೆ ಕಳುಹಿಸಲು ನಿರ್ಧರಿಸಿದ್ದಳು. ಹಾಗಿದ್ರೆ, ಸೋನಂ ರಘುವಂಶಿಯ ಪ್ರಿಯಕರ (Sonam Raghuwanshi Lover) ಯಾರು ಅನ್ನೋದನ್ನು ನೋಡೋಣ ಬನ್ನಿ.
ಆರೋಪಿ ರಾಜ್ ಕುಶ್ವಾಹ ಯಾರು?
ರಾಜ್ ಕುಶ್ವಾಹ ಸೋನಂ ರಘುವಂಶಿಗಿಂತ ಐದು ವರ್ಷ ಚಿಕ್ಕವನು. ಈತ ಸೋನಮ್ ಅವರ ತಂದೆಯ ಪ್ಲೈವುಡ್ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ. ಇವರಿಬ್ಬರ ಭೇಟಿ ಅಲ್ಲಿಯೇ ಆಗಿತ್ತು. ರಾಜ್ ಕಾರ್ಖಾನೆಯ ಬಿಲ್ಲಿಂಗ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ. ಈ ಸಮಯದಲ್ಲಿ ಇಬ್ಬರು ಹತ್ತಿರವಾದರು. ಹಾಗೆಯೇ ನಿಧಾನವಾಗಿ ಅವರ ಸ್ನೇಹ ಪ್ರೀತಿಗೆ ತಿರುಗಿತ್ತು. ಕುಟುಂಬ ಸದಸ್ಯರಿಗೆ ಈ ಸಂಬಂಧದ ಬಗ್ಗೆ ಯಾವುದೇ ಸುಳಿವು ಇರಲಿಲ್ಲ. ಸೋನಮ್ ಅವರ ಮನೆಯ ಬಳಿ ರಾಜ್ ವಾಸಿಸುತ್ತಿದ್ದ. ಆಗಾಗ್ಗೆ ಅವರ ಮನೆಗೆ ಭೇಟಿ ನೀಡುತ್ತಿದ್ದ. ಇದು ಅವರಿಗೆ ಭೇಟಿಯಾಗಲು ಸಾಕಷ್ಟು ಅವಕಾಶವನ್ನು ನೀಡಿತ್ತು. ಸುಮಾರು ಒಂದೂವರೆ ವರ್ಷಗಳ ಹಿಂದೆ, ರಾಜ್ ಅಲ್ಲಿಂದ ಬೇರೆ ಸ್ಥಳಕ್ಕೆ ಸ್ಥಳಾಂತರಗೊಂಡಿದ್ದ. ಆದಾಗ್ಯೂ, ಇಬ್ಬರು ಸಂಪರ್ಕದಲ್ಲಿದ್ದರು.
ಮೇಘಾಲಯದ ಶಿಲ್ಲಾಂಗ್‌ನಲ್ಲಿ ಕೊಲೆ ಸಂಚು
ಮದುವೆಯಾದ ಕೆಲವು ದಿನಗಳ ಬಳಿಕ, ಸೋನಮ್ ರಾಜನನ್ನು ಮೇಘಾಲಯದ ಶಿಲ್ಲಾಂಗ್‌ಗೆ ಹನಿಮೂನ್‌ಗಾಗಿ ಕರೆದುಕೊಂಡು ಹೋಗಲು ಪ್ಲಾನ್ ಮಾಡಿದ್ದಳು. ಆದರೆ, ಈ ಹನಿಮೂನ್ ಒಂದು ಸುಂದರವಾದ ಪ್ರವಾಸವಾಗಿರಲಿಲ್ಲ, ಬದಲಾಗಿ ಭಯಾನಕ ಪಿತೂರಿಯ ಭಾಗವಾಗಿತ್ತು. ಶಿಲ್ಲಾಂಗ್ ತಲುಪಿದಾಗ, ಸೋನಮ್ ಮತ್ತು ರಾಜ ಒಬ್ಬಂಟಿಯಾಗಿರಲಿಲ್ಲ. ಆದರೆ, ಅವರೊಂದಿಗೆ ಇನ್ನೂ ಮೂವರು ಜನರಿದ್ದಾರೆ ಎಂದು ಮಾರ್ಗದರ್ಶಕ ಹೇಳಿದ್ದನು. ಈ ಜನರು ಬೇರೆ ಯಾರೂ ಅಲ್ಲ, ರಾಜ್ ಕುಶ್ವಾಹ ಮತ್ತು ಅವನ ಸ್ನೇಹಿತರು. ಈ ನಾಲ್ವರು ಒಟ್ಟಾಗಿ ರಾಜನನ್ನು ಕೊಂದು ಅವನ ದೇಹವನ್ನು ಶಿಲ್ಲಾಂಗ್‌ನ ಆಳವಾದ ಕಂದಕಕ್ಕೆ ಎಸೆದಿದ್ದರು.
ಕೆಲವು ದಿನಗಳ ನಂತರ, ಅದೇ ಹಳ್ಳದಲ್ಲಿ ಕೊಳೆತ ಸ್ಥಿತಿಯಲ್ಲಿ ರಾಜನ ಶವ ಪೊಲೀಸರಿಗೆ ಸಿಕ್ಕಿತ್ತು. ಇದನ್ನು ನೋಡಿದ ಬಳಿಕ, ಇಡೀ ವಿಷಯವು ಹೆಚ್ಚು ಗಂಭೀರವಾಯಿತು. ಇದಾದ ನಂತರ, ಸೋನಮ್ ತಲೆಮರೆಸಿಕೊಂಡು ಉತ್ತರ ಪ್ರದೇಶದ ಘಾಜಿಪುರದ ಧಾಬಾದಲ್ಲಿ ಅಡಗಿಕೊಂಡಿದ್ದಳು. ತಾಂತ್ರಿಕ ಕಣ್ಗಾವಲು ಮೂಲಕ ಪೊಲೀಸರು ಆಕೆಯನ್ನು ಪತ್ತೆಹಚ್ಚಿ, ಅವಳನ್ನು ಬಂಧಿಸಿದ್ದರು. ಮತ್ತೊಂದೆಡೆ, ಸೋನಮ್‌ನ ಪ್ರಿಯಕರ ರಾಜ್ ಕುಶ್ವಾಹನನ್ನು ಸಹ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮಾಸ್ಟರ್ ಮೈಂಡ್ ಆಗಿ ಬದಲಾದ ರಾಜ್
ಪೊಲೀಸರ ಮಾಹಿತಿ ಪ್ರಕಾರ, ರಾಜ್ ಕುಶ್ವಾಹ ಈ ಕೊಲೆ ಪ್ರಕರಣದ ಮಾಸ್ಟರ್ ಮೈಂಡ್ ಆಗಿದ್ದನು. ಈತನು ತನ್ನ ಕೆಲವು ಸ್ನೇಹಿತರ ಸಹಾಯದಿಂದ ಈ ಭಯಾನಕ ಪ್ಲಾನ್ ಕಾರ್ಯಗತಗೊಳಿಸಿದ್ದನು. ಮದುವೆಯ ನಂತರವೂ ಅವನು ಸೋನಮ್ ಜೊತೆ ಸಂಪರ್ಕದಲ್ಲಿದ್ದನು. ಮತ್ತು ಇಬ್ಬರೂ ಒಟ್ಟಾಗಿ ರಾಜ ರಘುವಂಶಿ ಅವರನ್ನು ಕೊಲ್ಲಲು ಸಂಚು ರೂಪಿಸಿದ್ದರು. ಇಂದೋರ್ ಪೊಲೀಸರು ಈಗ ಸೋನಮ್‌ಳನ್ನು ಟ್ರಾನ್ಸಿಟ್ ರಿಮಾಂಡ್‌ನಲ್ಲಿ ಕರೆತಂದು ಹೆಚ್ಚು ಕೂಲಂಕಷವಾಗಿ ವಿಚಾರಣೆ ನಡೆಸಿ, ಅಗತ್ಯ ಮಾಹಿತಿ ಸಂಗ್ರಹಿಸಿದ್ದಾರೆ.
ಹೆಂಡತಿ ಮಾಡಿದ 'ದ್ರೋಹದ ಕಥೆ'
ಇಂದೋರ್‌ನ ಈ ಪ್ರಕರಣ (Indore Couple Case) ಕೇವಲ ಕೊಲೆ ಅಲ್ಲ. ಬದಲಾಗಿ, ಗಂಡ ಕುರುಡಾಗಿ ನಂಬಿದ ಹೆಂಡತಿ ಮಾಡಿದ ದ್ರೋಹದ ಕಥೆ ಆಗಿದೆ. ಆದರೆ, ಅದೇ ಹೆಂಡತಿ ತನ್ನ ಪ್ರಿಯಕರನಿಗಾಗಿ ಅವನನ್ನು ಕೊಂದಳು. ಸಮಾಜದಲ್ಲಿ ಸಂಬಂಧಗಳ ಬದಲಾಗುತ್ತಿರುವ ವ್ಯಾಖ್ಯಾನ ಮತ್ತು ನೈತಿಕ ಅವನತಿಗೆ ಕನ್ನಡಿಯಾಗಿ ಈ ಪ್ರಕರಣ ಮುನ್ನೆಲೆಗೆ ಬಂದಿದೆ. ಇಂದೋರ್ ಪೊಲೀಸರು ಈ ಪ್ರಕರಣದ ಅಂತಿಮ ಹಂತಗಳನ್ನು ಬಯಲು ಮಾಡುವ ಹಂತಕ್ಕೆ ಬಂದಿದ್ದಾರೆ. ಶೀಘ್ರದಲ್ಲೇ ರಾಜಾ ರಘುವಂಶಿ ಎಲ್ಲಾ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸುವ ಮೂಲಕ ನ್ಯಾಯ ಸಿಗುತ್ತದೆ ಎಂಬ ನಿರೀಕ್ಷೆಯಿದೆ.
ಏನಿದು 'ಮಧುಚಂದ್ರ'ದ ಪ್ರಕರಣ?
ಸೋನಮ್ ಮತ್ತು ರಾಜಾ ರಘುವಂಶಿ ಮೇ 11 ರಂದು ಇಂದೋರ್‌ನಲ್ಲಿ ವಿವಾಹವಾಗಿದ್ದರು. ಮದುವೆಯ ಒಂಬತ್ತು ದಿನಗಳ ಬಳಿಕ, ಅಂದರೆ ಮೇ 20ರಂದು ತಮ್ಮ ಹನಿಮೂನ್‌ಗಾಗಿ (ಮಧುಚಂದ್ರಕ್ಕೆ) ಮೇಘಾಲಯಕ್ಕೆ ತೆರಳಿದ್ದರು. ಮೇ 23ರಂದು ಈ ದಂಪತಿ ನೊಂಗ್ರಿಯಾಟ್ ಹಳ್ಳಿಯಲ್ಲಿರುವ ಹೋಂಸ್ಟೇಯಿಂದ ಹೊರಗೆ ಹೋದ ಕೆಲವೇ ಗಂಟೆಗಳ ಬಳಿಕ ನಾಪತ್ತೆಯಾಗಿದ್ದರು. ಜೂನ್ 2ರಂದು ಈ ನೊಂಗ್ರಿಯಾಟ್ ಗ್ರಾಮದ 20 ಕಿ.ಮೀ ದೂರದಲ್ಲಿರುವ ಪೂರ್ವ ಖಾಸಿ ಹಿಲ್ಸ್ ಜಿಲ್ಲೆಯ ವೈಸಾವ್ಡಾಂಗ್ ಜಲಪಾತದ ಬಳಿ, ರಾಜಾ ರಘುವಂಶಿ ಮೃತದೇಹ ಪತ್ತೆಯಾಗಿತ್ತು. ಪ್ರಕರಣದ ವಿಚಾರಣೆ ನಡೆಸಿದ ಪೊಲೀಸರು, ಇಂದೋರ್‌ನಲ್ಲಿ ಆರೋಪಿಗಳಾದ ರಾಜ್ ಕುಶ್ವಾಹ, ವಿಶಾಲ್ ಚೌಹಾಣ್ ಮತ್ತು ಆಕಾಶ್ ರಜಪೂತ್‌ನನ್ನು ಬಂಧಿಸಿದ್ದಾರೆ.
ಮತ್ತೋರ್ವ ಆರೋಪಿ ಆನಂದ್ ಕುರ್ಮಿಯನ್ನು ಬಿನಾದ ಬಸಾರಿಯಲ್ಲಿ ಬಂಧಿಸಲಾಗಿದೆ. ಇನ್ನು ಆಕಾಶ್ ಲೋಧಿಯನ್ನು ಉತ್ತರ ಪ್ರದೇಶದ ಲಲಿತಪುರದಲ್ಲಿ ಅರೆಸ್ಟ್ ಮಾಡಲಾಗಿದೆ. ಇನ್ನು ಕೊಲೆಯ ಮಾಸ್ಟರ್ ಮೈಂಡ್ ಸೋನಮ್ ರಘುವಂಶಿಯನ್ನು ಉತ್ತರ ಪ್ರದೇಶದ ಕಾಶಿ ಸಮೀಪದ ಢಾಬಾ ಸಮೀಪ ಪೊಲೀಸರು ಬಂಧಿಸಿದ್ದಾರೆ. ಈ ಎಲ್ಲಾ ಆರೋಪಿಗಳು, ರಾಜಾ ರಘುವಂಶಿಯ ಕೊಲೆಯಲ್ಲಿ ಭಾಗಿಯಾಗಿರುವುದಾಗಿ ಪೊಲೀಸ್ ವಿಚಾರಣೆ ವೇಳೆಯಲ್ಲಿ ಒಪ್ಪಿಕೊಂಡಿದ್ದಾರೆ.
'ನನ್ನ ಮಗನ ಅಂತ್ಯಸಂಸ್ಕಾರಕ್ಕೆ ರಾಜ್ ಬಂದಿದ್ದ'
ಒಟ್ಟಾರೆ, ಈ ನವವಿವಾಹಿತ ಜೋಡಿಯ ಪ್ರಕರಣವು ದಿನಕ್ಕೊಂದು ರೋಚಕ ತಿರುವು ಪಡೆಯುತ್ತಿದೆ. ಬಾಯ್‌ಫ್ರೆಂಡ್ ಜೊತೆ ಪತಿ ಹತ್ಯೆ ಮಾಡಿದ ಆರೋಪದಡಿ ಅರೆಸ್ಟ್ ಆಗಿರುವ ಸೋನಮ್ ರಘುವಂಶಿಯನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ. ಮತ್ತೊಂದೆಡೆ, ಮೃತ ರಾಜಾ ರಘುವಂಶಿ ಅವರ ತಾಯಿ ಉಮಾ ರಘುವಂಶಿ ಅವರು ಸ್ಫೋಟಕ ಮಾಹಿತಿ ಬಹಿರಂಗಪಡಿಸಿದ್ದಾರೆ. 'ನನ್ನ ಮಗನ ಅಂತ್ಯಸಂಸ್ಕಾರಕ್ಕೆ ಸೋನಮ್‌ಳ ಬಾಯ್‌ಫ್ರೆಂಡ್ ರಾಜ್ ಕುಶ್ವಾಹ ಬಂದಿದ್ದ' ಎಂದು ಹೇಳಿದ್ದಾರೆ. ಈತ ಅಂತ್ಯಸಂಸ್ಕಾರದಲ್ಲಿ ಭಾಗಿಯಾಗಿದ್ದನ್ನು ತಾವು ನೋಡಿದ್ದೆ ಎಂದು ತಿಳಿಸಿದ್ದಾರೆ.



Click it and Unblock the Notifications
