Latest Updates
-
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ!
ನಕಲಿ ದಾಖಲೆ ಇಟ್ಟು ಕೋರ್ಟ್ ಜಡ್ಜ್ ಆದ..2 ಸಾವಿರ ಕ್ರಿಮಿನಲ್‌ಗಳ ಬಿಡುಗಡೆ ಮಾಡಿದ: ಭಾರತದ ಚಾಲಾಕಿ ಕಳ್ಳನೀತ
ಭಾರತದಲ್ಲಿ ಎಂತೆಂತಾ ವಂಚನೆ ಕೇಸ್‌ಗಳನ್ನು ಸಹ ನಾವು ನೋಡಿದ್ದೇವೆ. ಹಲವು ರೀತಿಯ ನಕಲಿ ದಾಖಲಾತಿಗಳ ಸೃಷ್ಟಿಸಿ ವಂಚನೆ ಎಸಗಿರುತ್ತಾರೆ. ಜನರು ಸಹ ಅದೆಷ್ಟು ವೇಗ ಮೂರ್ಖರಾಗುತ್ತಾರೆ ಅಂತಲೂ ನಾವು ನೋಡಿದ್ದೇವೆ. ಆದ್ರೆ ಇಲ್ಲೊಬ್ಬ ಎಂತಹ ವಂಚನೆ ಎಸಗಿದ್ದ ಎಂಬುದು ತಿಳಿದರೆ ನಿಮಗೂ ಅಚ್ಚರಿಯಾಗುತ್ತೆ.
ಆತ ನಕಲಿ ದಾಖಲಾತಿ ಸೃಷ್ಟಿಸಿ ಕೋರ್ಟ್ ಜಡ್ಜ್ ಸಹ ಆಗಿದ್ದ, 1000ಕ್ಕೂ ಹೆಚ್ಚು ಕಾರು ಕಳ್ಳತನ ಮಾಡಿದ್ದ ಅಂದರೆ ನಂಬುತ್ತೀರಾ. ಹೌದು ಇದು ನಡೆದಿದೆ, ಆತ ನಕಲಿ ದಾಖಲೆ ಸೃಷ್ಟಿಸಿ ಒಂದು ನ್ಯಾಯಾಲಯದಲ್ಲಿ ಕೆಲಸ ನಿರ್ವಹಿಸಿದ್ದ. ಈ ಘಟನೆ ನಡೆದಿದ್ದೆಲ್ಲಿ. ಏನಿದರ ಕಥೆ ಎಂಬುದನ್ನು ನೋಡಿ.

ಧನಿ ರಾಮ್ ಮಿತ್ತಲ್, ಈತ ಭಾರತದ ಅತ್ಯಂತ ಚಾಣಾಕ್ಯ ಕಳ್ಳ ಅಂತಲೇ ಹೆಸರಾಗಿದ್ದಾನೆ. ಆತ ಕಾನೂನು ಪದವೀಧರನಂತೆ, ಕೈಬರಹ ತಜ್ಷನಾಗಿ ಹಲವು ಸಹಿಗಳ ನಕಲು ಮಾಡಿದ್ದ. 25ನೇ ವಯಸ್ಸಿನಲ್ಲೇ ಹಲವು ಕಳ್ಳತನ ಕೇಸ್ ಆತನ ಮೇಲಿತ್ತು. ಇವನ ಇತಿಹಾಸ ಕೇಳಿದರೆ ನೀವೇ ಶಾಕ್ ಆಗುತ್ತೀರ.
ಈ ವ್ಯಕ್ತಿ ಅತಿ ಹೆಚ್ಚು ಬಂಧನಕ್ಕೊಳಗಾದ ದಾಖಲೆಯನ್ನು ಹೊಂದಿದ್ದಾನೆ. ಮಿತ್ತಲ್ 1000 ಕ್ಕೂ ಹೆಚ್ಚು ಕಾರುಗಳನ್ನು ಕದ್ದಿದ್ದಾರೆ ಎಂದು ನಂಬಲಾಗಿದೆ. ಅಚ್ಚರಿ ಅಂದರೆ ಆತ ಹಗಲು ಹೊತ್ತಿನಲ್ಲಿ ಮಾತ್ರ ಕಾರುಗಳ ಕಳ್ಳತನ ಮಾಡುತ್ತಿದ್ದನಂತೆ. ಆತ ದೆಹಲಿ, ಹರಿಯಾಣ, ರಾಜಸ್ಥಾನ ಮತ್ತು ಹತ್ತಿರದ ಪ್ರದೇಶಗಳಲ್ಲಿ ಕಳ್ಳತನ ಮಾಡುತ್ತಿದ್ದ. ಕಳ್ಳತನ ಮಾಡಿದ ಕಾರುಗಳನ್ನು ಬೇಕಾಬಿಟ್ಟಿ ದರಕ್ಕೆ ಮಾರುತ್ತಿದ್ದನಂತೆ. ಇದು ಆತನ ಹವ್ಯಾಸವಾಗಿತ್ತು.
ಒಮ್ಮೆ ಧನಿ ರಾಮ್ ಕೆಲವು ಸುಳ್ಳು ದಾಖಲೆಗಳನ್ನು ಸಿದ್ಧಪಡಿಸಿ ಜಜ್ಜರ್ ನ್ಯಾಯಾಲಯದ ಹೆಚ್ಚುವರಿ ಸೆಷನ್ ನ್ಯಾಯಾಧೀಶರನ್ನು ಎರಡು ತಿಂಗಳ ರಜೆಯ ಮೇಲೆ ಕಳುಹಿಸಿದ್ದನಂತೆ. ನಂತರ ಮಿತ್ತಲ್ ಸ್ವತಃ ಜಡ್ಜ್ ಆಗಿ ಅದೇ ಕೋರ್ಟ್‌ಗೆ ಬಂದು ಸುಮಾರು 2000 ಅಪರಾಧಿಗಳನ್ನು ಬಿಡುಗಡೆ ಮಾಡಿದ್ದರಂತೆ. ಈ ಬದಲಾವಣೆಯಿಂದ ತಕ್ಷಣ ಎಚ್ಚೆತ್ತ ಅಧಿಕಾರಿಗಳು ಪರಿಶೀಲನೆಗೆ ಇಳಿದಾಗ ಆತನ ನಿಜ ಅಂಶ ಪತ್ತೆಯಾಗಿತ್ತು. ಆದ್ರೆ ಚಾಲಾಕಿಯಾಗಿದ್ದ ಆತ ಅಷ್ಟರಾಗಲೇ ಬೇರೆ ಕಡೆ ಪಲಾಯನ ಮಾಡುತ್ತಿದ್ದ. ಹಲವು ಬಾರಿ ಸಿಕ್ಕಿಬಿದ್ದು ಜೈಲುವಾಸ ಅನುಭವಿಸಿದ್ದ ಬಳಿಕ ಹೊರಬಂದು ಮತ್ತದೆ ಹಳೆ ಚಾಳಿ ಮುಂದುವರೆಸುತ್ತಿದ್ದ.
2016ರಲ್ಲಿ ಬಂಧನ
ಇಷ್ಟೆಲ್ಲಾ ಕಳ್ಳತನ ಮಾಡಿದ್ದ ಆತ ಒಂದು ಬಾರಿ ಯಡವಿದ್ದ, ಒಂದೇ ದಿನ ಹಗಲಲ್ಲಿ ಮೂರು ಕಾರು ಕಳ್ಳತನ ಮಾಡಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದ. ಈ ಬಾರಿ ಆತ ತಪ್ಪಿಸಿಕೊಳ್ಳಲು ಪೊಲೀಸರು ಅವಕಾಶ ನೀಡಲಿಲ್ಲ. ಇದು ಆತನ ಕೊನೆಯ ಬಾರ ಬಂಧಿಸಲಾಗಿತ್ತು. ಆದರೆ ಈ ವೇಳೆ ಕೋರ್ಟ್‌ಗೆ ಕರೆದೊಯ್ಯುವಾಗ ಆತ ತಪ್ಪಿಸಿಕೊಂಡಿದ್ದ ಎನ್ನಲಾಗಿದೆ.
ಈಗ ಎಲ್ಲಿದ್ದಾನೆ ಧನಿ?
2016ರಲ್ಲಿ ತಪ್ಪಿಸಿಕೊಂಡಿದ್ದ ಆತ ಬಳಿಕ ಎಲ್ಲಿಯೂ ಕಂಡುಬಂದಿಲ್ಲ. ಇಂದಿಗೂ ಪೊಲೀಸರು ಆತನನ್ನು ಹುಡುಕುತ್ತಲೇ ಇದ್ದಾರೆ ಆದರೆ ಎಲ್ಲಿಯೂ ಆತನ ಸುಳಿವು ಪತ್ತೆಯಾಗಿಲ್ಲ. ಆದರೆ ಆತ ಎಲ್ಲಿಯೂ ಅಪರಾಧ ಪ್ರಕರಣದಲ್ಲಿ ಭಾಗಿಯಾಗುತ್ತಿಲ್ಲ ಎನ್ನಲಾಗಿದೆ. ಆತನಿಗೆ ಈಗ ಸುಮಾರು 83 ವರ್ಷವಾಗಿದ್ದು, ಹೀಗಾಗಿ ಕಳ್ಳತನ ಸೇರಿ ಎಲ್ಲಾ ಅಪರಾಧ ಕೃತ್ಯ ಎಸಗಲು ಆತನಿಂದ ಸಾಧ್ಯವಾಗುತ್ತಿಲ್ಲ ಎನ್ನಲಾಗಿದೆ.
ಈತನ ಜೊತೆಗಿದ್ದ ಸ್ನೇಹಿತ
ಅಚ್ಚರಿ ಎಂದರೆ ಹರಿಯಾಣದಲ್ಲಿ ಪೊಲೀಸರು ಕಾರು ತಪಾಸಣೆ ಮಾಡುತ್ತಿದ್ದಾಗ ಒಂದು ಕಾರು ನಕಲಿ ನಂಬರ್ ಪ್ಲೇಟ್ ಹೊಂದಿರುವುದು ಪತ್ತೆಯಾಗಿತ್ತು. ಆತನ ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಿದಾಗ ಧನಿ ಮಿತ್ತಲ್ ಜೊತೆ ಸೇರಿ ಈ ಕಾರು ಕಳ್ಳತನ ಮಾಡಿರುವುದಾಗಿ ತಿಳಿಸಿದ್ದ, ಬಳಿಕ ಇಬ್ಬರ ವಿರುದ್ಧ ಪೊಲೀಸರು ಚಾರ್ಜ್‌ಶೀಟ್ ಸಲ್ಲಿಸಿದ್ದರು. ಆದರೆ ಮಿತ್ತಲ್ ಪತ್ತೆಹಚ್ಚಲು ಸಾಧ್ಯವಾಗಿರಲಿಲ್ಲ.



Click it and Unblock the Notifications
