Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
ಭಾರತದ ಕೇಸರಿಗೆ ಚಿನ್ನದ ಬೆಲೆ..! ಪ್ರತಿ ಕೆ.ಜಿ ₹4.95 ಲಕ್ಷಕ್ಕೆ ಮಾರಾಟ
ವಿಶ್ವದಲ್ಲಿ ಚಿನ್ನಕ್ಕಿಂತ ದುಬಾರಿಯಾದ ವಸ್ತುಗಳು ಬೇಕಾದಷ್ಟು ಸಿಗುತ್ತವೆ. ಭಾರತದಲ್ಲೂ ಚಿನ್ನಕ್ಕಿಂತ ದುಬಾರಿ ವಸ್ತುಗಳ ಬೆಳೆಯಲಾಗುತ್ತದೆ. ಅದರಲ್ಲಿ ಕಾಶ್ಮೀರದಲ್ಲಿ ಬೆಳೆಯಲಾಗುವ ಕೇಸರಿ ಸಹ ಒಂದಾಗಿದೆ. ಕೇಸರಿಗೆ ಈಗ ಚಿನ್ನಕ್ಕಿಂತ ದುಬಾರಿ ಬೆಲೆ ಬಂದಿದೆ. ಅದರಲ್ಲೂ ಭಾರತದ ಕೇಸರಿಗೆ ಈಗ ಲಕ್ಷ ಲಕ್ಷ ಬೆಲೆ ಬಂದಿದೆ.
ವಿಶ್ವದ ಅತ್ಯಂತ ದುಬಾರಿ ಮಸಾಲೆಯಾದ ಕೇಸರಿ ಬೆಲೆಯು ಗಗನಕ್ಕೇರಿದೆ. ಪ್ರತಿ ಕೆ.ಜಿ ಭಾರತದ ಕೇಸರಿಯು 4.95 ಲಕ್ಷ ರೂಪಾಯಿಗಳಿಗೆ ಮಾರಾಟವಾಗುತ್ತಿದೆ ಎಂದು ವರದಿಯಾಗಿದೆ. ಕಳೆದ ಒಂದು ತಿಂಗಳಿನಿಂದ ಭಾರತದ ಕೇಸರಿ ಬೆಲೆಗಳು ಸಗಟು ಮಾರುಕಟ್ಟೆಯಲ್ಲಿ ಶೇ. 20 ರಷ್ಟು ಮತ್ತು ಚಿಲ್ಲರೆ ಮಾರುಕಟ್ಟೆಯಲ್ಲಿ ಶೇ. 27 ರಷ್ಟು ಹೆಚ್ಚಾಗಿದೆ.

ಪಶ್ಚಿಮ ಏಷ್ಯಾದಲ್ಲಿ ಹೆಚ್ಚುತ್ತಿರುವ ಭೌಗೋಳಿಕ ರಾಜಕೀಯ ಉದ್ವಿಗ್ನತೆಯ ಮಧ್ಯೆ ಇರಾನ್‌ನಿಂದ ಕೇಸರಿ ಪೂರೈಕೆಯಲ್ಲಿ ವ್ಯತ್ಯಯ ಸಂಭವಿಸಿರುವುದು ಈ ಬೆಲೆ ಏರಿಕೆಗೆ ಕಾರಣವಾಗಿರಬಹುದು ಎಂದು ಅಂದಾಜಿಸಲಾಗಿದೆ.
"ಉತ್ತಮ ಗುಣಮಟ್ಟದ ಭಾರತೀಯ ಕೇಸರಿ ಈಗ ಸಗಟು ಮಾರುಕಟ್ಟೆಯಲ್ಲಿ ಕೆಜಿಗೆ 3.5-3.6 ಲಕ್ಷಕ್ಕೆ ಮಾರಾಟವಾಗುತ್ತಿದೆ, ಪಶ್ಚಿಮ ಏಷ್ಯಾದಲ್ಲಿ ಇತ್ತೀಚಿನ ಕಲಹ ಪ್ರಾರಂಭವಾಗುವ ಮೊದಲು 2.8-3 ಲಕ್ಷಕ್ಕೆ ಹೋಲಿಸಿದರೆ, ಇದರ ಬೆಲೆ 4.95 ಲಕ್ಷ ರೂ.ಗೆ ಮಾರಾಟವಾಗುತ್ತಿದೆ. ಶುಕ್ರವಾರ ಸುಮಾರು 70 ಗ್ರಾಂ ಚಿನ್ನದ ಬೆಲೆ 10 ಗ್ರಾಂಗೆ 72,633 ರೂ. ಆಗಿತ್ತು ಇದಕ್ಕಿಂತ ದುಬಾರಿ ಬೆಲೆಗೆ ಕೇಸರಿ ಮಾರಾಟವಾಗುತ್ತಿದೆ.
ವಿಶ್ವದಲ್ಲೇ ಅತೀ ಹೆಚ್ಚು ಕೇಸರಿಯನ್ನು ಇರಾನ್‌ನಲ್ಲಿ ಬೆಳೆಯಲಾಗುತ್ತದೆ. ಪ್ರತಿ ವರ್ಷ ಸುಮಾರು 430 ಟನ್‌ಗಳಷ್ಟು ಕೇಸರಿ ಉತ್ಪಾದನೆಯನ್ನು ಇರಾನ್ ಹೊಂದಿದೆ. ಇದು ಕೇಸರಿಯ ಜಾಗತಿಕ ಉತ್ಪಾದನೆಯ ಸುಮಾರು ಶೇ. 90 ರಷ್ಟು ಪಾಲು ಹೊಂದಿದೆ. ಇದಕ್ಕೆ ವ್ಯತಿರಿಕ್ತವಾಗಿ, ಭಾರತದಲ್ಲಿ ಕೇವಲ ಕಾಶ್ಮೀರದಲ್ಲಿ ಮಾತ್ರ ಕೇಸರಿಯನ್ನು ಬೆಳೆಯಲಾಗುತ್ತದೆ. ಇದು ಸಹ ಕಡಿಮೆ ಪ್ರಮಾಣದಲ್ಲಿ ಬೆಳೆಯಲಾಗುತ್ತದೆ.
"ಕೆಂಪು ಚಿನ್ನ" ಎಂದೂ ಕರೆಯಲ್ಪಡುವ ಕೇಸರಿಯನ್ನು ಕಣಿವೆ ರಾಜ್ಯದಲ್ಲಿ ಕೇವಲ 5,707 ಹೆಕ್ಟೇರ್ ಭೂಮಿಯಲ್ಲಿ ಬೆಳೆಯಲಾಗುತ್ತದೆ. ಇದರಲ್ಲಿ ಶೇ. 90 ಕ್ಕಿಂತ ಹೆಚ್ಚು ದಕ್ಷಿಣ ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಬೆಳೆಯಲಾಗುತ್ತದೆ. ಉಳಿದಂತೆ ಮಧ್ಯ ಕಾಶ್ಮೀರದ ಬುದ್ಗಾಮ್ ಮತ್ತು ಶ್ರೀನಗರ ಜಿಲ್ಲೆಗಳಲ್ಲಿ ಅಲ್ಪ ಪ್ರಮಾಣದಲ್ಲಿ ಬೆಳೆಯಲಾಗುತ್ತದೆ.
ಕಾಶ್ಮೀರಿ ಕೇಸರಿಯನ್ನು ವರ್ಷಕ್ಕೊಮ್ಮೆ ಅಂದರೆ ಅಕ್ಟೋಬರ್ ಅಂತ್ಯದಿಂದ ನವೆಂಬರ್ ಮಧ್ಯದವರೆಗೆ ಕೊಯ್ಲು ಮಾಡಲಾಗುತ್ತದೆ ಮತ್ತು ಒಂದು ಕಿಲೋಗ್ರಾಂ ಕೇಸರಿ ಪಡೆಯಬೇಕಾದರೆ ಬರೋಬ್ಬರಿ 150,000 ಕ್ಕೂ ಹೆಚ್ಚು ಹೂವುಗಳನ್ನು ಕೊಯ್ಲು ಮಾಡಬೇಕಾಗುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಹವಾಮಾನ ವೈಪರಿತ್ಯದಿಂದ ಅಂದುಕೊಂಡಷ್ಟು ಇಳುವರಿ ಪಡೆಯಲು ಸಾಧ್ಯವಾಗುತ್ತಿಲ್ಲ. ಈ ಕಾರಣದಿಂದಾಗಿಯೂ ಕೇಸರಿಯ ಬೆಲೆ ಗಗನಕ್ಕೇರುತ್ತಿದೆ.
ಕೇಸರಿ ಬೇರೆ ಕಡೆ ಏಕೆ ಬೆಳೆಯಲು ಸಾಧ್ಯವಿಲ್ಲ
ಭಾರತದಲ್ಲಿ ಕಾಶ್ಮೀರದಲ್ಲಿ ಮಾತ್ರ ಈ ಕೇಸರಿಯನ್ನು ಬೆಳೆಯಲಾಗುತ್ತದೆ. ಇದು ಶೀತ ಪ್ರದೇಶದಲ್ಲಿ ಮಾತ್ರ ಬೆಳೆಯಲಾಗುತ್ತದೆ. ಹೀಗಾಗಿ ಹಿಮ ಪ್ರದೇಶವಾದ ಕಾಶ್ಮೀರ ಈ ಕೇಸರಿ ಬೆಳೆಗೆ ಹೇಳಿ ಮಾಡಿಸಿರುವ ಸ್ಥಳವಾಗಿದೆ.
ಕೇಸರಿ ಯಾಕೆ ದುಬಾರಿ
ಕೇಸರಿಯು ಹಲವು ಔಷಧಿಯ ಗುಣ ಹೊಂದಿರುವ ಒಂದು ಮಸಾಲೆಯಾಗಿರುವ ಕಾರಣ ಇದರ ಬೆಲೆ ಹೆಚ್ಚಾಗಿದೆ. ಕೇಸರಿ ಟೀ-ಕಾಫಿ, ಕೇಸರಿ ಹಾಲು ಸೇರಿದಂತೆ ಹತ್ತು ಹಲವು ಖಾದ್ಯಗಳಲ್ಲೂ ಇದನ್ನು ಬಳಸಲಾಗುತ್ತದೆ.
ಮಾರುಕಟ್ಟೆಯಲ್ಲಿ ನಕಲಿ ಕೇಸರಿ
ಕೇಸರಿ ಬೆಲೆ ಗಗನಕ್ಕೇರಿದ್ದೇ ತಡ ಮಾರುಕಟ್ಟೆಗೆ ನಕಲಿ ಕೇಸರಿ ದಾಳಿ ಮಾಡಿವೆ. ಸಣ್ಣ ಸಣ್ಣ ಗಿಡಗಳ ಬೇರುಗಳನ್ನು ತೆಗೆದು ಅದಕ್ಕೆ ಕೆಂಪು ಬಣ್ಣ ಹಾಗೂ ಅರಶಿನ ಹಾಕಿ ಅದನ್ನು ಬಿಸಿಲಿನಲ್ಲಿ ಒಣಗಿಸಿ ಕಾಶ್ಮೀರಿ ಕೇಸರಿ ಎಂದು ಮಾರಾಟ ಮಾಡುವುದು ಸಹ ಕಂಡುಬರುತ್ತದೆ. ಇನ್ನು ಕೇಸರಿಯನ್ನು ನೀರಿಗೆ ಹಾಕಿದಾಗ ಅದು ಬಣ್ಣ ಬಿಟ್ಟುಕೊಂಡರೆ ಅದು ಖಂಡಿತ ನಕಲಿ ಕೇಸರಿ. ನೈಜ ಕೇಸರಿ ನೀರಿನಲ್ಲಿ ಎಂದಿಗೂ ತನ್ನ ಬಣ್ಣ ಬಿಡುವುದಿಲ್ಲ.



Click it and Unblock the Notifications
