Latest Updates
-
ಸೋಶಿಯಲ್ ಮೀಡಿಯಾದಲ್ಲಿ ನಿಮ್ಮ ಸಂಬಂಧವನ್ನು ರಹಸ್ಯವಾಗಿಡಬೇಕಾ? ನೆಮ್ಮದಿಯ ಬದುಕಿಗೆ ಈ ಡಿಜಿಟಲ್ ಬೌಂಡರಿಗಳು ಮಸ್ಟ್! -
ದೆಹಲಿ-ಎನ್ಸಿಆರ್ನಲ್ಲಿ ಬಿರುಗಾಳಿ ಅಬ್ಬರ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಮುನ್ನೆಚ್ಚರಿಕೆ ಮರೆಯದಿರಿ! -
ಅಡುಗೆಮನೆಯಲ್ಲಿ ಕಡಲೆ ಹಿಟ್ಟು ಬಳಸುವ ಮುನ್ನ ಎಚ್ಚರ: FSSAI ಜಾರಿಗೆ ತಂದಿದೆ ಹೊಸ ಕಠಿಣ ನಿಯಮಗಳು! -
ಫ್ಲಿಪ್ಕಾರ್ಟ್ GRWM ಸೇಲ್: ಟ್ರೆಂಡಿ ಲುಕ್ ಪಡೆಯಲು ಇನ್ಫ್ಲುಯೆನ್ಸರ್ ಸಜೆಸ್ಟ್ ಮಾಡಿದ ಬೆಸ್ಟ್ ಡೀಲ್ಗಳು ಇಲ್ಲಿವೆ! -
ಬಿಸಿಲಿನಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ಹೀಟ್ಸ್ಟ್ರೋಕ್ ಕಟ್ಟಿಟ್ಟ ಬುತ್ತಿ, ಎಚ್ಚರವಿರಲಿ! -
ಅಸ್ಸಾಂನಲ್ಲಿ ಲಿವ್-ಇನ್ ಸಂಬಂಧದಲ್ಲಿದ್ದೀರಾ? ಹೊಸ ಕಾನೂನಿನ ಪ್ರಕಾರ ನೋಂದಣಿ ಮಾಡದಿದ್ದರೆ ಜೈಲು ಶಿಕ್ಷೆ ಕಟ್ಟಿಟ್ಟ ಬುತ್ತಿ! -
ಬಿಸಿಲಿಗೆ ಗಿಡಗಳು ಬಾಡುತ್ತಿವೆಯೇ? ಈ ಮ್ಯಾಜಿಕ್ ಟಿಪ್ಸ್ ಬಳಸಿ ನಿಮ್ಮ ಬಾಲ್ಕನಿ ಗಾರ್ಡನ್ ಅನ್ನು ಹಸಿರಾಗಿಡಿ! -
ಬಿಸಿಲ ಝಳಕ್ಕೆ ಸುಸ್ತಾಗಿದ್ದೀರಾ? ಹೀಟ್ಸ್ಟ್ರೋಕ್ನಿಂದ ಪಾರಾಗಲು ಈ ತಂಪು ಪದಾರ್ಥಗಳು ನಿಮ್ಮ ಆಹಾರದಲ್ಲಿರಲಿ, ಇಂದೇ ಟ್ರೈ ಮಾಡಿ! -
ಬಕ್ರೀದ್ 2026: ಈ ಬಾರಿಯ ಹಬ್ಬದ ಸಂಭ್ರಮದಲ್ಲಿ ಮಿಂಚಲು ನೀವು ಮಿಸ್ ಮಾಡಲೇಬಾರದ ಫ್ಯಾಷನ್ ಟ್ರೆಂಡ್ಸ್ ಮತ್ತು ಸ್ಟೈಲಿಂಗ್ ಟಿಪ್ಸ್! -
ಬಿಸಿಲ ಬೇಗೆಯಲ್ಲಿ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಕಾದಿದೆ ದೊಡ್ಡ ಅಪಾಯ!
ಅಂಬಾನಿ-ಅದಾನಿಯನ್ನೇ ಹಿಂದಿಕ್ಕಿದ ದೇಶದ ಶ್ರೀಮಂತ ಮಹಿಳೆ: ಆಕೆ ಆಸ್ತಿ ಎಷ್ಟು ಗೊತ್ತಾ?
ಭಾರತದ ಶ್ರೀಮಂತ ವ್ಯಕ್ತಿಗಳು ಯಾರು ಅಂದ್ರೆ ನಮಗೆಲ್ಲಾ ಥಟ್ ಅಂತ ನೆನಪಾಗೋದು ಅದಾನಿ, ಅಂಬಾನಿ, ವಿಜಯ್ ಮಲ್ಯ ಹೀಗೆ ಒಂದಿಷ್ಟು ಫೇಮಸ್ ಹೆಸರುಗಳು ಮಾತ್ರ. ವಿಶ್ವದಲ್ಲೇ ಶ್ರೀಮಂತ ಯಾರು ಅಂದ್ರೆ ಒಂದಿಷ್ಟು ಜನ ಮಾತ್ರ ಎಲಾನ್ ಮಸ್ಕ್, ಜೆಫ್ ಬೆಜೋಸ್ ಹೆಸರು ಹೇಳ್ತಾರೆ. ಯಾಕೆಂದ್ರೆ ಇವರ ಹೆಸರನ್ನ ನಾವು ಕೇಳುತ್ತಲೇ ಬಂದಿದ್ದೇವೆ.
ಆದ್ರೆ ಈಗ ನಾವು ಹೇಳ್ತಿರೋ ಹೆಸರು ನೀವು ಸಹ ಕೇಳಿರಲ್ಲ, ಆದ್ರೆ ಆಕೆ ಭಾರತದ ಶ್ರೀಮಂತ ಮಹಿಳೆಯಾಗಿದ್ದಾರೆ. ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್ ಪ್ರಕಾರ, ಒಪಿ ಜಿಂದಾಲ್ ಗ್ರೂಪ್ ಅಧ್ಯಕ್ಷೆ ಸಾವಿತ್ರಿ ಜಿಂದಾಲ್ ದೇಶದ ಅತ್ಯಂತ ಶ್ರೀಮಂತ ಮಹಿಳೆಯಾಗಿದ್ದಾರೆ. 73 ವರ್ಷದ ಸಾವಿತ್ರಿ ಜಿಂದಾಲ್ ಅವರ ಆಸ್ತಿಯ ನಿವ್ವಳ ಮೌಲ್ಯ $25.3 ಬಿಲಿಯನ್ ತಲುಪಿದೆ. ಅವರು ಭಾರತದ ಶ್ರೀಮಂತರ ಪಟ್ಟಿಯಲ್ಲಿ 5ನೇ ಸ್ಥಾನ ತಲುಪಿದ್ದಾರೆ.

ಇನ್ನು ವಿಚಿತ್ರ ಅಂದ್ರೆ 2023ರಲ್ಲಿ ಬರೋಬ್ಬರಿ $9.6 ಬಿಲಿಯನ್ ಆದಾಯ ಅವರ ನಿವ್ವಳ ಮೌಲ್ಯಕ್ಕೆ ಸೇರಿಕೊಂಡಿದೆ. ಆದರೆ ಇದೇ ವರ್ಷ ಗೌತಮ್ ಅದಾನಿ ಹಾಗೂ ಅಂಬಾನಿ ಸಹ ಈ ಮಟ್ಟದ ಸಂಪತ್ತು ಗಳಿಸುವಲ್ಲಿ ಹಿಂದೆ ಬಿದ್ದಿದ್ದು, ಭಾರತದಲ್ಲೇ ಅತೀ ಹೆಚ್ಚು ಸಂಪತ್ತು ಗಳಿಸಿದ ಮಹಿಳೆಯಾಗಿ ಸಾವಿತ್ರಿ ಜಿಂದಾಲ್ ಹೊರಹೊಮ್ಮಿದ್ದಾರೆ. ಹಾಗಾದ್ರೆ ಯಾರು ಈ ಸಾವಿತ್ರಿ ಜಿಂದಾಲ್? ಇಲ್ಲಿದೆ ಉತ್ತರ..
ಸಾವಿತ್ರಿ ಜಿಂದಾಲ್ ಅವರು OP ಜಿಂದಾಲ್ ಗ್ರೂಪ್‌ನ ಎಮೆರಿಟಸ್ ಅಧ್ಯಕ್ಷರಾಗಿದ್ದಾರೆ. ಈ ಕಂಪನಿಯನ್ನು ಅವರ ಪತಿ ಓಂ ಪ್ರಕಾಶ್ ಜಿಂದಾಲ್ ಪ್ರಾರಂಭಿಸಿದ್ದರು. ಅವರ ಕಂಪನಿ JSW ಉಕ್ಕು ಉದ್ಯಮದಲ್ಲಿ ಉತ್ತಮ ಹಿಡಿತವನ್ನು ಹೊಂದಿದೆ. ಇದಲ್ಲದೇ, JSW ಎನರ್ಜಿ, ಜಿಂದಾಲ್ ಪವರ್, ಜಿಂದಾಲ್ ಹೋಲ್ಡಿಂಗ್ಸ್, JSW ಸಾ ಮತ್ತು ಜಿಂದಾಲ್ ಸ್ಟೇನ್‌ಲೆಸ್ ಕಂಪನಿಗಳ ಮೂಲಕ ಜಿಂದಾಲ್ ಗ್ರೂಪ್‌ನ ವ್ಯವಹಾರವು ಹಲವು ವಲಯಗಳಲ್ಲಿ ಹರಡಿದೆ.
ಕಾಲೇಜು ಮೆಟ್ಟಿಲು ಹತ್ತಿಲ್ಲ
1970 ರಲ್ಲಿ, ಜಿಂದಾಲ್ ಗ್ರೂಪ್ ಸಂಸ್ಥಾಪಕ ಹರಿಯಾಣದ ಓಂಪ್ರಕಾಶ್ ಜಿಂದಾಲ್ ಅವರನ್ನು ಸಾವಿತ್ರಿ ಅವರು ವಿವಾಹವಾದರು. ಒಪಿ ಜಿಂದಾಲ್ ಮತ್ತು ಸಾವಿತ್ರಿ ದಂಪತಿಗೆ ಒಂಬತ್ತು ಮಕ್ಕಳಿದ್ದಾರೆ. ಕೆಲವು ವರದಿಗಳ ಪ್ರಕಾರ, ಸಾವಿತ್ರಿ ಜಿಂದಾಲ್ ಕಾಲೇಜಿಗೆ ಹೋಗಿರಲಿಲ್ಲ. ಕಡಿಮೆ ಶಿಕ್ಷಣ ಪಡೆದಿದಗ್ದ ಅವರು, ಇದರ ಹೊರತಾಗಿಯೂ, ತನ್ನ ಪತಿಯ ಹಠಾತ್ ಮರಣದ ನಂತರ, ಆಕೆ ಇಡೀ ವ್ಯವಹಾರವನ್ನು ನೋಡಿಕೊಳ್ಳಲು ಪಣತೊಟ್ಟಳು. ಇದು ಸಾವಿತ್ರಿ ಜಿಂದಾಲ್‌ಗೆ ಸುಲಭವಾಗಿರಲಿಲ್ಲ. ಜಿಂದಾಲ್ ಕುಟುಂಬದಲ್ಲಿ ಹೆಚ್ಚಿನ ಮಹಿಳೆಯರು ಮನೆಯ ಜವಾಬ್ದಾರಿಯನ್ನು ನೋಡಿಕೊಳ್ಳುತ್ತಾರೆ ಮತ್ತು ಪುರುಷರು ಹೊರಗಿನ ಕೆಲಸವನ್ನು ನೋಡಿಕೊಳ್ಳುತ್ತಾರೆ ಎಂದು ಅವರು ಹೇಳುತ್ತಾರೆ. ಇದರಿಂದ ಪತಿಯ ವ್ಯವಹಾರ ನಿರ್ವಹಣೆಗೆ ಕಷ್ಟಪಡಬೇಕಾಯಿತು ಎಂದು ಅವರೇ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.
ಎರಡು ಬಾರಿ ಚುನಾವಣೆಯಲ್ಲಿ ಗೆದ್ದಿದ್ದಾರೆ
ಸಾವಿತ್ರಿ ಜಿಂದಾಲ್ ಅವರ ಪತಿ ಓಂ ಪ್ರಕಾಶ್ ಜಿಂದಾಲ್ ಅವರು ಹರಿಯಾಣ ಸರ್ಕಾರದಲ್ಲಿ ಸಚಿವರಾಗಿದ್ದರು ಮತ್ತು ಹಿಸಾರ್ ಕ್ಷೇತ್ರದಿಂದ ಹರಿಯಾಣ ವಿಧಾನಸಭೆಯ ಸದಸ್ಯರಾಗಿದ್ದರು. ಸಾವಿತ್ರಿ ಜಿಂದಾಲ್ ಅವರು ಹರಿಯಾಣದ ಹಿಸಾರ್ ವಿಧಾನಸಭಾ ಕ್ಷೇತ್ರದಿಂದ ಎರಡು ಬಾರಿ ಚುನಾವಣೆಗೆ ಸ್ಪರ್ಧಿಸಿದ್ದಾರೆ. 2005 ಮತ್ತು 2009ರಲ್ಲಿ ಎರಡು ಬಾರಿ ಗೆದ್ದಿದ್ದರು.
ಶ್ರೀಮಂತರ ಪಟ್ಟಿಯಲ್ಲಿರುವ ಉಳಿದ ಉದ್ಯಮಿಗಳು
HCL ಸಂಸ್ಥೆಯ ಶಿವ ನಾಡರ್ ಕಳೆದ ವರ್ಷದಲ್ಲಿ ಸುಮಾರು $8 ಶತಕೋಟಿಯನ್ನು ತಮ್ಮ ಸಂಪತ್ತಿನ ಪಟ್ಟಿಗೆ ಸೇರಿಸಿದರೆ, DLF ನ KP ಸಿಂಗ್ $7 ಶತಕೋಟಿ ಗಳಿಸಿದ್ದಾರೆ. ಕುಮಾರ್ ಮಂಗಲಂ ಬಿರ್ಲಾ ಮತ್ತು ಶಾಪೂರ್ ಮಿಸ್ತ್ರಿ ತಲಾ $6.3 ಬಿಲಿಯನ್ ಗಳಿಸಿದ್ದಾರೆ. ಈ ಪಟ್ಟಿಯಲ್ಲಿ ದಿಲೀಪ್ ಶಾಂಘ್ವಿ, ರವಿ ಜೈಪುರಿಯಾ, ಸಂಸದ ಲೋಧಾ, ಸುನಿಲ್ ಮಿತ್ತಲ್ ಸೇರಿದಂತೆ ಇತರರು ಸೇರಿದ್ದಾರೆ.
ಮತ್ತೊಂದೆಡೆ ಗೌತಮ್ ಅದಾನಿ ಅವರ ಆಸ್ತಿ ಮೌಲ್ಯ ಉಳಿಮುಖವಾಗುತ್ತಾ ಸಾಗಿದೆ. ಅವರ ನಿವ್ವಳ ಮೌಲ್ಯವು ಹಿಮ್ಮುಖ ದಿಕ್ಕಿನಲ್ಲಿ ಸಾಗಿ $85.1 ಶತಕೋಟಿಯಿಂದ $35.4 ಶತಕೋಟಿಗೆ ಇಳಿದಿದೆ. ಆದಾಗ್ಯೂ, ಅದಾನಿ ಎರಡನೇ ಅತಿ ಶ್ರೀಮಂತ ಭಾರತೀಯರಾಗಿ ಉಳಿದಿದ್ದಾರೆ.



Click it and Unblock the Notifications