Latest Updates
-
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ! -
ಮ್ಯಾಟ್ರಿಮೋನಿ ಆಪ್ಗಳಲ್ಲಿ ಆಧಾರ್ ಪರಿಶೀಲನೆ: ನಕಲಿ ಪ್ರೊಫೈಲ್ಗಳಿಗೆ ಇನ್ನು ಬ್ರೇಕ್? -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಬಾಲ್ಕನಿ ಸುರಕ್ಷಿತವಾಗಿಡಲು ತಕ್ಷಣವೇ ಈ ಕೆಲಸ ಮಾಡಿ -
ಹಬ್ಬದ ಸೀಸನ್: ನಿಮ್ಮ ಅಡುಗೆಮನೆಯಲ್ಲಿ ವಿಷವಿದೆಯೇ? ಮಹಾರಾಷ್ಟ್ರ ಎಫ್ಡಿಎ ದಾಳಿಯ ನಂತರ ಎಚ್ಚರ! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ಆಫರ್ ಮಳೆಯಲ್ಲಿ ಸಿಲುಕುವ ಮುನ್ನ ಈ 5 ಟಿಪ್ಸ್ ಮಿಸ್ ಮಾಡ್ಬೇಡಿ! -
10 ನಿಮಿಷದ ದೇಸಿ ಬಾಡಿವೇಟ್ ಚಾಲೆಂಜ್: ಜಿಮ್ ಇಲ್ಲದೆ ಫಿಟ್ ಆಗಲು ಈ ವರ್ಕೌಟ್ ಟ್ರೈ ಮಾಡಿ!
ಭಾರತದಲ್ಲಿರುವ ಏಕೈಕ ನಾಗ ಗಣಪತಿ: ವಿಜ್ಞಾನಕ್ಕೂ ಬೇಧಿಸಲು ಸಾಧ್ಯವಾಗಲಿಲ್ಲ ಇಲ್ಲಿಯ ಪವಾಡ
ಭಾರತದಲ್ಲಿ ಸಾಕಷ್ಟು ಗಣಪತಿ ದೇವಾಲಯಗಳಿವೆ, ಅದರೆ ನಾಗ ಗಣಪತಿಯಂಥ ದೇವಾಲಯ ಮತ್ತೊಂದಿಲ್ಲ, ಅಲ್ಲದೆ ಈ ದೇವಾಲಯವು ಸುಮಾರು 1103 ವರ್ಷ ಹಿಂದಿನದು, ಈ ದೇವಾಲಯ ಛತ್ತೀಸ್‌ಗಢದ ಡೋಲ್ಕಲ್ ಬೆಟ್ಟದಲ್ಲಿದೆ, ಇದು ಅರಣ್ಯದೊಳಗಡೆ 14 ಕಿಮೀ ದೂರದಲ್ಲಿರುವ ಬೆಟ್ಟದಲ್ಲಿದೆ.

ಪ್ರತಿವರ್ಷವೂ ಇಲ್ಲಿಯ ಗಣೇಶನ ಮೂರ್ತಿ ಬೆಳೆಯುತ್ತಲೇ ಇದೆ
ಈ ನಾಗ ಗಣಪತಿ ಮೂರ್ತಿಯ ವಿಶೇಷವೆಂದರೆ ಪ್ರತಿವರ್ಷವೂ ಬೆಳೆಯುತ್ತಲೇ ಇದೆ, ಅಲ್ಲದೆ ಬೆಟ್ಟದ ತುತ್ತ ತುದಿಯಲ್ಲಿರುವ ಈ ಗಣೇಶನ ಮೂರ್ತಿ ರಂಗೋಲಿ ಹಾಕಿದಾಗ 360 ಡಿಗ್ರಿಯಲ್ಲಿ ತಿರುಗುತ್ತದೆ, ಈ ಪವಾಡದ ಹಿಂದಿನ ಕಾರಣವೇನು ಎಂಬುವುದನ್ನು ಬೇಧಿಸಲು ಈಗಲೂ ಸಾಧ್ಯವಿಲ್ಲ.
ನಾಗಾ ಸಾಮ್ರಾಜ್ಯದ ಸಮಯದಲ್ಲಿ ಈ ಮೂರ್ತಿ ಕೆತ್ತಲಾಗಿದೆ
ಈ ದೇವಾಲಯವನ್ನು 2ನೇ ಶತಮಾನದಲ್ಲಿ ನಾಗ ಸಾಮ್ರಾಜ್ಯ ಕಾಲದಲ್ಲಿ ನಿರ್ಮಿಸಲಾಗಿದೆ. ಈ ಗಣಪತಿಯ ಕಲ್ಲು ಕೂಡ ತುಂಬಾನೇ ವಿಶೇಷವಾಗಿದೆ, ಇಂಥದ್ದೊಂದು ಕಲ್ಲು ಎಲ್ಲಿಯೂ ಕಂಡು ಬಂದಿಲ್ಲ ಎಂದು ಪುರಾತತ್ವ ಇಲಾಖೆ ಹೇಳುತ್ತದೆ. 1924ರಲ್ಲಿ ಛತ್ತೀಸ್‌ಗಢದಲ್ಲಿ ಭೂಕಂಪನ ಸಂಭವಿಸುತ್ತದ, ಅವಾಗ ಡೋಲ್ಕಲ್ ಬೆಟ್ಟ 4 ವಿಭಾಗವಾಗುತ್ತದೆ, ಅದರೆ ಈ ಮೂರ್ತಿ ಇರುವ ಬೆಟ್ಟದ ಭಾಗಕ್ಕೆ ಏನೂ ಆಗದೆ ಹಾಗೆಯೇ ಉಳಿಯುತ್ತದೆ.
ಡೋಲ್ಕಲ್ ಬೆಟ್ಟದಲ್ಲಿರುವ ಗಣೇಶನ ನೋಡಲು ಬಸ್ಕಾರ್ ಬೆಟ್ಟ ಹತ್ತಬೇಕು
ಡೋಲ್ಕಲ್ ಬೆಟ್ಟ ಹತ್ತುವುದು ಸುಲಭವಲ್ಲ, ಹಿಗೆ ಹತ್ತಲು ಪ್ರಯತ್ನ ಮಾಡಿದ ಹಲವಾರು ಜನರು ತೊಂದರೆ ಅನುಭವಿಸಿದ್ದಾರೆ, ಅದರೆ ಅದರ ಸಮೀಪ ಇರುವ ಬಸ್ಕಾರ್ ಬೆಟ್ಟ ಹತ್ತುವುದು ಸುಲಭ, ಈ ಬೆಟ್ಟ ಹತ್ತಿದರೆ ಡೋಲ್ಕಲ್ ಬೆಟ್ಟದಲ್ಲಿರುವ ಗಣೇಶನ ದರ್ಶನ ಪಡೆಯಬಹುದು. ಇಲ್ಲಿಗೆ ಪ್ರತಿನಿತ್ಯ ನೂರಾರು ಭಕ್ತರು ಬಂದು ಗಣೇಶನ ದರ್ಶನ ಪಡೆಯುತ್ತಾರೆ.
ಹೆಲಿಕಾಫ್ಟರ್‌ನಲ್ಲಿ ಬಂದು ಪೂಜೆ ಮಾಡುವ ಪುರೋಹಿತರು
ಈ ದೇವಾಲಯದ ಪೂಜೆಯನ್ನು ಅಲ್ಲಿಯ ಸರ್ಕಾರ ವಹಿಸಿಕೊಂಡಿದ್ದು ಪುರೋಹಿತರನ್ನು ಹೆಲಿಕಾಫ್ಟರ್‌ನಲ್ಲಿ ಕರೆದುಕೊಂಡು ಬಂದು ಪೂಜೆ ಸಲ್ಲಿಸಿ ಹೋಗಲಾಗುವುದು. ಈ ಬೆಟ್ಟದಲ್ಲಿ ಇಬ್ಬರು ನಿಲ್ಲಬಹುದು ಅಷ್ಟೇ... ಇಲ್ಲಿಗೆ ನಾಗ ಜನಾಂಗದವರು ಸುಲಭದಲ್ಲಿ ಹತ್ತಿ ಬರುತ್ತಾರೆ, ಆದರೆ ಬೇರೆಯವರಿಗೆ ಈ ಬೆಟ್ಟ ಹತ್ತವುದು ಸುಲಭವಲ್ಲ.
ನಾಗಮಂತ್ರಗಳಿಂದ ದೃಷ್ಟಿಸಲಾಗಿದೆ ಎಂದು ಹೇಳಲಾಗುವುದು
ಡೋಲ್ಕರ್ ಬೆಟ್ಟದಲ್ಲಿರುವ ನಾಗ ಗಣಪತಿಯನ್ನು ಕೆತ್ತಿ ಮಾಡಿದ್ದಲ್ಲ, ಮಂತ್ರ ಶಕ್ತಿಯಿಂದ ಮಾಡಿದ್ದು ಎಂದು ಹೇಳಲಾಗುತ್ತಿದೆ.
ನಾಗ ಸಾಮ್ರಾಜ್ಯದ 21 ಚಿಹ್ನೆಯ ರಂಗೋಲಿ ಹಾಕಿದರೆ ನಡೆಯುತ್ತೆ ಚಮತ್ಕಾರ
ನಾಗ ಸಾಮ್ರಾಜ್ಯದ 21 ಚಿಹ್ನೆಯ ರಂಗೋಲಿ ಹಾಕಿದರೆ ಗಣಪತಿ ಒಂದು ಸುತ್ತು ಹಾಕುತ್ತದೆ. ರಂಗೋಲಿಯ ತೂಕದ ಒತ್ತಡಕ್ಕೆ ಗಣಪತಿ ಮೂರ್ತಿ ತಿರುಗುವಂಥ ತಂತ್ರಜ್ಞಾನ ಆ ಕಾಲದಲ್ಲಿಯೇ ಮಾಡಲಾಗಿದೆ ಎಂದು ಹೇಳಲಾಗುವುದು, ಅದರೆ ರಂಗೋಲಿ ತೂಕದ ಬೇರೆ ಯಾವುದೇ ವಸ್ತು ಇಟ್ಟರು ಗಣಪತಿಯ ಮೂರ್ತಿ ತಿರುಗುವುದಿಲ್ಲ, ಬೇರೆ ಯಾವುದೇ ರಂಗೋಲಿ ಬರೆದರೂ ಮೂರ್ತಿ ನತಿರುಗಲ್ಲ, ಆದರೆ ನಾಗ ಸಾಮ್ರಾಜ್ಯದ 21 ಚಿಹ್ನೆ ಬರೆದರೆ ಮೂರ್ತಿ ಒಂದು ಸುತ್ತು ಹಾಕುತ್ತದೆ. ಇಲ್ಲಿಯ ಪವಾಡಗಳ ಕಾರಣದಿಂದ ಸಾಕಷ್ಟು ಭಕ್ತರನ್ನು ಆಕರ್ಷಿಸುತ್ತಿರುವ ದೇವಾಲಯವಾಗಿದೆ.



Click it and Unblock the Notifications
