Latest Updates
-
ಸೋಶಿಯಲ್ ಮೀಡಿಯಾದಲ್ಲಿ ನಿಮ್ಮ ಸಂಬಂಧವನ್ನು ರಹಸ್ಯವಾಗಿಡಬೇಕಾ? ನೆಮ್ಮದಿಯ ಬದುಕಿಗೆ ಈ ಡಿಜಿಟಲ್ ಬೌಂಡರಿಗಳು ಮಸ್ಟ್! -
ದೆಹಲಿ-ಎನ್ಸಿಆರ್ನಲ್ಲಿ ಬಿರುಗಾಳಿ ಅಬ್ಬರ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಮುನ್ನೆಚ್ಚರಿಕೆ ಮರೆಯದಿರಿ! -
ಅಡುಗೆಮನೆಯಲ್ಲಿ ಕಡಲೆ ಹಿಟ್ಟು ಬಳಸುವ ಮುನ್ನ ಎಚ್ಚರ: FSSAI ಜಾರಿಗೆ ತಂದಿದೆ ಹೊಸ ಕಠಿಣ ನಿಯಮಗಳು! -
ಫ್ಲಿಪ್ಕಾರ್ಟ್ GRWM ಸೇಲ್: ಟ್ರೆಂಡಿ ಲುಕ್ ಪಡೆಯಲು ಇನ್ಫ್ಲುಯೆನ್ಸರ್ ಸಜೆಸ್ಟ್ ಮಾಡಿದ ಬೆಸ್ಟ್ ಡೀಲ್ಗಳು ಇಲ್ಲಿವೆ! -
ಬಿಸಿಲಿನಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ಹೀಟ್ಸ್ಟ್ರೋಕ್ ಕಟ್ಟಿಟ್ಟ ಬುತ್ತಿ, ಎಚ್ಚರವಿರಲಿ! -
ಅಸ್ಸಾಂನಲ್ಲಿ ಲಿವ್-ಇನ್ ಸಂಬಂಧದಲ್ಲಿದ್ದೀರಾ? ಹೊಸ ಕಾನೂನಿನ ಪ್ರಕಾರ ನೋಂದಣಿ ಮಾಡದಿದ್ದರೆ ಜೈಲು ಶಿಕ್ಷೆ ಕಟ್ಟಿಟ್ಟ ಬುತ್ತಿ! -
ಬಿಸಿಲಿಗೆ ಗಿಡಗಳು ಬಾಡುತ್ತಿವೆಯೇ? ಈ ಮ್ಯಾಜಿಕ್ ಟಿಪ್ಸ್ ಬಳಸಿ ನಿಮ್ಮ ಬಾಲ್ಕನಿ ಗಾರ್ಡನ್ ಅನ್ನು ಹಸಿರಾಗಿಡಿ! -
ಬಿಸಿಲ ಝಳಕ್ಕೆ ಸುಸ್ತಾಗಿದ್ದೀರಾ? ಹೀಟ್ಸ್ಟ್ರೋಕ್ನಿಂದ ಪಾರಾಗಲು ಈ ತಂಪು ಪದಾರ್ಥಗಳು ನಿಮ್ಮ ಆಹಾರದಲ್ಲಿರಲಿ, ಇಂದೇ ಟ್ರೈ ಮಾಡಿ! -
ಬಕ್ರೀದ್ 2026: ಈ ಬಾರಿಯ ಹಬ್ಬದ ಸಂಭ್ರಮದಲ್ಲಿ ಮಿಂಚಲು ನೀವು ಮಿಸ್ ಮಾಡಲೇಬಾರದ ಫ್ಯಾಷನ್ ಟ್ರೆಂಡ್ಸ್ ಮತ್ತು ಸ್ಟೈಲಿಂಗ್ ಟಿಪ್ಸ್! -
ಬಿಸಿಲ ಬೇಗೆಯಲ್ಲಿ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಕಾದಿದೆ ದೊಡ್ಡ ಅಪಾಯ!
ಸ್ವಾತಂತ್ರ್ಯ ಗ್ರಾಮ ಎಂದು ಘೋಷಿಸಿ..! ಸರ್ವಾಧಿಕಾರಿಯನ್ನೇ ನೇಮಿಸಿಕೊಂಡ ಹಳ್ಳಿ ಇದು..!
ಭಾರತದ ಸ್ವಾತಂತ್ರ್ಯ ಸಂಗ್ರಾಮ ಅಂದ್ರೆ ಅಲ್ಲಿ ಲಕ್ಷ ಲಕ್ಷ ಮಂದಿಯ ತ್ಯಾಗ, ಬಲಿದಾನ ಕಣ್ಣ ಮುಂದೆ ಬರುತ್ತೆ. ಅವರು ಬ್ರಿಟೀಷರ ವಿರುದ್ಧ ನಡೆಸಿದ ಆಂದೋಲನ, ಚಳವಳಿ, ಹೋರಾಟ ಎಷ್ಟು ತಲೆಮಾರುಗಳು ಕಳೆದರು ಅಳಿಸಲಾಗದು. ಬ್ರಿಟಿಷರಿಂದ ದಾಸ್ಯದ ಬದುಕನ್ನು ಸ್ವಂತತ್ರಗೊಳಿಸಲು ಹಗಲು ರಾತ್ರಿ ಎನ್ನದೆ ಹೋರಾಡಿದ ನಾಯಕರ ನೆನೆಯಲು ಈ ಸ್ವಾತಂತ್ರ್ಯೂತ್ಸವ ಸೂಕ್ತ ಸಮಯವಾಗಿದೆ.
ಸ್ವಾತಂತ್ರ್ಯ ಸಂಗ್ರಾಮ ಎಂಬುದು ಇಡೀ ದೇಶದಲ್ಲಿ ಹರಡಬೇಕಾದರೆ ವರ್ಷಗಳೆ ಉರುಳಿದ್ದವು. ಭಾರತೀಯರನ್ನು ಒಡೆದು ಆಳುವ ನೀತಿಯನ್ನ ಅನುಸರಿಸಿದ್ದ ಬ್ರಿಟೀಷರು. ಭಾರತವನ್ನ ಮತ್ತಷ್ಟು ಪಾತಾಳಕ್ಕೆ ತಳ್ಳಿದ್ದರು. ಆದ್ರೆ ಇದೆಲ್ಲದರ ವಿರುದ್ಧ ನಡೆಸಿದ್ದ ವರ್ಷಗಳ ಹೋರಾಟ ನಮಗೆ ಸ್ವಾತಂತ್ರ್ಯ ಲಭಿಸುವಂತೆ ಮಾಡಿತ್ತು. ಈ ದೇಶಕ್ಕೆ 1947 ಆಗಸ್ಟ್ 15ರಂದು ಸ್ವಾತಂತ್ರ್ಯ ಸಿಕ್ಕಿತು, ಆದ್ರೆ ಇದಕ್ಕೂ ಮೊದಲೆ ಸ್ವಾತಂತ್ರಗೊಂಡ ಒಂದು ಹಳ್ಳಿ ಬಗ್ಗೆ ನಿಮಗೆ ಗೊತ್ತಾ?
ಹೌದು ರಾಜ್ಯದ ಬಹುಪಾಲು ಮಂದಿಗೆ ಈ ಊರಿನ ಪರಿಚಯವಿರುತ್ತೆ. ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲೂಕಿನ ಸಣ್ಣ ಹಳ್ಳಿಯಾಗಿದ್ದ ಈಸೂರು ಮೊಟ್ಟ ಮೊದಲ ಬಾರಿಗೆ ತಮಗೆ ತಾವೇ ಸ್ವಾತಂತ್ರ್ಯ ಘೋಷಿಸಿಕೊಂಡ ಊರಾಗಿದೆ. ಇಡೀ ದೇಶದಲ್ಲಿ ಈ ರೀತಿಯ ಚಳವಳಿಗೆ ಸಾಕ್ಷಿಯಾಗಿದ್ದು, ಸ್ವಾತಂತ್ರ್ಯದ ಕಿಡಿ ಹೊತ್ತಿಸಿದ್ದೇ ಈ ಈಸೂರು ಎಂಬ ಪುಟ್ಟ ಗ್ರಾಮ.

ನಾವಿಂದು ಈ ಹಳ್ಳಿಯ ಕಥೆ ಏನು? ಸ್ವಾತಂತ್ರ್ಯ ಘೋಷಿಸಿಕೊಂಡಿದ್ದಾದರು ಹೇಗೆ?ಈ ಹಳ್ಳಿಯ ಕ್ರಾಂತಿಕಾರಿಗಳು ಯಾರು? ಸ್ವಾತಂತ್ರ್ಯ ಘೋಷಿಸಿಕೊಂಡ ಬಳಿಕ ಆ ಹಳ್ಳಿಯಲ್ಲಿ ಆಗಿದ್ದೇನು ಎಂಬ ಇತಿಹಾಸದ ಪುಟಗಳನ್ನು ಒಮ್ಮೆ ತಿರುವಿ ನೋಡೋಣ.
'ಏಸೂರ ಕೊಟ್ಟರೂ ಈಸೂರು ಬಿಡೆವು' ಎಂದು ಹೇಳುತ್ತಾ ಯಾರ ನಾಯಕತ್ವವಿಲ್ಲದೇ ಸ್ವಯಂ ಪ್ರೇರಿತರಾಗಿ ಬ್ರಿಟಿಷರ ವಿರುದ್ಧ ಹೋರಾಡಿದರು ಎಂಬುದನ್ನು ನಾವು ಕೇಳಿದ್ದೇವೆ. ಗಾಂಧೀಜಿ ಕರೆ ಕೊಟ್ಟಿದ್ದ ಬ್ರಿಟೀಷರೆ ಭಾರತ ಬಿಟ್ಟು ತೊಲಗಿ ಎಂಬ ಹೋರಾಟಕ್ಕೆ ಈ ಪುಟ್ಟ ಹಳ್ಳಿ ಅಕ್ಷರಶಃ ಕಿಡಿ ಹೊತ್ತಿಸಿತ್ತು. ಮೊಟ್ಟ ಮೊದಲ ಬಾರಿಗೆ ಭಾರತದ ತ್ರಿವರ್ಣ ಧ್ವಜ ಹಾರಾಡಿತು.
1942ರಲ್ಲಿ ಹಾರಾಡಿತು ತ್ರಿಬರ್ಣ ಧ್ವಜ
ಗಾಂಧೀಜಿ ಕೊಟ್ಟ ಸ್ವಾತಂತ್ರ್ಯದ ಕೂಗು ಇಡೀ ಗ್ರಾಮದಲ್ಲಿ ಹಬ್ಬಿತ್ತು. 1942ರಲ್ಲಿ ಈರೂಸು ಗ್ರಾಮದ ವೀರಭದ್ರೇಶ್ವರ ದೇವಸ್ಥಾನದ ಮೇಲೆ ಭಾರತದ ತ್ರಿವರ್ಣ ಧ್ವಜ ಹಾರಾಡಿತು. ಇಷ್ಟೇ ಅಲ್ಲ ಈಸೂರು ಗ್ರಾಮ ಇಂದಿನಿಂದ ಸ್ವಾತಂತ್ರ್ಯ ಎಂದು ಅವರೇ ಘೋಷಿಸಿಕೊಂಡು ಬಿಟ್ಟರು. ಹೀಗಾಗಿ ಗ್ರಾಮಕ್ಕೆ ಪ್ರತ್ಯೇಕ ಆಡಳಿತ ಬೇಕು. ಪ್ರತ್ಯೇಕ ಕಾನೂನು ತರಲು ಮುಂದಾದರು.
ಸರ್ವಾಧಿಕಾರಿಯೂ ನೇಮಕ
ವೀರಭದ್ರೇಶ್ವರ ದೇವಸ್ಥಾನದ ಮೇಲೆ ಧ್ವಜ ಹಾರಾಡಿದ್ದೇ ತಡ ಗ್ರಾಮಸ್ಥರೇ ಸೇರಿ ಗ್ರಾಮದ ಪುಟ್ಟ ಬಾಲಕ 12 ವರ್ಷದ ಮಲ್ಲಪ್ಪ ಎಂಬುವನನ್ನು ಸರ್ವಾಧಿಕಾರಿ ಎಂದು ನಾಮಕರಣ ಮಾಡಿಯೇ ಬಿಟ್ಟಿದ್ದರು ಜೊತೆಗೆ 10 ವರ್ಷದ ಬಾಲಕ ಜಯಪ್ಪ ಅವರನ್ನ ಅಮಲ್ದಾರನನ್ನಾಗಿ ಮಾಡಿ ಘೋಷಿಸಿಕೊಂಡಿದ್ದರು. ಅಲ್ಲದೆ ವಿಶೇಷ ಆಡಳಿತವಾಗಿ ಗ್ರಾಮದ ಜನರಿಗೆ ಹೊಸ ನಿಯಮಗಳ ಜಾರಿ ಮಾಡಿದ್ದರು. ಈ ವಿಚಾರ ತಿಳಿದು ಗ್ರಾಮಕ್ಕೆ ಬಂದಿದ್ದ ಅಧಿಕಾರಿಗಳ ತಡೆದು ಅವರಿಗೆ ಖಾದಿ ಟೋಪಿ ಧರಿಸಿ ಬಳಿಕ ಗ್ರಾಮಕ್ಕೆ ಬರುವಂತೆ ಆಗ್ರಹಿಸಲಾಗಿತ್ತು.
ಪೊಲೀಸರ ಬರ್ಬರ ಹತ್ಯೆ
ಗ್ರಾಮದೊಳಗೆ ಬರಬೇಕಾದರೆ ಖಾದಿ ಟೋಪಿ ಧರಿಸಬೇಕು ಎಂಬ ನಿಯಮ ಮಾಡಿದ ಈಸೂರಿನ ಸುದ್ದಿ ತಿಳಿದ ಪೊಲೀಸರು ಗ್ರಾಮಕ್ಕೆ ಭೇಟಿ ನೀಡಿದರು. ಈ ವೇಳೆ ಸ್ಥಳದಲ್ಲಿ ಸೇರಿದ್ದ ಕ್ರಾಂತಿಕಾರಿಗಳ ಮೇಲೆ ಪೊಲೀಸರು ಹಲ್ಲೆ ನಡೆಸಿದರು. ಆದರೆ ಅಂದು ಸ್ವಾತಂತ್ರ್ಯದ ಕಿಡಿ ಬೆಂಕಿಯಾಗಿ ಹೊತ್ತಿ ಉರಿಯಿತು. ಸುತ್ತಲು ಸೇರಿದ ಮಂದಿ ಸಬ್ ಇನ್‌ಸ್ಪೆಕ್ಟರ್ ಕೆಂಚನಗೌಡ, ಅಮಲ್ದಾರ್ ಚನ್ನಕೃಷ್ಣಪ್ಪ ಅವರ ಮೇಲೆ ಹಲ್ಲೆ ಮಾಡಿ ಕೊಂದರು. ಇದು ದೇಶದಲ್ಲೆಡೆ ಸುದ್ದಿಗೆ ಕಾರಣವಾಯಿತು.
ಗ್ರಾಮಕ್ಕೆ ನುಗ್ಗಿದ ಬ್ರಿಟೀಷ್ ಸೇನೆ..! ಊರು ತೊರೆದ ಮಂದಿ
ಈಸೂರಿನ ಈ ಘಟನೆಯಿಂದ ಬ್ರಿಟೀಷ್ ಅಧಿಕಾರಿಗಳೇ ದಂಗಾಗಿದ್ದರು. ಈ ಹೋರಾಟವನ್ನ ದೊಡ್ಡದು ಮಾಡಲು ಬಿಡದೆ ಅಲ್ಲಿಯೇ ಮರೆ ಮಾಡಲು ಇಡೀ ಬ್ರಿಟೀಷ್ ಸೇನೆ ಗ್ರಾಮಕ್ಕೆ ನುಗ್ಗಿತು. ಈ ವೇಳೆ ಸಿಕ್ಕ ಸಿಕ್ಕವರಿಗೆ ಬೂಟಿನ ಏಟು, ಲಾಠಿ ರುಚಿ ತೋರಿಸಿದ್ರು, ಮಕ್ಕಳು, ಮಹಿಳೆಯರ ಮೇಲೆ ದಾಳಿ ನಡೆದಿತ್ತು. ಹೋರಾಟಕ್ಕೆ ಕುಮ್ಮಕ್ಕು ನೀಡಿದ್ದರು ಎಂಬ ಕಾರಣಕ್ಕೆ ಊರಿನ ಸಾಹುಕಾರರಾಗಿದ್ದ ಬಸವಣ್ಣಪ್ಪ ಎಂಬುವರ ಮನೆಗೆ ಬೆಂಕಿ ಹಚ್ಚಲಾಗಿತ್ತು. ಹತ್ತಾರು ಮಂದಿಯನ್ನ ಬಂಧಿಸಿ ಎಳೆದೊಯ್ಯಲಾಗಿತ್ತು.
1943ರ ಮಾರ್ಚ್‌ನಲ್ಲಿ ಗುರಪ್ಪ, ಜೀನಳ್ಳಿ ಮಲ್ಲಪ್ಪ, ಸೂರ್ಯನಾರಾಯಣಾಚಾರ್, ಬಡಕಳ್ಳಿ ಹಾಲಪ್ಪ ಹಾಗೂ ಗೌಡ್ರು ಶಂಕರಪ್ಪ ಎಂಬ ಹೋರಾಟಗಾರರನ್ನ ಗಲ್ಲಿಗೇರಿಸಲಾಗಿತ್ತು. ಅವರ ರಾಜ ದ್ರೋಹ, ಸರ್ಕಾರ ವಿರುದ್ಧ ಹೋರಾಟ ಮಾಡಿದ್ದ ಮಹಿಳೆಯರಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿತ್ತು. ಈ ಹೋರಾಟ ಇಡೀ ದೇಶವೇ ತಿರುಗಿ ನೋಡುವಂತೆ ಮಾಡಿತ್ತು.



Click it and Unblock the Notifications

