Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
ಬೆಂಗಳೂರಿಗಿಂತ ಭಯಾನಕ ಕಾಲ್ತುಳಿತಗಳ ಬಗ್ಗೆ ನಿಮಗೆ ಗೊತ್ತಾ? ಇಲ್ಲಿದೆ ಮಾಹಿತಿ!
ಇಂಡಿಯನ್ ಪ್ರೀಮಿಯರ್ ಲೀಗ್‌ನ 18ನೇ ಆವೃತ್ತಿಯಲ್ಲಿ ಜಯ ದಾಖಲಿಸಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಇತಿಹಾಸ ನಿರ್ಮಿಸಿದೆ. 18 ವರ್ಷದ ಬಳಿಕ ಮೊದಲ ಬಾರಿಗೆ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದ ಸಂಭ್ರಮ ಮುಗಿಲು ಮುಟ್ಟಿತ್ತು. ಬೆಂಗಳೂರು ಮಾತ್ರವಲ್ಲ ಹಲವು ಕಡೆಗಳಲ್ಲಿ ಅಭಿಮಾನಿಗಳು ಸಂಭ್ರಮಾಚರಣೆ ಮಾಡಿದ್ದರು.
ಬೆಂಗಳೂರಿನಲ್ಲಿ ಸಂಭ್ರಮಾಚರಣೆಗೆ ಪೊಲೀಸರು ಅವಕಾಶ ನೀಡದ ಹಿನ್ನೆಲೆ ವಿಧಾನಸೌಧದ ಮುಂದೆ ಟ್ರೋಫಿಯೊಂದಿಗೆ ಆಟಗಾರರು ಸಹ ಸೇರಿದ್ದರು. ಅವರನ್ನು ಕಣ್ತುಂಬಿಕೊಳ್ಳಲು ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಸೇರಿದ್ದರಿಂದ ಕಾಲ್ತುಳಿತ ಉಂಟಾಗಿ ಹಲವರು ಪ್ರಾಣ ಕಳೆದುಕೊಂಡರು. ಪ್ರಶಸ್ತಿ ಗೆದ್ದ ಖುಷಿಯಲ್ಲಿದ್ದ ಇಡೀ ರಾಜ್ಯ ಈಗ ಶೋಕದಲ್ಲಿದೆ.

ಸರಿಯಾದ ತಯಾರಿ ಇಲ್ಲದೆ ಕಾರ್ಯಕ್ರಮಕ್ಕೆ ಮುಂದಾಗಿರುವುದು ಹಾಗೆ ನಿರೀಕ್ಷೆಗೂ ಮೀರಿ ಜನರು ಸೇರಿದ್ದರಿಂದ ಭಾರೀ ನೂಕು ನುಗ್ಗಲು ಉಂಟಾದ ಪರಿಣಾಮ ಕಾಲ್ತುಳಿತದಿಂದ 11 ಮಂದಿ ಮೃತಪಟ್ಟರೆ ಹಲವರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಸದ್ಯ ಗಾಯಾಳುಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಆದ್ರೆ ಈ ಘಟನೆ ಇಡೀ ಕ್ರೀಡಾಭಿಮಾನಿಗಳಲ್ಲಿ ಆಘಾತ ಉಂಟು ಮಾಡಿರುವುದಂತು ಸತ್ಯ.
ಆದ್ರೆ ಈ ರೀತಿಯ ಕಾಲ್ತುಳಿತ ಉಂಟಾಗಿರುವುದು ಇದು ಮೊದಲಲ್ಲ. ಭಾರತದಲ್ಲಿ ಹಲವು ಬಾರಿ ಭೀಕರ, ಭಯಾನಕ ಕಾಲ್ತುಳಿತದಂತಹ ಘಟನೆಗಳು ನಡೆದಿವೆ. ಕೆಲವು ಘಟನೆಗಳು ಎಷ್ಟು ಭೀಕರವಾಗಿವೆ ಎಂದರೆ ನೀವು ಕನಸಿನಲ್ಲೂ ಊಹಿಸಿರುವುದಿಲ್ಲ. ಹಲವರು ಕಾರ್ಯಕ್ರಮಗಳಿಗೆಂದು ದೂರದ ಊರುಗಳಿಂದ ಬಂದು ಪ್ರಾಣ ಕಳೆದುಕೊಳ್ಳುವುದು ಕನಸಿನಲ್ಲೂ ಆಲೋಚಿಸಲು ಆಗದಂತಹ ಘಟನೆಗಳು.
ನಾವಿಲ್ಲಿ ದೇಶದಲ್ಲಿ ನಡೆದ ಅತ್ಯಂತ ಘೋರ ಕಾಲ್ತುಳಿತ ಘಟನೆಗಳ ಕುರಿತು ತಿಳಿದುಕೊಳ್ಳೋಣ, ಅದರಲ್ಲಿ ಎಷ್ಟು ಮಂದಿ ಅಮಾಯಕರು ಪ್ರಾಣ ಕಳೆದುಕೊಂಡಿದ್ದಾರೆ ಎಂಬುದನ್ನು ತಿಳಿಯೋಣ.
ಫೆಬ್ರವರಿ 15 2025- ದೆಹಲಿ ರೈಲು ನಿಲ್ದಾಣದ ಕಾಲ್ತುಳಿತ ಉಂಟಾಗಿತ್ತು. ನವದೆಹಲಿಯ ಮುಖ್ಯ ರೈಲ್ವೆ ನಿಲ್ದಾಣದಲ್ಲಿ ಭಯಾನಕ ಕಾಲ್ತುಳಿತ ಉಂಟಾಗಿತ್ತು. ಕುಂಭ ಮೇಳಕ್ಕೆಂದು ತೆರಳುತ್ತಿದ್ದ ಪ್ರಯಾಣಿಕರ ನಡುವೆ ಈ ನೂಕುನುಗ್ಗಲು ಉಂಟಾದ ಪರಿಣಾಮ ಬರೋಬ್ಬರಿ 18 ಮಂದಿ ಪ್ರಾಣ ಕಳೆದುಕೊಂಡರು.
ಜನವರಿ 29 2025 ಉತ್ತರ ಪ್ರದೇಶದಲ್ಲಿ ಅದರಲ್ಲೂ ಮೌನಿ ಅಮಾವಾಸ್ಯೆಯ ಸಮಯದಲ್ಲಿ ಪವಿತ್ರ ಸಂಗಮದಲ್ಲಿ ಸ್ನಾನ ಮಾಡಲು ಲಕ್ಷಾಂತರ ಮಂದಿ ಸೇರಿದ್ದರು. ಈ ವೇಳೆ ಬೆಳಗಿನ ಜಾವ ನಡೆದ ಕಾಲ್ತುಳಿತದಲ್ಲಿ 30 ಮಂದಿ ಮೃತಪಟ್ಟರು ನೂರಾರು ಮಂದು ಗಾಯಗೊಂಡರು. ಇದು ಈ ವರ್ಷ ಸಂಭವಿಸಿದ್ದ ದೊಡ್ಡ ಕಾಲ್ತುಳಿತ ಪ್ರಕರಣ ಎನ್ನಬಹುದು.
ಮೇ 3 2025 ಗೋವಾದ ಶಿರ್ಗಾವ್ ಗ್ರಾಮದಲ್ಲಿರುವ ಶ್ರೀ ಲೈರೈ ದೇವಿ ದೇವಾಲಯದ ವಾರ್ಷಿಕ ಉತ್ಸವದ ಸಂದರ್ಭದಲ್ಲಿ ಮುಂಜಾನೆ ಸಂಭವಿಸಿದ ಕಾಲ್ತುಳಿತದಲ್ಲಿ 6 ಮಂದಿ ಮೃತಪಟ್ಟು 100 ಮಂದಿ ಗಾಯಗೊಂಡರು.
ಜನವರಿ 8 2025ರಲ್ಲಿ ಖ್ಯಾತ ತಿರುಮಲದಲ್ಲಿ ಟಿಕೆಟ್ ಖರೀದಿಗಾಗಿ ನೂಕು ನುಗ್ಗಲು ಉಂಟಾಗಿತ್ತು. ವೈಕುಂಠ ದ್ವಾರ ದರ್ಶನದ ಸಂಬಂಧವಾಗಿ ಭಕ್ತರಲ್ಲಿ ಉಂಟಾದ ಕಾಲ್ತುಳಿತವು 6 ಮಂದಿಯ ಬಲಿಗೆ ಕಾರಣವಾಗಿತ್ತು.
ಡಿಸೆಂಬರ್ 4 2024ರಂದು ಹೈದರಾಬಾದ್‌ನ ಸಂಧ್ಯಾ ಥಿಯೇಟರ್‌ನಲ್ಲಿ ಅಲ್ಲು ಅರ್ಜುನ್ ಪುಷ್ಪ 2 ಸಿನಿಮಾ ಪ್ರದರ್ಶನದ ವೇಳೆ ಅವರು ಚಿತ್ರಮಂದಿರಕ್ಕೆ ಆಗಮಿಸಿದ ಸಮಯದಲ್ಲಿ ಮಹಿಳೆಯೊಬ್ಬರು ಮೃತಪಟ್ಟಿದ್ದರು.
ಜುಲೈ 2 2024ರಲ್ಲಿ ಉತ್ತರ ಪ್ರದೇಶದ ಹತ್ರಾಸ್‌ನಲ್ಲಿ ಭೋಲೆ ಬಾಬಾ ಅಕಾ ನಾರಾಯಣ್ ಸಾಕರ್ ಹರಿ ಆಯೋಜಿಸದ್ದ ಸತ್ಸಂಗದಲ್ಲಿ ಕಾಲ್ತುಳಿತ ಉಂಟಾದ ಪರಿಣಾಮ ಬರೋಬ್ಬರಿ 121 ಮಂದಿ ಮೃತಪಟ್ಟಿದ್ದರು, ಘಟನೆ ಬಳಿಕ ಬಾಬಾ ಪರಾರಿಯಾಗಿದ್ದರು.
ಸೆಪ್ಟೆಂಬರ್ 29 2017ರಂದು ಮುಂಬೈನ ಪಶ್ಚಿಮ ರೈಲ್ವೆಯ ಬಳಿಯ ಕಿರಿದಾದ ಮೇಲ್ಸೇತುವೆಯಲ್ಲಿ ಕಾಲ್ತುಳಿತ ಉಂಟಾದ ಪರಿಣಾಮ 23 ಮಂದಿ ಮೃತಪಟ್ಟಿದ್ದರು.
ಮಾರ್ಚ್ 4 2010 ರಂದು ಉತ್ತರ ಪ್ರದೇಶದ ಪ್ರತಾಪಗಢ ಜಿಲ್ಲೆಯ ಕೃಪಾಲು ಮಹಾರಾಜನ ರಾಮ ಜಾನಕಿ ದೇವಸ್ಥಾನದಲ್ಲಿ ಸ್ವಯಂ ಘೋಷಿತ ದೇವಮಾನವರಿಂದ ಉಚಿತ ಬಟ್ಟೆ ಮತ್ತು ಆಹಾರ ಪಡೆದುಕೊಳ್ಳಲು ಬಂದ ಜನರ ನಡುವೆ ಉಂಟಾದ ಕಾಲ್ತುಳಿತವು 63 ಮಂದಿ ಸಾವಿಗೆ ಕಾರಣವಾಗಿತ್ತು.
ಸೆಪ್ಟೆಂಬರ್ 30 2008ರಂದು ರಾಜಸ್ಥಾನದ ಜೋಧ್‌ಪುರ ನಗರದ ಚಾಮುಂಡಿ ದೇವಾಲಯದಲ್ಲಿ ಬಾಂಬ್ ಇದೆ ಎಂಬ ವದಂತಿಯಿಂದ ಭಕ್ತರು ಓಡಿದ ಪರಿಣಾಮ ಕಾಲ್ತುಳಿತದಿಂದಲೇ 250 ಮಂದಿ ಮೃತಪಟ್ಟಿದ್ದರು.



Click it and Unblock the Notifications

