Latest Updates
-
ದೆಹಲಿ ಮಳೆಯಲ್ಲಿ ಮದುವೆ ಸಂಭ್ರಮಕ್ಕೆ ಅಡ್ಡಿಯೇ? ಈ ಸಣ್ಣ ಬದಲಾವಣೆಗಳು ನಿಮ್ಮ ಮದುವೆಯನ್ನು ಉಳಿಸುತ್ತವೆ! -
ಬಿರುಗಾಳಿ ಅಬ್ಬರಕ್ಕೆ ಬಾಲ್ಕನಿ ಗಾರ್ಡನ್ ಹಾಳಾಗುತ್ತಾ? ನಿಮ್ಮ ಮನೆ ಮತ್ತು ಗಿಡಗಳನ್ನು ರಕ್ಷಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಬಿಸಿಲಿನ ಬೇಗೆಗೆ ಸುಸ್ತಾಗಿದ್ದೀರಾ? ದೆಹಲಿ ಸರ್ಕಾರದ ಈ 'ರಿಲೀಫ್ ವ್ಯಾನ್' ನಿಮ್ಮ ಜೀವ ರಕ್ಷಕವಾಗಬಹುದು! -
ಮೆಟ್ ಗಾಲಾ 2026: ದುಬಾರಿ ಫ್ಯಾಷನ್ ಅನ್ನು ನಮ್ಮೂರಿನ ಕ್ರಿಯೇಟರ್ಗಳು ದೇಸಿ ಶೈಲಿಯಲ್ಲಿ ಮರುಸೃಷ್ಟಿಸಿದ್ದು ಹೇಗೆ? ಅಚ್ಚರಿ ಪಡಬೇಡಿ! -
ಹೊರಗೆ ಬಿರುಗಾಳಿ, ಮನೆಯಲ್ಲಿ ಫಿಟ್ನೆಸ್: ಇಂದಿನ ಹವಾಮಾನಕ್ಕೆ ಈ ವರ್ಕೌಟ್ ಬೆಸ್ಟ್! -
ಮದುವೆ ಮನೆಯಲ್ಲಿ ನೋಟಿನ ಹಾರ: ಸಂಭ್ರಮದ ನಡುವೆ ಅನಿರೀಕ್ಷಿತವಾಗಿ ನುಗ್ಗಿ ಬಂತು ರಣರಂಗ! -
ಮಕ್ಕಳಲ್ಲಿ ಹೆಚ್ಚುತ್ತಿದೆ ಮಧುಮೇಹದ ಭೀತಿ: ಇಂದೇ ಬದಲಾಯಿಸಿ ನಿಮ್ಮ ಅಡುಗೆಮನೆಯ ಈ ಅಭ್ಯಾಸಗಳನ್ನು! -
ಮೆಟ್ ಗಾಲಾ 2026: ಜಾಗತಿಕ ವೇದಿಕೆಯಲ್ಲಿ ಅಬ್ಬರಿಸಿದ ಭಾರತೀಯ ಸಂಸ್ಕೃತಿ, ಫ್ಯಾನ್ಸ್ ಫಿದಾ! -
ಬೇಸಿಗೆಯ ಬಿಸಿಲಿಗೆ ಸುಸ್ತಾದ್ರಾ? ಕೇವಲ 1000 ರೂಪಾಯಿಯಲ್ಲಿ ನಿಮ್ಮ ಮನೆಯನ್ನು ತಂಪಾಗಿಸಿ! -
ದೆಹಲಿ ಮಂದೆದ್ದಿದೆ: ವರ್ಷದಲ್ಲೇ ಮೊದಲ ಬಾರಿಗೆ ಸಿಕ್ಕಿದೆ ಇಂತಹ ಅದ್ಭುತ ಅವಕಾಶ!
3ನೇ ಮಹಾಯುದ್ಧದ ಕುರಿತಂತೆ ಭಾರತೀಯ ಜ್ಯೋತಿಷಿಯ ಭವಿಷ್ಯ..! ಮತ್ತೊಮ್ಮೆ ಆತ ಹೇಳಿದ್ದೇನು?
ವಿಶ್ವದ ಹಲವು ರಾಷ್ಟಗಳೀಗ ಯುದ್ಧದಂತಹ ಭಯಾನಕ ಬಲೆಯೊಳಗೆ ಸಿಲುಕಿವೆ. ಒಂದಲ್ಲಾ ಒಂದು ದೇಶ ಮತ್ತೊಂದು ದೇಶದ ವಿರುದ್ಧ ನಿಂತಿದೆ. ಅದರಲ್ಲೂ ಪ್ರಭಾವಿ ರಾಷ್ಟ್ರಗಳೆಂದು ಕರೆಸಿಕೊಳ್ಳುವ ದೊಡ್ಡ ದೇಶಗಳು ಪರಮಾಣು ಬಾಂಬ್ ಬೆದರಿಕೆ ಹಾಕುತ್ತಿರುವುದು ಹಾಗೂ ಅಣ್ವಸ್ತ್ರಗಳ ಪರೀಕ್ಷೆ ನಡೆಸುತ್ತಿರುವುದು ತೀವ್ರ ಆತಂಕಕ್ಕೆ ಕಾರಣವಾಗಿದೆ.
ಇದೆಲ್ಲದರ ನಡುವೆ ಕಳೆದ ಕೆಲವು ವರ್ಷಗಳಿಂದಲೂ 3ನೇ ಮಹಾಯುದ್ಧದ ಆತಂಕ ಎದುರಾಗಿ ನಿಂತಿದೆ. ವಿಶ್ವದ ಬಹುತೇಕ ರಾಷ್ಟ್ರಗಳು 3ನೇ ಮಹಾಯುದ್ಧಕ್ಕೆ ಸನ್ನದ್ಧವಾಗಿವೆ ಅಂತಲೇ ಬಿಂಬಿಸಲಾಗುತ್ತಿದೆ. ಯಾವ ಕ್ಷಣದಲ್ಲಿ ಬೇಕಾದರು ಮೂರನೇ ವಿಶ್ವ ಸಮರ ಆರಂಭವಾಗಬಹುದು ಎಂಬುದು ಜನರ ಆತಂಕ. ಕೆಲವೊಂದು ರಾಷ್ಟ್ರಗಳಂತೂ ಈಗಾಗಲೇ ಯುದ್ಧದಲ್ಲಿ ತೊಡಗಿವೆ. ಇದು 3ನೇ ವಿಶ್ವ ಯುದ್ಧದಕ್ಕೆ ದಾರಿಯಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಆದರೆ ಈ ಮೊದಲು 3ನೇ ಮಹಾ ಯುದ್ಧದ ಕುರಿತು ಭವಿಷ್ಯ ನುಡಿದಿದ್ದ ಭಾರತದ ಜ್ಯೋತಿಷಿಯೊಬ್ಬರು ಈಗ ಮತ್ತೆ ಸುದ್ದಿಯಾಗಿದ್ದಾರೆ. ಆತ ಇದೇ ಜೂನ್ 18ರಂದು 3ನೇ ಮಹಾ ಯುದ್ಧಕ್ಕೆ ಕಾರಣವಾಗುವಂತ ಘಟನೆ ನಡೆಯಲಿದೆ ಎಂದಿದ್ದರು. ಆದರೆ ಅಂತಹ ಯಾವುದೇ ಘಟನೆಗಳು ನಡೆದಿಲ್ಲ. ಆದರೆ ಅವರು ಅಂದೇ ಜೂನ್ 29ರಂದು ಸಹ 3ನೇ ಮಹಾಯುದ್ಧಕ್ಕೆ ಕಾರಣವಾಗಬಹುದಾದ ಘಟನೆ ನಡೆಯಲಿದೆ ಎಂದಿದ್ದರು.
ಹರಿಯಾಣದ ಪಂಚಕುಲದ ಜ್ಯೋತಿಷಿ ಕುಶಾಲ್ ಕುಮಾರ್ ಅವರು ಮೇ 23 ರಂದು, ಗಳವಾರ, 18 ಜೂನ್ 2024 ರಂದು ಪ್ರಬಲವಾದ ಗ್ರಹಗಳ ಪ್ರಚೋದನೆಯನ್ನು ಹೊಂದಿದೆ. 10 ಮತ್ತು 29 ಜೂನ್ ಸಹ ಇದೇ ರೀತಿಯ ಗ್ರಹ ಗತಿಗಳಿವೆ. ಹೀಗಾಗಿ ಈ ದಿನದಲ್ಲಿ 3ನೇ ಮಹಾಯುದ್ಧದ ಪೂಕರ ಘಟನೆಗಳು ನಡೆಯಲಿದೆ ಎಂದಿದ್ದರು.
ಅವರ ಈ ಹೇಳಿಕೆ ಬಹಳ ಸದ್ದು ಮಾಡಿತ್ತಲ್ಲದೆ ಭಾರೀ ಚರ್ಚೆಗೂ ಕಾರಣವಾಗಿತ್ತು, ಆದರೆ ಅವರು ಹೇಳಿದ್ದ ಈ ದಿನಾಂಕದಂದು ಯಾವುದೂ ಸಂಭವಿಸಿಲ್ಲ. ಈ ಕುರಿತು ಅವರು ಈಗ ಮತ್ತೆ ಮಾತನಾಡಿದ್ದು, ಅವರ ಹೇಳಿಕೆಗೆ ಬದ್ಧರಾಗಿರುವುದಾಗಿ ತಿಳಿಸಿದ್ದಾರೆ.
ಕುಶಾಲ್ ಕುಮಾರ್ ಅವರು ಇತ್ತೀಚೆಗೆ ಮತ್ತೊಂದು ಮಧ್ಯಮ ಪೋಸ್ಟ್ ಅನ್ನು ಪ್ರಕಟಿಸಿದ್ದು, ಅದರಲ್ಲಿ ಅವರು "ಮುನ್ಸೂಚಕ ಎಚ್ಚರಿಕೆಗಳನ್ನು" ಉಲ್ಲೇಖಿಸಿದ್ದಾರೆ, ಅದು ಸಹ 3 ನೇ ಮಹಾಯುದ್ಧದ ಪ್ರಾರಂಭಕ್ಕೆ ಸಂಬಂಧಿಸಿದೆ. ಜೂನ್ 29 ಸಹ ಈ ರೀತಿ ವಿದ್ಯಮಾನಕ್ಕೆ ಕಾರಣವಾಗುವ ಅಂಶ ಬೆಳಕಿಗೆ ಬರಬಹುದು ಎಂದು ಪುನರ್ ಉಚ್ಛರಿಸಿದ್ದಾರೆ.
ಅವರ ಪ್ರಕಾರ ಜೂನ್ 29ರಂದು 3ನೇ ಮಹಾಯುದ್ಧಕ್ಕೆ ಕಾರಣವಾಗುವಂತಹ ಘಟನೆ ನಡೆಯುವುದು ಖಚಿತವಂತೆ. ಆದರೆ ಯಾವ ಘಟನೆ ನಡೆಯಲಿದೆ ಎಂಬುದನ್ನು ಅವರು ವಿವರಣೆ ಮಾತ್ರ ನೀಡಿಲ್ಲ. ಈ ವಿಚಾರ ವಿದೇಶಿ ಮಾಧ್ಯಮದಲ್ಲೂ ಬಹಳ ಚರ್ಚೆಗೆ ಕಾರಣವಾಗಿದೆ.

ಜೂನ್ 13 ರಂದು ಜ್ಯೋತಿಷಿಯು "ಜಮ್ಮು ಮತ್ತು ಕಾಶ್ಮೀರದ ರಿಯಾಸಿಯಲ್ಲಿ ಯಾತ್ರಾರ್ಥಿಗಳ ಮೇಲೆ ಒಂಬತ್ತು ಜನರನ್ನು ಕೊಂದ ಭಯೋತ್ಪಾದಕ ದಾಳಿಯನ್ನು ಉಲ್ಲೇಖಿಸಿದ್ದಾರೆ. ನಂತರ ಅವರು ಉತ್ತರ ಮತ್ತು ದಕ್ಷಿಣ ಕೊರಿಯಾ ನಡುವಿನ ಸಂಘರ್ಷದ ಉಲ್ಬಣ ಮತ್ತು ಹೆಚ್ಚಿನದನ್ನು ಉಲ್ಲೇಖಿಸುತ್ತಾರೆ. ಅವರು ಚೀನಾ ಮತ್ತು ತೈವಾನ್ ನಡುವೆ ಬೆಳೆಯುತ್ತಿರುವ ಉದ್ವಿಗ್ನತೆಯನ್ನು ಸಹ ಮೊದಲೆ ಊಹಿಸಿದ್ದರಂತೆ.
ಇನ್ನು ಜಗತ್ತಿನ ಅತ್ಯಂತ ನಿಖರ ಭವಿಷ್ಯವಾಣಿಗಳ ನುಡಿಯುವಾತ ನಾಸ್ಟ್ರಾಡಾಮಸ್ ಸಹ ಈ 3ನೇ ಮಹಾ ಯುದ್ಧದ ಕುರಿತಂತೆ ಹೇಳಿದ್ದಾರೆ. ಅಲ್ಲದೆ ಅವರ ಹತ್ತಾರು ಭವಿಷ್ಯಗಳು ನಿಜವಾಗಿವೆ ಅದರಲ್ಲಿ ಕೋವಿಡ್ ಹಾಗೂ ಹವಾಮಾನ ಏರಿಕೆ ಸೇರಿದಂತೆ ಕೆಲವೊಂದರ ಭೀಕರ ಪರಿಣಾಮ ಎದುರಿಸಿದ್ದೇವೆ.



Click it and Unblock the Notifications