Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
Independence Day Special: ಸ್ವಾತಂತ್ರ್ಯ ಹೋರಾಟದ ಹಿಂದಿನ ಈ ಮುಖಗಳ ನೋವು ಬಲಿದಾನದ ಕಥೆಗಳ ಕೇಳಿದ್ದೀರಾ?
ಭಾರತ 1947ರಲ್ಲಿ ಸ್ವಾತಂತ್ರ್ಯ ಪಡೆದ ಕುರಿತು ನಿಮಗೆಲ್ಲಾ ತಿಳಿದಿದೆ. ಇತಿಹಾಸದಲ್ಲಿ ಲಕ್ಷಾಂತರ ಹೋರಾಟಗಾರರು ತಮ್ಮ ತ್ಯಾಗ ಬಲಿದಾನದ ಕಾರಣದಿಂದ ಆಂಗ್ಲರ ದಾಸ್ಯದಿಂದ ಬಿಡುಗಡೆ ಮಾಡಲಾಯಿತು. ರಾತ್ರೋರಾತ್ರಿ ಬ್ರಿಟೀಷರು ಸ್ವಾತಂತ್ರ್ಯ ನೀಡಿದರು. ಹಾಗೆ 300 ವರ್ಷಗಳ ಕಾಲ ನಿರಂತರವಾಗಿ ಆಡಳಿತ ನಡೆದಿದ್ದ ಬ್ರಿಟಿಷರು ಅಂತಿಮವಾಗಿ ಬಿಡುಗಡೆ ನೀಡಿದ್ದರು.
ಸ್ವಾತಂತ್ರ್ಯ ದಿನಾಚರಣೆಯಲ್ಲಿ ಇಡೀ ದೇಶ ಸಂಭಮ್ರದಲ್ಲಿರುವುದು ನೋಡಬಹುದು. ದೆಹಲಿಯ ಕೆಂಪು ಕೋಟೆ ಮೇಲೆ ತ್ರಿವರ್ಣ ಧ್ವಜ ಹಾರಾಡುತ್ತದೆ. ಹಾಗೆ ಸರ್ಕಾರಿ ಕಚೇರಿಗಳ ಮೇಲೂ ಭಾರತದ ಧ್ವಜ ಹಾರಾಡುತ್ತದೆ. ಇನ್ನು ಸ್ವಾತಂತ್ರ್ಯ ದೊರಕಿಸಿ ಕೊಡುವಲ್ಲಿ ಲಕ್ಷಾಂತರ ಮಂದಿ ತ್ಯಾಗ ಮಾಡಿದ್ದಾರೆ. ಆದ್ರೆ ನಾವು ಒಂದಿಷ್ಟು ಹೆಸರನ್ನು ಮಾತ್ರವೇ ಇಂದು ನೆನಪಿನಲ್ಲಿ ಇಟ್ಟಕೊಂಡಿದ್ದೇವೆ. ಹಾಗೆ ಇತಿಹಾಸ ಕೂಡ ಅವರನ್ನು ನೆನಪಿಸುವ ಕಾರ್ಯ ಮಾಡುವುದಿಲ್ಲ.

ಬ್ರಿಟಿಷರ ವಿರುದ್ಧ ಮಹಿಳೆಯರು, ಮಕ್ಕಳು ಎನ್ನದೆ ರಸ್ತೆಗಿಳಿದು ಹೋರಾಟ ಮಾಡಿದ ಕೋಟಿ ಕೋಟಿ ಮಂದಿ ಇರಬಹುದು. ಆದ್ರೆ ಹೋರಾಟ ಮಾಡುತ್ತಲೇ ಪ್ರಾಣ ಬಿಟ್ಟ ಕೆಲವೇ ಕೆಲವು ಮಂದಿಯನ್ನು ಮಾತ್ರವೇ ನಾವು ನೆನಪು ಮಾಡಿಕೊಳ್ಳುತ್ತೇವೆ. ಆದ್ರೆ ಈಗ ಭಾರತ 2025ರಲ್ಲಿ 79ನೇ ಸ್ವಾತಂತ್ರೋತ್ಸವದ ಆಚರಣೆಯ ಸಂಭಮ್ರದಲ್ಲಿದೆ.
ಭಾರತ 2025ರಲ್ಲಿ 79ನೇ ಸ್ವಾತಂತ್ರೋತ್ಸವದ ಆಚರಣೆಯ ಸಂಭಮ್ರದ ನಡುವೆ ನಾವು ಇತಿಹಾಸದ ಪುಟದಲ್ಲಿ ನೀವೆಂದು ಓದಿರದ ಹಾಗೆ ಎಲ್ಲಿಗೂ ಕೇಳಿರದಂತಹ ಸ್ವಾತಂತ್ರ್ಯ ಹೋರಾಟಗಾರರ ಕುರಿತು ತಿಳಿದುಕೊಳ್ಳುವ ಪ್ರಯತ್ನ ಮಾಡೋಣ. ಈ ಹೆಸರುಗಳು ಅಜರಾಮರವಾಗಿಸಲು ಹಾಗೆ ಅವರ ಬಲಿದಾನವನ್ನು ನೆನೆಯುವ ಸಣ್ಣ ಪ್ರಯತ್ನ ಮಾಡೋಣ.
ಅಲ್ಲೂರಿ ಸೀತಾರಾಮ್ ರಾಜು
ಆದಿವಾಸಿ ಜನರ ಅಪ್ರತಿಮ ನಾಯಕ. ಭಾರತದ ಸ್ವಾತಂತ್ರ್ಯಕ್ಕಾಗಿ ಹಾಗೂ ಆದಿವಾಸಿ ಜನರ ಹಕ್ಕುಗಳಿಗಾಗಿ ಹೋರಾಡಿದ ವ್ಯಕ್ತಿಯೇ ಅಲ್ಲೂರಿ ಸೀತಾರಾಮ್ ರಾಜು. ಹೋರಾಟ ಮಾಡುತ್ತಲೇ ಈ ಕ್ರಾಂತಿಕಾರಿ ಪ್ರಾಣ ಕಳೆದುಕೊಂಡಿದ್ದ.
ಆದಿವಾಸಿಗಳು ತಮ್ಮದೇ ಆದ ಸಂಸ್ಕೃತಿಯನ್ನು ಕಾಪಾಡಿಕೊಂಡು ಬಂದಿರುವಂಥ ಜನಾಂಗದವರು. ಆದಿವಾಸಿಗಳ ಹಕ್ಕುಗಳ ಬಗ್ಗೆ ಮೊದಲ ಬಾರಿಗೆ ಧ್ವನಿ ಎತ್ತಿದವರೇ ಅಲ್ಲೂರಿ ಸೀತಾರಾಮ್. ಇವರು ಅಪ್ಪಟ ದೇಶಪ್ರೇಮಿ, ಹಾಗೆ ಜನರು ಆತನನ್ನು ಮಾನ್ಯಂ ವೀರುಡು ಎಂದು ಕರೆಯುತ್ತಿದ್ದರು.
ಒಡಿಶಾ ಬುಡಕಟ್ಟು ಜನಾಂಗದ ಪರವಾಗಿ 1920ರಲ್ಲಿ ಬ್ರಿಟಿಷರ ವಿರುದ್ಧ ಧ್ವನಿ ಎತ್ತಿದ್ದರು. ಆದ್ರೆ ಬ್ರಿಟೀಷರಿಂದಲೇ ಆತ ವೀರ ಮರಣ ಹೊಂದಿದ್ದರು. ದೇಶ ಪರ್ಯಟನೆ ಮುಗಿಸಿ ಹಿಂತಿರುಗಿದ ಅವರು ಕ್ರಾಂತಿಕಾರಿ ಹೋರಾಟಕ್ಕೆ ಇಳಿದರು ಇದರ ಜೊತೆಗೆ ಧಾರ್ಮಿಕ ಪ್ರವೃತ್ತಿ ಹುಟ್ಟಿತ್ತು. ನಂತರ ಬ್ರೀಟಿಷರ ವಿರುದ್ಧ ಹೋರಾಡಲು ಅವರು ಬೀದಿಗಿಳಿದಿದ್ದರು. ಅವರ ತಂದೆ ಕೂಡ ಸ್ವಾತಂತ್ರ್ಯ ಹೋರಾಟಗಾರರಾಗಿದ್ದರು.
ಮಾತಂಗಿನಿ ಹಜ್ರಾ
ಪಶ್ಚಿಮ ಬಂಗಾಳದ ತಮ್ಲುಕ್ ಹೃದಯಭಾಗದಲ್ಲಿ ಜನಿಸಿದ್ದ ಮಾತಂಗಿನ ಹಜ್ರಾ ಬ್ರಿಟಿಷರ ವಸಾಹತುಶಾಹಿ ವಿರುದ್ಧ ಹೋರಾಟಕ್ಕಿಳಿದರು. ಬ್ರಿಟಿಷರ ವಿರುದ್ಧವೇ ಜನರನ್ನು ಒಟ್ಟುಗೂಡಿಸಿದ್ರು. 1942 ರ ಕ್ವಿಟ್ ಇಂಡಿಯಾ ಚಳವಳಿಯ ಸಮಯದಲ್ಲಿ, ಪೊಲೀಸ್ ಲಾಠಿ ಪ್ರಹಾರ ಅನುಭವಿಸಿದ್ದರು. ಹಾಗೆ ತ್ರಿವರ್ಣ ಧ್ವಜ ಪ್ರದರ್ಶಿಸಿದ್ದರು.
ಹಾಗೆ ತಮ್ಮ 72ನೇ ವಯಸ್ಸಿನಲ್ಲಿ ಬ್ರಿಟೀಷರ ಗುಂಡೇಟಿಗೆ ಬಲಿಯಾದರು. ಈ ವೇಳೆ ಕೂಡ ಅವರು ತ್ರಿವರ್ಣ ಧ್ವಜ ನೆಲಕ್ಕೆ ಬೀಳದಂತೆ ನೋಡಿದಕೊಂಡರು. ಇಂತಹ ಹೋರಾಟಗಾರ್ತಿಯರ ಬಲಿದಾನವನ್ನೇ ನಾವಿಂದು ಅನುಭವಿಸುತ್ತಿದ್ದೇವೆ.
ಕಾರ್ನಾಡ್ ಸದಾಶಿವ ರಾವ್
ದಕ್ಷಿಣ ಭಾರತದ ಗಾಂಧಿ ಎಂದೇ ಹೆಸರಾಗಿದ್ದ ಕಾರ್ನಾಡ್ ಸದಾಶಿವ ರಾವ್, ಕರ್ನಾಟಕದಲ್ಲಿ ಪ್ರಪ್ರಥಮ ಬಾರಿಗೆ ಸ್ವಾತಂತ್ರ್ಯ ಹೋರಾಟಕ್ಕೆ ಚಾಲನೆ ಕೊಟ್ಟ ಮಹಾನ್ ದೇಶ ಪ್ರೇಮಿ. ಮಂಗಳೂರಿನಲ್ಲಿ ಹುಟ್ಟಿದ್ದ ಅವರು ಬ್ರಿಟೀಷರ ವಿರುದ್ಧ ತಿರುಗಿ ಬಿದ್ದರು. ಗಾಂಧೀಜಿ ಅವರು ಹೋರಾಟಕ್ಕೆ ಕರೆ ನೀಡಿದಾಗ ಸದಾಶಿವ ರಾವ್ ಹೋರಾಟಕ್ಕೆ ಧುಮುಕಿದರು. ಇದರಿಂದ ಸ್ವಾತಂತ್ರ್ಯ ಹೋರಾಟಕ್ಕೆ ಕರ್ನಾಟಕದಿಂದ ಬಲ ನೀಡಿದರು. ದಂಡಿ ಹೋರಾಟ, ಉಪಾವಾಸ ಸತ್ಯಾಗ್ರಹದ ಬಳಿಕ ಅವರ ಆರೋಗ್ಯ ಹದಗೆಟ್ಟಿತು. ಇಂತಹ ಹೋರಾಟದ ನಡುವೆ ಜ್ವರಕ್ಕೆ ತುತ್ತಾದರು. ಆದ್ರೆ 1937 ಜನವರಿ 9ರಂದು ಮುಂಬೈನಲ್ಲಿ ಮರಣ ಹೊಂದಿದ್ದರು.
ಬಿರ್ಸಾ ಮುಂಡಾ
ಜಾರ್ಖಂಡ್‌ನ ಛೋಟಾ ನಾಗ್ಪುರ ಪ್ರದೇಶದಲ್ಲಿ ಬ್ರಿಟೀಷರ ವಿರುದ್ಧ ತಿರುಗಿ ಬಿದ್ದ ಬುಡಕಟ್ಟು ನಾಯಕ ಬಿರ್ಸಾ ಮುಂಡಾ. ನೀವು ಇವರ ಹೆಸರು ಕೇಳದೆ ಇರಬಹುದು. ಆದ್ರೆ ಅವರ ಹೋರಾಟದ ಕಿಚ್ಚು ಇಂದಿಗೂ ಆರಿಲ್ಲ.
ಅದಿವಾಸಿ ಸಮುದಾಯ ತನ್ನ ಹಕ್ಕುಗಳಿಗಾಗಿ ಸತತವಾಗಿ ಬ್ರಿಟಿಷರ ವಿರುದ್ಧ ಹೋರಾಡಿದ್ದು ಭಾರತದ ಸ್ವಾತಂತ್ರ್ಯ ಹೋರಾಟದ ಭಾಗವಾಯಿತು. ಬ್ರಿಟೀಷರು ಆದಿವಾಸಿ ಜಮೀನುಗಳ ಮೇಲೆ ಹೊಂದಿದ್ದ ಹಕ್ಕುಗಳ ವಿರುದ್ಧ ದಂಗೆ ಎದ್ದರು.
ಬುಡಕಟ್ಟು ಸಮುದಾಯಗಳನ್ನು ಶೋಷಕ ಬ್ರಿಟಿಷ್ ನೀತಿಗಳು ಮತ್ತು ದಬ್ಬಾಳಿಕೆಯ ಸ್ಥಳೀಯ ಭೂಮಾಲೀಕರ ವಿರುದ್ಧ ಎದ್ದು ನಿಲ್ಲುವಂತೆ ಮಾಡಿತು. 1900ರ ಮಾರ್ಚ್ 3ರಂದು, ಮುಂಡಾ ಚಕ್ರಧರಪುರದ ಜಾಮ್ಕೋಪೈ ಅರಣ್ಯದಲ್ಲಿ ತನ್ನ ಬುಡಕಟ್ಟು ಗೆರಿಲ್ಲಾ ಸೈನ್ಯದೊಂದಿಗೆ ತಂಗಿದ್ದಾಗ ಬ್ರಿಟೀಷರು ಬಂಧಿಸಿದರು. ಹಾಗೆ ಅವರು ಕೇವಲ 25 ವರ್ಷವಿದ್ದಾಗ ಜೈಲಿನಲ್ಲಿ ಮೃತಪಟ್ಟರು. ಬ್ರಿಟೀಷರು ಆತನು ಅನಾರೋಗ್ಯದಿಂದ ಮೃತಪಟ್ಟ ಎಂದು ವರದಿ ನೀಡಿದರು.
ಕನಕಲತಾ ಬರುವಾ
ಅಸ್ಸಾಂನ ಅಪ್ರತಿಮ ಹೋರಾಟಗಾರ್ತಿ ಕನಕಲತಾ ಬರುವಾ. ಆಕೆ ತನ್ನ 17ನೇ ವಯಸ್ಸಿನಲ್ಲೇ ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಿದ ನಾರಿ. 1942ರ ಕ್ವಿಟ್ ಇಂಡಿಯಾ ಚಳವಳಿಯ ಮೂಲಕ ಗುರುತಿಸಿಕೊಂಡರು. ಅದ್ರಲ್ಲೂ ತೇಜ್‌ಪುರ್‌ನಲ್ಲಿ ಆಕೆಯ ಮುಂದಾಳತ್ವದಲ್ಲಿ ದೊಡ್ಡ ಮಟ್ಟದ ಹೋರಾಟ ನಡೆಯಿತು. ಅಂದಿನ ಪೊಲೀಸರು ಆಕೆಯನ್ನು ನಿರ್ಲಕ್ಷ್ಯ ಮಾಡಿದ್ದರು. ಆದರೆ ಆಕೆ ಬ್ರಿಟಿಷರ ಗುಂಡೇಟಿಗೆ ಆಕೆ ಬಲಿಯಾದಳು.
ಬೇಗಂ ಹಜರತ್
1857 ರ ಮೊದಲ ಸ್ವಾತಂತ್ರ್ಯ ಸಂಗ್ರಾಮದ ಸಮಯದಲ್ಲಿ ಬೇಗಂ ಹಜರತ್ ಮಹಲ್ ಬ್ರಿಟಿಷರ ವಿರುದ್ಧ ಯುದ್ಧ ಘೋಷಿಸಿದರು. ರಾಜಾ ಜೈಲಾಲ್ ಸಿಂಗ್ ಅವರ ಬೆಂಬಲದೊಂದಿಗೆ, ಅವರು ಲಕ್ನೋವನ್ನು ವಶಪಡಿಸಿಕೊಂಡರು ಮತ್ತು ಅವರ 14 ವರ್ಷದ ಮಗ ರಾಜಕುಮಾರ ಬಿರ್ಜಿಸ್ ಖಾದರ್ ಅವರನ್ನು ಔಧ್‌ನ ಆಡಳಿತಗಾರ ಎಂದು ಘೋಷಿಸಿದರು. ಆದ್ರೆ ಬ್ರಿಟಿಷ್ರರು ಮತ್ತೆ ಲಕ್ನೋವನ್ನು ವಶಪಡಿಸಿಕೊಂಡರು. ಹೀಗಾಗಿ ಬೇಗಂ ರಾಜ್ಯ ಬಿಡಬೇಕಾಯಿತು. ಆಕೆ ಜೀವ ಉಳಿಸಿಕೊಳ್ಳಲು ನೇಪಾಳಕ್ಕೆ ತೆರಳಿದರು. ಬಳಿಕ 1879 ರಲ್ಲಿ ನಿಧನರಾದರು.
ಉದಾ ದೇವಿ
ಲಕ್ನೋದಲ್ಲಿ ಬ್ರಿಟೀಷರಿಗೆ ಗುಂಡಿಕ್ಕಿ ಕೊಂದಿದಂತಹ ಹೋರಾಟಗಾರ್ತಿ ಈ ಉದಾ ದೇವಿ. ಸಿಕಂದರ್ ಬಾಗ್‌ನ ಬಳಿ ಸೇರಿದ್ದ ಸ್ವಾತಂತ್ರ್ಯ ಹೋರಾಟಗಾರರ ಮೇಲೆ ಬ್ರಿಟೀಷ್ ಅಧಿಕಾರಿ ಕಾಲಿನ್ ಕ್ಯಾಂಪ್‌ಬೆಲ್‌ನ ಆದೇಶದ ಮೇರೆಗೆ ಗುಂಡು ಹಾರಿಸಿದರು.
ಆದರೆ ಈ ವೇಳೆ ಮರದ ಮೇಲೆ ಅಡಗಿ ಉಳಿತು ಬ್ರಿಟಿಷರ ಮೇಲೆ ಉದಾ ದೇವಿ ಗುಂಡು ಹಾರಿಸಿದ್ದಳು. ಆಕೆ ಸುಮಾರು 5ಕ್ಕೂ ಹೆಚ್ಚು ಬ್ರಿಟೀಷ್ ಅಧಿಕಾರಿಗಳಿಗೆ ಗುಂಡು ಹಾರಿಸಿದಳು. ಈ ಧೈರ್ಯಕ್ಕಾಗಿ ಇಂದಿಗೂ ಲಕ್ನೋದ ಸಿಕಂದರ್ ಬಾಗ್‌ನ ಹೊರಗಿನ ಚೌಕದಲ್ಲಿ ಆಕೆಯ ಪ್ರತಿಮೆ ಇರುವುದು ನೋಡಬಹುದು.



Click it and Unblock the Notifications

















