Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ಕೈಯಲ್ಲಿ ದುಡ್ಡೇ ನಿಲ್ತಿಲ್ಲ ಅನ್ನೋರು ಕಾಲಿಗೆ ಕಪ್ಪು ದಾರ ಕಟ್ಟೋದನ್ನು ಮರೀಬೇಡಿ!
ಸಾಮಾನ್ಯವಾಗಿ ಕಾಲಿಗೆ ಕಪ್ಪು ದಾರವನ್ನು ಹೆಚ್ಚಿನವರು ಧರಿಸುತ್ತಾರೆ. ಎಲ್ಲರ ಕಾಲಿನಲ್ಲೂ ನಮಗೆ ನೋಡೋದಕ್ಕೆ ಸಿಗುತ್ತೆ. ಹಿಂದೆಲ್ಲಾ ದೃಷ್ಟಿಯಾಗುತ್ತೆ ಅನ್ನೋ ಕಾರಣಕ್ಕೆ ಕಪ್ಪು ದಾರವನ್ನು ಕಟ್ಟಲಾಗ್ತಿತ್ತು. ಆದ್ರೀಗ ಹೆಚ್ಚಿನವರು ಫ್ಯಾಷನ್ ಹೆಸರಿನಲ್ಲಿ ಕಾಲಿಗೆ ಕಪ್ಪು ಧಾರವನ್ನು ಧರಿಸುವವರು ಇದ್ದಾರೆ. ಆದ್ರೆ ನಿಮಗೊತ್ತಾ ನಿಜವಾಗಿಯೂ ಕಪ್ಪು ದಾರವನ್ನು ಧರಿಸೋದು ಯಾಕೆ? ಇದರ ಹಿಂದಿರುವ ವೈಜ್ಞಾನಿ ಕಾರಣವೇನು? ಅಷ್ಟಕ್ಕು ಕಪ್ಪು ದಾರವನ್ನು ಧರಿಸೋದ್ರಿಂದ ಏನೆಲ್ಲಾ ಲಾಭಗಳಿದೆ ಅನ್ನೋದನ್ನು ತಿಳಿಯೋಣ.
1. ಹೊಟ್ಟೆ ನೋವನ್ನು ಕಡಿಮೆ ಮಾಡುತ್ತೆ!
ಪದೇ ಪದೇ ಹೊಟ್ಟೆ ನೋವು ಆಗುತ್ತಿದ್ದರೆ ಈ ಕಪ್ಪು ದಾರವನ್ನು ಕಾಲಿಗೆ ಹಾಕೋದ್ರ ಮೂಲಕ ಹೊಟ್ಟೆ ನೋವನ್ನು ನಿವಾರಣೆ ಮಾಡಬಹುದಂತೆ. ನಿಮಗೇನಾದರೂ ಈ ರೀತಿ ಹೊಟ್ಟೆ ನೋವಿನ ಅನುಭವ ಆಗುತ್ತಿದ್ದರೆ ಕಾಲಿಗೆ ಕಪ್ಪು ದಾರವನ್ನು ಕಟ್ಟಬಹುದು. ಆದರೆ ಯಾವ ಕಾಲಿಗೆ ಕಟ್ಟುತ್ತೀರಿ ಅನ್ನೋದು ಕೂಡ ಇಲ್ಲಿ ತುಂಬಾನೇ ಮುಖ್ಯವಾಗುತ್ತದೆ.

2. ಹಣದ ಸಮಸ್ಯೆ ನಿವಾರಣೆಯಾಗುತ್ತದೆ
ಪ್ರತಿಯೊಬ್ಬ ವ್ಯಕ್ತಿಗೂ ಒಂದಲ್ಲ ಹಣದ ಸಮಸ್ಯೆ ಇದ್ದೇ ಇರುತ್ತದೆ. ಕೆಲವರಿಗಂತೂ ಎಷ್ಟು ದುಡ್ಡಿದ್ದರೂ ಕೂಡ ಕೈಯಲ್ಲಿ ನಿಲ್ಲೋದಿಲ್ಲ. ದುಡ್ಡಿಗಾಗಿ ಸಾಲ ಮಾಡೋದು. ಕೊನೆಗೆ ಸಾಲದಲ್ಲೇ ಮುಳಗಬೇಕಾದ ಪರಿಸ್ಥಿತಿ ಎದುರಾಗುತ್ತದೆ. ಇಂತಹ ಸಂದರ್ಭದಲ್ಲಿ ನಿಮ್ಮ ಬಲಗಾಲಿಗೆ ಕಪ್ಪು ದಾರವನ್ನು ಕಟ್ಟಿ ಆಗ ನಿಮಗೆ ಎದುರಾದ ಹಣದ ಸಮಸ್ಯೆಗಳೆಲ್ಲಾ ನಿವಾರಣೆ ಆಗುತ್ತದೆ. ನಿಮ್ಮ ಮನೆಯಲ್ಲಿ ಸಮೃದ್ಧಿ ಹೆಚ್ಚಾಗುತ್ತದೆ.
3. ಕಾಲು ನೋವಿನ ಸಮಸ್ಯೆ ದೂರವಾಗುತ್ತೆ
ಯಾವತ್ತೋ ಆದ ಕಾಲಿಗೆ ಆದ ಏಟಿನ ಸಮಸ್ಯೆಯಿಂದ ಈಗಲೂ ನೀವು ಬಳಲುತ್ತಿದ್ದೀರಾ? ಅಥವಾ ಕಾಲು ನೋವಿನ ಸಮಸ್ಯೆ ಚಿಕಿತ್ಸೆಯನ್ನು ಪಡೆದುಕೊಳ್ಳುತ್ತಿದ್ದೀರಾ? ಇಷ್ಟದಾರೂ ನೋವು ನಿಮ್ಮ ಬೆನ್ನು ಬಿಡ್ತಿಲ್ವಾ? ಇಂತಹ ಸಂದರ್ಭದಲ್ಲಿ ನಿಮ್ಮ ಎಡಗಾಲಿಗೆ ಕಪ್ಪು ದಾರವನ್ನು ಕಟ್ಟಿ. ಆಗ ನಿಮ್ಮ ಕಾಲು ನೋವಿನ ಸಮಸ್ಯೆ ಅಂದುಕೊಂಡದ್ದಕ್ಕಿಂತಲೂ ಬೇಗನೇ ನಿವಾರಣೆಯಾಗುತ್ತದೆ.
4. ಕೆಟ್ಟ ದೃಷ್ಟಿಯಿಂದ ತಪ್ಪಿಸಿಕೊಳ್ಳಬಹುದು
ನಾವು ಸಂತೋಷವಾಗಿದ್ದರೆ, ಜೀವನದಲ್ಲಿ ಎತ್ತರಕ್ಕೆ ಬೆಳೆದು ಸಿಕ್ಕಾಪಟ್ಟೆ ದುಡ್ಡು ಮಾಡಿದರೆ ನಮ್ಮ ಮೇಲೆ ಕಣ್ಣು ಹಾಕುವವರ ಸಂಖ್ಯೆ ಹೆಚ್ಚಿರುತ್ತದೆ. ನಮ್ಮನ್ನು ನೋಡಿ ಹೊಟ್ಟೆ ಕಿಚ್ಚು ಪಡುತ್ತಾರೆ. ಕೆಲವರಂತೂ ಒಂದು ಹೆಜ್ಜೆ ಮುಂದೆ ಹೋಗಿ ಮಾಟ-ಮಂತ್ರ ಮಾಡಿಸುವವರೂ ಕೂಡ ಇದ್ದಾರೆ. ಇಂತಹ ಕೆಟ್ಟ ದೃಷ್ಟಿಯಿಂದ ತಪ್ಪಿಸಿಕೊಳ್ಳಲು ಕಾಲಿಗೆ ಕಪ್ಪು ದಾರವನ್ನು ಕಟ್ಟಿಕೊಳ್ಳೋದು ಉತ್ತಮ. ಇದು ನಕಾರಾತ್ಮಕ ಶಕ್ತಿ ನಿಮಗೆ ತಟ್ಟದಂತೆ ರಕ್ಷಣೆಯನ್ನು ನೀಡುತ್ತದೆ.
5. ಜೀವನದಲ್ಲಿ ಯಶಸ್ಸು ಪಡೆಯುತ್ತೀರಿ
ಶನಿಯು ಶಕ್ತಿಯುತ ಗ್ರಹ. ಆತ ಸಂತೋಷಗೊಂಡಾಗ ಅದೃಷ್ಟವನ್ನು ಕರುಣಿಸುತ್ತಾನಂತೆ. ಕಾಲಿಗೆ ಕಪ್ಪು ದಾರವನ್ನು ಕಟ್ಟೋದ್ರಿಂದ ಶನಿಯ ಆಶೀರ್ವಾದ ನಿಮ್ಮ ಮೇಲೆ ಇರುತ್ತಂತೆ. ಜೊತೆಗೆ ನಿಮಗೆ ಜೀವನದಲ್ಲಿ ಸಾಕಷ್ಟು ಯಶಸ್ಸು ದೊರೆಯುತ್ತದೆ. ಹಾಗೂ ಹಣ ಗಳಿಸಲು ಸಾಧ್ಯವಾಗುತ್ತದೆ.
6. ಶನಿಯ ದೋಷ ನಿವಾರಣೆಯಾಗುತ್ತದೆ
ಪ್ರತಿಯೊಬ್ಬರು ಕಾಲಿಗೆ ಕಪ್ಪು ದಾರವನ್ನು ಕಟ್ಟಿದರೆ ಒಳ್ಳೆಯದು. ಅದ್ರಲ್ಲೂ ಯಾರ ಜಾತಕದಲ್ಲಿ ಶನಿ ದೋಷ ಇರುತ್ತದೆಯೋ ಅವರಂತೂ ಕಪ್ಪು ದಾರವನ್ನು ಕಟ್ಟಲೇಬೇಕು. ಶನಿಯಿಂದ ಉಂಟಾಗುವ ನಕಾರತ್ಮಾಕ ಶಕ್ತಿಯನ್ನು ತಡೆ ಹಿಡಿದು ನಿಮ್ಮ ಜೀವನದಲ್ಲಿ ಎಲ್ಲವೂ ಒಳ್ಳೆಯದಾಗುತ್ತಂತೆ.
7. ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ
ಮಕ್ಕಳ ಕಾಲಿಗೆ ಕಪ್ಪು ದಾರವನ್ನು ಕಟ್ಟೋದ್ರಿಂದ ಅವರ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತಂತೆ. ಒಂದು ವೇಳೆ ಯಾವುದಾದರೂ ಮಗು ಆಗಾಗ್ಗೆ ಕಾಯಿಲೆ ಬೀಳುತ್ತಿದ್ದರೆ, ಆ ಮಗುವಿಗೆ ಕಪ್ಪು ದಾರವನ್ನು ಕಟ್ಟಲೇಬೇಕು. ಇದರಿಂದ ಮಗುವಿನಲ್ಲಿ ಶಕ್ತಿ ಹೆಚ್ಚಾಗಿ, ರೋಗಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.
8. ರಾಹು-ಕೇತುವಿನ ತೊಂದರೆಯಿಂದ ಮುಕ್ತಿ
ರಾಹು ಹಾಗೂ ಕೇತುವಿನ ದೋಷ ನಮ್ಮ ಜಾತಕದಲ್ಲಿ ಇದ್ದರೆ ಕೌಟುಂಬಿಕ ಹಾಗೂ ಆರ್ಥಿಕ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ಹೀಗಾಗಿ ರಾಹು-ಕೇತುವಿನ ದೋಷದಿಂದ ಮುಕ್ತಿ ಪಡೆಯಲು ನಿಮ್ಮ ಎಡಗಾಲಿಗೆ ಕಪ್ಪು ದಾರವನ್ನು ಕಟ್ಟಿ. ನಿಮ್ಮೆಲ್ಲಾ ಸಮಸ್ಯೆಗೂ ಪರಿಹಾರ ಸಿಗುತ್ತದೆ.
ಕಪ್ಪು ದಾರವನ್ನು ಕಾಲಿಗೆ ಕಟ್ಟೋದು ಶುಭಕರ ಅಂತಾನೇ ಹೇಳಬಹುದು. ನಿಮ್ಮೆಲ್ಲಾ ಸಮಸ್ಯೆಗಳಿಗೆ ಮುಕ್ತಿ ನೀಡೋದು ಅಷ್ಟೇ ಅಲ್ಲದೇ, ನಿಮಗೆ ರಕ್ಷಣೆಯನ್ನು ನೀಡುತ್ತದೆ.



Click it and Unblock the Notifications
