Latest Updates
-
ಸೋಶಿಯಲ್ ಮೀಡಿಯಾದಲ್ಲಿ ನಿಮ್ಮ ಸಂಬಂಧವನ್ನು ರಹಸ್ಯವಾಗಿಡಬೇಕಾ? ನೆಮ್ಮದಿಯ ಬದುಕಿಗೆ ಈ ಡಿಜಿಟಲ್ ಬೌಂಡರಿಗಳು ಮಸ್ಟ್! -
ದೆಹಲಿ-ಎನ್ಸಿಆರ್ನಲ್ಲಿ ಬಿರುಗಾಳಿ ಅಬ್ಬರ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಮುನ್ನೆಚ್ಚರಿಕೆ ಮರೆಯದಿರಿ! -
ಅಡುಗೆಮನೆಯಲ್ಲಿ ಕಡಲೆ ಹಿಟ್ಟು ಬಳಸುವ ಮುನ್ನ ಎಚ್ಚರ: FSSAI ಜಾರಿಗೆ ತಂದಿದೆ ಹೊಸ ಕಠಿಣ ನಿಯಮಗಳು! -
ಫ್ಲಿಪ್ಕಾರ್ಟ್ GRWM ಸೇಲ್: ಟ್ರೆಂಡಿ ಲುಕ್ ಪಡೆಯಲು ಇನ್ಫ್ಲುಯೆನ್ಸರ್ ಸಜೆಸ್ಟ್ ಮಾಡಿದ ಬೆಸ್ಟ್ ಡೀಲ್ಗಳು ಇಲ್ಲಿವೆ! -
ಬಿಸಿಲಿನಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ಹೀಟ್ಸ್ಟ್ರೋಕ್ ಕಟ್ಟಿಟ್ಟ ಬುತ್ತಿ, ಎಚ್ಚರವಿರಲಿ! -
ಅಸ್ಸಾಂನಲ್ಲಿ ಲಿವ್-ಇನ್ ಸಂಬಂಧದಲ್ಲಿದ್ದೀರಾ? ಹೊಸ ಕಾನೂನಿನ ಪ್ರಕಾರ ನೋಂದಣಿ ಮಾಡದಿದ್ದರೆ ಜೈಲು ಶಿಕ್ಷೆ ಕಟ್ಟಿಟ್ಟ ಬುತ್ತಿ! -
ಬಿಸಿಲಿಗೆ ಗಿಡಗಳು ಬಾಡುತ್ತಿವೆಯೇ? ಈ ಮ್ಯಾಜಿಕ್ ಟಿಪ್ಸ್ ಬಳಸಿ ನಿಮ್ಮ ಬಾಲ್ಕನಿ ಗಾರ್ಡನ್ ಅನ್ನು ಹಸಿರಾಗಿಡಿ! -
ಬಿಸಿಲ ಝಳಕ್ಕೆ ಸುಸ್ತಾಗಿದ್ದೀರಾ? ಹೀಟ್ಸ್ಟ್ರೋಕ್ನಿಂದ ಪಾರಾಗಲು ಈ ತಂಪು ಪದಾರ್ಥಗಳು ನಿಮ್ಮ ಆಹಾರದಲ್ಲಿರಲಿ, ಇಂದೇ ಟ್ರೈ ಮಾಡಿ! -
ಬಕ್ರೀದ್ 2026: ಈ ಬಾರಿಯ ಹಬ್ಬದ ಸಂಭ್ರಮದಲ್ಲಿ ಮಿಂಚಲು ನೀವು ಮಿಸ್ ಮಾಡಲೇಬಾರದ ಫ್ಯಾಷನ್ ಟ್ರೆಂಡ್ಸ್ ಮತ್ತು ಸ್ಟೈಲಿಂಗ್ ಟಿಪ್ಸ್! -
ಬಿಸಿಲ ಬೇಗೆಯಲ್ಲಿ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಕಾದಿದೆ ದೊಡ್ಡ ಅಪಾಯ!
ನೀವು ಶಬರಿಮಲೆಗೆ ಹೋಗಿ ಅಯ್ಯಪ್ಪನ ದರ್ಶನ ಪಡೆಯಲು ಇನ್ಮುಂದೆ ವರ್ಚ್ಯೂಯಲ್ ಕ್ಯೂ ಕಡ್ಡಾಯ
ಶಬರಿಮಲೆಯಲ್ಲಿ ನೆಲೆಸಿರುವ ಅಯ್ಯಪ್ಪನ ದರ್ಶನ ಪಡೆಯಲು ಲಕ್ಷಾಂತರ ಭಕ್ತರು ಭೇಟಿ ನೀಡುತ್ತಾರೆ. ಅದರಲ್ಲೂ ಮಕರ ವಿಳಕ್ಕು ಸಮಯದಲ್ಲಿ ಭಕ್ತಾಧಿಗಳನ್ನು ನಿಯಂತ್ರಿಸುವುದೇ ಕಷ್ಟವಾಗುವುದು, ಅಷ್ಟೊಂದು ಭಕ್ತರು ಆಗಮಿಸುತ್ತಾರೆ.
ಈ ಸಮಯದಲ್ಲಿ ನೂಕು ನುಗ್ಗಲು ಉಂಟಾಗುವುದು, ಭಕ್ತರ ಕ್ಯೂ ನಿಯಂತ್ರಿಸುವುದೇ ದೇವಸ್ಥಾನ ಮಂಡಳಿಯ ಹಾಗೂ ಪೊಲೀಸರ ದೊಡ್ಡ ಸವಾಲಾಗಿರುತ್ತದೆ, ಹೀಗಾಗಿ ದೇವಾಲಯ ಮಂಡಲಿ ಹೊಸ ಐಡಿಯಾದೊಂದಿಗೆ ಬಂದಿದೆ.

ಇನ್ನು ಮುಂದೆ ವರ್ಚ್ಯೂಯಲ್ ಕ್ಯೂ
ಇನ್ನು ಮುಂದೆ ದೇವರ ದರ್ಶನ ಪಡೆಯಲು ವರ್ಚ್ಯೂಯಲ್ ಕ್ಯೂನಲ್ಲಿ ಹೆಸರು ನೋಂದಾಯಿಸಬೇಕು. ಇದನ್ನು ಭಕ್ತರು ದೇವಾಲಯದ ಅಧಿಕೃತ ವೆಬ್‌ಸೈಟ್ ಆಗಿರುವ ಶಬರಿಮಲ ಆನ್‌ಲೈನ್ ಸರ್ವೀಸಸ್ ಅಥವಾ ಕೇರಳ ಸರ್ಕಾರದ ಶಬರಿಮಲ ಶ್ರೀ ಧರ್ಮಶಾಸ್ತ್ರ ಟೆಂಬಲ್ ವೆಬ್‌ಸೈಟ್‌ಗೆ ಹೋಗಿ ವರ್ಚ್ಯೂಯಲ್ ಕ್ಯೂ ಐಕಾನ್ ಕ್ಲಿಕ್ ಮಾಡಿ ಹೆಸರು ನೋಂದಾಯಿಸಿಕೊಳ್ಳೇಕು.
ಈ ಎರಡು ವೆಬ್‌ಸೈಟ್‌ನಲ್ಲಿ ಯಾವುದರಲ್ಲಿಯೂ ಬೇಕಾದರೂ ಹೆಸರು ನೋಂದಾಯಿಸಿಕೊಳ್ಳಬಹುದು, ಜನರ ಕ್ಯೂ ನಿಯಂತ್ರಿಸಲು ಇಂಥದ್ದೊಂದು ಐಡಿಯಾ ಮಾಡಿದೆ.
ಮೊದಲಿಗೆ ತಿರುಪತಿ ಮಾದರಿಯಲ್ಲಿ ಕ್ಯೂ ಮಾಡಲಾಯ್ತು, ಭಕ್ತರು ಜಂಪ್ ಮಾಡಿ ಕ್ಯೂ ಸೇರುತ್ತಿದ್ದರು, ಹಾಗಾಗಿ ಈ ಐಡಿಯಾ ಮಾಡಿದೆ. ಇನ್ನು ಮುಂದೆ ವರ್ಚ್ಯೂಯಲ್ ಕ್ಯೂ ಮೂಲಕವೇ ಹೋಗಲು ಸಾಧ್ಯವಾಗುವುದು.
ಆದರೆ ಈ ಸಿಸ್ಟಮ್ ಭಕ್ತರಿಗೆ ನಿರಾಸೆ ಉಂಟು ಮಾಡಿದೆ
ಈ ವ್ಯವಸ್ಥೆಗೆ ಭಕ್ತರು ಅಸಮಧಾನ ವ್ಯಕ್ತಪಡಿಸುತ್ತಿದ್ದಾರೆ, ಆದರೆ ದೇವಾಲಯದ ಆಡಳಿತ ಮಂಡಳಿ ಮಂತ್ರ ವರ್ಚ್ಯೂಯಲ್ ಕ್ಯೂ ಕಡ್ಡಾಯ ಗೊಳಿಸುವುದಾಗಿ ಹೇಲಿದೆ.
ಟ್ರಾವನ್‌ಕೋರ್ ದೇವಾಸಮ್ ಬೋರ್ಡ್ United India Insurance co.ltdಜೊತೆ ಒಪ್ಪಂದ ಮಾಡಿದ್ದು ಭಕ್ತಾದಿಗಳಿಗೆ ಇನ್ಸೂರೆನ್ಸ್ ನೀಡಿದೆ.
ನವೆಂಬರ್‌ನಿಂದ ಜನವರಿವರೆಗೆ ಭಕ್ತಾಧಿಗಳ ಸಂಖ್ಯೆ ಅಧಿಕವಿರುತ್ತದೆ
ಈ ದೇವಾಲಯಕ್ಕೆ ದಕ್ಷಿಣ ಭಾರತದಿಂದ ಮಾತ್ರವಲ್ಲ ಇತರ ಕಡೆಯಿಂದಲೂ ಭಕ್ತರು ಆಗಮಿಸುತ್ತಾರೆ. ಕರ್ನಾಟಕ, ತಮಿಳುನಾಡು, ಆಂಧ್ರ ಪ್ರದೇಶದಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಅಗಮಿಸುತ್ತಾರೆ. ನವೆಂಬರ್ನಿಂದ ಜನವರಿಯವರೆಗೆ ತುಂಬಾನೇ ಭಕ್ತರು ಬರುತ್ತಾರೆ. ಮಂಡಲ ಪೂಜೆ, ಮಕರ ವಿಳಕ್ಕು ತುಂಬಾನೆ ಭಕ್ತರು ಆಗಮಿಸುತ್ತಾರೆ, ಉಳಿದ ಸಮಯದಲ್ಲಿ ಬಾಗಿಲು ಮುಚ್ಚಿರುತ್ತದೆ. ಆದರೆ ಮಲಯಾಳಂ ಮಾಸದ ಪ್ರತಿ ಒಂದೇ ತಾರೀಕು ಹಾಗೂ ವಿಶು ಸಮಯದಲ್ಲಿ ತೆರೆದಿರುತ್ತದೆ.
ಅಯ್ಯಪ್ಪ ತನ್ನ ಭಕ್ತರ ಕೋರಿಕೆಗಳನ್ನು ನಿವಾರಿಸುವುದರಿಂದ ಭಕ್ತರಿಗೆ ಅಯ್ಯಪ್ಪನ ಮೇಲೆ ಅಚಲ ನಂಬಿಕೆ
ಅಯ್ಯಪ್ಪ ಸ್ವಾಮಿ ದರ್ಶನ ಪಡೆಯಲು ಕಠಿಣ ವ್ರತ ನಿಯಮ ಪಾಲಿಸಬೇಕು
- ಅಯ್ಯಪ್ಪ ಸ್ವಾಮಿಗೆ ಮಾಲೆ ಹಾಕಿದ ಮೇಲೆ ತುಂಬಾನೇ ಕಠಿಣ ನಿಯಮ ಪಾಲಿಸಬೇಕು.
- ಕಠಿಣ ಬ್ರಹ್ಮಚರ್ಯ ವ್ರತ ಪಾಲಿಸಬೇಕು.
- ಮಾಂಸ, ಮದ್ಯ ಸೇವಿಸಬಾರದು
- ಕಪ್ಪು ಬಟ್ಟೆ ಧರಿಸಬೇಕು
- ಪ್ರತಿಕ್ಷಣವೂ ಅಯ್ಯಪ್ಪಸ್ವಾಮಿ ಧ್ಯಾನ ಮಾಡಬೇಕು
- ಬೆಳಗ್ಗೆ ಎದ್ದು ತಣ್ಣೀರಿನಲ್ಲಿ ಸ್ನಾನ ಮಾಡಿ ದೇವರಿಗೆ ಪೂಜೆ ಸಲ್ಲಿಸಬೇಕು.
- ಅಯ್ಯಪ್ಪ ಸ್ವಾಮಿ ಸೂರ್ಯೋದಯಕ್ಕೆ ಮೊದಲು, ಸೂರ್ಯಾಸ್ತದ ಸಮಯದಲ್ಲಿ ದೀಪ ಹಚ್ಚಿ ಪೂಜೆ ಮಾಡಬೇಕು.
- ಹಾಸಿಗೆಯಲ್ಲಿ ಮಲಗಬಾರದು, ನೆಲದ ಮೇಲೆ ಮಲಗಬೇಕು.
- ಸುಳ್ಳು ಹೇಳಬಾರದು
- ಯಾರನ್ನೂ ಮೋಸ ಮಾಡಬಾರದು.
- ತುಂಬಾ ಸರಳ ಜೀವನ ನಡೆಸಬೇಕು.
ಅಯ್ಯಪ್ಪಸ್ವಾಮಿ ದರ್ಶನಕ್ಕೆ ಭಕ್ತರು ಮಕರ ವಿಳಕ್ಕು ಹಾಗೂ ಮಂಡಳ ಪೂಜೆ, ವಿಶು ಹಬ್ಬ ಈ ಸಮಯದಲ್ಲಿ ಹೆಚ್ಚಾಗಿ ಹೋಗುತ್ತಾರೆ. ಈ ಸಮಯದಲ್ಲಿ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ, ವರ್ಷದಿಂದ ವರ್ಷಕ್ಕೆ ಭಕ್ತರ ಸಂಖ್ಯೆ ಹೆಚ್ಚುತ್ತಲೇ ಇದೆ. ಈ ಭಕ್ತರನ್ನು ಕ್ಯೂನಲ್ಲಿ ಕಳುಹಿಸುವುದು ಅಷ್ಟು ಸುಲಭವಲ್ಲ, ಹಾಗಾಗಿ ವರ್ಚ್ಯೂಯಲ್ ಕ್ಯೂ ಸಿಸ್ಟಮ್ ತಂದಿದೆ, ಈ ಮೂಲಕ ದೇವಾಲಯ ಆಡಳಿತ ಮಂಡಳಿ ಕ್ಯೂ ನಿಯಂತ್ರಿಸಲು ಮುಂದಾಗಿದೆ.



Click it and Unblock the Notifications