Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ನಮ್ಮ ಮೆಟ್ರೋದಲ್ಲಿ ಮಾನವ ಅಂಗಾಂಗ ರವಾನೆ! ಇತಿಹಾಸದಲ್ಲಿ ಇದೇ ಮೊದಲು!
ಹಲವು ಬಾರಿ ವೈದ್ಯಕೀಯ ಕ್ಷೇತ್ರದಲ್ಲಿ ಅಂಗಾಂಗ ಕಸಿಯಂತಹ ಶಸ್ತ್ರಚಿಕಿತ್ಸೆ ನಡೆಯುವುದು ನೋಡಬಹುದು. ಅದ್ರೆಲ್ಲೂ ಅಂಗಾಂಗಗಳನ್ನು ವಿಶೇಷ ಹೆಲಿಕಾಪ್ಟರ್, ಆಂಬ್ಯುಲೆನ್ಸ್ ಮೂಲಕ ತ್ವರಿತವಾಗಿ ರವಾನಿಸುವುದು ನೀವು ನೋಡಿರಬಹುದು. ಆದರೆ ಈ ಬಾರಿ ಬೆಂಗಳೂರಿನಲ್ಲಿ ಮೆಟ್ರೋ ಮೂಲಕ ಅಂಗಾಂಗವನ್ನು ಒಂದು ಆಸ್ಪತ್ರೆಯಿಂದ ಮತ್ತೊಂದು ಆಸ್ಪತ್ರೆಗೆ ರವಾನಿಸಲಾಗಿದೆ.
ರಾಜ್ಯದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಈ ರೀತಿಯಾದ ಕಾರ್ಯಕ್ಕೆ ಮುಂದಾಗಲಾಗಿತ್ತು. ನಗರದ ವೈದೇಹಿ ಮೆಟ್ರೋ ಆಸ್ಪತ್ರೆಯಿಂದ ಆರ್. ಆರ್ ನಗರದ ಸ್ಪರ್ಶ ಆಸ್ಪತ್ರೆಗೆ ಸಾಗಿಸಲಾಗಿದೆ. ರಸ್ತೆ ಮೂಲಕ ಆಸ್ಪತ್ರೆಗೆ ತಲುಪಿಸಲು ಟ್ರಾಫಿಕ್ ಸಮಸ್ಯೆ ಎದುರಾಗಬಹುದು ಎಂಬ ಕಾರಣಕ್ಕೆ ಮೆಟ್ರೋವನ್ನು ಇದಕ್ಕಾಗಿ ಆಯ್ಕೆ ಮಾಡಿಕೊಳ್ಳಲಾಗಿತ್ತು.

ಒಬ್ಬ ವ್ಯಕ್ತಿಯ ದೇಹಕ್ಕೆ ಅಗತ್ಯ ಅಂಗಾಂಗ ಕಸಿಗಾಗಿ ಈ ಅಂಗಾಂಗವನ್ನು ರವಾನಿಸಬೇಕಿತ್ತು. ಇದು ಕೆಲವೇ ನಿಮಿಷಗಳಲ್ಲಿ ನಡೆಯಬೇಕಿದ್ದ ವಿದ್ಯಮಾನವಾಗಿದೆ. ವೈಟ್ ಫೀಲ್ಡ್‌ನಲ್ಲಿರುವ ವೈದೇಹಿ ಆಸ್ಪತ್ರೆಯಿಂದ ಆರ್‌ಆರ್ ನಗರದ ಸ್ಪರ್ಶ ಆಸ್ಪತ್ರೆ ಮಾನವ ಅಂಗಾಂಗ ರವಾನೆ ಮಾಡಲಾಯಿತು. ಈ ಎರಡು ಆಸ್ಪತ್ರೆಗಳ ನಡುವೆ ಸುಮಾರು 30 ಕಿ.ಮೀಗಳ ಅಂತರವಿದೆ.
ಪ್ರಯಾಣದ ಸಮಯವನ್ನು ಕಡಿಮೆ ಮಾಡಲು ಮತ್ತು ರಸ್ತೆಯಲ್ಲಿನ ಅಡೆತಡೆಗಳ ತಪ್ಪಿಸಿ ತ್ವರಿತ ರವಾನೆಯ ಉದ್ದೇಶದಿಂದಾಗಿ ಮೆಟ್ರೋ ಬಳಸಲು ಮುಂದಾಗಲಾಯಿತು. ಇನ್ನು ಅಂಗಾಂಗ ರವಾನೆಯ ಸಮಯದಲ್ಲಿ ಪೊಲೀಸರು ಟ್ರಾಫಿಕ್ ಹಾಗೂ ಜನಸಂದಣಿಯನ್ನು ನಿಯಂತ್ರಣ ಮಾಡಿ ನೆರವಾದರು. ಹೀಗಾಗಿ ಸರಿಯಾದ ಸಮಯಕ್ಕೆ ಅಂಗಾಂಗ ಆಸ್ಪತ್ರೆಗೆ ತಲುಪಿಸಲಾಯಿತು.
ಜೀವಂತ ಹೃದಯವು ಮೆಟ್ರೋದಲ್ಲೇ ರವಾನೆ
ಮೆಟ್ರೋವನ್ನು ವೈದ್ಯಕೀಯ ಕಾರಣಕ್ಕೆ ಬಳಸಿದ್ದು ಇದು ಮೊದಲ ಪ್ರಕರಣವಲ್ಲ. ಇದಕ್ಕೂ ಮೊದಲು ಜೀವಂತ ಹೃದಯವನ್ನು ಮೆಟ್ರೋದಲ್ಲಿ ರವಾನಿಸಲಾಗಿತ್ತು. ಈ ವರ್ಷದ ಜನವರಿ 17ರಂದು ಜೀವಂತ ಹೃದಯವನ್ನು ಹೈದರಾಬಾದ್ ಮೆಟ್ರೋದಲ್ಲಿ ಸಾಗಿಸಲಾಗಿತ್ತು. 35 ವರ್ಷದ ವ್ಯಕ್ತಿಯೊಬ್ಬರು ಅಪಾಘಾತದಲ್ಲಿ ಗಾಯಗೊಂಡ ಬಳಿಕ ಅವರ ಮೆದುಳು ನಿಷ್ಕ್ರಿಯಗೊಂಡಿತ್ತು. ಬಳಿಕ ಅವರ ಕುಟುಂಬಸ್ಥರು ಅಂಗಾಂಗ ದಾನಕ್ಕೆ ಮುಂದಾದರು. ಇದೇ ಸಮಯದಲ್ಲಿ ಗ್ಲೆನ್ ಗೆಲ್ಸ್ ಗ್ಲೊಬಲ್ ಆಸ್ಪತ್ರೆಯ ರೋಗಿಯೊಬ್ಬರಿಗೆ ಹೃದಯದ ಅಗತ್ಯ ಬಂದಿತ್ತು. ಹೀಗಾಗಿ ಅವರಿಗೆ ಹೃದಯ ಕಸಿ ಚಿಕಿತ್ಸೆಯ ಕಾರಣದಿಂದಾಗಿ ಮೆಟ್ರೋದಲ್ಲಿಯೇ ಹೃದಯ ಸಾಗಿಸಲು ವೈದ್ಯರು ಮುಂದಾದರು. ಇದರಿಂದ ಸಮಯದ ಉಳಿತಾಯ ಮುಖ್ಯ ಉದ್ದೇಶ ಎಂದು ಅವರು ಹೇಳಿದ್ದರು. ಸುಮಾರು 13 ಕಿ.ಮೀ ಅಂತರವನ್ನು ಕೇವಲ 13 ನಿಮಿಷದಲ್ಲಿ ಕ್ರಮಿಸಿ ದಾಖಲೆಯನ್ನು ಬರೆಯಲಾಗಿತ್ತು. ಹಾಗೆ ಯಶಸ್ವಿ ಶಸ್ತ್ರ ಚಿಕಿತ್ಸೆ ನೆರವೇರಿಸಲಾಗಿತ್ತು. ಇದು ದೇಶದಲ್ಲಿ ಮೊದಲ ಬಾರಿಗೆ ಜೀವಂತ ಅಂಗಾಂಗವನ್ನು ಸಾಗಿಸಿ ಯಶಸ್ವಿಯೂ ಆಗಿತ್ತು.
ಶಿವಮೊಗ್ಗದಿಂದ ಯುವತಿ ಏರ್‌ಲಿಫ್ಟ್
ಇದೇ ಸಮಯದಲ್ಲಿ ಯುವತಿಯೊಬ್ಬರನ್ನು ಹೆಚ್ಚಿನ ಚಿಕಿತ್ಸೆಯ ದೃಷ್ಟಿಯಿಂದ ಏರ್‌ಲಿಫ್ಟ್ ಮಾಡಿದ್ದ ಘಟನೆ ಕೂಡ ಇತ್ತೀಚಿಗೆ ನಡೆದಿತ್ತು. ಮೆದುಳು ಜ್ವರದಿಂದ ಬಳಲುತ್ತಿದ್ದ ಯುವತಿಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದಿಂದ ಮುಂಬೈಗೆ ಏರ್‌ಲಿಫ್ಟ್ ಮಾಡಲಾಯಿತು. ಗಾಂಧಿ ಬಜಾರ್‌ನ ನಿವಾಸಿ ಮನೋಜ್ ಹಾಗೂ ಮನಿಷಾ ದಂಪತಿಯ ಪುತ್ರಿ ಮಾನ್ಯ (22) ಮೆದುಳು ಜ್ವರದಿಂದ ಬಳಲುತ್ತಿದ್ದಳು. ಆಕೆಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆರೋಗ್ಯದ ಸ್ಥಿತಿ ಗಂಭೀರವಾದ ಹಿನ್ನೆಲೆ ವೈದ್ಯರ ಸಲಹೆಯಂತೆ ಮುಂಬೈನ ರಿಲಯನ್ಸ್ ಆಸ್ಪತ್ರೆಗೆ ರವಾನಿಸಲಾಗಿತ್ತು.
ಆಕೆಯನ್ನು ಆಂಬ್ಯುಲೆನ್ಸ್‌ನಲ್ಲಿ ವಿಮಾನ ನಿಲ್ದಾಣದವರೆಗೂ ಝಿರೋ ಟ್ರಾಫಿಕ್‌ನಲ್ಲಿ ತರಲಾಗಿತ್ತು, ನಂತರ ಅಲ್ಲಿಂದ ವಿಮಾನದಲ್ಲಿ ಮುಂಬೈಗೆ ರವಾನಿಸಲಾಗಿತ್ತು.



Click it and Unblock the Notifications
