Latest Updates
-
ಟೆಲಿಗ್ರಾಂ ಬಳಕೆದಾರರೇ ಗಮನಿಸಿ: ಸೇವೆ ಆರಂಭವಾದರೂ ಈ ಬದಲಾವಣೆ ಮರೆಯದಿರಿ! -
ಬಿಸಿಗಾಳಿಯ ಎಚ್ಚರಿಕೆ: ಅಡುಗೆ ಮಾಡದೆಯೇ ದೇಹಕ್ಕೆ ತಂಪು ನೀಡುವ ಪ್ರೋಟೀನ್ ಆಹಾರಗಳಿವು! -
ಮಳೆಯ ನಡುವೆ ಯುಜಿಸಿ ನೆಟ್ ಪರೀಕ್ಷೆ: ಸಂಗಾತಿಯ ಈ ಸಣ್ಣ ಬೆಂಬಲವೇ ಯಶಸ್ಸಿನ ಗುಟ್ಟು -
ಮಳೆಗಾಲದಲ್ಲಿ ಮನೆಯ ಪೀಠೋಪಕರಣ ಹಾಳಾಗುತ್ತಿದೆಯೇ? ಬೂಸು ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಮುಂಬೈ ಆರೆಂಜ್ ಅಲರ್ಟ್: ಮಳೆಯಲ್ಲಿ ಆಫೀಸ್ ಹೋಗುವವರೇ, ಈ 'ನೋ-ಕುಕ್' ಪ್ರೋಟೀನ್ ಮೀಲ್ಸ್ ಮಿಸ್ ಮಾಡ್ಬೇಡಿ! -
ಅಮೆಜಾನ್ ಪ್ರೈಮ್ ಡೇ ಸೇಲ್: ಕಡಿಮೆ ಬೆಲೆಗೆ ವಸ್ತುಗಳನ್ನು ಖರೀದಿಸಲು ಈ ಸ್ಮಾರ್ಟ್ ಟ್ರಿಕ್ಸ್ ಮಿಸ್ ಮಾಡ್ಬೇಡಿ! -
ಯೋಗದ ನಂತರ ಮೈಕೈ ನೋವು ಕಾಡುತ್ತಿದೆಯೇ? ಕಚೇರಿಯಲ್ಲಿ ಕೆಲಸ ಮಾಡುವಾಗ ಈ 12 ನಿಮಿಷದ ಟಿಪ್ಸ್ ಪಾಲಿಸಿ -
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ
ಗಾಯತ್ರಿ ಮಂತ್ರ ಪಠಿಸುವುದರಿಂದಾಗುವ ಲಾಭವೇನು? ಯಾವಾಗ ಜಪಿಸಬೇಕು?
ಎಲ್ಲಾ ಮಂತ್ರಗಳ ತಾಯಿ ಎಂದು ಕರೆಯಲ್ಪಡುವ ''ಗಾಯತ್ರಿ ಮಂತ್ರ" ವೇದಗಳ ಸಾರಾಂಶವೆಂದೂ ಕರೆಯುತ್ತಾರೆ. ವೈದಿಕ ಸಂಪ್ರದಾಯದ ಪ್ರಕಾರ ಮಗುವಿಗೆ ಮೊದಲು ಗಾಯತ್ರಿ ಮಂತ್ರವನ್ನು ಕಲಿಸಿಕೊಡುವ ಮೂಲಕ ಅತ್ಯುನ್ನತ ಜ್ಞಾನವನ್ನು ನೀಡಲಾಗುತ್ತದೆ. ಇದಾದ ನಂತರವೇ ಎಲ್ಲಾ ರೀತಿಯ ಶಿಕ್ಷಣವನ್ನು ನೀಡಲಾಗುತ್ತದೆ.
ಸಾರ್ವತ್ರಿಕ ಮಂತ್ರವಾದ ಇದು ಬೆಳಕಿನ ರೂಪದಲ್ಲಿ ಸರ್ವೋಚ್ಛ ವಾಸ್ತವವನ್ನು ತಿಳಿಸುತ್ತದೆ. ಗಾಯತ್ರಿ ಮಂತ್ರವು ಪ್ರಜ್ಞೆಯ ಎಲ್ಲಾ ಮೂರು ಸ್ಥಿತಿಗಳಾದ ಜಾಗೃತ (ಎಚ್ಚರ), ಸುಷುಪ್ತ (ಗಾಢ ನಿದ್ರೆ), ಸ್ವಪ್ನದ (ಕನಸು)ಮೇಲೆ ಪರಿಣಾಮ ಬೀರುತ್ತದೆ.
" ಓಂ ಭೂರ್ಭುವಃ ಸ್ವಃ ತತ್ಸವಿತುರ್ವರೇಣ್ಯಂ, ಭರ್ಗೋ ದೇವಸ್ಯ ಧೀಮಹಿಃ ಧಿಯೋಯೋನಃ ಪ್ರಚೋದಯಾತ್"
ಭೂ, ಭುವ ಮತ್ತು ಸುವ ಲೋಕಗಳಲ್ಲಿ ಬೆಳಕನ್ನು ಪಸರಿಸಿ ಜೀವಿಗಳಿಗೆ ಚೈತನ್ಯವನ್ನು ನೀಡುವ ಸೂರ್ಯನೇ ನಮಗೆ ಧೀ ಶಕ್ತಿಯನ್ನು ಪ್ರಚೋದಿಸುವ ಎಂಬುದು ಈ ಮಂತ್ರದ ಅರ್ಥವಾಗಿದೆ.

ಈ ಮಂತ್ರದಲ್ಲಿ ಇಪ್ಪತ್ನಾಲ್ಕು ಬೀಜಾಕ್ಷರಗಳಿದ್ದು, ಇವು ಇಪ್ಪತ್ನಾಲ್ಕು ದೇವತೆಗಳನ್ನು ಪ್ರತಿನಿಧಿಸುತ್ತದೆ. ಇದಲ್ಲದೇ ಗಾಯತ್ರಿ ಮಂತ್ರದಲ್ಲಿರುವ ಇಪ್ಪತ್ನಾಲ್ಕು ಅಕ್ಷರಗಳು ನಮ್ಮ ಬೆನ್ನುಮೂಳೆಯ 24 ಕಶೇರುಖಂಡಗಳಿಗೆ ಅನುಗುಣವಾಗಿದೆ. ಬೆನ್ನೆಲುಬು ನಮ್ಮ ದೇಹಕ್ಕೆ ಹೇಗೆ ಬೆಂಬಲ ಮತ್ತು ಸ್ಥಿರತೆಯನ್ನು ನೀಡುತ್ತದೆಯೋ ಅದರಂತೆ ಗಾಯತ್ರಿ ಮಂತ್ರ ನಮ್ಮ ಬುದ್ಧಿಯಲ್ಲಿ ಸ್ಥಿರತೆಯನ್ನು ತರುತ್ತದೆ. ಹಾಗಾದರೆ ಗಾಯತ್ರಿ ಮಂತ್ರ ಪಠಿಸುವುದರಿಂದಾಗುವ ಲಾಭವೇನು? ಯಾವ ಸಮಯದಲ್ಲಿ ಪಠಿಸಬೇಕು ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಮನಸ್ಸನ್ನು ಶಾಂತಗೊಳಿಸುವುದು
ಸಾಮಾನ್ಯವಾಗಿ ಧ್ಯಾನ ಮಾಡುವಾಗ ಓಂಕಾರ ಪಠಿಸಿದರೆ ಹಲವು ಪ್ರಯೋಜನಗಳು ಇವೆ. ಇದರಂತೆ ಗಾಯಂತ್ರಿ ಮಂತ್ರದಲ್ಲಿರುವ ಮೊದಲ ಅಕ್ಷರವೇ 'ಓಂ'. ಈ ಶಬ್ದದ ಉಚ್ಛಾರಣೆಯು ನಮ್ಮ ತುಟಿ, ನಾಲಗೆ, ಅಂಗುಳು, ಗಂಟಲಿನ ಹಿಂಭಾಗ ಮತ್ತು ತಲೆಬುರುಡೆಯ ಮೂಲಕ ಕಂಪನವನ್ನು ಸೃಷ್ಟಿಸುತ್ತದೆ. ಈ ಕಂಪನವು ಮನಸ್ಸನ್ನು ಶಾಂತಗೊಳಿಸುತ್ತದೆ ಮತ್ತು ವಿಶ್ರಾಂತಿಯ ಹಾರ್ಮೋನುಗಳನ್ನು ಬಿಡುಗಡೆಗೊಳಿಸುತ್ತದೆ. ಇದಲ್ಲದೇ ಗಾಯತ್ರಿ ಮಂತ್ರದಲ್ಲಿರುವ ಪ್ರತಿಯೊಂದು ಅಕ್ಷರಗಳ ಉಚ್ಛಾರಗಳೂ ಕೂಡ ಒಬ್ಬ ವ್ಯಕ್ತಿಯ ಮನಸ್ಸನ್ನು ಕೇಂದ್ರೀಕರಿಸಲಯ ಸಹಾಯ ಮಾಡುತ್ತದೆ. ಈ ಮೂಲಕ ವ್ಯಕ್ತಿಯು ಮಾನಸಿಕ ಶಾಂತಿಯನ್ನು ಪಡೆಯುತ್ತಾನೆ.
ಏಕಾಗ್ರತೆಯನ್ನು ಹೆಚ್ಚಿಸುತ್ತದೆ
ಇಂಟರ್ನ್ಯಾಷನಲ್ ಜರ್ನಲ್ ಆಫ್ ಯೋಗದಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ ಮಂತ್ರಗಳನ್ನು ಪಠಿಸುವ ಜನರು ಉತ್ತಮ ಏಕಾಗ್ರತೆ ಮತ್ತು ಸ್ಮರಣೆಯನ್ನು ಹೊಂದಿರುತ್ತಾರೆ ಎಂದು ಹೇಳಿದೆ. ನೀವು ಗಾಯತ್ರಿ ಮಂತ್ರವನ್ನು ಜಪಿಸಿದಾಗ ಉಂಟಾಗುವ ಕಂಪನವು ಮೊದಲು ನಿಮ್ಮ ಮುಖ ಮತ್ತು ತಲೆಯ ಮೇಲೆ ಇರುವ ಮೂರು ಚಕ್ರಗಳನ್ನು ಸಕ್ರಿಯಗೊಳಿಸುತ್ತದೆ - ಅವುಗಳೆಂದರೆ ಮೂರನೇ ಕಣ್ಣು, ಗಂಟಲು ಮತ್ತು ಕಿರೀಟ ಚಕ್ರಗಳು. ಈ ಮೂರು ಚಕ್ರಗಳು ಮೆದುಳು ಮತ್ತು ಪೀನಿಯಲ್ ಗ್ರಂಥಿ (ಕಿರೀಟ ಚಕ್ರ), ಕಣ್ಣುಗಳು, ಸೈನಸ್‌ಗಳು, ಕೆಳ ತಲೆ, ಪಿಟ್ಯುಟರಿ ಗ್ರಂಥಿ (ಮೂರನೇ ಕಣ್ಣಿನ ಚಕ್ರ) ಮತ್ತು ಥೈರಾಯ್ಡ್ ಗ್ರಂಥಿ (ಗಂಟಲು ಚಕ್ರ) ಗೆ ನೇರವಾಗಿ ಸಂಬಂಧಿಸಿರುವುದರಿಂದ ಏಕಾಗ್ರತೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಮಂತ್ರ ಪಠಿಸಿದಾಗ ಉಂಟಾಗುವ ಕಂಪನಗಳು ಸಂಬಂಧಿತ ಗ್ರಂಥಿಗಳನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ . ಇದು ಏಕಾಗ್ರತೆ ಮತ್ತು ಗಮನವನ್ನು ಸುಧಾರಿಸುತ್ತದೆ.
ಉಸಿರಾಟವನ್ನು ಸುಧಾರಿಸುತ್ತದೆ
ಯಾವುದೇ ಮಂತ್ರವನ್ನು ಪಠಿಸುವಾಗಲೂ ನಮ್ಮ ಉಸಿರಾಟ ಕ್ರಮಬದ್ಧವಾಗುವುದನ್ನು ನೀವು ಗಮನಿಸಬಹುದು. ಇದರಂತೆ ಗಾಯತ್ರಿ ಮಂತ್ರವನ್ನು ಪಠಿಸುವಾಗ ನೀವು ಆಳವಾದ ನಿಯಂತ್ರಿತ ಉಸಿರಾಟವನ್ನು ತೆಗೆದುಕೊಳ್ಳಬೇಕಾಗುತ್ತದೆ. ಇದನ್ನು ನಿಯಮಿತವಾಗಿ ಪಠಿಸುತ್ತಿದ್ದಲ್ಲಿ ನಿಮ್ಮ ಶ್ವಾಸಕೋಶದ ಕಾರ್ಯವು ಸುಧಾರಿಸುವುದು ಮತ್ತು ಆದ್ದರಿಂದ ಉಸಿರಾಟವವೂ ಸರಾಗಗೊಳ್ಳುವುದು. ಆಳವಾಗಿ ಉಸಿರಾಟದ ಜೊತೆಗೆ, ದೇಹವು ಪೂರ್ತಿಯಾಗಿ ಆಮ್ಲಜನಕದ ಪೂರೈಕೆಯನ್ನು ಪಡೆಯುತ್ತದೆ. ಇದು ಉತ್ತಮ ಆರೋಗ್ಯಕ್ಕೆ ಕಾರಣವಾಗುತ್ತದೆ.
ಒತ್ತಡದಿಂದ ಮುಕ್ತಿ
ಗಾಯತ್ರಿ ಮಂತ್ರದ ಪಠಣವು ಒತ್ತಡ-ಸಂಬಂಧಿತ ಆಕ್ಸಿಡೇಟಿವ್ ಹಾನಿಯನ್ನು ಸೋಲಿಸಲು ಸಹಾಯ ಮಾಡುತ್ತದೆ. ಇದು ನಿಮ್ಮ ದೇಹವು ಬಲವಾದ ಪ್ರತಿರಕ್ಷಣಾ ಪ್ರತಿಕ್ರಿಯೆಯನ್ನು ನಿರ್ಮಿಸಲು ಸಹಾಯ ಮಾಡುತ್ತದೆ ಆದರೆ ನಿಮ್ಮ ದೇಹದ ಮೇಲೆ ನಿರಂತರ ಒತ್ತಡದಿಂದ ಉಂಟಾಗುವ ಹಾನಿಯನ್ನು ಹಿಮ್ಮೆಟ್ಟಿಸಲು ಸಹಾಯ ಮಾಡುತ್ತದೆ. ಮತ್ತು ನಿಯಮಿತವಾದ ಪಠಣವು ಒತ್ತಡವನ್ನು ದೂರವಿರಿಸಲು ಸಹಾಯ ಮಾಡುತ್ತದೆ, ಗಾಯತ್ರಿ ಮಂತ್ರದ ಪಠಣವು ನಿಮ್ಮನ್ನು ಒತ್ತಡ ಮುಕ್ತವಾಗಿಸಿ ಆರೋಗ್ಯವಾಗಿರಿಸುತ್ತದೆ.
ಗಾಯತ್ರಿ ಮಂತ್ರ ಯಾವಾಗ ಪಠಿಸಬೇಕು?
ಗಾಯತ್ರಿ ಮಂತ್ರಕ್ಕೆ ಸಂಬಂಧಿಸಿದಂತೆ, ಮುಂಜಾನೆ ಸಮಯದಲ್ಲಿ, ನಿರ್ದಿಷ್ಟವಾಗಿ 'ಬ್ರಹ್ಮ ಮುಹೂರ್ತ'ದ ಸಮಯದಲ್ಲಿ, ಅದನ್ನು ಜಪಿಸುವುದು ಉತ್ತಮ. ಈ ಸಮಯದಲ್ಲಿ ಗಾಯತ್ರಿ ಮಂತ್ರವನ್ನು ಪಠಿಸುವುದರಿಂದ ಮನಸ್ಸು ಸ್ವಾಭಾವಿಕವಾಗಿ ಗ್ರಹಿಸುವ ಮತ್ತು ಹೆಚ್ಚು ಏಕಾಗೃತೆ ಇರುವ ಕಾರಣ ಮಂತ್ರದ ಸಾರವು ನಮಗೆ ಚೆನ್ನಾಗಿ ಅರ್ಥೈಸಲು ಹಾಗೂ ಗ್ರಹಿಸಲು ಸಹಾವಾಗುತ್ತದೆ.
ಜೊತೆಗೆ, ಮುಂಜಾನೆಯ ಸಮಯದ ಪ್ರಶಾಂತ ವಾತಾವರಣವು ಜನರು ತಮ್ಮ ಅಂತರಂಗ ಮತ್ತು ದೈವಿಕತೆಯೊಂದಿಗೆ ಆಳವಾದ ಸಂಪರ್ಕವನ್ನು ಹೊಂದಲು ಸಹಾಯ ಮಾಡುತ್ತದೆ.



Click it and Unblock the Notifications